ದಿವಗಂತ ನಿರ್ಮಾಪಕ ರಾಮು (Ramu) ಅವರು ಕೊನೆಯದಾಗಿ ನಿರ್ಮಾಣ ಮಾಡಿದ್ದ ಸಿನಿಮಾ ಅರ್ಜುನ್ ಗೌಡ. ಕನ್ನಡ ಚಿತ್ರರಂಗದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ಹಾಗೂ ಪ್ರಿಯಾಂಕಾ ತಿಮ್ಮೇಶ್ (Priyanka Thimmesh) ಜೊತೆಯಾಗಿ ನಟಿಸಿರುವ 'ಅರ್ಜುನ್ ಗೌಡ' (Arjun Gowda) ಚಿತ್ರ ಇದೇ ತಿಂಗಳ ವರ್ಷಾಂತ್ಯದಲ್ಲಿ ತೆರೆಗೆ ಬರಲು ರೆಡಿಯಾಗಿದೆ. ಈಗಾಗಲೇ ಕೆಲ ದಿನಗಳಿಂದ ಚಿತ್ರತಂಡ ಚಿತ್ರದ ಪ್ರಚಾರ (Promotion) ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಈ ನಡುವೆ ಚಿತ್ರತಂಡ ಚಿತ್ರದ ಮತ್ತೊಂದು ಹಾಡನ್ನು ಬಿಡುಗಡೆ ಮಾಡಿದೆ. 'ಅರ್ಜುನ್ ಗೌಡ' ಚಿತ್ರದ 'ಜಯಣ್ಣ ಕೇಳು ಭೋಗಣ್ಣ' ಎಂಬ ಸಾಂಗ್ ರಿಲೀಸ್ ಆಗಿದ್ದು, ವಿಶೇಷವಾಗಿ ಈ ಹಾಡನ್ನು ಸ್ಯಾಂಡಲ್ವುಡ್ನ ಬಾದ್ಷಾ ಕಿಚ್ಚ ಸುದೀಪ್ (Kiccha Sudeep) ಬಿಡುಗಡೆ ಮಾಡಿದ್ದಾರೆ. ಕೇಳಲು ಸಖತ್ ಕ್ಯಾಚಿ ಆಗಿರುವ ಈ ಹಾಡು ಬಿಡುಗಡೆಯಾದ ಬಳಿಕ ಸಖತ್ ಫೇಮಸ್ (Famous) ಆಗುತ್ತಿದೆ. ಕೇಳಿದ ಮೊದಲನೇ ಸಲವೇ ಎಲ್ಲರಿಗೂ ಈ ಹಾಡು ಇಷ್ಟವಾಗುತ್ತಿದೆ. ಸದಾ ಹೊಸಬರು ಹಾಗೂ ಎಲ್ಲರ ಜೊತೆ ನಿಲ್ಲುವ ಕಿಚ್ಚ ಸುದೀಪ್, ಇದೀಗ ಅರ್ಜುನ್ ಗೌಡ ಸಿನಿಮಾದ ಹಾಡು ಬಿಡುಗಡೆ ಮಾಡಿದ್ದಾರೆ.
ಸಂತಸ ವ್ಯಕಪಡಿಸಿದ ಕಿಚ್ಚ ಸುದೀಪ್!
ಕಿಚ್ಚ ಸುದೀಪ್, ‘ತುಂಬಾ ವರ್ಷಗಳ ನಂತರ ರಾಮು ಸರ್ ಬ್ಯಾನರ್ನಲ್ಲಿ 'ಅರ್ಜುನ್ ಗೌಡ' ಚಿತ್ರವು ತೆರೆಗೆ ಬರುತ್ತಿದ್ದು ನನಗೆ ಖುಷಿಯಾಗುತ್ತಿದೆ. ಶಂಕರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ 'ಜಯಣ್ಣ ಕೇಳು ಭೋಗಣ್ಣ' ಹಾಡನ್ನು ನನಗೆ ತೋರಿಸಿದರು. ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದ್ದು, ಪ್ರಜ್ವಲ್ ದೇವರಾಜ್ ಕೂಡಾ ಹಾಡಿನಲ್ಲಿ ಚೆನ್ನಾಗಿ ಕಾಣಿಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಕನ್ನಡ ಚಿತ್ರರಂಗಕ್ಕೆ ದೊಡ್ಡ ದೊಡ್ಡ ಚಿತ್ರಗಳನ್ನು ಕೊಟ್ಟಂತಹ ರಾಮು ಸಂಸ್ಥೆಯ ಎರಡು ಚಿತ್ರದಲ್ಲಿ ನಾನು ನಟಿಸಿದ್ದೇನೆ. ಹೀಗಾಗಿ ರಾಮು ಅವರಿಗೆ ಹಾಗೂ ಮಾಲಾಶ್ರೀ ರಾಮು ಅವರಿಗೂ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸುತ್ತೇನೆ’ ಎಂದು ಹೇಳಿದ್ದಾರೆ.
ಇದನ್ನು ಓದಿ : Hitler Kalyana ಧಾರಾವಾಹಿಯಲ್ಲಿ ಮೇಜರ್ ಟ್ವಿಸ್ಟ್: ಕಿರುತೆರೆಗೆ `ಅಮೃತವರ್ಷಿಣಿ’ ರಜಿನಿ ರೀ ಎಂಟ್ರಿ!
ಚಿತ್ರತಂಡಕ್ಕೆ ಶುಭ ಕೋರಿದ ಬಾದ್ಷಾ!
ಸಿನಿಮಾದ ಹಾಡನ್ನು ಬಿಡುಗಡೆಗೊಳಿಸಿದ ಬಳಿಕ 'ಅರ್ಜುನ್ ಗೌಡ' ಚಿತ್ರಕ್ಕೆ ಮತ್ತು ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಕಿಚ್ಚ ಸುದೀಪ್ ಶುಭ ಹಾರೈಸಿದ್ದು, ಈ ಚಿತ್ರವನ್ನು ಮೊದಲಿಗೆ ನಾನು ರಿಮೇಕ್ ಅಂತ ಅಂದುಕೊಂಡಿದ್ದೆ. ಆದರೆ ಇದು ರಿಮೇಕ್ ಸಿನಿಮಾ ಅಲ್ಲ ಎಂದು ತಿಳಿಸಿದ್ದಾರೆ. ಹಾಡು ನನಗೆ ಬಹಳ ಇಷ್ಟವಾಯಿತು ಎಂದು ಹೇಳಿದ್ದಾರೆ. 'ಅರ್ಜುನ್ ಗೌಡ' ಚಿತ್ರದ 'ಜಯಣ್ಣ ಕೇಳು ಭೋಗಣ್ಣ' ಹಾಡಿಗೆ ಧರ್ಮ ವಿಶ್ ' (Dharma Vish) ಸಂಗೀತ ಸಂಯೋಜಿಸಿದ್ದು, ಲಕ್ಕಿ ಶಂಕರ್ ಸಾಹಿತ್ಯ ರಚಿಸಿದ್ದಾರೆ. ರಾಜಗುರು ಹೊಸಕೋಟೆ, ಚೇತನ್ ನಾಯಕ್ ಹಾಗೂ ಮುನಿರಾಜ್ ದನಿಯಲ್ಲಿ ಈ ಸಾಂಗ್ ಮೂಡಿಬಂದಿದ್ದು, ಸಿನಿರಸಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನು ಓದಿ: ಆಸ್ಪತ್ರೆಗೆ ದಾಖಲಾದ ರಚಿತಾ ರಾಮ್ ಡಿಸ್ಚಾರ್ಜ್: ಪ್ರಚಾರದ ಭರಾಟೆಯಲ್ಲಿ ತಿನ್ನುವುದನ್ನೇ ಮರೆತ್ರಾ ಡಿಂಪಲ್ ಕ್ವೀನ್?
ಸಿನಿಮಾ ಕಂಪ್ಲೀಟ್ ಆಗುವ ಮುನ್ನವೇ ರಾಮು ನಿಧನ
ಸಿನಿಮಾ ಪೂರ್ತಿಯಾಗುವುದಕ್ಕೆ ಮುನ್ನವೇ ರಾಮು ನಿಧನರಾಗಿದ್ದರು. ಈಗ ಅರ್ಜುನ್ ಗೌಡ ಸಿನಿಮಾವನ್ನು ಕನ್ನಡ ಪ್ರೇಕ್ಷಕರ ಮುಂದೆ ತರುವ ರಾಮು ಆಸೆಯನ್ನು ಪತ್ನಿ, ನಟಿ ಮಾಲಾಶ್ರೀ ಪೂರೈಸುತ್ತಿದ್ದಾರೆ. ಪ್ರಜ್ವಲ್ ದೇವರಾಜ್, ಪ್ರಿಯಾಂಕಾ ತಿಮ್ಮೇಶ್ ಮತ್ತು ಸಾಧು ಕೋಕಿಲ ಅರ್ಜುನ್ ಗೌಡ ಸಿನಿಮಾದಲ್ಲಿ ನಟಿಸಿದ್ದಾರೆ. ಲಕ್ಕಿ ಶಂಕರ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಯಶಸ್ಸು ಗಳಿಸುವ ನಂಬಿಕೆ ರಾಮು ಅವರಿಗಿತ್ತು ಎಂದು ಮಾಲಾಶ್ರೀ ತಿಳಿಸಿದ್ದಾರೆ. ಸಿನಿಮಾ ಡಿಸೆಂಬರ್ 31ಕ್ಕೆ ಬಿಡುಗಡೆಯಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ