• Home
  • »
  • News
  • »
  • entertainment
  • »
  • Prabhas: ಏಪ್ರಿಲ್​ನಲ್ಲಿ ರಿಲೀಸ್ ಆಗಲಿದೆ ಪ್ರಭಾಸ್​ ಅಭಿನಯದ ಸಲಾರ್​ ಸಿನಿಮಾ..!

Prabhas: ಏಪ್ರಿಲ್​ನಲ್ಲಿ ರಿಲೀಸ್ ಆಗಲಿದೆ ಪ್ರಭಾಸ್​ ಅಭಿನಯದ ಸಲಾರ್​ ಸಿನಿಮಾ..!

ಸಲಾರ್​ ಸಿನಿಮಾದಲ್ಲಿ ಪ್ರಭಾಸ್​

ಸಲಾರ್​ ಸಿನಿಮಾದಲ್ಲಿ ಪ್ರಭಾಸ್​

Salaar Release Date: ಸಲಾರ್​ ಚಿತ್ರೀಕರಣ ಆರಂಭವಾಗುತ್ತಿದ್ದಂತೆಯೇ ಚಿತ್ರೀಕರಣದ ಸೆಟ್​ನಲ್ಲಿ ನಡೆದ ಬೆಂಕಿ ಅವಘಡದಿಂದಾಗಿ ಶೂಟಿಂಗ್​ಗೆ ಕೆಲ ಕಾಲ ಬ್ರೇಕ್​ ಬಿದ್ದಿತ್ತು. ಇನ್ನು ಈ ಸಿನಿಮಾದ ನಾಯಕಿಯಾರೆಂದು ಚಿತ್ರತಂಡ ಈಗಾಗಲೇ ಪ್ರಕಟಿಸಿದೆ. ಜೊತೆ ಮೆಲ್ಲನೆ ಇತರೆ ತಾರಾಗಣದ ಪ್ರಕಟಣೆ ಆಗಲಿದೆ. ಹೀಗಿರುವಾಗಲೇ ನಿರ್ದೇಶಕ ಪ್ರಶಾಂತ್​ ನೀಲ್​ ಸಲಾರ್​ ಸಿನಿಮಾದ ರಿಲೀಸ್​ ದಿನಾಂಕ ಪ್ರಕಟಿಸಿದ್ದಾರೆ.

ಮುಂದೆ ಓದಿ ...
  • Share this:

ಸಲಾರ್, (Salaar) ಸದ್ಯ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಹುಟ್ಟು ಹಾಕಿರೋ ಸಿನಿಮಾ. ಈ ಚಿತ್ರವನ್ನು ಪ್ರಕಟಿಸಿದಾಗಿನಿಂದಲೇ ಪ್ರಭಾಸ್ (Prabhas)​ ಹಾಗೂ ಪ್ರಶಾಂತ್​ ನೀಲ್ (Prashanth Neel)​ ಅಭಿಮಾನಿಗಳಲ್ಲಿ ಊಹೆಗೂ ಮೀರಿದ ನಿರೀಕ್ಷೆ ಈ ಸಿನಿಮಾದ ಮೇಲೆ ಹುಟ್ಟಿಕೊಂಡಿದೆ. ಅದಕ್ಕೆ ಕಾರಣನೇ ಪ್ರಶಾಂತ್ ನೀಲ್ ಹಾಗೂ ಬಾಹುಬಲಿ ಪ್ರಭಾಸ್ ಕಾಂಬಿನೇಷನ್ ಅಂದರೆ ತಪ್ಪಾಗದು. ಒಂದು ಕಡೆ ಬಾಹುಬಲಿ ಮೂಲಕ ಜಾಗತಿಕ ‌ಮಟ್ಟಕ್ಕೆ ಪರಿಚಯವಾದ ನಟ, ಇನ್ನೊಂದು ಕಡೆ ಕರ್ನಾಟಕಕ್ಕೆ ಮಾತ್ರ ಸಿಮೀತ ಅನಿಸಿಕೊಂಡಿದ್ದ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ತೆಗೆದುಕೊಂಡು ಹೋದ ನಿರ್ದೇಶಕ. ಇವರಿಬ್ಬರು ಒಂದಾಗಿದ್ದಾರೆ ಎಂದರೆ ಆ ಸಿನಿಮಾ ಮೇಲಿನ ನಿರೀಕ್ಷೆ ಚಿತ್ರಪ್ರೇಮಿಗಳಲ್ಲಿ ಎಷ್ಟಿರಬಹುದು ಎಂದು  ನೀವೇ ಯೋಚಿಸಿ. ಕೆಜಿಎಫ್-2 ಸಿನಿಮಾದ ಚಿತ್ರೀಕರಣ ಮುಗಿಸಿರುವ ನಿರ್ದೇಶಕ ಪ್ರಶಾಂತ್​ ನೀಲ್​ ಸದ್ಯ ಸಲಾರ್​ ಚಿತ್ರದಲ್ಲಿ ವ್ಯಸ್ತರಾಗಿದ್ದಾರೆ. ಅತ್ತ ಪ್ರಭಾಸ್ ಸಹ ರಾಧೆ ಶ್ಯಾಮ್​ ಶೂಟಿಂಗ್ ಮುಗಿಸಿ ಈಗಾಗಲೇ ಸಲಾರ್​ ಚಿತ್ರತಂಡ ಸೇರಿಕೊಂಡಿದ್ದಾರೆ. ಜತೆಗೆ ಆದಿಪುರುಷ್​ ಚಿತ್ರೀಕರಣದಲ್ಲೂ ಭಾಗಿಯಾಗುತ್ತಿದ್ದಾರೆ. 


ಸಲಾರ್​ ಚಿತ್ರೀಕರಣ ಆರಂಭವಾಗುತ್ತಿದ್ದಂತೆಯೇ ಚಿತ್ರೀಕರಣದ ಸೆಟ್​ನಲ್ಲಿ ನಡೆದ ಬೆಂಕಿ ಅವಘಡದಿಂದಾಗಿ ಶೂಟಿಂಗ್​ಗೆ ಕೆಲ ಕಾಲ ಬ್ರೇಕ್​ ಬಿದ್ದಿತ್ತು. ಇನ್ನು ಈ ಸಿನಿಮಾದ ನಾಯಕಿಯಾರೆಂದು ಚಿತ್ರತಂಡ ಈಗಾಗಲೇ ಪ್ರಕಟಿಸಿದೆ. ಜೊತೆ ಮೆಲ್ಲನೆ ಇತರೆ ತಾರಾಗಣದ ಪ್ರಕಟಣೆ ಆಗಲಿದೆ. ಹೀಗಿರುವಾಗಲೇ ನಿರ್ದೇಶಕ ಪ್ರಶಾಂತ್​ ನೀಲ್​ ಸಲಾರ್​ ಸಿನಿಮಾದ ರಿಲೀಸ್​ ದಿನಾಂಕ ಪ್ರಕಟಿಸಿದ್ದಾರೆ.
ಸಲಾರ್​ ಸಿನಿಮಾ 2022ರ ಏಪ್ರಿಲ್​ 14ಕ್ಕೆ ತೆರೆ ಕಾಣಲಿದೆ. ಸಲಾರ್​ ನೋಡಲು ಪ್ರೇಕ್ಷಕರು ಇನ್ನೂ ಎರಡು ವರ್ಷ ಕಾಯಲೇಬೇಕು. ಪಕ್ಕಾ ಮಾಸ್​ ಹಾಗೈ ಆ್ಯಕ್ಷನ್​ ಚಿತ್ರವಾಗಿರುವ  ಈ ಸಿನಿಮಾದ ಮತ್ತೊಂದು ಪೋಸ್ಟರ್​ ರಿಲೀಸ್ ಆಗಿದ್ದು, ಪ್ರಭಾಸ್​ ಅಭಿಮಾನಿಗಳು ಹಬ್ಬ ಮಾಡುತ್ತಿದ್ದಾರೆ.
View this post on Instagram


A post shared by Prabhas (@actorprabhas)

ರಾಧೆ ಶ್ಯಾಮಾ ನಂತರ ಮತ್ತೆರಡು ಭಾರಿ ಬಜೆಟ್ ನ ಸಿನಿಮಾಗಳನ್ನ ಪ್ರಭಾಸ್ ಒಪ್ಪಿಕೊಂಡಿದ್ದಾರೆ. ಆ ಎರಡು ಸಿನಿಮಾ ಮುಗಿಬೇಕಾದರೆ 3 ವರ್ಷ ಬೇಕು. ಇನ್ನು ಕೆಜಿಎಫ್-2 ಗೆ ತನುಮನವನ್ನೇ ಅರ್ಪಿಸಿ ಕೆಲಸ ಮಾಡುತ್ತಿರುವ ಪ್ರಶಾಂತ್ ನೀಲ್. ಹಾಗಾದರೆ ಪ್ರಶಾಂತ್ ನೀಲ್ ಯಾವ ಗ್ಯಾಪ್ ನಲ್ಲಿ ಕಥೆ - ಚಿತ್ರಕಥೆ ಬರೆದರು. ಅದನ್ನ ಕೇಳಿ ಯಾವ ಗ್ಯಾಪ್​ನಲ್ಲಿ ಪ್ರಭಾಸ್ ಓಕೆ ಮಾಡಿದರು ಎಂಬ ಕುತೂಹಲ ಸಿನಿ ಪ್ರೇಮಿಗಳದ್ದು.


ಇದನ್ನೂ ಓದಿ: ಸ್ಟನ್ನಿಂಗ್​ ಲುಕ್ಸ್​ನಲ್ಲಿ ರಾಬರ್ಟ್​ ರಾಣಿ ಆಶಾ ಭಟ್​..!


ಮೂಲಗಳ ಪ್ರಕಾರ ಸ್ವತಃ ಪ್ರಭಾಸ್ ಗೆ ಪ್ರಶಾಂತ್ ‌ನೀಲ್ ಜೊತೆ ಕೆಲಸ ಮಾಡುವ ಇಚ್ಛೆ ಉಂಟಾಗಿದೆ. ಯಾಕೆಂದರೆ ಸದ್ಯ ರಿಲೀಸ್ ಗೆ ಸಜ್ಜಾಗುತ್ತಿರುವ ರಾಧೆ ಶ್ಯಾಮಾ ತುಂಬಾ ಸಾಫ್ಟ್ ಲವ್ ಸ್ಟೋರಿ, ಅದರಲ್ಲಿ ಒಂದೇ ಒಂದು ಆ್ಯಕ್ಷನ್ ಸಹ ಇಲ್ವಂತೆ. ಹೀಗಿರುವಾಗ ಉತ್ತರ ಭಾರತದಲ್ಲಿ, ಅದರಲ್ಲೂ ಬಿಹಾರದಲ್ಲಿ ಅತಿ ಹೆಚ್ಚು ಅಭಿಮಾನಿ ಬಗಳವನ್ನು ಹೊಂದಿರುವ ಪ್ರಭಾಸ್ ಗೆ ಅಲ್ಲೆಲ್ಲ ರಾಧೆ ಶ್ಯಾಮಾ ಕ್ಲಿಕ್ ಆಗಲಿದೆ ಎಂಬ ಅನುಮಾನ ಇದೆಯಂತೆ. ಹೀಗಾಗಿ ತನಗಿರೋ ಇಮೇಜನ್ನ ಕಾಪಾಡಿಕೊಂಡು, ಅದನ್ನು ಹಾಗೇ ಉಳಿಸಿಕೊಂಡು ಬೆಳೆಸಿಕೊಂಡು ಹೋಗಲು ಪ್ರಭಾಸ್ ಗೆ ತುರ್ತಾಗಿ ಒಂದು ಮಾಸ್ ಸಿನಿಮಾ ಬೇಕಾಗಿದ್ದು, ಸ್ವತಃ ಪ್ರಭಾಸ್ ಹಾಗೂ ಅವರ ಟೀಮ್ ಪ್ರಶಾಂತ್ ನೀಲ್​ ಅವರಿಗೆ ಸಿನಿಮಾ ಮಾಡಿಕೊಡುವಂತೆ ಆಫರ್ ಕೊಟ್ಟಿದ್ದರು ಎಂದೂ ಹೇಳಲಾಗುತ್ತಿದೆ.

Published by:Anitha E
First published: