HOME » NEWS » Entertainment » PRANITHA SUBHASH POSTED ABOUT DBOSS DARSHAN AND POWER STAR PAWAN KALYAN AE

ಡಿಬಾಸ್​ ದರ್ಶನ್​-ಪವನ್​ ಕಲ್ಯಾಣ್​ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ ಪ್ರಣೀತಾ ಸುಭಾಷ್​..!

ಪ್ರಣೀತಾ ಸುಭಾಷ್​ ತಮ್ಮ ಇನ್​ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಡಿಬಾಸ್​ ದರ್ಶನ್​ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ದರ್ಶನ್​ ಎಂದರೆ ಎಷ್ಟು ಇಷ್ಟ ಎಂದು ಅಭಿಮಾನಿಗಳೊಂದಿಗೆ ಶೇರ್​ ಮಾಡಿದ್ದಾರೆ ಈ ನಟಿ. 

Anitha E | news18-kannada
Updated:December 24, 2020, 4:54 PM IST
ಡಿಬಾಸ್​ ದರ್ಶನ್​-ಪವನ್​ ಕಲ್ಯಾಣ್​ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ ಪ್ರಣೀತಾ ಸುಭಾಷ್​..!
​ಪವನ್​ ಕಲ್ಯಾಣ್​, ಪ್ರಣೀತಾ ಸುಭಾಷ್​ ಹಾಗೂ ದರ್ಶನ್​
  • Share this:
ಸ್ಯಾಂಡಲ್​ವುಡ್​ ನಟಿ ಪ್ರಣೀತಾ ಸುಭಾಷ್​ ಕನ್ನಡದ ಜೊತೆಗೆ ತೆಲುಗು , ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲೂ ಮಿಂಚುತ್ತಿದ್ದಾರೆ. ಅವರ ಅಭಿನಯದ ಕನ್ನಡ ಸಿನಿಮಾ ರಾಮನ ಅವತಾರ ಬಿಡುಗಡೆಯಾಗಬೇಕಿದೆ. ಆದರೆ ಹಿಂದಿ ಸಿನಿಮಾ 'ಭುಜ್​ ' ಹಾಗೂ 'ಹಂಗಾಮ 2' ರಿಲೀಸ್​ಗೆ ರೆಡಿಯಾಗಿವೆ. ದರ್ಶನ್​ ಜೊತೆ 'ಪೊರ್ಕಿ' ಚಿತ್ರದಲ್ಲಿ ತೆರೆ ಹಂಚಿಕೊಳ್ಳುವ ಮೂಲಕ ಕನ್ನಡದ ಪ್ರೇಕ್ಷಕರಿಗೆ ನಾಯಕಿಯಾಗಿ ಪರಿಚಯವಾದವರು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುತ್ತಾರೆ. ತಮ್ಮ ಪ್ರವಾಸ ಹಾಗೂ ಸಿನಿಮಾಗಳ ಬಗ್ಗೆ ಸದಾ ಮಾಹಿತಿ ಹಂಚಿಕೊಳ್ಳುವ ಪ್ರಣೀತಾ ಆಗಾಗ ಕನ್ನಡ ಹಾಗೂ ಇತರೆ ಭಾಷೆಗಳ ನಟ-ನಟಿಯರ ಬಗ್ಗೆಯೂ ಪೋಸ್ಟ್​ ಮಾಡುತ್ತಿರುತ್ತಾರೆ. ಈ ಹಿಂದೆಯೂ ಪ್ರಣೀತಾ ಸುಭಾಷ್​ ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಬಗ್ಗೆ ಪೋಸ್ಟ್​ ಮಾಡಿದ್ದರು. ಅಷ್ಟೇ ಅಲ್ಲ, ರಾಜ್​ಕುಮಾರ್​, ಪುನೀತ್​ ರಾಜ್​ಕುಮಾರ್​ ಅವರ ಬಗ್ಗೆಯೂ ಟ್ವಿಟರ್​ನಲ್ಲಿ ಟ್ವೀಟ್​ ಮಾಡುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದರು. 

ಈ ಹಿಂದೆ ಟ್ವಿಟರ್​ನಲ್ಲಿ #AskPranitha ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಲ್ಲಿ ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದರು. 'ಆಸ್ಕ್​ ಪ್ರಣೀತಾ' ಕಾರ್ಯಕ್ರಮದಲ್ಲಿ ಡಿಬಾಸ್ ದರ್ಶನ್ ಅಭಿಮಾನಿಗಳು, ದಚ್ಚು ಕುರಿತು ಒಂದು ಶಬ್ದದಲ್ಲಿ ಹೇಳಿ ಎಂದಿದ್ದಾರೆ. ಅದಕ್ಕೆ ಉತ್ತರಿಸಿರು ಪ್ರಣೀತಾ, ಅವರು ನನ್ನ ಮೊದಲ ಹೀರೋ ಅವರ ಬಗ್ಗೆ ಗೌರವ ಇದೆ. ಅಲ್ಲದೆ ಕೊರೋನ ಲಾಕ್​ಡೌನ್​ ವೇಳೆ ಸಂಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದ್ದಾರೆ ಎಂದು ಕೇಳಿದ್ದೇನೆ. ಅವರದ್ದು ಚಿನ್ನದಂತ ಮನಸ್ಸು ಇರಬೇಕು ಎಂದಿದ್ದರು.

Pranitha Subhash posted about DBoss Darshan and power star Pawan Kalyan
ಪ್ರಣೀತಾ ಅವರ ಹಳೆಯ ಟ್ವೀಟ್​


ಮತ್ತೆ ಈಗಲೂ ಪ್ರಣೀತಾ ಸುಭಾಷ್​ ತಮ್ಮ ಇನ್​ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಡಿಬಾಸ್​ ದರ್ಶನ್​ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ದರ್ಶನ್​ ಎಂದರೆ ಎಷ್ಟು ಇಷ್ಟ ಎಂದು ಅಭಿಮಾನಿಗಳೊಂದಿಗೆ ಶೇರ್​ ಮಾಡಿದ್ದಾರೆ ಈ ನಟಿ.

Pranitha Subhash posted about DBoss Darshan and power star Pawan Kalyan
ಪ್ರಣೀತಾ ಅವರ ಇನ್​ಸ್ಟಾಗ್ರಾಂ ಸ್ಟೋರೀಸ್​


ಕನ್ನಡದಲ್ಲಿ ತಮ್ಮ ನೆಚ್ಚಿನ ನಟ ದರ್ಶನ್​ ಎಂದು ಅವರೊಂದಿಗಿನ ಫೋಟೋ ಹಂಚಿಕೊಂಡಿರುವ ಪ್ರಣೀತಾ, ಇಷ್ಟದ ಸಹ ನಟ ಎಂದು ಪವನ್​ ಕಲ್ಯಾಣ್​ ಅವರ ಚಿತ್ರವನ್ನು ಪೋಸ್ಟ್​ ಮಾಡಿದ್ದಾರೆ.

Pranitha Subhash posted about DBoss Darshan and power star Pawan Kalyan
ಪ್ರಣೀತಾ ಅವರ ಇನ್​ಸ್ಟಾಗ್ರಾಂ ಸ್ಟೋರೀಸ್​
ಇನ್​ಸ್ಟಾಗ್ರಾಂನಲ್ಲಿ ಇಷ್ಟದ ಫೋಟೋ ಹಂಚಿಕೊಳ್ಳುವ ಆಟ ಆಡೋಣ ಎಂದು ಪ್ರಣೀತಾ ಸ್ಟೋರೀಸ್​ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಪ್ರಣೀತಾ ದರ್ಶನ್​ ಅವರ ಫೋಟೋ ಜೊತೆಗೆ ಕನ್ನಡದಲ್ಲಿ ಇಷ್ಟದ ನಟ ಎಂದು ಬರೆದುಕೊಂಡಿರುವುದನ್ನು ನೋಡಿದ ಡಿಬಾಸ್​ ಅಭಿಮಾನಿಗಳು ಸಖತ್​ ಖುಷಿಯಾಗಿದ್ದಾರೆ.

Actress @pranitasubhash Mentions #DBoss Is Her Favorite Acor In Kannada Industry 💥😍



ಹಿಂದಿ ಸಿನಿಮಾ ಹಂಗಾಮ 2 ಚಿತ್ರೀಕರಣ ಪೂರ್ಣಗೊಂಡಿದ್ದು, ತಮ್ಮ ಚಿತ್ರದ ರಿಲೀಸ್​ಗಾಗಿ ಪ್ರಣೀತಾ ಕಾಯುತ್ತಿದ್ದಾರೆ.
Published by: Anitha E
First published: December 24, 2020, 4:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories