'ಅಮ್ಮ' ವಿವಾದ: ವಿಡಿಯೋ ಮೂಲಕ ಸ್ಪಷ್ಟೀಕರಣ ನೀಡಿದ ಪ್ರಕಾಶ್ ರೈ
news18
Updated:July 24, 2018, 11:01 PM IST
news18
Updated: July 24, 2018, 11:01 PM IST
-ನ್ಯೂಸ್ 18 ಕನ್ನಡ
ಮಲಯಾಳಂ ಚಿತ್ರರಂಗದಲ್ಲಿ ವಿವಾದಗಳು ಕೊನೆಯಾಗುವಂತೆ ಕಾಣುತ್ತಿಲ್ಲ. ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವ ಮುಖ್ಯ ಅತಿಥಿಗಳ ಪಟ್ಟಿಯಲ್ಲಿ ನಟ ಮೋಹನ್ ಲಾಲ್ ಹೆಸರು ಇರುವುದು ಈಗ ವಿವಾದಕ್ಕೀಡಾಗಿದೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಚಿತ್ರರಂಗದ 107 ಮಂದಿ ಸಹಿ ಮಾಡಿ ಮುಖ್ಯ ಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಇದರಲ್ಲಿ ಬಹುಭಾಷಾ ನಟ ಪ್ರಕಾಶ್ ರೈ ಕೂಡ ಸಹಿ ಮಾಡಿದ್ದಾರೆ ಎಂಬ ಕೂಡ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಸಾಮಾಜಿಕ ತಾಣದಲ್ಲಿ ನಟ ಸ್ಪಷ್ಟೀಕರಣ ನೀಡಿದ್ದಾರೆ. ಪ್ರಶಸ್ತಿ ಸಮಾರಂಭಕ್ಕೆ ಮೋಹನ್ ಲಾಲ್ನಂತಹ ಮಹಾನಟನನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವುದರ ವಿರುಧ್ಧ ಆಕ್ಷೇಪ ವ್ಯಕ್ತಪಡಿಸಿ ನೀಡಲಾಗಿರುವ ಪತ್ರದಲ್ಲಿ ನಾನು ಸಹಿ ಮಾಡಿದ್ದೇನೆ ಎಂಬ ಸುದ್ದಿಗಳು ಕೇಳಿ ಬರುತ್ತಿದೆ. ಅಂತಹ ಯಾವುದೇ ಪತ್ರಕ್ಕೂ ನಾನು ಸಹಿ ಹಾಕಿಲ್ಲ. ಇದೊಂದು ಸುಳ್ಳು ಸುದ್ದಿಯಾಗಿದ್ದು, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಆದರೆ 'ಅಮ್ಮ' ಸಂಘಟನೆ ತೆಗೆದುಕೊಂಡಿದ್ದ ತೀರ್ಮಾನದ ಬಗ್ಗೆ ಭಿನ್ನಾಭಿಪ್ರಾಯವಿದೆ ಹೊರತು ಯಾವುದೇ ನಟನೊಂದಿಗೆ ಅಲ್ಲ ಎಂಬುದನ್ನು ವಿಡಿಯೋ ಮೂಲಕ ಪ್ರಕಾಶ್ ರೈ ಸ್ಪಷ್ಟ ಪಡಿಸಿದ್ದಾರೆ.
ನಟ ಮೋಹನ್ ಲಾಲ್ ಅಸೋಸಿಯೇಷನ್ ಆಫ್ ಮಲೆಯಾಳಂ ಮೂವಿ ಆರ್ಟಿಸ್ಟ್ಸ್(AMMA) ಸಂಘಟನೆಯ ಚುಕ್ಕಾಣಿ ಹಿಡಿದಾಗಿನಿಂದ ವಿವಾದಗಳು ಕೂಡ ಅವರ ಬೆನ್ನಿಗಂಟಿಕೊಂಡಿದೆ. ಮಲಯಾಳಂನ ನಟಿಯೊಬ್ಬಳ ಮೇಲಿನ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ನಟ ದಿಲೀಪ್ ಅವರನ್ನು ಅಮ್ಮ ಸಂಘಟನೆಯ ಅಧ್ಯಕ್ಷರಾದ ಬಳಿಕ ಮೋಹನ್ ಲಾಲ್ ಮರು ಸೇರ್ಪಡೆಗೊಳಿಸಲು ಮುಂದಾಗಿದ್ದರು. ಈ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ನಟ ದಿಲೀಪ್ರನ್ನು ಮತ್ತೆ ಸಂಘಟನೆಯಿಂದ ಹೊರಗಿಡಲಾಗಿತ್ತು.
ಈ ಹಿಂದೆ ಮೋಹನ್ ಲಾಲ್ ಅವರು ನಟ ದಿಲೀಪ್ರನ್ನು ಅಮ್ಮ ಸಂಘಟನೆಗೆ ಸೇರಿಸಿಕೊಳ್ಳಲು ಮುಂದಾದಾಗ ಕನ್ನಡ ನಟ-ನಟಿಯರು ಸೇರಿದಂತೆ ಹಲವು ಚಿತ್ರರಂಗದವರು 'ಅಸೋಸಿಯೇಷನ್ ಆಫ್ ಮಲೆಯಾಳಂ ಮೂವಿ ಆರ್ಟಿಸ್ಟ್ಸ್(AMMA)'ಗೆ ಪತ್ರ ಬರೆದು ಸಂಘಟನೆಯ ನಿರ್ಧಾರವನ್ನು ಖಂಡಿಸಿದ್ದರು. ನಿರ್ದೇಶಕ ಯೋಗರಾಜ್ ಭಟ್, ರಶ್ಮಿಕಾ ಮಂದಣ್ಣ, ಶೃತಿ ಹರಿಹರನ್, ಆ ದಿನಗಳು ಚೇತನ್, ಪ್ರಕಾಶ್ ರೈ ಸೇರಿದಂತೆ 'ಫೈರ್(FIRE)' ಸಂಘಟನೆಯ 50ಕ್ಕೂ ಹೆಚ್ಚು ಮಂದಿ ಸಹಿ ಮಾಡಿ ಪತ್ರವೊಂದನ್ನು ಬರೆದು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಪತ್ರದಲ್ಲಿ ನಟ ಪ್ರಕಾಶ್ ರೈ ಕೂಡ ಸಹಿ ಮಾಡಿದ್ದರು. ಇದೀಗ ಹುಟ್ಟಿಕೊಂಡಿರುವ ಮೇರುನಟನನ್ನು ಬಹಿಷ್ಕರಿಸುವ ವಿವಾದಕ್ಕೂ ಪ್ರಕಾಶ್ ರೈ ಅವರಿಗೂ ಯಾವುದೇ ಸಂಬಂಧವಿಲ್ಲ. ಆದರೆ ಈ ಹಿಂದೆ ಅಮ್ಮ ಸಂಘಟನೆಗೆ ಕನ್ನಡ ಚಿತ್ರರಂಗದವರು ಬರೆದ ಪತ್ರದಲ್ಲಿ ಪ್ರಕಾಶ್ ರೈ ಸಹಿ ಹಾಕಿರುವುದೇ, ಹೊಸ ವಿವಾದದಲ್ಲಿ ಅವರ ಹೆಸರು ತಳುಕು ಹಾಕಿಕೊಳ್ಳು ಮುಖ್ಯ ಕಾರಣ ಎನ್ನಲಾಗಿದೆ.
ಮಲಯಾಳಂ ಚಿತ್ರರಂಗದಲ್ಲಿ ವಿವಾದಗಳು ಕೊನೆಯಾಗುವಂತೆ ಕಾಣುತ್ತಿಲ್ಲ. ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವ ಮುಖ್ಯ ಅತಿಥಿಗಳ ಪಟ್ಟಿಯಲ್ಲಿ ನಟ ಮೋಹನ್ ಲಾಲ್ ಹೆಸರು ಇರುವುದು ಈಗ ವಿವಾದಕ್ಕೀಡಾಗಿದೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಚಿತ್ರರಂಗದ 107 ಮಂದಿ ಸಹಿ ಮಾಡಿ ಮುಖ್ಯ ಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಇದರಲ್ಲಿ ಬಹುಭಾಷಾ ನಟ ಪ್ರಕಾಶ್ ರೈ ಕೂಡ ಸಹಿ ಮಾಡಿದ್ದಾರೆ ಎಂಬ ಕೂಡ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಸಾಮಾಜಿಕ ತಾಣದಲ್ಲಿ ನಟ ಸ್ಪಷ್ಟೀಕರಣ ನೀಡಿದ್ದಾರೆ. ಪ್ರಶಸ್ತಿ ಸಮಾರಂಭಕ್ಕೆ ಮೋಹನ್ ಲಾಲ್ನಂತಹ ಮಹಾನಟನನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವುದರ ವಿರುಧ್ಧ ಆಕ್ಷೇಪ ವ್ಯಕ್ತಪಡಿಸಿ ನೀಡಲಾಗಿರುವ ಪತ್ರದಲ್ಲಿ ನಾನು ಸಹಿ ಮಾಡಿದ್ದೇನೆ ಎಂಬ ಸುದ್ದಿಗಳು ಕೇಳಿ ಬರುತ್ತಿದೆ. ಅಂತಹ ಯಾವುದೇ ಪತ್ರಕ್ಕೂ ನಾನು ಸಹಿ ಹಾಕಿಲ್ಲ. ಇದೊಂದು ಸುಳ್ಳು ಸುದ್ದಿಯಾಗಿದ್ದು, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಆದರೆ 'ಅಮ್ಮ' ಸಂಘಟನೆ ತೆಗೆದುಕೊಂಡಿದ್ದ ತೀರ್ಮಾನದ ಬಗ್ಗೆ ಭಿನ್ನಾಭಿಪ್ರಾಯವಿದೆ ಹೊರತು ಯಾವುದೇ ನಟನೊಂದಿಗೆ ಅಲ್ಲ ಎಂಬುದನ್ನು ವಿಡಿಯೋ ಮೂಲಕ ಪ್ರಕಾಶ್ ರೈ ಸ್ಪಷ್ಟ ಪಡಿಸಿದ್ದಾರೆ.
Clarifying... against s a wrong news doing the rounds pic.twitter.com/PIcyua2GA2
— Prakash Raj (@prakashraaj) July 24, 2018
Loading...