ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ (Prashanth Neel) ಅವರನ್ನು ಕನ್ನಡ ಸಿನಿಮಾರಂಗ ಮರೆಯೋಕೆ ಸಾಧ್ಯವಿಲ್ಲ. ಇಬ್ಬರು ಸೇರಿ ಕೆಜಿಎಫ್ (KGF) ಮೂಲಕ ಮಾಡಿದ ಮ್ಯಾಜಿಕ್ ಅಂತಿಂತದ್ದಲ್ಲ. ಕನ್ನಡ ಚಿತ್ರರಂಗವನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದಾರೆ. ಬಾಲಿವುಡ್ (Bollywood) ಅಂಗಳದಲ್ಲಿ ಕನ್ನಡ ಸಿನಿಮಾಗಳು ಸದ್ದು ಮಾಡುವ ಮೂಲಕ ಹೊಸ ಅಲೆಯನ್ನೇ ಸೃಷ್ಟಿಸಿದವರು. ಜನವರಿ 8 ರಂದು ರಾಕಿಂಗ್ ಸ್ಟಾರ್ ಯಶ್ (Rocking Star Yash) ಹುಟ್ಟುಹಬ್ಬ ಆಚರಿಸಿಕೊಂಡರು. ನಟನಿಗೆ ಅನೇಕ ನಟ-ನಟಿಯರು ನಿರ್ದೇಶಕರು ವಿಶ್ ಮಾಡಿದ್ದಾರೆ. ಹಾಗೇ ಪ್ರಶಾಂತ್ ನೀಲ್ ಸಹ ಹುಟ್ಟುಹಬ್ಬದ ಶುಭಾಶಯ ಹೇಳಿದ್ದು, ಅವರ ವಿಭಿನ್ನ ವಿಶ್ ಇದೀಗ ಕನ್ನಡಗರ ಕಣ್ಣು ಕೆಂಪಾಗಿಸಿದೆ.
ಉರ್ದು ಭಾಷೆಯಲ್ಲಿ ವಿಶ್ ಮಾಡಿದ ಪ್ರಶಾಂತ್ ನೀಲ್
ಯಶ್ ಹುಟ್ಟುಹಬ್ಬಕ್ಕೆ ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಡಿಫರೆಂಟ್ ಆಗಿ ವಿಶ್ ಮಾಡಲು ಹೋಗಿ ಕನ್ನಡ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಉರ್ದು ಸಾಲುಗಳನ್ನು ಹಾಕಿ ಯಶ್ಗೆ ಬರ್ತಡೇ ವಿಶ್ ಮಾಡಿದ್ದು, ಕನ್ನಡಿಗರಿಗೆ ಸ್ವಲ್ಪವೂ ಇಷ್ಟವಾಗಿಲ್ಲ.
ಕೆಜಿಎಫ್ ಸಿನಿಮಾದ ಉರ್ದು ಡೈಲಾಗ್
ಯಶ್ ಜೊತೆ ಇರುವ ತಮ್ಮ ಫೋಟೋವನ್ನು ಪ್ರಶಾಂತ್ ನೀಲ್ ಅವರ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೆಜಿಎಫ್ ಸಿನಿಮಾದಲ್ಲಿ ಬರುವ ಒಂದು ಉರ್ದು ಡೈಲಾಗ್ ಅನ್ನು ಅವರು ಈ ಫೋಟೋಗೆ ಕ್ಯಾಪ್ಷನ್ ಆಗಿ ನೀಡಿದ್ದಾರೆ. ಇದನ್ನು ನೋಡಿದ ಕನ್ನಡದ ಅಭಿಮಾನಿಗಳು ನೀಲ್ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ಕನ್ನಡದಲ್ಲೇ ವಿಶ್ ಮಾಡಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ.
Falak ka dastur...
khuda ka hukum...
Aur ek Bhai ki dua hai…
ki haatho ki lakiro ko bhi rukhasat kar..
rokhane se bhi nahi rukhegi…
Tumhari ye sultanat…
Happy birthday Boss.@TheNameIsYash pic.twitter.com/fu9kLeW0kj
— Prashanth Neel (@prashanth_neel) January 8, 2023
ರಾಕಿ ಭಾಯ್ ಯಶ್ಗೆ ಉರ್ದು ಭಾಷೆಯಲ್ಲಿ ವಿಶ್ ಮಾಡಿದ್ದಕ್ಕೆ ಕನ್ನಡಿಗರು ಸಿಟ್ಟಾಗಿದ್ದು, ಕೆಜಿಎಫ್ ಸಿನಿಮಾ ಮಾಡಿದ ಪ್ರಶಾತ್ ನೀಲ್ಗೆ ಕನ್ನಡ ಮರೆತು ಹೋಯ್ತಾ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಕನ್ನಡದಲ್ಲೇ ಯಶ್ಗೆ ವಿಶ್ ಮಾಡಿದ್ರೆ ಚೆನ್ನಾಗಿರೋದು ಎಂದು ಹೇಳ್ತಿದ್ದಾರೆ.
ಟಾಲಿವುಡ್ನಲ್ಲಿ ಪ್ರಶಾಂತ್ ನೀಲ್ ಫುಲ್ ಬ್ಯುಸಿ
ಕೆಜಿಎಫ್ ಬಳಿಕ ಸ್ಟಾರ್ ಡೈರೆಕ್ಟರ್ ಆಗಿರುವ ಪ್ರಶಾಂತ್ ನೀಲ್ ಟಾಲಿವುಡ್ ನತ್ತ ಮುಖ ಮಾಡಿದ್ದಾರೆ. ಇದು ಕೂಡ ಕನ್ನಡಿಗರ ಮನಸ್ಸಿಗೆ ಕೊಂಚ ಬೇಸರ ತರಿಸಿದೆ. ಕನ್ನಡದಲ್ಲೇ ಸ್ಟಾರ್ ನಟರ ಜೊತೆ ಸಿನಿಮಾ ಮಾಡಬಹುದಿತ್ತು ಎಂದು ಅಭಿಮಾನಿಗಳು ಹೇಳ್ತಿದ್ದಾರೆ.
ಇದನ್ನೂ ಓದಿ: Shaakuntalam Trailer: ಶಾಕುಂತಲಂ ಸಿನಿಮಾ ಟ್ರೇಲರ್ ಔಟ್, ವೇದಿಕೆ ಮೇಲೆ ಕಣ್ಣೀರಿಟ್ಟ ಸಮಂತಾ!
ತೆಲುಗು ಸ್ಟಾರ್ಗಳಿಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ ನೀಲ್
ಬಾಹುಬಲಿ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ಸಲಾರ್ ಸಿನಿಮಾ ರೆಡಿಯಾಗ್ತಿದ್ದು, ಇದೇ ವರ್ಷ ತೆರೆಗೆ ಬರಲಿದೆ. ಇನ್ನು ಜ್ಯೂನಿಯರ್ ಎನ್ಟಿಆರ್ ಜೊತೆ ಕೂಡ ಪ್ರಶಾಂತ್ ಸಿನಿಮಾ ಮಾಡಲಿದ್ದು, ಸಿನಿಮಾ ಕೆಲಸ, ಮಾತುಕತೆಯಲ್ಲಿ ಫುಲ್ ಬ್ಯುಸಿ ಆಗಿದ್ದಾರೆ. ಕನ್ನಡದ ಪ್ರತಿಭೆ ಪ್ರಶಾಂತ್ ನೀಲ್ ಇದೀಗ ಟಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ