• Home
  • »
  • News
  • »
  • entertainment
  • »
  • Pranitha Subhash: ಕರಸೇವಕರ ಮೇಲೆ ಗುಂಡು ಹಾರಿಸಿದಾಗ ನ್ಯಾಯ ಎಲ್ಲಿತ್ತು ಎಂದ ನಟಿ ಪ್ರಣೀತಾ

Pranitha Subhash: ಕರಸೇವಕರ ಮೇಲೆ ಗುಂಡು ಹಾರಿಸಿದಾಗ ನ್ಯಾಯ ಎಲ್ಲಿತ್ತು ಎಂದ ನಟಿ ಪ್ರಣೀತಾ

ಪ್ರಣೀತಾ ಸುಭಾಷ್​

ಪ್ರಣೀತಾ ಸುಭಾಷ್​

Pranita Subhash: ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪಿನ ಕುರಿತಾಗಿ ಸೆಲೆಬ್ರಿಟಿಗಳೂ ಸಹ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ನಟಿ ಪ್ರಣೀತಾ ಸುಭಾಷ್​ ಸಹ ಹೊರತಾಗಿಲ್ಲ. ಪ್ರಣೀತಾ ಸಹ ಬಾಬ್ರಿ ಮಸೀದಿ ತೀರ್ಪಿನ ಕುರಿತಾಗಿ ಟ್ವೀಟ್​ ಮಾಡಿದ್ದಾರೆ.

  • Share this:

ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಬಂಧಿಸಿದಂತೆ ಮಹತ್ವ ತಿರ್ಫು ನೀಡಿದೆ. 1992ರಲ್ಲಿ ಅಯೋಧ್ಯೆಯ ಬಾಬ್ರಿ ಮಸೀದಿ ಕಟ್ಟಡವನ್ನ ಕರಸೇವಕರು ಧ್ವಂಸ ಮಾಡಿದ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ 28 ವರ್ಷಗಳ ನಂತರ ತೀರ್ಪು ನೀಡಿದೆ. ಬಾಬ್ರಿ ಮಸೀದಿ ಧ್ವಂಸ ಮಾಡಿದ್ದು ಪೂರ್ವನಿಯೋಜಿತ ಎಂದೆನಿಸುವುದಕ್ಕೆ ಪ್ರಬಲ ಸಾಕ್ಷ್ಯಾಧಾರಗಳು ಇಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಎಲ್ಲ 32 ಆರೋಪಿಗಳನ್ನ ಖುಲಾಸೆಗೊಳಿಸಿದೆ. ಲಕ್ನೋ ವಿಶೇಷ ಸಿಬಿಐ ಕೋರ್ಟ್ ನ್ಯಾಯಾಧೀಶ ಎಸ್.ಕೆ. ಯಾದವ್ ನೇತೃತ್ವದ ನ್ಯಾಯಪೀಠ, 2 ಸಾವಿರ ಪುಟಗಳ ತೀರ್ಪನ್ನು ಪ್ರಕಟಿಸಿದೆ. ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ, ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ ಜೋಶಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ, ಬಜರಂಗ ದಳ ಸಂಸ್ಥಾಪಕ ವಿನಯ್ ಕಟಿಯಾರ್ ಸೇರಿದಂತೆ 32 ಮಂದಿ ಈಗ ಈ ಪ್ರಕರಣದಲ್ಲಿ ಆರೋಪಮುಕ್ತರಾಗಿದ್ದಾರೆ.


ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪಿನ ಕುರಿತಾಗಿ ಸೆಲೆಬ್ರಿಟಿಗಳೂ ಸಹ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ನಟಿ ಪ್ರಣೀತಾ ಸುಭಾಷ್​ ಸಹ ಹೊರತಾಗಿಲ್ಲ. ಪ್ರಣೀತಾ ಸಹ ಬಾಬ್ರಿ ಮಸೀದಿ ತೀರ್ಪಿನ ಕುರಿತಾಗಿ ಟ್ವೀಟ್​ ಮಾಡಿದ್ದಾರೆ.


ಕರಸೇವಕರ ಮೇಲೆ ಪೊಲೀಸ್ ತಂಡ



ಕರಸೇವಕರ ಮೇಲೆ ಪೊಲೀಸ್ ತಂಡ ಗುಂಡು ಹಾರಿಸಿದಾಗ ನ್ಯಾಯ ಎಲ್ಲಿತ್ತು?
ರಾಜಕೀಯ ನಾಯಕರನ್ನು ಬಂಧಿಸಿದಾಗ ಕಾನೂನಿನ ನಿಯಮ ಎಲ್ಲಿತ್ತು ಎಂದು ಪ್ರಶ್ನಿಸಿರುವ ಪ್ರಣೀತಾ, ಕ್ಷಮಿಸಿ ಆದರೆ ಮರೆಯಬೇಡಿ ಎಂದು ಮನವಿ ಮಾಡಿದ್ದಾರೆ.


ಇದನ್ನೂ ಓದಿ: Rashmika Mandanna: ವೈರಲ್​ ಆಗುತ್ತಿದೆ ರಶ್ಮಿಕಾ ಮಂದಣ್ಣ ಬೀಚ್​ ವರ್ಕೌಟ್​ ವಿಡಿಯೋ..!


ಪ್ರಣೀತಾ ಅವರು ಕೆಲವೇ ಗಂಟೆಗಳ ಹಿಂದೆಯಷ್ಟೆ ಈ ಟ್ವೀಟ್​ ಮಾಡಿದ್ದು, ಇದರ ಪರ-ವಿರೋಧದ ಚರ್ಚೆ ಈಗಾಗಲೇ ಆರಂಭವಾಗಿದೆ. ಕೆಲವರು ಪ್ರಣೀತಾ ಅವರ ಅಭಿಪ್ರಾಯವನ್ನು ಟೀಕಿಸುತ್ತಿದ್ದರೆ, ಮತ್ತೆ ಕೆಲವರು ಬೆಂಬಲಿಸುತ್ತಿದ್ದಾರೆ.




ಪ್ರಣೀತಾ ಸುಭಾಷ್​ ಸಿನಿಮಾಗಳ ವಿಷಯಕ್ಕೆ ಬಂದರೆ, ಈಗ ಅವರು ಬಾಲಿವುಡ್​ನಲ್ಲಿ ಬ್ಯುಸಿಯಾಗಿದ್ದಾರೆ. ಆದಷ್ಟು ಸಮಯವನ್ನು ಮುಂಬೈನಲ್ಲೇ ಕಳೆಯುತ್ತಿದ್ದಾರೆ. ಲಾಕ್​ಡೌನ್​ ವೇಳೆ ಪ್ರಣೀತಾ ತಮ್ಮ ಫೌಂಡೇಶನ್​ ಮೂಲಕ ಸಾಕಷ್ಟು ಮಂದಿಗೆ ನೆರವಾಗಿದ್ದಾರೆ.

Published by:Anitha E
First published: