Pranitha Subhash: ಮಾಲ್ಡೀವ್ಸ್​ನಲ್ಲಿ ಎಂಜಾಯ್ ಮಾಡಿದ್ದಾರೆ ನಟಿ ಪ್ರಣಿತಾ, ಮತ್ತೆ ಸಿನಿಮಾ ಮಾಡಿ ಅಂದ್ರು ಫ್ಯಾನ್ಸ್

Actress Pranitha Subhash Swimming in Maldives: ಕನ್ನಡದ ಖ್ಯಾತ ನಟಿಯಾದ ಪ್ರಣಿತ ಸುಭಾಷ್ ಮಾಲ್ಡೀವ್ಸ್​ನಲ್ಲಿ ತನ್ನ ಫ್ಯಾಮಿಲಿ ಜೊತೆ ಸಖತ್ ಜಾಲಿ ಮಾಡಿದ್ದಾರೆ. ಆ ಫೋಟೋ ಇದೀಗ ವೈರಲ್ ಆಗಿದೆ. ಮತ್ತೆ ಕನ್ನಡಕ್ಕೆ ಮರಳಿ ಬರಲಿದ್ದಾರಾ ಪ್ರಣಿತಾ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ.

ಸಾಂರ್ಭಿಕ ಚಿತ್ರ

ಸಾಂರ್ಭಿಕ ಚಿತ್ರ

  • Share this:
ಪ್ರಣಿತಾ ಸುಭಾಷ್ (Pranitha Subhash) ಸ್ಯಾಂಡಲ್​ವುಡ್​ನ ಖ್ಯಾತ ನಟಿ. ಒಂದು ಕಾಲದಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಬೆಡಗಿ ಅಂತ ಹೇಳಿದ್ದರೂ ತಪ್ಪಾಗಲಾರದು. ಕನ್ನಡಕ್ಕೆ 2010ರಲ್ಲಿ ಚಾಲೆಂಜಿಂಗ್ ಸ್ಟಾರ್ ( Challenging Star)​ ದರ್ಶನ್ ಜೊತೆಯಲ್ಲಿ ಪೊರ್ಕಿ ಸಿನಿಮಾದ ಮೂಲಕ ಸಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ಈಕೆ ಸ್ನೇಹಿತರು, ಅಂಗಾರಕ, ಜರಾಸಂಧ ಹೀಗೆ ನಾನಾ ರೀತಿಯ ಜಾನರ್ ಸಿನಿಮಾಗಳನ್ನು ನೀಡಿ ಹಿಟ್​ಗಳನ್ನು ಕಂಡಿದ್ದಾರೆ. ಕೇವಲ ಕನ್ನಡ ಚಿತ್ರರಂಗದಲ್ಲಿ (Sandalwood)  ಮಾತ್ರವಲ್ಲದೇ ತೆಲುಗು,ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿಯೂ ತನ್ನನ್ನ ತಾನು ಚಿತ್ರಾಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಪಿಂಕ್ ಹುಡ್ಗಿ, ದೊಡ್ಡ ಕಣ್ಣ ಹುಡುಗಿ ಎಂಬ ಒಂದಷ್ಟು ಪೆಟ್ ನೇಮ್​ಗಳೂ ಕೂಡ ಇವರಿಗಿದೆ.

ಕೇವಲ ಸಿನಿಮಾ ರಂಗಮಾತ್ರವಲ್ಲದೇ ಸಾಮಾಜಿಕ ಕಾರ್ಯ, ಇತರೆ ಬ್ಯುಸಿನೆಸ್​ಗಳಲ್ಲಿ ತೊಡಗಿಕೊಂಡಿದ್ದಾರೆ. ಪ್ರಣಿತಾ ಅವರು ಮೇ 30, 2021 ರಂದು ನಿತಿನ್ ರಾಜು ಎಂಬುವರನ್ನು ಮದುವೆಯಾದರು.  2022 ರಲ್ಲಿ ಒಂದು ಹೆಣ್ಣು ಮಗುವಿಗೆ ಜನ್ಮವನ್ನು ಕೂಡ ನೀಡಿದರು. ಈ ಎಲ್ಲಾ ವೈಯಕ್ತಿಕ ಜೀವನದಿಂದಾಗಿ ಸದ್ಯಕ್ಕೆ ಪ್ರಣಿತಾ ಸುಭಾಷ್​ರವರು ಸಿನಿಮಾ ಫೀಲ್ಡ್​ಗೆ ಬ್ರೇಕ್​ನ್ನು ಕೊಟ್ಟಿದ್ದಾರೆ.

ಪ್ರಣಿತಾರವರನ್ನು ಮತ್ತೆ ಕನ್ನಡದ ತೆರೆಯ ಮೇಲೆ ಕಾಣಬೇಕು ಎಂಬುದಾಗಿ ಅಭಿಮಾನಿಗಳ ಆಶಯವಾಗಿದೆ. ಆಕೆಯು ಕಣ್ಣಿನಲ್ಲೇ ಮಾಡುವ ನಟನೆ,  ಮೈ ಬಣ್ಣ, ನಗುವಿನ ಶೈಲಿ ಜೊತೆಗೆ ಬಳುಕುವ ಮೈ ಎಲ್ಲ ಅಂಶಗಳು ಕನ್ನಡ ಸಿನಿಮಾಗಳಲ್ಲಿ ಕಾಣದೇ ಅಭಿಮಾನಿಗಳು ನಿರಾಸೆಯಾಗಿದ್ದಾರೆ. ಹಾಗಾಗಿ ಪ್ರಣಿತಾರವರು ತನ್ನ ಜಾಲಿ ಟ್ರಿಪ್​ಗಳನ್ನೆಲ್ಲಾ ಮುಗಿಸಿದ ನಂತರ ಕನ್ನಡದ ಸಿನಿಮಾಕ್ಕೆ ಓಕೆ ಮಾಡಲಿ ಎಂಬುದು ಎಲ್ಲರ ಆಶಯ.

ಮಾಲ್ಡೀವ್ಸ್​ನಲ್ಲಿ ಹೀರೋಯಿನ್ ಫ್ಯಾಮಿಲಿ

ಹೌದು. ಮಾಲ್ಡೀವ್ಸ್ ಪ್ರವಾಸವನ್ನು ಸಖತ್ ಎಂಜಾಯ್ ಮಾಡುತ್ತಿರುವ ಪೊರ್ಕಿ ಸುಂದರಿ ಸಾಮಾಜಿಕ ಜಾಲತಾಣದಲ್ಲಿ ತರೆಹೇವಾರಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದೇನು ಮೊದಲ ಬಾರಿ ಇವ್ರು ಮಾಲ್ಡೀವ್ಸ್​ಗೆ ಹೋಗಿದ್ದಲ್ಲ. ಈ ಹಿಂದೆಯೂ ಒಮ್ಮೆ
'ಮಾಲ್ಡೀವ್ಸ್​ನಲ್ಲಿ ನನ್ನ ಮೊದಲ ಸ್ಕೂಬಾ ಡೈವಿಂಗ್ ಅನುಭವ' ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವನ್ನು ಪೋಸ್ಟ್ ಮಾಡಿದ್ದರು. ಇದು ಕೂಡ ಸಖತ್ ವೈರಲ್ ಆಗಿತ್ತು. ಆ ಸಮಯದಲ್ಲಿ ಪ್ರಣಿತಾರವರು ಹಿಂದಿಯ ಹಂಗಾಮ-2 ಸಿನಿಮಾದ ಚಿತ್ರೀಕರಣವನ್ನು ಮುಗಿಸಿದ್ದರು. ಆ ಶೂಟಿಂಗ್ ಶೆಡ್ಯುಲ್​ನಿಂದ ರಿಫ್ರೆಶ್ ಆಗಲು ಮಾಲ್ಡೀವ್ಸ್​ಗೆ ಬಂದಿದ್ರು.ಇದನ್ನೂ ಓದಿ: ರತ್ನನ್​ ಪ್ರಪಂಚ ಉಡಾಳ ಬಾಬು ರಾವ್ ಜೊತೆ ಶೃತಿ ನಾಯ್ಡು ಮತ್ತೊಂದು ಸಿನಿಮಾ

ಸ್ವಿಮ್ಮಿಂಗ್ ಪೂಲ್​ನಲ್ಲಿ ಗಂಡ - ಹೆಂಡ್ತಿ
ಎರಡನೇಬಾರಿ ಮಾಲ್ಡೀವ್ಸ್​ಗೆ ತೆರಳಿದ್ದಾರೆ ಪ್ರಣಿತಾ. ಈ ಹಿಂದೆ ತೆರಳಿದ್ದಾಗ ಬೇರೆ ರೀತಿಯ ಫೋಟೋ ಶೂಟ್​ಗಳನ್ನು ಮಾಡಿ, ಒಂದಷ್ಟು ಅಡ್ವೆಂಚರ್ಸ್​ ಗೇಮ್ಸ್​ಗಳಲ್ಲಿ ಪಾಲ್ಗೊಂಡಿದ್ದರು. ಆದರೆ ಈ ಬಾರಿ ತಮ್ಮ ಫ್ಯಾಮಿಲಿ ಜೊತೆಗೆ ಮಾಲ್ಡೀವ್ಸ್​ಗೆ ಎಂಟ್ರಿ ಕೊಟ್ಟಿದ್ದಾರೆ. ಇಲ್ಲಿ ತನ್ನ ಪತಿಯ ಜೊತಗೆ ಸ್ವಿಮ್ಮಿಂಗ್ ಪೂಲ್​ನಲ್ಲಿ ಸ್ವಿಮ್​ ಮಾಡೋ ಫೋಟೋಗಳನ್ನು ಫೇಸ್​ ಬುಕ್​ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ 'Cooling off @our Villa' ಎಂಬ ಕ್ಯಾಪ್ಷನ್​ನ್ನೂ ನೀಡಿ ನೀಲಿ ಬಣ್ಣದ ಹಾರ್ಟ್​ ಹಾಕಿದ್ದಾರೆ.

ಇದನ್ನೂ ಓದಿ: ಸ್ನೇಹಾಳನ್ನು ಪ್ರೀತಿಸ್ತಿರೋ ಶ್ರೀಗೆ ಪೂರ್ವಿ ಕೊಟ್ಲು ಶಾಕ್! ಕಂಠಿಗೆ ಬಿಸಿ ತುಪ್ಪವಾದ ಮದುವೆ ಮಾತುಕಥೆ

ಫೋಟೋದಲ್ಲಿ ಏನಿದೆ?
ನೋಡುಗರ ದೃಷ್ಠಿಯನ್ನು ಒಮ್ಮೆಗೆ ಸೆಳೆಯುವಂತಹ ಈ ಫೋಟೋ ಸಖತ್ ಕಿಕ್ ಕೊಡ್ತಾ ಇದೆ. ಯಾಕೆಂದರೆ, ಕೇವಲ ಪ್ರಣಿತ ಮಾತ್ರವಲ್ಲದೇ ಆಕೆಯ ಪತಿಯೊಂದಿಗೆ ಈಜುತ್ತಿರುವ ಫೋಟೊವೊಂದನ್ನು ಹಂಚಿಕೊಂಡಿರುವ ಅವರು ಫೇಸ್​ಬುಕ್​ನಲ್ಲಿ ಹಲವಾರು ಲೈಕ್ಸ್​ಗಳನ್ನು ಕೂಡಗಳಿಸಿದ್ದಾರೆ.

ತನ್ನ ಪ್ರೆಗ್ನೆನ್ಸಿ ಸಮಯಗಳನ್ನೆಲ್ಲಾ ಕಳೆದು ಇದೀಗ ಹಾಯಾಗಿ ಎಂಜಾಯ್ ಮಾಡೋಕೆ ಮಾಲ್ಡೀವ್ಸ್​ಗೆ ಬಂದಿದ್ದಾರೆ. ತನ್ನ ಪತಿಯೊಂದಿಗೆ ಸ್ವಿಮ್ಮಿಂಗ್ ಮಾಡ್ತಾ ಎಂಜಾಯ್ ಮಾಡೋ ಫೋಟೋಸ್​ಗಳನ್ನು ನೋಡುವುದೇ ಅದ್ಭುತವಾಗಿದೆ. ಯಾಕೆಂದರೆ ತಾಯ್ತನ ಸಮಯಗಳೆನ್ನೆಲ್ಲಾ ಕಳೆದು ಇದೀಗ ಜಾಲಿ ಟ್ರಿಪ್​ ಅನ್ನು ಮಾಡ್ತಾ ಇರುವ ಕಾರಣದಿಂದ ಸಖತ್ ಸೂಪರ್​ ಆಗಿದೆ.

ಒಟ್ಟಿನಲ್ಲಿ  ಕನ್ನಡದ ಹುಡುಗಿ ಈ ಟ್ರಿಪ್​ಗಳನ್ನೆಲ್ಲಾ ಮುಗಿಸಿದ ನಂತರ ಆದಷ್ಟು ಬೇಗ ಮತ್ತೆ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಬೇಕೆಂಬುದು ಅಭಿಮಾನಿಗಳ ಆಶಯವಾಗಿದೆ.
First published: