ದಿವಂಗತ ನಿರ್ಮಾಪಕ ಕೋಟಿ ರಾಮು(Koti Raamu) ಅವರ ಕಡೆಯ ಸಿನಿಮಾ ಅರ್ಜುನ್ ಗೌಡ(Arjun Gowda) ನಿನ್ನೆ ರಾಜ್ಯಾದ್ಯಂತ ಅದ್ಧೂರಿಯಾಘಿ ಬಿಡುಗಡೆಯಾಗಿದೆ. ಪ್ರಜ್ವಲ್ ದೇವರಾಜ್(Prajwal Devaraj) ಹಾಗೂ ಬಿಗ್ ಬಾಸ್ ಖ್ಯಾತಿಯ ಪ್ರಿಯಾಂಕಾ(Priyanka) ತಿಮ್ಮೇಶ್ ಅಭಿನಯದ ‘ಅರ್ಜುನ್ ಗೌಡ’ ಸಿನಿಮಾ ನಿನ್ನೆ (ಡಿಸೆಂಬರ್ 31) ತೆರೆಗೆ ಬಂದಿದೆ. ನಿನ್ನೆ ಕರ್ನಾಟಕ ಬಂದ್(Karnataka Bundh) ಆಚರಿಸಲು ನಿರ್ಧರಿಸಲಾಗಿತ್ತು. ಆದರೆ, ಕೊನೇ ಕ್ಷಣದಲ್ಲಿ ಬಂದ್ ಹಿಂಪಡೆಯಲಾಗಿದೆ. ಹೀಗಾಗಿ, ಸಿನಿಮಾ(Movie)ಗೆ ಇದ್ದ ಅಡಚಣೆ ದೂರವಾಗಿತ್ತು. ಹೀಗಾಗಿ, ಸಿನಿಮಾ ವೀಕ್ಷಿಸೋಕೆ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಹಾಗಾದರೆ ಸಿನಿಮಾ ಹೇಗಿದೆ? ಸಿನಿಮಾ ನೋಡಿದ ಪ್ರೇಕ್ಷಕರು ಏನಂದ್ರು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ. ‘ಅರ್ಜುನ್ ಗೌಡ’ ನೋಡಿದ ಅನೇಕರು ಪ್ರಜ್ವಲ್ ಹಾಗೂ ಪ್ರಿಯಾಂಕಾ ನಟನೆ(Acting)ಯನ್ನು ಮೆಚ್ಚಿಕೊಂಡಿದ್ದಾರೆ. ಇನ್ನೂ ಕೆಲವರು ಸಿನಿಮಾದಲ್ಲಿ ತಾಯಿ ಸೆಂಟಿಮೆಂಟ್(Mother Sentiment) ಹೈಲೈಟ್ ಆಗಿದೆ ಎಂದು ಹೇಳಿಕೊಂಡಿದ್ದಾರೆ. ಹೊಸ ವರ್ಷಕ್ಕೆ ಪಕ್ಕಾ ಎಂಟರ್ಟೈನ್ಮೆಂಟ್( ಸಿನಿಮಾ ಗುರೂ ಅಂತಿದ್ದಾರೆ. ಅದರಲ್ಲೂ ಮಾಸ್ ಪ್ರೇಕ್ಷಕರಿಗೆ ಹೇಳಿ ಮಾಡಿಸಿದ ಸಿನಿಮಾ ಅಂತಿದ್ದಾರೆ ಸಿನಿರಸಿಕರು. ಭರ್ಜರಿ ಫೈಟ್, ಮಾಸ್ ಡೈಲಾಗು ನೋಡುವುದಕ್ಕೆ ಒಂಥರಾ ಮಜಾ ಎಂದು ಹೇಳಿದ್ದಾರೆ.
ಕಥೆಯಲ್ಲಿ ಹೊಸತನ ಇಲ್ಲ.. ಮಿಕ್ಸ್ ಚೌಚೌಬಾತ್!
ಕಥೆಯಲ್ಲಿ ಹಿಡಿತ ಇಲ್ಲ. ಎಲ್ಲಿಂದಲೋ ಆರಂಭವಾಗಿ, ಮತ್ತೆಲ್ಲೋ ಹೊಗಿ ನಿಲ್ಲುತ್ತದೆ. ಆದರೆ, ಮಾಸ್ ಆಡಿಯನ್ಸ್ಗೆ ಇಷ್ಟವಾಗುವ ಎಲ್ಲ ಅಂಶಗಳು ಚಿತ್ರದಲ್ಲಿದೆ. ಗೌರಿ ಲಂಕೇಶ್ ಹತ್ಯೆಯ ಮಾದರಿಯಲ್ಲೇ ಇಲ್ಲೂ ನ್ಯೂಸ್ ಚಾನೆಲ್ ಮುಖ್ಯಸ್ಥೆ ಜಾನಕಿ ಗೌಡ ಹತ್ಯೆಯ ಸಂಚು ನಡೆಯುತ್ತೆ. ಈ ಹಿನ್ನೆಲೆಯಲ್ಲಿ ಸಿನಿಮಾದ ಕಥೆ ತೆರೆದುಕೊಳ್ಳುತ್ತೆ. ಒಬ್ಬ ಶ್ರೀಮಂತ ವ್ಯಾಪಾರಿ, ಆತನ ಮಗಳ ಜೊತೆಗೆ ಲವ್ವಲ್ಲಿ ಬೀಳೋ ಹೀರೋ ಮೊದಲರ್ಧದ ಕತೆಯನ್ನು ಆವರಿಸಿದರೆ, ಸೆಕೆಂಡ್ ಹಾಫ್‌ನ ಬಹುಭಾಗ ಹೊಡೆದಾಟದ ದೃಶ್ಯಗಳೇ ಇದೆ. ಅರ್ಜುನ್ ಗೌಡ ಚಿತ್ರದ ನಾಯಕನ ಹೆಸರು. ‘ಗೌಡ ಅಂದರೆ ಪೆಟಿಷನ್ನು, ಗೌಡ್ರೆ ಅಂದರೆ ರಿಲೇಷನ್ನು’ ಎಂದು ಅವರ ಬಾಯಿಯಿಂದ ಹೊಮ್ಮುವ ಸಂಭಾಷಣೆಯಲ್ಲೇ ಒಂಥರಾ ಹಾಸ್ಯವಿದೆ.
ಇದನ್ನು ಓದಿ : ರಾಕಿ ಭಾಯ್ ಎದುರು ತೊಡೆ ತಟ್ಟಿದ ಮತ್ತೊಬ್ಬ ಸ್ಟಾರ್ ನಟ: ಪ್ಲೀಸ್.. ತಪ್ಪು ಮಾಡ್ಬೇಡಿ ಅಂದಿದ್ಯಾಕೆ ಫ್ಯಾನ್ಸ್?
ನಟನೆಯಲ್ಲಿ ಗಮನ ಸೆಳೆದ ಕಲಾವಿದರು!
ನಾಯಕ ಪ್ರಜ್ವಲ್ ದೇವರಾಜ್ ಅಭಿನಯ ಸ್ಫುಟವಾಗಿದೆ. ಪಾತ್ರದ ಓಘಕ್ಕೆ ತಕ್ಕ ಅಭಿನಯವನ್ನು ಅವರು ನೀಡಿದ್ದಾರೆ. ನಾಯಕಿ ಪ್ರಿಯಾಂಕಾ ತಿಮ್ಮೇಶ್, ಸುದ್ದಿವಾಹಿನಿ ಮುಖ್ಯಸ್ಥೆಯಾಗಿ ಸ್ಪರ್ಶ ರೇಖಾ, ಸಾಧು ಕೋಕಿಲ, ನಾಯಕಿ ತಂದೆ ದೀಪಕ್ ಶೆಟ್ಟಿ, ಪೊಲೀಸ್ ಅಧಿಕಾರಿಯಾಗಿ ಅರವಿಂದ್ ರಾವ್ ಗಮನ ಸೆಳೆಯುತ್ತಾರೆ. ಧರ್ಮ ವಿಶ್ ಸಂಗೀತ ಆಕ್ಷನ್ ಸಿನಿಮಾ ಪ್ರಕಾರಕ್ಕೆ ಪೂರಕವಾಗಿದೆ. ಒಟ್ಟಿನಲ್ಲಿ ಕಥೆ ಗಟ್ಟಿಯಾಗಿದ್ದರೆ ಎಲ್ಲ ಪಾತ್ರಗಳಿಗೆ ನ್ಯಾಯ ಸಿಗುತ್ತಿತ್ತು. ಪ್ರಜ್ವಲ್ ದೇವರಾಜ್ ಅವರ ಹಿಂದಿನ ಸಿನಿಮಾಗೆ ಹೋಲಿಸದರೆ, ಅರ್ಜುನ್ ಗೌಡ ನಿರಾಸೆ ಮೂಡಿಸುತ್ತೆ.
ಇದನ್ನು ಓದಿ : ಈ ವರ್ಷ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಕೆಜಿಎಫ್-2: ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ..
ಫೈಟ್, ಡೈಲಾಗ್ ಹೈಲೆಟ್.. ಮಿಕ್ಕಿದೆಲ್ಲ ಡಲ್!
ಈ ಚಿತ್ರದಲ್ಲಿ ಮಾಸ್ ಪ್ರೇಕ್ಷಕರಿಗೆ ಬೇಕಿರುವ ಎಲ್ಲ ಅಂಶಗಳು ಮಾತ್ರ ಇದೆ. ಆದರೆ, ಉಳಿದೆಲ್ಲವೂ ಸಪ್ಪೆ ಅಂತೆ.ಹಿನ್ನೆಲೆ ಸಂಗೀತವೂ ಗಮನ ಸೆಳೆದಿಲ್ಲ. ನಿರ್ದೇಶಕ ಶಂಕರ್ ಕೂಡ ನಿರ್ದೇಶನದಲ್ಲಿ ಎಡವಿದ್ದಾರೆ. ಡಿಸೆಂಬರ್ 31ರಂದು ಸಿನಿಮಾ ರಿಲೀಸ್ ಮಾಡಲೇಂದೆ ಅಜೆಂರ್ಟ್ ಮಾಡಿ ರೆಡಿ ಮಾಡಿದಂತಿದೆ. ತಾಯಿ ಸೆಂಟಿಮೆಂಟ್ ಇದೆ ಆದರೆ, ಮನಸ್ಸಿಗೆ ಟಚ್ ಆಗೋದಿಲ್ಲ. ಒಟ್ಟಿನಲ್ಲಿ ಅರ್ಜುನ್ ಗೌಡ ಸಿನಿಮಾ ಸೂತ್ರ ಕಿತ್ತ ಗಾಳಿಪಟದಂತೆ ಇದೆ ಎಂದು ಚಿತ್ರ ನೋಡಿದವರು ಹೇಳುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ