ಬಾಲಿವುಡ್ನಲ್ಲಿ (Bollywood) ಭಾರೀ ಹವಾ ಸೃಷ್ಟಿಸಿದ ಕಾಶ್ಮೀರ್ ಫೈಲ್ಸ್ (Kashmir Files) ಸಿನಿಮಾವನ್ನು (Cinema) ನಟ ಪ್ರಕಾಶ್ ರಾಜ್ (Prakash Raj) ಟೀಕಿಸಿದ್ದಾರೆ. ಈ ಸಿನಿಮಾ ವ್ಯಾಪಕ ಪ್ರತಿಕ್ರಿಯೆಯನ್ನು (Response) ಪಡೆದಿತ್ತು. ಟೀಕೆಯನ್ನೂ, ಪ್ರಶಂಸೆಯನ್ನೂ ಪಡೆದುಕೊಂಡ ಸಿನಿಮಾ ಬಗ್ಗೆ ಜನರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದರು. ಈಗ ಪ್ರಕಾಶ್ ರಾಜ್ ಅವರೂ ಕಾರ್ಯಕ್ರಮವೊಂದರಲ್ಲಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಇದೊಂದು ನಾನ್ಸೆನ್ಸ್ ಸಿನಿಮಾ. ಸಿನಿಮಾ ನಿರ್ದೇಶಕ (Director) ವಿವೇಕ್ ಅಗ್ನಿಹೋತ್ರಿ (Vivek Agnihothri) ಹಾಗೂ ಸಿನಿಮಾದ ನಿರ್ಮಾಪಕರನ್ನೂ ಪ್ರಕಾಶ್ ರಾಜ್ ಅವರು ಶೇಮ್ಲೆಸ್ ಎಂದು ಕರೆದಿದ್ದಾರೆ. ಕಾಶ್ಮೀರ್ ಫೈಲ್ಸ್ ಒಂದು ಪ್ರೊಪಗಾಂಡ (Propaganda) ಸಿನಿಮಾ ಎಂದು ಅವರು ಟೀಕಿಸಿದ್ದಾರೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರ್ ಫೈಲ್ಸ್ ಸಿನಿಮಾ ಬಾಲಿವುಡ್ನಲ್ಲಿ 2022ರ ಅತ್ಯಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಗಳಿಸಿದ ಸಿನಿಮಾ. ವಿವೇಕ್ ಅವರು ಬರೆದು ಝೀ ಸ್ಟುಡಿಯೋಸ್ ನಿರ್ಮಿಸಿದ ಈ ಸಿನಿಮಾ ಕಾಶ್ಮೀರ ಪಂಡಿತರ ಜೀವನದ ಮೇಲೆ ಬೆಳಕು ಚೆಲ್ಲಿದೆ.
1990ರಲ್ಲಿ ಕಾಶ್ಮೀರಿ ಪಂಡಿತರನ್ನು ಅಲ್ಲಿಂದ ಬಲವಂತವಾಗಿ ಹೊರನೂಕಿದ ಘಟನೆಯನ್ನು ಈ ಸಿನಿಮಾ ತೋರಿಸುತ್ತದೆ. ಸಿನಿಮಾದಲ್ಲಿ ಅನುಪಮ್ ಖೇರ್, ದರ್ಶನ್ ಕುಮಾರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ ಸೇರಿ ಸ್ಟಾರ್ ಕಲಾವಿದರು ನಟಿಸಿದ್ದಾರೆ.
ಉಗಿದು ಉಪ್ಪಿನಕಾಯಿ ಹಾಕಿದ್ರೂ ನಾಚಿಗೆ ಇಲ್ಲ
ಕೇರಳದಲ್ಲಿ ಇತ್ತೀಚೆಗೆ ನಡೆದ ಮಾತೃಭೂಮಿ ಅಂತಾರಾಷ್ಟ್ರೀಯ ಫೆಸ್ಟಿವಲ್ನಲ್ಲಿ ಪ್ರಕಾಶ್ ರಾಜ್ ಅವರು ಮಾತನಾಡಿದ್ದಾರೆ. ಕಾಶ್ಮೀರ್ ಫೈಲ್ಸ್ ಒಂದು ನಾನ್ಸೆನ್ಸ್ ಸಿನಿಮಾ. ಅದನ್ನು ಯಾರು ನಿರ್ಮಿಸಿದರು ಎನ್ನುವುದು ಎಲ್ಲರಿಗೂ ಗೊತ್ತು. ನಾಚಿಗೆ ಇಲ್ಲದವರು. ಅಂತಾರಾಷ್ಟ್ರೀಯ ತೀರ್ಪುಗಾರರು ಉಗಿದು ಉಪ್ಪಿನಕಾಯಿ ಹಾಕಿದ್ದಾರೆ. ಆದರೂ ಇವರಿಗೆ ನಾಚಿಗೆ ಇಲ್ಲ. ಆ ನಿರ್ದೇಶಕ ಇನ್ನೂ ನಮಗ್ಯಾಕೆ ಆಸ್ಕರ್ ಬಂದಿಲ್ಲ ಎಂದು ಕೇಳುತ್ತಿದ್ದಾರೆ. ಆಸ್ಕರ್ ಬಿಟ್ಟು ಭಾಸ್ಕರ್ ಕೂಡಾ ಸಿಗಲ್ಲ ಎಂದಿದ್ದಾರೆ ಪ್ರಕಾಶ್ ರಾಜ್.
ಇದನ್ನೂ ಓದಿ: The Kashmir Files: ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದ ನಾದವ್ ಲ್ಯಾಪಿಡ್ಗೆ ನಿರ್ದೇಶಕ ಅಗ್ನಿಹೋತ್ರಿ ವಾರ್ನಿಂಗ್
ಕಾಶ್ಮೀರ್ ಫೈಲ್ಸ್ ಸಿನಿಮಾ ಮಾಡಲು 2000 ಕೋಟಿ ಖರ್ಚು
ನಾನು ಇದನ್ನು ನಿಮಗೆ ಹೇಳುತ್ತೇನೆ. ಹೊರಗೆ ಸೂಕ್ಷ್ಮವಾದ ಮಾಧ್ಯಮವೊಂದಿದೆ. ಅಲ್ಲಿ ನೀವೊಂದು ಪ್ರೊಪಗಾಂಡ (ಪಕ್ಷಕ್ಕಾಗಿ ಮಾಡುವ) ಸಿನಿಮಾ ಮಾಡಬಹುದು. ನನಗೆ ಗೊತ್ತಿಗೆ. ನನಗೆ ಗೊತ್ತಿರುವ ಮೂಲಗಳ ಪ್ರಕಾರ ಈ ಸಿನಿಮಾ ಒಂದನ್ನು ಮಾಡುವುದಕ್ಕಾಗಿಯೇ 2000 ಕೋಟಿ ರೂಪಾಯಿ ವ್ಯಯಿಸಿದ್ದಾರೆ. ಆದರೆ ನೀವು ಪ್ರತಿಬಾರಿ ಜನರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಕಳೆದ ವರ್ಷ ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಾದವ್ ಲ್ಯಾಪಿಡ್ ಅವರು 53 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಪ್ರಚಾರದ ಸಿನಿಮಾ, ಅಶ್ಲೀಲ ಎಂದು ಕಮೆಂಟ್ ಮಾಡಿದ್ದಾರೆ.
ದಿ ಕಾಶ್ಮೀರ್ ಫೈಲ್ಸ್‌ನಿಂದ ನಾವೆಲ್ಲರೂ ವಿಚಲಿತರಾಗಿದ್ದೇವೆ. ಆಘಾತಕ್ಕೊಳಗಾಗಿದ್ದೇವೆ. ಇದು ಪ್ರಚಾರ, ಅಸಭ್ಯ ಚಲನಚಿತ್ರ, ಅಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಸ್ಪರ್ಧಾತ್ಮಕ ವಿಭಾಗಕ್ಕೆ ಇದು ಸೂಕ್ತವಲ್ಲ. ಈ ಭಾವನೆಗಳನ್ನು ಇಲ್ಲಿ ಬಹಿರಂಗವಾಗಿ ಆರಾಮವಾಗಿ ನಾನು ಶೇರ್ ಮಾಡಬಲ್ಲೆ. ನೀವು ಈ ವೇದಿಕೆಯಲ್ಲಿದ್ದೀರಿ, ಇಲ್ಲಿ ಕಲೆ ಮತ್ತು ಜೀವನಕ್ಕೆ ಅಗತ್ಯವಾದ ವಿಮರ್ಶಾತ್ಮಕ ಚರ್ಚೆಯನ್ನು ಖಂಡಿತವಾಗಿ ಸ್ವೀಕರಿಸಬಹುದು ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ