KGF Chapter 2 Release Date: ಕೆಜಿಎಫ್​ ಚಾಪ್ಟರ್​ 2 ರಿಲೀಸ್​ ಬಗ್ಗೆ ದೊಡ್ಡ ಅಪ್ಡೇಟ್ ಕೊಟ್ಟ ಪ್ರಶಾಂತ್ ನೀಲ್​..!

Prashanth Neel: ಕೆಜಿಎಫ್​ ಚಾಪ್ಟರ್ 2 ರಿಲೀಸ್​ಗೆ ಸಿದ್ಧವಾಗಿದೆ. ಇತ್ತೀಚೆಗಷ್ಟೆ ಈ ಚಿತ್ರತಂಡದ ಕಲಾವಿದರು ಡಬ್ಬಿಂಗ್​ ಮುಗಿಸಿದ್ದರು. ಇನ್ನು ಸಿನಿಮಾ ರಿಲೀಸ್ ದಿನಾಂಕ ಬಗ್ಗೆ ಕೆಲವೇ ನಿಮಿಷಗಳ ಹಿಂದೆಯಷ್ಟೆ ಪ್ರಶಾಂತ್ ನೀಲ್​ ಒಂದು ಅಪ್ಡೇಟ್ ಕೊಟ್ಟಿದ್ದಾರೆ.

​ ಕೆಜಿಎಫ್​ ಚಾಪ್ಟರ್ 2 ಸಿನಿಮಾ-ಯಶ್ ಹಾಗೂ ಪ್ರಶಾಂತ್​ ನೀಲ್

​ ಕೆಜಿಎಫ್​ ಚಾಪ್ಟರ್ 2 ಸಿನಿಮಾ-ಯಶ್ ಹಾಗೂ ಪ್ರಶಾಂತ್​ ನೀಲ್

  • Share this:
ಕೇವಲ ಕನ್ನಡಿಗರು ಮಾತ್ರವಲ್ಲ ಬೇರೆ ಸಿನಿರಂಗದ ಪ್ರೇಕ್ಷಕರು ಕಾತರದಿಂದ ಎದುರು ನೋಡುತ್ತಿರುವ ಸಿನಿಮಾ ಎಂದರೆ ಅದು ಕೆಜಿಎಫ್​ ಚಾಪ್ಟರ್ 2. ಹೌದು, ಪ್ರಶಾಂತ್​ ನೀಲ್​ ನಿರ್ದೇಶನದ ಹಾಗೂ ಹೊಂಬಾಳೆ ಫಿಲಂಸ್​ ನಿರ್ಮಾಣದ ಈ ಸಿನಿಮಾಗಾಗಿ ಯಶ್​ ಅಭಿಮಾನಿಗಳೂ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದಾರೆ. ಒಂದು ಕಡೆ ಲಾಕ್​ಡೌನ್​ ಮತ್ತೊಂದು ಕಡೆ ದೊಡ್ಡ ಪರದೆ ಮೇಲೆ ನೆಚ್ಚಿನ ತಾರೆಯರ ಸಿನಿಮಾ ನೋಡದೆ ಬೇಸರದಲ್ಲಿರುವ ಪ್ರೇಕ್ಷಕರಿಗೆ ಈಗ ಒಂದರ ಹಿಂದೆ ಒಂದರಂತೆ ಸಿಹಿ ಸುದ್ದಿ ಸಿಗಲಿದೆ. ಸಾಲು ಸಾಲು ಸಿನಿಮಾಗಳು ತೆರೆ ಕಾಣಲು ಸಿದ್ಧವಾಗಿವೆ. ಕನ್ನಡ, ಹಿಂದಿ, ತೆಲುಗು ಹಾಗೂ ತಮಿಳಿನ ಚಿತ್ರಗಳು ರಿಲೀಸ್​ಗೆ ಸಜ್ಜಾಗಿವೆ. ಇನ್ನೇನು ಅನ್​ಲಾಕ್​ 3ರಲ್ಲಿ ಚಿತ್ರಮಂದಿರಗಳು ಬಾಗಿಲು ತೆರೆಯಲು ಸರ್ಕಾರ ಅನುಮತಿ ನೀಡಲಿದೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಚಿತ್ರತಂಡಗಳು ರಿಲೀಸ್ ದಿನಾಂಕ ಪ್ರಕಟಿಸುತ್ತಿವೆ. ಇದಕ್ಕೆ ಕೆಜಿಎಫ್​ ಚಾಪ್ಟರ್​ 2 ಸಹ ಹೊರತಾಗಿಲ್ಲ. 

ಎಲ್ಲ ಸರಿಯಾಗಿ ಇದ್ದಿದ್ದರೆ ಇನ್ನೇನು 10 ದಿನಗಳಲ್ಲಿ ಕೆಜಿಎಫ್​ ಚಾಪ್ಟರ್ 2 ಸಿನಿಮಾ ಸಿನಿಮಾ ಮಂದಿರಗಳಲ್ಲಿ ರಿಲೀಸ್ ಆಗಬೇಕಿತ್ತು. ಆದರೆ ಕೊರೋನಾ ಆತಂಕದ ನಡುವೆ ಲಾಕ್​ಡೌನ್​ನಿಂದಾಗಿ ಸಾಕಷ್ಟು ಸಿನಿಮಾಗಳು ರಿಲೀಸ್​ ಡೇಟ್​ ಅನ್ನು ಮುಂದೂಡಿದವು. ಈಗ ಅದೇ ಚಿತ್ರತಂಡಗಳು ಒಂದೊಂದಾಗಿ ತೆರೆಗೆ ಬರಲಿ ತಯಾರಿ ನಡೆಸಿವೆ. ಇದರ ನಡುವೆಯೇ ನಿರ್ದೇಶಕ ಪ್ರಶಾಂತ್ ನೀಲ್​ ಅವರೂ ಸಹ ಕೆಜಿಎಫ್​ ಚಾಪ್ಟರ್​ 2 ಸಿನಿಮಾ ಬಗ್ಗೆ ದೊಡ್ಡ ಅಪ್ಡೇಟ್​ ಕೊಟ್ಟಿದ್ದಾರೆ.

KGF Chapter 2 Release Date : Yash's KGF 2 Movie Audio Rights Sold to Lahari Music which Creates New Record.
ಕೆಜಿಎಫ್ ಚಾಪ್ಟರ್ 2


ಕೆಜಿಎಫ್​ ಚಾಪ್ಟರ್ 2 ರಿಲೀಸ್​ಗೆ ಸಿದ್ಧವಾಗಿದೆ. ಇತ್ತೀಚೆಗಷ್ಟೆ ಈ ಚಿತ್ರತಂಡದ ಕಲಾವಿದರು ಡಬ್ಬಿಂಗ್​ ಮುಗಿಸಿದ್ದರು. ಇನ್ನು ಸಿನಿಮಾ ರಿಲೀಸ್ ದಿನಾಂಕವನ್ನು ಸದ್ಯದಲ್ಲೇ ಪ್ರಕಟಿಸುವುದಾಗಿ ಪ್ರಶಾಂತ್ ನೀಲ್​ ತಮ್ಮದೇ ಆದ ಸ್ಟೈಲ್​ನಲ್ಲಿ ಹಂಚಿಕೊಂಡಿದ್ದಾರೆ.

KGF chapter 2, kgf chapter 2 release date, KGF chapter 2 new release 2, Prashanth Neel tweet, Yash, Sanjay Dutt, Raveena Tandon, Hombale Films, ಹೊಂಬಾಳೆ ಫಿಲಂಸ್​, ಕೆಜಿಎಫ್​ ಚಾಪ್ಟರ್​ 2 ರಿಲೀಸ್​ ದಿನಾಂಕ, ಕೆಜಿಎಫ್​ ಚಾಪಟರ್​ 2 ಹೊಸ ರಿಲೀಸ್​ ದಿನಾಂಕ, ಪ್ರಶಾಂತ್​ ನೀಲ್​, ಯಶ್​, Prashanth Neel gave an big update on Yash Starrer KGF chapter 2 released date ae,
ಪ್ರಶಾಂತ್​ ನೀಲ್ ಮಾಡಿರುವ ಹೊಸ ಪೋಸ್ಟ್​


ಚಿತ್ರಮಂದಿರಗಳಲ್ಲಿ ಗ್ಯಾಂಗ್​ಸ್ಟರ್​ಗಳು ತುಂಬಿದಾಗ ನಮ್ಮ ಮಾನ್​ಸ್ಟರ್​ ಎಂಟ್ರಿ ಕೊಡುತ್ತಾನೆ ಎಂದು ಸಿನಿಮಾದ ರಿಲೀಸ್​ ದಿನಾಂಕವನ್ನು ಮುಂದೂಡಿರುವ ಸೂಚನೆ ನೀಡಿದ್ದಾರೆ ನಿರ್ದೇಶಕ. ಹೊಸ ರಿಲೀಸ್​ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಪ್ರಶಾಂತ್ ನೀಲ್​ ತಿಳಿಸಿದ್ದಾರೆ.


ವಿಜಯ್ ಕಿರಗಂದೂರು ನಿರ್ಮಾಣದ ಕೆಜಿಎಫ್​ ಚಾಪ್ಟರ್ 2 ಸಿನಿಮಾದಲ್ಲಿ ರಮಿಕಾ ಸೇನ್​ ಪಾತ್ರದಲ್ಲಿ ರವೀನಾ ಟಂಡನ್​, ಅಧೀರನಾಗಿ ಸಂಜಯ್​ ದತ್​ ಕಾಣಿಸಿಕೊಳ್ಳಲಿದ್ದು, ಪ್ರಕಾಶ್​ ರೈ ಸಹ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Khushi Kapoor: ಶ್ರೀದೇವಿ ಮಗಳ ರೆಟ್ರೊ ಲುಕ್​: ಸ್ಟೈಲ್​ ವಿಷಯದಲ್ಲಿ ದೊಡ್ಡ ಸ್ಟಾರ್​ಗಳಿಗೆ ಟಕ್ಕರ್​ ಕೊಟ್ಟ ಖುಷಿ ಕಪೂರ್​..!

ಶೀಘ್ರದಲ್ಲೇ ಬಾಗಿಲು ತೆರೆಯಲಿವೆ ಚಿತ್ರಮಂದಿರಗಳು

ಇಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ್ ನೇತೃತ್ವದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ರು. ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿದ್ದ ಜಯರಾಜ್ ಸಿನಿಮಾ ಥಿಯೇಟರ್ ತೆರೆಯಲು ಅನುಮತಿ ನೀಡುವಂತೆ ಸಿಎಂ ಗೆ ಮನವಿ ಮಾಡಿದರು. ಅಲ್ಲದೇ ಥಿಯೇಟರ್ ಮೇಲಿನ ತೆರಿಗೆ ಕಡಿತ ಮಾಡುವಂತೆ ಹಾಗೂ ಒಳಾಂಗಣ ಚಿತ್ರೀಕರಣಕ್ಕೂ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ರು. ಇದಕ್ಕೆ ಸ್ಪಂದಿಸಿದ ಸಿಎಂ ಯಡಿಯೂರಪ್ಪ, ಶೀಘ್ರವೇ ಈ ಬಗ್ಗೆ ಸಚಿವರು ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ಮಾಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Kangana Ranaut: ಬುಡಾಪೆಸ್ಟ್​ನಲ್ಲಿ ನಡೆಯಲಿದೆ ಆ್ಯಕ್ಷನ್​ ಸೀಕ್ವೆನ್ಸ್​: ಇನ್​ಸ್ಟಾ ಫ್ಯಾಮಿಲಿಗಾಗಿ ಫೋಟೋ ಹಂಚಿಕೊಂಡ ಕಂಗನಾ..!

ಇನ್ನೂ ಸಿಎಂ ಭೇಟಿ ಮಾಡಿದ ಬಳಿಕ ಮಾತಾಡಿದ ಜಯರಾಜ್, ಸಿನಿಮಾ ಥಿಯೇಟರ್ ತೆರೆಯಲು, ತೆರಿಗೆ ಕಡಿತ ಮಾಡಲು ಹಾಗೂ ಒಳಾಂಗಣ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಡುವಂತೆ ಸಿಎಂ ಗೆ ಮನವಿ ಮಾಡಿದ್ದೇವೆ. ಸಿಎಂ ಯಡಿಯೂರಪ್ಪ ಇದಕ್ಕೆ ಸ್ಪಂಧಿಸಿದ್ದಾರೆ. ಒಳಗಾಂಗಣ ಚಿತ್ರೀಕರಣ ಸೇರಿದಂತೆ ಸಿನಿಮಾ ಥಿಯೇಟರ್ ತೆರೆಯಲು ಅನುಮತಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
Published by:Anitha E
First published: