ದಕ್ಷಿಣ ಭಾರತದ ರಾಜ್ಯಗಳಲ್ಲಿ (South Indian States) ಹಿಂದಿ ಹೇರಿಕೆ (Hindi Imposition)ವಿರುದ್ಧ ಹಿಂದಿನಿಂದಲೂ ವಿರೋಧ ಇದೆ. ಇತ್ತೀಚಿನ ವರ್ಷಗಳಲ್ಲಿ ಹಿಂದಿ ಹೇರಿಕೆಯನ್ನು ಬಹಳಷ್ಟು ಸೆಲೆಬ್ರಿಟಿಗಳು (Celebrity) ಕೂಡಾ ವಿರೋಧಿಸಿದ್ದಾರೆ. ಇದರಲ್ಲಿ ನಟ ಪ್ರಕಾಶ್ ರಾಜ್ (Prakash Raj) ಹೆಸರು ಮೊದಲಿಗೆ ಕೇಳಿ ಬರುತ್ತದೆ. ಅವರ ಕೆಲವು ಸಿನಿಮಾಗಳಲ್ಲಿಯೂ ಹಿಂದಿಭಾಷೆಗೆ ಸೂಚ್ಯವಾಗಿ ಟಾಂಗ್ ಕೊಡುವ ದೃಶ್ಯಗಳಿರುತ್ತವೆ. ಇದೀಗ ನಟ ಕನ್ನಡದ (Kannada) ಪರವಾಗಿ ಮಾತನಾಡಿದ್ದಾರೆ. ಬರೋಬ್ಬರಿ 7 ಭಾಷೆಗಳನ್ನು (Language) ಮಾತನಾಡಬಲ್ಲ ಸೌತ್ನ ಸಿನಿ ಪ್ರತಿಭೆ ಪ್ರಕಾಶ್ ಏನು ಹೇಳಿದ್ದಾರೆ ಗೊತ್ತೇ?
ಹಿಂದಿ ಹೇರಿಕೆಗೆ ವಿರೋಧ
ಪ್ರಕಾಶ್ ರಾಜ್ ಅವರು ಮೊದಲಿನಿಂದಲೂ ಹಿಂದಿ ಹೇರಿಕೆಯನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಅವರು ತಮಿಳುನಾಡಿನಲ್ಲಿಯೂ ಹಿಂದಿ ಭಾಷಾ ಹೇರಿಕೆಯನ್ನು ವಿರೋಧಿಸಿದ್ದರು. ಈಗ ಕನ್ನಡ ಭಾಷೆಯ ಪರ ಮಾತನಾಡಿದ್ದಾರೆ.
ಪ್ರಕಾಶ್ ರಾಜ್ ಅವರ ಟ್ವೀಟ್
ಪ್ರಕಾಶ್ ರಾಜ್ ಅವರು ಟ್ವೀಟ್ ಮಾಡಿದ್ದು ವೈರಲ್ ಆಗಿದೆ. ಅದರಲ್ಲಿ ನಟ ಸ್ಪೆಷಲ್ ಟೀಶರ್ಟ್ ಧರಿಸಿದ್ದಾರೆ. ಆದರೆ ಈ ಫೋಟೋ ವೈರಲ್ ಆಗುತ್ತಿದ್ದಂತೆ ವಕೀಲರೊಬ್ಬರು ಟ್ವೀಟ್ ಮಾಡಿದ್ದಾರೆ.
ನನ್ನ ಬೇರು.. ನನ್ನ ಮೂಲ ನನ್ನ ಕನ್ನಡ.. ನನ್ನ ತಾಯನ್ನು ಗೌರವಿಸದೆ ನಿನ್ನ ಹಿಂದಿಯನ್ನು ಹೇರಿದರೆ ನಾವು ಹೀಗೇ ಪ್ರತಿಭಟಿಸುತ್ತೇವೆ .. ಹೆದರೊಲ್ಲ..ಅಷ್ಟೇ..My roots..my mother tongue is KANNADA .. if you DISRESPECT her and try to FORCE your language.. we will PROTEST like this. R u threatening #justasking pic.twitter.com/JaRLOhGKTT
— Prakash Raj (@prakashraaj) March 6, 2023
ಇದನ್ನೂ ಓದಿ: The Kashmir Files: ತೀರ್ಪುಗಾರರು ಉಗಿದರೂ ಬುದ್ಧಿ ಬರ್ಲಿಲ್ಲ! ಕಾಶ್ಮೀರಿ ಫೈಲ್ಸ್ ನಾನ್ಸೆನ್ಸ್ ಎಂದ ಪ್ರಕಾಶ್ ರಾಜ್
ನನ್ನ ಬೇರು.. ನನ್ನ ಮೂಲ ನನ್ನ ಕನ್ನಡ.. ನನ್ನ ತಾಯನ್ನು ಗೌರವಿಸದೆ ನಿನ್ನ ಹಿಂದಿಯನ್ನು ಹೇರಿದರೆ ನಾವು ಹೀಗೇ ಪ್ರತಿಭಟಿಸುತ್ತೇವೆ.. ಹೆದರೊಲ್ಲ, ಅಷ್ಟೇ’ ಎಂದು ಪ್ರಕಾಶ್ ರಾಜ್ ಅವರು ಶಶಾಂಕ್ ಶೇಖರ್ ಟ್ವೀಟ್ಗೆ ಉತ್ತರಿಸಿದ್ದಾರೆ. ನಂತರ ಮತ್ತೊಂದು ಟ್ವೀಟ್ ಮಾಡಿ ಎಚ್ಚರಿಕೆ ನೀಡುವ ಕೆಲಸ ಮಾಡಿದ್ದಾರೆ.
ನಾನು ಏಳು ಭಾಷೆಗಳನ್ನು ಬಲ್ಲೆ. ಒಂದು ಭಾಷೆಯನ್ನು ಕಲಿತು ಮಾತನಾಡುವುದು ಎಂದರೆ ಆ ಭಾಷೆಯ ಜನರನ್ನು ಗೌರವಿಸುವುದು. ನಾನು ಹೋಗುವಲ್ಲೆಲ್ಲಾ ಅಯಾ ಭಾಷೆಯಲ್ಲಿ ಸಂವಾದಿಸುತ್ತೇನೆ. ನನ್ನ ಭಾಷೆಯನ್ನು ಹೇರುವುದಿಲ್ಲ.. ಆದರೆ ನನ್ನ ಕನ್ನಡವನ್ನು ಅವಮಾನಿಸಿ ನಿಮ್ಮ ಭಾಷೆಯನ್ನು ಹೇರಿದರೆ ನಿಂತು ಹೋರಾಡುತ್ತೇನೆ. #StopHindilmposition #justasking
— Prakash Raj (@prakashraaj) March 7, 2023
ಖಳ ನಾಯಕನ ಪಾತ್ರದಲ್ಲಿ ಫೇಮಸ್
ಪ್ರಕಾಶ್ ರಾಜ್ ಅವರು ಖಳನಾಯಕನ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಆದರೆ ವಿಲನ್ ರೋಲ್ ಮಾಡಿದಷ್ಟೇ ಚೆನ್ನಾಗಿ ಉಳಿದ ರೋಲ್ಗಳನ್ನೂ ಮಾಡುತ್ತಾರೆ. ಇದರ ಜೊತೆಗೆ ಪೋಷಕ ಪಾತ್ರಗಳ ಮೂಲಕವೂ ಅವರು ಪ್ರೇಕ್ಷಕರನ್ನು ಸೆಳೆಯುತ್ತಾರೆ.
ಎಲ್ಲ ಭಾಷೆಗೂ ಡಬ್ ಮಾಡ್ತಾರೆ
ಬಹುತೇಕ ಎಲ್ಲ ಚಿತ್ರರಂಗದಲ್ಲಿಯೂ ಅವರ ಪಾತ್ರಗಳಿಗೆ ಅವರೇ ಡಬ್ ಮಾಡುತ್ತಾರೆ ಎನ್ನುವುದು ಮತ್ತೊಂದು ವಿಶೇಷ. ತಮಿಳು, ತೆಲುಗು ಭಾಷೆಗಳಲ್ಲಿ ಸಿನಿಮಾ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ವಿಜಯ್ ಅಭಿನಯದ ವಾರಿಸು ಸಿನಿಮಾದಲ್ಲಿಯೂ ವಿಲನ್ ರೋಲ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ