HOME » NEWS » Entertainment » PRASHANTH NEEL AND ALLU ARJUN DISCUSES ABOUT NEW MOVIE IN GEETA ARTS OFFICE HERE IS THE DETAILS AE

Prashanth Neel: ಟಾಲಿವುಡ್​ ಸ್ಟೈಲಿಶ್​ ಸ್ಟಾರ್​ ಜೊತೆ ಸಿನಿಮಾ ಮಾಡಲಿರುವ ಕೆಜಿಎಫ್​ ಖ್ಯಾತಿಯ ಪ್ರಶಾಂತ್​ ನೀಲ್​..!

ಸಲಾರ್ ನಂತರ ಪ್ರಶಾಂತ್​ ನೀಲ್ ಎನ್​ಟಿಆರ್​ ಅವರ ಸಿನಿಮಾ ಮಾಡಲಿದ್ದಾರೆ ಎಂದು ಎಲ್ಲರೂ ಯೋಚಿಸುತ್ತಿರುವಾಗಲೇ ಕನ್ನಡದ ಈ ನಿರ್ದೇಶಕ ಅಲ್ಲು ಅರ್ಜುನ್​ ಜೊತೆ ಹೊಸ ಸಿನಿಮಾ ತಯಾರಿಯಲ್ಲಿದ್ದಾರೆ.

Anitha E | news18-kannada
Updated:March 10, 2021, 4:17 PM IST
Prashanth Neel: ಟಾಲಿವುಡ್​ ಸ್ಟೈಲಿಶ್​ ಸ್ಟಾರ್​ ಜೊತೆ ಸಿನಿಮಾ ಮಾಡಲಿರುವ ಕೆಜಿಎಫ್​ ಖ್ಯಾತಿಯ ಪ್ರಶಾಂತ್​ ನೀಲ್​..!
ಪ್ರಶಾಂತ್ ನೀಲ್​ ಹಾಗೂ ಅಲ್ಲು ಅರ್ಜುನ್​
  • Share this:
ಪ್ರಶಾಂತ್ ನೀಲ್... ಕೆಜಿಎಫ್ ಮೂಲಕ ಕನ್ನಡ ಚಿತ್ರರಂಗವನ್ನು ಇನ್ನೊಂದು ಮಟ್ಟಕ್ಕೆ ಕೊಂಡೊಯ್ದ ನಿರ್ದೇಶಕ. ಸ್ಯಾಂಡಲ್​ವುಡ್ ನಲ್ಲಿ ಈ ಮಟ್ಟಕ್ಕೂ ಮೇಕಿಂಗ್ ಮಾಡಬಹುದಾ? ಅಂತ ಪರಭಾಷಿಗರೂ ಸಹ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ ನಿರ್ದೇಶಕ. ಇಂತಹ ಪ್ರಶಾಂತ್ ನೀಲ್ ಈಗ ಕೆಜಿಎಫ್-2 ಚಿತ್ರೀಕರಣ ಮುಗಿಸಿ, ಈಗ ಸಲಾರ್ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಕೆಜಿಎಫ್​ 2 ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿರುವಾಗಲೇ ಪ್ರಭಾಸ್​ ಅವರ ಜತೆ ಮಾಡುತ್ತಿರುವ ಪ್ಯಾನ್​ ಇಂಡಿಯಾ ಸಿನಿಮಾದ ಶೂಟಿಂಗ್​ ಆರಂಭಿಸಿದ್ದಾರೆ ಸ್ಟಾರ್ ನಿರ್ದೇಶಕ ಪ್ರಶಾಂತ್​ ನೀಲ್​. ಕೆಜಿಎಫ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನ ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ಪ್ರಶಾಂತ್, ಚಾಪ್ಟರ್ 2 ಚಿತ್ರದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಚಂದನವನ ಮಿನುಗುವಂತೆ ಮಾಡೋದರಲ್ಲಿ ಅನುಮಾನವೇ ಇಲ್ಲ. ಹೀಗಿರುವಾಗಲೇ ಪ್ರಶಾಂತ್​ ನೀಲ್ ಅವರೇ ಸಿನಿಮಾ ಮಾಡಿದರೆ ಚೆನ್ನಾಗಿರುತ್ತೆ ಅಂತ ಸಾಕಷ್ಟು ಮಂದಿ ನಟರು ಕಾಯುತ್ತಿದ್ದಾರೆ. 

ಈ ಹಿಂದೆ ಪ್ರಶಾಂತ್​ ನೀಲ್​ ಜೂನಿಯರ್​ ಎನ್​ಟಿಆರ್ ಜತೆ ಸಿನಿಮಾ ಮಾಡಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಅದರಂತೆ ಮೂತ್ರಿ ಮೂವೀಸ್ ಬ್ಯಾನರ್ ಅಡಿ ಜೂನಿಯರ್​ ಎನ್​ಟಿಆರ್​ ಜತೆ ಸಿನಿಮಾ ಮಾಡುವುದಾಗಿ ಪ್ರಶಾಂತ್ ನೀಲ್​ ಖಚಿತ ಪಡಿಸಿದ್ದರು. ಹೀಗಿರುವಾಗಲೇ ಪ್ರಭಾಸ್​ ಜತೆಗಿನ ಸಿನಿಮಾ ಸಲಾರ್ ಸೆಟ್ಟೇರಿತು. ಈಗ ಪ್ರಶಾಂತ್​ ನೀಲ್​ ಮತ್ತೋರ್ವ ಟಾಲಿವುಡ್​ ಸ್ಟಾರ್ ನಟನ ಜೊತೆ ಹೊಸ ಸಿನಿಮಾಗೆ ತಯಾರಿ ನಡೆಸುತ್ತಿದ್ದಾರೆ.





ಹೌದು, ಸಲಾರ್ ನಂತರ ಪ್ರಶಾಂತ್​ ನೀಲ್ ಎನ್​ಟಿಆರ್​ ಅವರ ಸಿನಿಮಾ ಮಾಡಲಿದ್ದಾರೆ ಎಂದು ಎಲ್ಲರೂ ಯೋಚಿಸುತ್ತಿರುವಾಗಲೇ ಕನ್ನಡದ ಈ ನಿರ್ದೇಶಕ ಅಲ್ಲು ಅರ್ಜುನ್​ ಜೊತೆ ಹೊಸ ಸಿನಿಮಾ ತಯಾರಿಯಲ್ಲಿದ್ದಾರೆ. ಹೌದು, ​ ಗೀತಾ ಆರ್ಟ್ಸ್​ ಕಚೇರಿಯಲ್ಲಿ ಪ್ರಶಾಂತ್​ ನೀಲ್​ ಹಾಗೂ ಅಲ್ಲು ಅರ್ಜುನ್​ ಮಾತುಕತೆ ನಡೆಸಿದ್ದಾರೆ. ಈ ಸಿನಿಮಾ ಸಹ ಪ್ಯಾನ್​ ಇಂಡಿಯಾ ಮಟ್ಟದ ಚಿತ್ರ ಎನ್ನಲಾಗುತ್ತಿದೆ.






ಪ್ರಭಾಸ್​ ನಾಯಕನಾಗಿ ಪ್ರಶಾಂತ್​ ನೀಲ್​ ನಿರ್ದೇಶದಲ್ಲಿ ಮೂಡಿ ಬರುತ್ತಿರುವ ಸಲಾರ್​ ಸಿನಿಮಾ ಮುಂದಿನ ವರ್ಷ ಏ. 14ರಂದು ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಶ್ರುತಿ ಹಾಸನ್​ ನಾಯಕಿಯಾಗಿ ನಟಿಸುತ್ತಿದ್ದಾರೆ. ಜೊತೆಗೆ ಕೆಜಿಎಫ್​ 2 ಸಿನಿಮಾ ಜು.16ರಂದು ರಿಲೀಸ್​ ಆಗಲಿದೆ.






ಅಲ್ಲು ಅರ್ಜುನ್​ ಸದ್ಯ ಪುಷ್ಪ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಕೊಡಗಿನ ಬೆಡಗಿ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಲಾಕ್​ಡೌನ್​ನಿಂದಾಗಿ ಪುಷ್ಪ ಸಿನಿಮಾದ ಶೂಟಿಂಗ್​ ಕೊಂಚ ತಡವಾಗಿ ಆರಂಭವಾಯಿತು. ಆಗಸ್ಟ್​ 13ರಂದು ಪುಷ್ಪ ಸಿನಿಮಾ ಬೆಳ್ಳಿತೆರೆಗೆ ಅಪ್ಪಳಿಸಲಿದೆ.

ಇದನ್ನೂ ಓದಿ: Ganesh: ವಿದೇಶದಲ್ಲಿ ಗಾಳಿಪಟದ ಹಬ್ಬದಲ್ಲಿ ಗೋಲ್ಡನ್​ ಸ್ಟಾರ್ ಗಣೇಶ್​..!

ಈ ಸಿನಿಮಾ ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿಯಲ್ಲಿ ತೆರೆ ಕಾಣಲಿದೆ. ಬಹುಭಾಷೆಗಳಲ್ಲಿ ರಿಲೀಸ್ ಆಗಲಿರುವ ಈ ಚಿತ್ರದಲ್ಲಿ 6 ನಿಮಿಷಗಳ ಫೈಟಿಂಗ್​ ಸೀಕ್ವೆನ್ಸ್​ಗೆ 6 ಕೋಟಿ ವೆಚ್ಚವಾಗಲಿದೆಯಂತೆ. ಅಲ್ಲು ಅರ್ಜುನ್​ ಆ್ಯಕ್ಷನ್​ ಹೇಗಿರುತ್ತದೆ ಎಂದು ವರ್ಣಿಸುವ ಅಗತ್ಯವಿಲ್ಲ. ಇದೇ ಕಾರಣದಿಂದಾಗಿ ನಿರ್ದೇಶಕ ಸುಕುಮಾರ್​ 6 ನಿಮಿಷದ ಆ್ಯಕ್ಷನ್​ ದೃಶ್ಯಕ್ಕಾಗಿ 6 ಕೋಟಿ ವೆಚ್ಚ ಮಾಡಿಸುತ್ತಿದ್ದಾರಂತೆ. ಹೀಗೊಂದು ಸುದ್ದಿ ಸದ್ಯ ಟಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದೆ. ಈ ಸಿನಿಮಾದ ಹಾಡೊಂದರಲ್ಲಿ ದಿಶಾ ಪಟಾಣಿ ಹೆಜ್ಜೆ ಹಾಕಲಿದ್ದಾರಂತೆ.
Published by: Anitha E
First published: March 10, 2021, 4:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories