• Home
  • »
  • News
  • »
  • entertainment
  • »
  • The Kashmir Files ಬಗ್ಗೆ ಹೀಗೆಲ್ಲಾ ಹೇಳಿದ್ರಾ ಪ್ರಕಾಶ್ ರಾಜ್? ಇತ್ತ "ನಾ ಸಿನಿಮಾ ನೋಡಲ್ಲ" ಅಂದ್ರು ಸಿದ್ದರಾಮಯ್ಯ!

The Kashmir Files ಬಗ್ಗೆ ಹೀಗೆಲ್ಲಾ ಹೇಳಿದ್ರಾ ಪ್ರಕಾಶ್ ರಾಜ್? ಇತ್ತ "ನಾ ಸಿನಿಮಾ ನೋಡಲ್ಲ" ಅಂದ್ರು ಸಿದ್ದರಾಮಯ್ಯ!

ಬಹುಭಾಷಾ ನಟ ಪ್ರಕಾಶ್ ರಾಜ್

ಬಹುಭಾಷಾ ನಟ ಪ್ರಕಾಶ್ ರಾಜ್

ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್, ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಕುರಿತಂತೆ ವಿಡಿಯೋ ಒಂದನ್ನು ತಮ್ಮ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ. “ಇದೊಂದು ಪ್ರಚಾರದ ಸಿನಿಮಾ ಅಷ್ಟೇ ಹೊರತಾಗಿ ಬೇರೇನಿಲ್ಲ” ಅಂತ ಟೀಕಿಸಿದ್ದಾರೆ. ಈ ಹಿಂದೆ ಸಿನಿಮಾ ನೋಡಲ್ಲ ಅಂತ ಹೇಳಿದ್ದ ಸಿದ್ದರಾಮಯ್ಯ, ಅದನ್ನೇ ಪುನರುಚ್ಚರಿಸಿದ್ದಾರೆ.

ಮುಂದೆ ಓದಿ ...
  • Share this:

‘ದಿ ಕಾಶ್ಮೀರ್‌ ಫೈಲ್ಸ್‌’ (The Kashmir Files) ಸದ್ಯಕ್ಕೆ ಭಾರತದಾದ್ಯಂತ ಸದ್ದು ಮತ್ತು ಸುದ್ದಿ ಮಾಡುತ್ತಿರುವ ಸಿನಿಮಾ (Cinema). ಬರೀ ಚಿತ್ರರಂಗದಲ್ಲಷ್ಟೇ (Cinema Industry) ಅಲ್ಲ, ರಾಜಕೀಯರಂಗ (Politics) ಸೇರಿದಂತೆ ಬೇರೆ ಬೇರೆ ಕ್ಷೇತ್ರದಲ್ಲೂ ಈ ಸಿನಿಮಾ ಸಂಚಲನ ಮೂಡಿಸಿದೆ. ಕಾಶ್ಮೀರಿ ಪಂಡಿತರ (Kashmir Pandit) ಹತ್ಯಾಕಾಂಡದ (The massacre) ಕುರಿತಂತೆ ತಯಾರಾದ ಈ ಸಿನಿಮಾ ನೋಡಿ ಬಹುತೇಕರ ಕಣ್ಣೀರು ಹಾಕಿದ್ದಾರೆ, ಆಕ್ರೋಶಗೊಂಡಿದ್ದಾರೆ, ಹಿಡಿ ಶಾಪ ಹಾಕಿದ್ದಾರೆ, ಕಾಶ್ಮೀರಿ ಪಂಡಿತರ ಸ್ಥಿತಿ ನೆನೆದು ಕರಗಿದ್ದಾರೆ. ಕೆಲವರು “ಇದೊಂದು ರಾಜಕೀಯ ಅಜೆಂಡಾದ (Political agenda) ಸಿನಿಮಾ” ಅಂತ ಬೆರಳು ತೋರಿದ್ದಾರೆ. ಇನ್ನು ವಿವಿಧ ಭಾಷೆಯ ಸಿನಿಮಾ ತಾರೆಯರು, ರಾಜಕೀಯ ನಾಯಕರು ಈ ಸಿನಿಮಾದ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ. ಇದೀಗ ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ಈ ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


 “ಇದು ಕೇವಲ ಪ್ರಚಾರದ ಸಿನಿಮಾ” ಎಂದ ಪ್ರಕಾಶ್ ರಾಜ್


ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್, ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಕುರಿತಂತೆ ವಿಡಿಯೋ ಒಂದನ್ನು ತಮ್ಮ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ. “ಇದೊಂದು ಪ್ರಚಾರದ ಸಿನಿಮಾ ಅಷ್ಟೇ ಹೊರತಾಗಿ ಬೇರೇನಿಲ್ಲ” ಅಂತ ಟೀಕಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ವಿಡಿಯೋ ಶೇರ್ ಮಾಡಿದ ಪ್ರಕಾಶ್ ರಾಜ್


ಯಾವುದೋ ಮಲ್ಟಿಫ್ಲೆಕ್ಸ್ ಒಂದರಲ್ಲಿ ಚಿತ್ರದ ಪ್ರದರ್ಶನದ ನಂತರ ಚಲನಚಿತ್ರದ ಸದಸ್ಯರೊಬ್ಬರು ದ್ವೇಷದ ಭಾಷಣವನ್ನು ಮಾಡುತ್ತಿರುವ ವೀಡಿಯೊ ಕ್ಲಿಪ್ ಅನ್ನು ಟ್ವಿಟ್ಟರ್‌ನಲ್ಲಿ ಪ್ರಕಾಶ್ ರಾಜ್ ಹಂಚಿಕೊಂಡಿದ್ದಾರೆ. "ಚಿತ್ರವು ಗಾಯಗಳನ್ನು ವಾಸಿಮಾಡುತ್ತಿದೆಯೇ ಅಥವಾ ದ್ವೇಷದ ಬೀಜಗಳನ್ನು ಬಿತ್ತುತ್ತಿದೆಯೇ ಮತ್ತು ಹೊಸ ಗಾಯಗಳನ್ನು ಉಂಟುಮಾಡುತ್ತಿದೆಯೇ?" ಅಂತ ಅವರು ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: Explained: 'The Kashmir Files' ಸಿನಿಮಾದಲ್ಲಿ ತೋರಿಸಿದ್ದು ಟ್ರೇಲರ್ ಅಷ್ಟೇ! ಕಾಶ್ಮೀರಿ ಪಂಡಿತರ ಬದುಕಿನ ಕರಾಳ ಕಥೆ ಇಲ್ಲಿದೆ ಓದಿ


“ನಾನು ಸಿನಿಮಾ ನೋಡಲ್ಲಪ್ಪ” ಎಂದ ಸಿದ್ದರಾಮಯ್ಯ


ಇತ್ತ ಕರ್ನಾಟಕದಲ್ಲೂ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ಕಾವು ಏರುತ್ತಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳ ರಾಜಕೀಯ ನಾಯಕರು ಇದೇ ಸಿನಿಮಾ ವಿಚಾರವಾಗಿ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಈ ಹಿಂದೆ ಸಿನಿಮಾ ನೋಡಲ್ಲ ಅಂತ ಹೇಳಿದ್ದ ಸಿದ್ದರಾಮಯ್ಯ, ಮಂಗಳೂರಿನಲ್ಲಿ ಅದನ್ನೇ ಪುನರುಚ್ಚರಿಸಿದ್ದಾರೆ.


“ಎಲ್ಲಾ ಘಟನೆಯನ್ನೂ ತೆರೆ ಮೇಲೆ ತೋರಿಸಲಿ”


ಈ ಬಗ್ಗೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಕಾಶ್ಮೀರ್ ಫೈಲ್ ಚಿತ್ರ ಕನ್ನಡಕ್ಕೆ ಡಬ್ ಮಾಡುತ್ತೀವಿ ಎನ್ನುತ್ತಿದ್ದಾರೆ. ಸಿನಿಮಾ ಮಾಡಿ ತೋರಿಸೋದನ್ನ ಬೇಡ ಅನ್ನಲ್ಲ, ಆದರೆ ಸತ್ಯ ತೋರಿಸಲಿ. ಕಾಶ್ಮೀರದ ಉಗ್ರರ ಕೃತ್ಯ, ಪಂಡಿತರ ಜೊತೆಗೆ ಬೇರೆ ಯಾರಿಗೆ ಸಮಸ್ಯೆ ಆಗಿತ್ತು ಹೇಳಬೇಕು. ಆಗ ಯಾರ ಸರ್ಕಾರ ಇತ್ತು, ಏನ್ ಮಾಡಿತ್ತು ಸರ್ಕಾರ ಅಂತ ತೋರಿಸಬೇಕು ಎಂದಿದ್ದಾರೆ.


“ಗುಜರಾತ್ ಘಟನೆಗಳನ್ನೂ ತೋರಿಸಲಿ”


ಗುಜರಾತ್ ಘಟನೆ, ಲಖಿನ್ ಪುರ್ ಘಟನೆ ಎಲ್ಲಾನೂ ತೋರಿಸಬೇಕು. ನಾನು ಸಿನಿಮಾಗೆ ಹೋಗಲ್ಲ, ಥಿಯೇಟರ್ ಹೋಗಿ ಸಿನಿಮಾ ನೋಡಲ್ಲ. ಬಹಳ ಸಿನಿಮಾ ನೋಡಲ್ಲ, ಹಾಗೇನೇ ಕಾಶ್ಮೀರ್ ಫೈಲ್ ಕೂಡ ನೋಡಲ್ಲ ಅಂತ ಸಿದ್ದರಾಮಯ್ಯ ಹೇಳಿದ್ದಾರೆ.


ಇದನ್ನೂ ಓದಿ: ಬಾಕ್ಸ್​ ಆಫೀಸ್​ ಕೊಳ್ಳೆ! 100 ಕೋಟಿ ಕ್ಲಬ್ ಸೇರಿದ The Kashmir Files!


“ಗುಜರಾತ್‌ ಫೈಲ್ ಸಿನಿಮಾವನ್ನೂ ಮಾಡಲಿ” ಎಂದ ತನ್ವೀರ್ ಸೇಠ್


ಇನ್ನು ಮೈಸೂರಿನ ಎನ್‌.ಆರ್. ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಕೂಡ ಇದೇ ಸಿನಿಮಾದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಚಿಕ್ಕನಿಂದಲೂ ಸಿನಿಮಾ ನೋಡಿದವನಲ್ಲ ಹೀಗಾಗಿ ಈಗಲೂ ಸಿನಿಮಾ ನೋಡೋದಿಲ್ಲ. ಇಂದು ಕಾಶ್ಮೀರ ಫೈಲ್ ಬಂದಿದೆ, ನಾಳೆ ಗುಜರಾತ್ ಫೈಲ್ ಬರಲಿದೆ, ಮುಂದೆ ಮತ್ತೆ ಇನ್ನ್ಯಾವುದೋ ಫೈಲ್ ಅಂತ ಬರಲಿದೆ ಅಂತ ವ್ಯಂಗ್ಯವಾಡಿದ್ದಾರೆ.

Published by:Annappa Achari
First published: