ಕೆಜಿಎಫ್ 2 (KGF 2) ಸಿನಿಮಾದ ಬಳಿಕ ಪ್ರಶಾಂತ್ ನೀಲ್ (Prashanth Neel) ವಿಶ್ವದಾದ್ಯಂತ ಫೇಮಸ್ ಆಗಿದ್ದಾರೆ. ಇವರ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು (Fans) ಕಾದು ಕುಳಿತಿದಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಈಗಾಗಲೇ ಪ್ರಭಾಸ್ ಜೊತೆ ಸಲಾರ್ ಸಿನಿಮಾ ಮಾಡುತ್ತಿದ್ದಾರೆ. ಇನ್ನೂ ಶೂಟಿಂಗ್ ಹಂತದಲ್ಲಿ ಸಿನಿಮಾ ಇದೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್, ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ (Prabhas) ಕಾಂಬಿನೇಷನ್ ನೋಡುವುದಕ್ಕೆ ಇಡೀ ವಿಶ್ವವೇ ಕಾದು ಕೂತಿದೆ. ಈಗಾಗಲೇ ಪ್ರಭಾಸ್ ಜೊತೆಗಿನ ಮುಂದಿನ ಚಿತ್ರಕ್ಕಾಗಿ ಪ್ರಶಾಂತ್ ತಯಾರಿ ಆರಂಭಿಸಿ, ಶೂಟಿಂಗ್ ಕೂಡ ಆರಂಭವಾಗಿತ್ತು, ಆದರೆ ಪ್ರಭಾಸ್ ಅವರ ಲುಕ್ ಹಾಗೂ ಬಾಡಿ ಪ್ರಶಾಂತ್ ಅವರಿಗೆ ಇಷ್ಟವಾಗಿಲ್ಲ ಎನ್ನಲಾಗುತ್ತಿದೆ. ಈ ಬಗ್ಗೆ ಸ್ಯಾಂಡಲ್ವುಡ್ ಹಾಗೂ ಕಾಲಿವುಡ್ನಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ.
ಪ್ಯಾನ್ ಇಂಡಿಯಾ ಸ್ಟಾರ್ ಪಾತ್ರಕ್ಕೆ ತಕ್ಕಂತೆ ಟೋನ್ ಆಗುವವರೆಗೂ ಕೆಜಿಎಫ್ ನಿರ್ದೇಶಕರು ಸಲಾರ್ ಚಿತ್ರೀಕರಣವನ್ನು ಪ್ರಾರಂಭಿಸುವುದಿಲ್ಲ ಎಂದು ವರದಿಯಾಗಿದೆ. ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ಅವರ ಸಲಾರ್ ಘೋಷಣೆಯಾದಾಗಿನಿಂದ ಭಾರತದಲ್ಲಿ ಹೆಚ್ಚು ನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾಗಿದೆ. ಈ ಸಿನಿಮಾವನ್ನು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದು, ಮಾಸ್ ಪ್ರೇಕ್ಷಕರಿಗೆ ಫಿಟ್ ಆಗುವ ದೊಡ್ಡ ಮಟ್ಟದ ಸಿನಿಮಾಗಳನ್ನು ಮಾಡ್ತಾರೆ ಅನ್ನೋದು ಗೊತ್ತೇ ಇದೆ.
ತೂಕ ಇಳಿಸಬೇಕಂತೆ ಪ್ರಭಾಸ್
ಇನ್ನು ಪ್ರಭಾಸ್ ಅಭಿಮಾನಿಗಳು ಸಲಾರ್ ಬಿಡುಗಡೆಯ ಬಗ್ಗೆ ಅಪಡೇಟ್ ತಿಳಿಯಲು ಕಾತುರರಾಗಿದ್ದಾರೆ. ಈಗ, ಇತ್ತೀಚಿನ ಬೆಳವಣಿಗೆಯಲ್ಲಿ, ಶೂಟಿಂಗ್ ಪ್ರಾರಂಭವಾಗುವ ಮೊದಲು ಪ್ರಭಾಸ್ ಸ್ವಲ್ಪ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕೆಂದು ಪ್ರಶಾಂತ್ ನೀಲ್ ಸಲಹೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಭಾಸ್ ಅವರ ಇತ್ತೀಚಿನ ಚಿತ್ರಗಳು ಗ್ರಾಫಿಕ್ಸ್ ಅನ್ನು ಅವಲಂಬಿಸಿದ್ದರೂ, ಈ ಚಿತ್ರಕ್ಕಾಗಿ ನಿರ್ದೇಶಕರು ಪ್ರಭಾಸ್ ಬದಲಾಗಬೇಕು ಎಂದು ಬಯಸಿದ್ದಾರೆ ಎಂಬ ಸುದ್ದಿ ಬಂದಿದೆ.
ಮೂಲಗಳ ಪ್ರಕಾರ, ಪ್ಯಾನ್ ಇಂಡಿಯಾ ಸ್ಟಾರ್ ಅವರ ಹಿಂದಿನ ಚಲನಚಿತ್ರಗಳಿಗೆ ಹೋಲಿಸಿದರೆ ಸಂಪೂರ್ಣವಾಗಿ ವಿಭಿನ್ನ ಲುಕ್ ಅನ್ನು ಈ ಚಿತ್ರದಲ್ಲಿ ಹೊಂದಿರುತ್ತಾರೆ. ಇದನ್ನು ಗಮನಿಸಿದರೆ, ಪ್ರಶಾಂತ್ ನೀಲ್ ಪ್ರಭಾಸ್ ಲುಕ್ಗೆ ಸಂಬಂಧಿಸಿದಂತೆ ರಾಜಿ ಮಾಡಿಕೊಳ್ಳಲು ತಯಾರಿಲ್ಲ. ಅಲ್ಲದೇ, ಪ್ಯಾನ್ ಇಂಡಿಯಾ ಸ್ಟಾರ್ ತೂಕ ಇಳಿಸುವವರೆಗೂ ಸಲಾರ್ ಚಿತ್ರೀಕರಣವನ್ನು ಪ್ರಾರಂಭಿಸುವುದಿಲ್ಲ ಎಂದಿದ್ದಾರೆ. ಇದಕ್ಕಾಗಿ, ಹೀರೋ ಪ್ರಭಾಸ್ ಸಲಾರ್ ಚಿತ್ರದ ತನ್ನ ಪಾತ್ರಕ್ಕಾಗಿ ತಕ ಇಳಿಸಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಸಣ್ಣ ವಯಸ್ಸಿನಲ್ಲೇ ಸಾವನ್ನಪ್ಪಿದ ಸಂಗೀತಗಾರರಿವರು, ಸಾವಿಗೂ-ಸಂಗೀತಕ್ಕೂ ಲಿಂಕ್ ಇದ್ಯಾ?
ಅಲ್ಲದೇ ಅಭಿಮಾನಿಗಳು ಸಹ ಬಹು ನಿರೀಕ್ಷಿತ ಚಿತ್ರದಲ್ಲಿ ಪ್ರಭಾಸ್ ಅವರನ್ನು ಸ್ಲಿಮ್ ಮತ್ತು ಟ್ರಿಮ್ ಆಗಿ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಅವರು ಪ್ರಭಾಸ್ ಅವರ ಲುಕ್ನ ಬದಲಾವಣೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದಲ್ಲದೆ, ಪ್ರಭಾಸ್ ಅವರ ಲುಕ್ ಬದಲಾಗುವ ಬಗ್ಗೆ ಅವರು ಉತ್ಸುಕರಾಗಿದ್ದಾರೆ ಏಕೆಂದರೆ ನಂತರದ ಬದಲಾವಣೆಯು ಚಿತ್ರದ ಹೊಸ ಭಾಗವಾಗುವುದರ ಜೊತೆಗೆ ಚಿತ್ರಕ್ಕೆ ಮೈಲೇಜ್ ನೀಡುತ್ತದೆ.
2023ರಲ್ಲಿ ತೆರೆಗೆ ಸಲಾರ್
2023 ರ ಬೇಸಿಗೆಯಲ್ಲಿ ಪ್ಯಾನ್-ಇಂಡಿಯಾ ಚಿತ್ರ ರಿಲೀಸ್ ಆಗಲಿದೆ. ಪ್ರಭಾಸ್ ಜೊತೆಗೆ ಪ್ಯಾನ್ ಇಂಡಿಯಾ ಚಲನಚಿತ್ರದಲ್ಲಿ ಶ್ರುತಿ ಹಾಸನ್, ಜಗಪತಿ ಬಾಬು, ಪೃಥ್ವಿರಾಜ್ ಸುಕುಮಾರನ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ಇನ್ನು ಕೆಲ ಮಾಹಿತಿಗಳ ಪ್ರಕಾರ ಕೆಜಿಎಫ್ ರೀತಿಯೇ ಸಲಾರ್ ಚಿತ್ರವನ್ನು ಸಹ ಎರಡು ಭಾಗಗಳಾಗಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಪ್ರಶಾಂತ್ ನೀಲ್ 'ಸಲಾರ್' ಸಿನಿಮಾವನ್ನು ಮತ್ತೊಂದು ಲೆವೆಲ್ಗೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದಾರೆ ಅನ್ನುವ ಮಾತುಗಳು ಕೇಳಿಬರುತ್ತಿವೆ. ಪ್ರಶಾಂತ್ ನೀಲ್ ಜನರಿಗೆ ಅದ್ಧೂರಿಯಾಗಿ ಸಿನಿಮಾಗಳನ್ನು ತೋರಿಸುತ್ತಾರೆ. ಇದಕ್ಕೆ 'ಕೆಜಿಎಫ್' ಸಿನಿಮಾನೇ ಸಾಕ್ಷಿ.
ಇದನ್ನೂ ಓದಿ: ಇವ್ರಲ್ಲಿ ಯಾರ್ ಅಮ್ಮ-ಯಾರ್ ಮಗಳು? ಗೊತ್ತಾಗ್ತಾನೇ ಇಲ್ಲ, ಅಷ್ಟು ಕ್ಯೂಟ್ ಇದ್ದಾರೆ
ಕೆಜಿಎಫ್ 2 ಸಹ ಹಿಟ್ ಆದ ಬೆನ್ನಲ್ಲೆ ಪ್ರಭಾಸ್ ಜೊತೆ ಮಾಡುತ್ತಿರುವ 'ಸಲಾರ್' ಸಿನಿಮಾವನ್ನೂ ಎರಡು ಭಾಗಗಳಲ್ಲಿ ರಿಲೀಸ್ ಮಾಡಲು ಆಲೋಚಿಸಿದ್ದು, 'ಕೆಜಿಎಫ್' ನಂತೆ ಬ್ರ್ಯಾಂಡ್ ಮಾಡಲು ನಿರ್ಧರಿಸಿದ್ದಾರೆ ಎಂಬ ಮಾತುಗಳಿಗೆ ಮತ್ತೊಮ್ಮೆ ರೆಕ್ಕೆ ಪುಕ್ಕ ಬಂದಿದೆ. ಈ ಬಗ್ಗೆ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಆಗಲಿ, ಪ್ರಭಾಸ್ ಆಗಲಿ, ಇಲ್ಲಾ ಪ್ರಶಾಂತ್ ನೀಲ್ ಆಗಲಿ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಆದರೆ, ಟಾಲಿವುಡ್ ಕೆಲ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಮಾಡಿದ್ದವು, ಇದೀಗ ಕೆಜಿಎಫ್ 2 ಸಕ್ಸಸ್ ನಂತರ ಮತ್ತೆ ಮಾತು ಕೇಳಿ ಬಂದಿದೆ ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ