ಸುಶಾಂತ್ ಸಿಂಗ್ ರಜಪೂತ್ ಅವರ ಅಗಲಿಕೆಯಿಂದಾಗಿ ಇಡೀ ಸಿನಿರಂಗವನ್ನೇ ಶಾಕ್ನಲ್ಲಿದೆ. ಸುಶಾಂತ್ ಅವರ ನಿಧನ ಮತ್ತೊಮ್ಮೆ ಸಿನಿರಂದಲ್ಲಿನ ಸ್ವಜನಪಕ್ಷಪಾತದ ಕುರಿತು ಚರ್ಚೆಗೆ ಕಾರಣವಾಗಿದೆ. ಸ್ವಜನಪಕ್ಷಪಾತದ ಕಾರಣದಿಂದಲೇ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದು ಎಂದು ನೆಟ್ಟಿಗರು ಆರೋಪಿಸುತ್ತಿದ್ದಾರೆ.
ಟ್ವಿಟರ್ನಲ್ಲಿ ಈಗಾಗಲೇ ಸ್ವಜನಪಕ್ಷಪಾತದ ಕುರಿತಾಗಿ ಸಾಕಷ್ಟು ಮಂದಿ ಟ್ವೀಟ್ ಮಾಡುತ್ತಿದ್ದು, ಬಿ-ಟೌನ್ನ ಸಾಕಷ್ಟು ಸೆಲೆಬ್ರಿಟಿಗಳನ್ನು ಟ್ರೋಲ್ ಮಾಡುತ್ತಿದ್ದಾರೆ. ಹೀಗಿರುವಾಗಲೇ ನಟ ಪ್ರಕಾಶ್ ರಾಜ್ ಸಹ ಟ್ವಿಟರ್ನಲ್ಲಿ ಸುಶಾಂತ್, ಈ ಹಿಂದೆ ಸ್ವಜನಪಕ್ಷಪಾತದ ಕುರಿತಾಗಿ ಮಾತನಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
#nepotism I have lived through this .. I have survived ... my wounds are deeper than my flesh ..but this child #SushanthSinghRajput couldn’t.. will WE learn .. will WE really stand up and not let such dreams die .. #justasking pic.twitter.com/Q0ZInSBK6q
— Prakash Raj (@prakashraaj) June 15, 2020
ಇದನ್ನೂ ಓದಿ: ಅಕ್ಷಯ್ ಕುಮಾರ್ ನಟನೆಯ ಲಕ್ಷ್ಮಿ ಬಾಂಬ್ ಸಿನಿಮಾದ ಒಟಿಟಿ ರಿಲೀಸ್ ದಿನಾಂಕ ಫಿಕ್ಸ್..!
ಸುಶಾಂತ್ ಅವರ ಈ ಹಳೇ ವಿಡಿಯೋ ಹಂಚಿಕೊಂಡಿರುವ ಪ್ರಕಾಶ್ ರಾಜ್, 'ನಾನೂ ಸಹ ಸ್ವಜನಪಕ್ಷಪಾತದಿಂದ ನೋವವನ್ನು ಅನುಭವಿಸಿದ್ದೇನೆ. ಅದರಿಂದಾದ ಗಾಯ ತುಂಬಾ ಆಳವಾಗಿದೆ. ಆದರೆ ಈ ಮಗು ಅಂದರೆ ಸುಶಾಂತ್ ಅದನ್ನು ತಾಳಲಿಲ್ಲ' ಎಂದು ನೋವಿನಿಂದ ಬರೆದುಕೊಂಡಿದ್ದಾರೆ. ಜೊತೆಗೆ ಹೀಗೆ ಕನಸುಗಳನ್ನು ಸಾಯಲು ಹಾಗೇ ಬಿಡುತ್ತೇವಾ ಅಥವಾ ಅದರ ವಿರುದ್ಧ ನಿಲ್ಲುತ್ತೇವಾ ಎಂದು ಅಭಿಮಾನಿಗಳನ್ನು ಪ್ರಶ್ನಿಸಿದ್ದಾರೆ.
We are with you Sushant your demise will not be wasted..😢😢#JusticeForSushantSinghRajput#BoycottKaranJohar #KaranJoharIsBULLY #BoycottBollywoodNepotism #boycottstarkidsmovies #boycottstarkids #BoycottKaranJoharGang #Boycottkaranjohargangmovie #BoycottKaranJohar pic.twitter.com/RHs1hYMLDM
— Mohan Upadhyay (@MohanUp49622438) June 16, 2020
Big big example of nepotism, who thinks stupidity is cute. "Sushanth Singh Rajput, who" followed by laugh. @karanjohar is the big daddy of nepotism. #boycottstarkids https://t.co/5mOnclmn7o
— Ankita (@Ankita91038861) June 15, 2020
ಇದನ್ನೂ ಓದಿ: ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದ ಅನುಪಮಾ ಪರಮೇಶ್ವರನ್..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ