ಖ್ಯಾತ ನಟ ಪ್ರಕಾಶ್ ರಾಜ್ ಮತ್ತೊಮ್ಮೆ ಮದುವೆಯಾಗುವ ಮೂಲಕ ಸುದ್ದಿಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಪ್ರಕಾಶ್ ರಾಜ್ ಮದುವೆಯದ್ದೇ ಸದ್ದು. ತಮ್ಮ ಅದ್ಭುತ ನಟನೆಯ ಮೂಲಕ ಜನ ಮಾನಸದಲ್ಲಿ ಮನೆ ಮಾಡಿರುವ ಪ್ರಕಾಶ್ ರಾಜ್ ಮತ್ತೊಮ್ಮೆ ಮದುವೆಯಾಗಿದ್ದು, ಅವರ ಹೆಂಡತಿಯನ್ನೇ. ಹೌದು, ತಮ್ಮ ಮಡದಿ ಪೋನಿ ವೆರ್ಮಾ ಅವರನ್ನು ಮತ್ತೊಮ್ಮೆ ಮದುವೆಯಾಗಿ ಸುದ್ದಿಯಲ್ಲಿದ್ದಾರೆ. 11 ವರ್ಷಗಳ ದಾಂಪತ್ಯ ಜೀವನ ನಡೆಸಿರುವ ಪ್ರಕಾಶ್ ರಾಜ್- ಪೋನಿ ವೆರ್ಮಾ ದಂಪತಿಗೆ ವೇದಾಂತ್ ಎಂಬ ಮಗನಿದ್ದಾನೆ. ಈಗ ಈ ಕ್ಯೂಟ್ ಕಪಲ್ ಮತ್ತೊಮ್ಮೆ ಮದುವೆಯಾಗಿರುವುದು ಸಹ ತಮ್ಮ ಮಗನಿಗೋಸ್ಕರವೇ.
ಹೌದು, ಪ್ರಕಾಶ್ ರಾಜ್ ತಮ್ಮ ಟ್ವಿಟರ್ ಖಾತೆಯಲ್ಲಿ (Prakash Raj Twitter Account) ಮತ್ತೆ ಮದುವೆಯಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ’ನಮ್ಮ ಮಗನಿಗಾಗಿ ಈ ರಾತ್ರಿ ನಾವು ಮತ್ತೆ ಮದುವೆಯಾದೆವು. ನಮ್ಮ ಮದುವೆಗೆ ಮಗ ವೇದಾಂತ್ ಸಾಕ್ಷಿಯಾಗಿದ್ದ’ ಎಂದು ಬರೆದುಕೊಂಡಿದ್ದಾರೆ.
We got married again tonight..because our son #vedhant wanted to witness it 😍😍😍. Family moments #bliss pic.twitter.com/Vl29VlDQb4
— Prakash Raj (@prakashraaj) August 24, 2021
ಮತ್ತೊಂದು ಫೋಟೊದಲ್ಲಿ ಪ್ರಕಾಶ್ ರಾಜ್-ಪೋನಿ ವೆರ್ಮಾ (Prakash Raj - Pony Verma) ಲಿಪ್ಕಿಸ್ ಮಾಡಿದ್ದಾರೆ. ಇನ್ನೊಂದು ಫೋಟೋದಲ್ಲಿ ಪ್ರಕಾಶ್ ರಾಜ್ ಅವರ ಇಬ್ಬರು ಹೆಣ್ಣು ಮಕ್ಕಳು ಇದ್ದು, ಸಂಪೂರ್ಣ ಕುಟುಂಬ ಸೆರೆಯಾಗಿದೆ.
ಈ ಫೋಟೋಗಳನ್ನು ಹಂಚಿಕೊಂಡಿರುವ ಪ್ರಕಾಶ್ ರಾಜ್ ತುಂಬಾ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ತಮ್ಮ ಮದುವೆಯ ಫೋಟೋವನ್ನು ಹಂಚಿಕೊಂಡಿದ್ದು, ಮಡದಿ ಪೋನಿ ವೆರ್ಮಿಗೆ ಧನ್ಯವಾದ ಹೇಳಿದ್ದಾರೆ. ಥ್ಯಾಂಕ್ಯೂ ಮೈ ಡಾರ್ಲಿಂಗ್ ವೈಫ್, ಅದ್ಭುತ ಫ್ರೆಂಡ್ ಆಗಿರುವುದಕ್ಕೆ, ಲವರ್ ಆಗಿರುವುದಕ್ಕೆ ಹಾಗೂ ಕೋ-ಟ್ರಾವೆಲರ್ ಆಗಿ ನನ್ನ ಜೊತೆ-ಜೊತೆಯಲ್ಲಿ ಸಾಗುತ್ತಿರುವುದಕ್ಕೆ ತುಂಬಾ ಥ್ಯಾಂಕ್ಸ್ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.
“It turned out so right.. for strangers in the night” .. thank you my darling wife .. for being a wonderful friend.. a lover and a great co traveller in our life together..🤗🤗🤗 #happyweddinganniversary @PonyPrakashraj pic.twitter.com/xPVZb6Ibb9
— Prakash Raj (@prakashraaj) August 24, 2021
ಪ್ರಕಾಶ್ ರಾಜ್ಗೆ ತಮ್ಮ 45ನೇ ವಯಸ್ಸಿನಲ್ಲಿ ಪೋನಿ ಮೇಲೆ ಪ್ರೀತಿ ಹುಟ್ಟಿತು. 2010ರಲ್ಲಿ ತಮ್ಮ ಗೆಳೆಯರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಇಬ್ಬರೂ ಮದುವೆಯಾದರು. ಪೋನಿ ಸಿನಿಮಾವೊಂದರ ಹಾಡಿಗೆ ಕೋರಿಯಾಗ್ರಫಿಂಗ್ ಮಾಡುವಾಗ ಪ್ರಕಾಶ್ ರಾಜ್ ಭೇಟಿಯಾಗಿದ್ದರು. ಪ್ರಕಾಶ್ ತಮ್ಮ ಮೊದಲ ಹೆಂಡತಿ ಲಲಿತಾ ಕುಮಾರಿಯಿಂದ 2009ರಲ್ಲಿ ಬೇರೆಯಾದರು.
ಇದನ್ನೂ ಓದಿ: ಬಿಡದಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದ ನಟಿ ರಚಿತಾ ರಾಮ್
ಬಹುನಿರೀಕ್ಷಿತ ಸಿನಿಮಾ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಸಿನಿಮಾದಲ್ಲಿ ಪ್ರಕಾಶ್ ರಾಜ್ ನಟಿಸಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಏಪ್ರಿಲ್ 14ಕ್ಕೆ ರಿಲೀಸ್ ಆಗಲಿದೆ. ಪ್ರಶಾಂತ್ ನೀಲ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ