ಗೋಧಿ ಬಣ್ಣದ 'ಪ್ರಕಾಶ್ ರೈ' ಸಾಧಾರಣ ಮೈಕಟ್ಟಿನ ಅವತಾರದಲ್ಲಿ...

news18
Updated:August 2, 2018, 7:07 PM IST
ಗೋಧಿ ಬಣ್ಣದ 'ಪ್ರಕಾಶ್ ರೈ' ಸಾಧಾರಣ ಮೈಕಟ್ಟಿನ ಅವತಾರದಲ್ಲಿ...
news18
Updated: August 2, 2018, 7:07 PM IST
-ನ್ಯೂಸ್ 18 ಕನ್ನಡ

ಕನ್ನಡದ ಸೂಪರ್ ಹಿಟ್ ಚಿತ್ರ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಕಾಲಿವುಡ್​ನಲ್ಲಿ ಕೊನೆಗೂ ಸೆಟ್ಟೇರಿದೆ. ತಮಿಳಿನ ಖ್ಯಾತ ನಿರ್ಮಾಪಕ ಕಲೈಪುಲಿ ಎಸ್ ತನು ಅವರು 'ಗೋಧಿ ಬಣ್ಣದ...' ತಮಿಳು ಅವತರಣಿಕೆಯನ್ನು​  ಘೋಷಿಸಿಕೊಂಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಕಾಲಿವುಡ್​ನಲ್ಲಿ 'ಕಬಾಲಿ', 'ಥೆರಿ', 'ಸ್ಕೆಚ್' ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಿಸಿದ್ದ ನಿರ್ಮಾಪಕರು ಇದೇ ಮೊದಲ ಬಾರಿ ರಿಮೇಕ್​ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಇಲ್ಲಿ ಅನಂತ್​ ನಾಗ್ ಮಾಡಿದ ಪಾತ್ರವನ್ನು ತಮಿಳಿನಲ್ಲಿ ಪ್ರಕಾಶ್ ರೈ ಮಾಡಲಿದ್ದಾರೆ. ಈ ರಿಮೇಕ್ ಚಿತ್ರಕ್ಕೆ '60 ವಯದು ಮಾಣಿರಂ' ಎಂದು ಟೈಟಲ್ ನೀಡಲಾಗಿದೆ.

ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ನಿರ್ವಹಿಸಿದ ಪಾತ್ರದಲ್ಲಿ ವಿಕ್ರಮ್ ಪ್ರಭು ಕಾಣಿಸಲಿದ್ದು, ವಸಿಷ್ಠ ಸಿಂಹ ಅವರ ಖಳನಟನ ಸ್ಥಾನದಲ್ಲಿ ಖ್ಯಾತ ನಿರ್ದೇಶಕ ನಟ ಸಮುದ್ರಖಣಿ ಅಭಿನಯಿಸಲಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಯಾರೇ ಕೂಗಾಡಲಿ' ಚಿತ್ರವನ್ನು ಈ ಹಿಂದೆ ತಮಿಳು ನಿರ್ದೇಶಕ ಸಮುದ್ರಖಣಿ ನಿರ್ದೇಶಿಸಿದ್ದರು.

ಸ್ಯಾಂಡಲ್​ವುಡ್​ನಲ್ಲಿ ಹೇಮಂತ್ ರಾವ್ ನಿರ್ದೇಶಿಸಿದ ಅರೆವು ಮರೆವಿನ ತಂದೆ ಮತ್ತು ಮಗನ ವಾತ್ಸಲ್ಯದ ಕಥೆಯ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರವನ್ನು ಮೆಚ್ಚಿ ಈ ಹಿಂದೆ ಪ್ರಕಾಶ್ ರೈ ಅವರು ಟ್ವೀಟ್ ಮಾಡಿದ್ದರು. ಇದೀಗ ರಿಮೇಕ್​ನಲ್ಲಿ ಅರೆ-ಮರೆ ಸಮಸ್ಯೆಯಿಂದ ಬಳಲುತ್ತಿರುವ 60ರ ವೃದ್ಧನಾಗಿ ಪ್ರಕಾಶ್ ರೈ ಕಾಣಿಸಿಕೊಳ್ಳಲಿದ್ದಾರೆ.


Loading...


ತಮಿಳಿನಲ್ಲಿ 'ಕಾಟ್ರಿನ್ ಮೊಹಿ' ಚಿತ್ರ ನಿರ್ದೇಶಿಸಿರುವ ರಾಧಾ ಮೋಹನ್ '60 ವಯದು ಮಾಣಿರಂ' ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಚಿತ್ರಕ್ಕೆ ಸಂಗೀತ ಮಾಂತ್ರಿಕ ಇಳಯರಾಜ ಅವರು ರಾಗ ಸಂಯೋಜನೆ ಮಾಡಲಿದ್ದು, ಸಿನಿಮಾವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ.
First published:August 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ