HOME » NEWS » Entertainment » PRAJWAL DEVARAJ AND NIRANJAN DESHPANDE WATCHED MANJUNATHA SOMASHEKARA REDDY DIRECTION ACT 1978 KANNADA MOVIE HG

Act 1978 ಸಿನಿಮಾ ನೋಡಿ ಬಹುಪರಾಕ್ ಎಂದ ಸ್ಯಾಂಡಲ್​​​ವುಡ್ ಸೆಲೆಬ್ರಿಟಿಗಳು!

ಇತ್ತೀಚೆಗೆ ಒಟ್ಟಾಗಿ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿದ ಪ್ರಜ್ಚಲ್ ದೇವರಾಜ್ ಮತ್ತು ನಿರಂಜನ್ ದೇಶಪಾಂಡೆ ಸಿನಿಮಾದ ಕುರಿತು ತಮ್ಮ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

news18-kannada
Updated:November 29, 2020, 5:44 PM IST
Act 1978 ಸಿನಿಮಾ ನೋಡಿ ಬಹುಪರಾಕ್ ಎಂದ ಸ್ಯಾಂಡಲ್​​​ವುಡ್ ಸೆಲೆಬ್ರಿಟಿಗಳು!
Act 1978
  • Share this:
ಪುನೀತ್ ರಾಜಕುಮಾರ್, ದರ್ಶನ್, ಸುದೀಪ್, ದುನಿಯಾ ವಿಜಯ್, ಶ್ರೀಮುರುಳಿ ಆಶಿಕಾ ರಂಗನಾಥ್, ನಾದಬ್ರಹ್ಮ ಹಂಸಲೇಖಾ ಹೀಗೆ ಕನ್ನಡ ಚಿತ್ರರಂಗದ ಹಲವು ಖ್ಯಾತನಾಮರು "ಆಕ್ಟ್-1978" ಚಿತ್ರವನ್ನು ನೋಡಿ ಹೊಗಳಿ ಬೆಂಬಲಿಸಿದ್ದಾರೆ‌. ಪ್ರೇಕ್ಷಕರು ಮತ್ತು ವಿಮರ್ಶಕರಿಂದಲೂ ಬಹಳ ಮೆಚ್ಚುಗೆ ಪಡೆದು ಮುನ್ನುಗ್ಗುತ್ತಿರುವ ಆಕ್ಟ್-1978 ಚಿತ್ರದ ಯಶಸ್ಸಿನ ಪಯಣಕ್ಕೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮತ್ತು ಬಿಗ್ ಬಾಸ್ ಖ್ಯಾತಿಯ ನಿರಂಜನ್ ದೇಶಪಾಂಡೆ ಸಹ ತಮ್ಮ ಬೆಂಬಲದ ಮೂಲಕ ಧ್ವನಿಗೂಡಿಸಿದ್ದಾರೆ. ಇತ್ತೀಚೆಗೆ ಒಟ್ಟಾಗಿ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿದ ಪ್ರಜ್ಚಲ್ ದೇವರಾಜ್ ಮತ್ತು ನಿರಂಜನ್ ದೇಶಪಾಂಡೆ ಸಿನಿಮಾದ ಕುರಿತು ತಮ್ಮ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

"ಕರೋನಾ ಲಾಕ್ ಡೌನ್ ನಂತರ ನಾನು ನೋಡಿದ ಮೊದಲ ಸಿನಿಮಾ ಆಕ್ಟ್-1978, ಬಹಳ ಹೆಮ್ಮೆಯಿಂದ ಈ ಸಿನಿಮಾ ಬಗ್ಗೆ ಮಾತನಾಡುತ್ತಿದ್ದೇನೆ, ಕನ್ನಡ ಚಿತ್ರರಂಗಕ್ಕೆ ಒಂದು ತುಂಬಾ ಒಳ್ಳೆ ಇನ್ವಿಟೇಷನ್ ಕೊಟ್ಟಿದ್ದಾರೆ ಮಂಸೋರೆ ಅವರು.‌ ನಿಜಜೀವನಕ್ಕೆ ಬಹಳ ಹತ್ತಿರವಾದ ಚಿತ್ರ. ಕೊನೆಯಲ್ಲಿ ಭಾವುಕನಾಗದೆ ಇರೋದಕ್ಕೆ ನಾನು ತುಂಬಾ ಕಷ್ಟ ಪಟ್ಟೆ.‌ ಒಂದು ಒಳ್ಳೆ ಸಿನಿಮಾ ಆಗೋದಕ್ಕೆ ಒಬ್ಬರೆ ಅಲ್ಲ, ತುಂಬಾ ಜನ ಕೆಲಸ ಮಾಡಬೇಕಾಗುತ್ತದೆ. ಇಲ್ಲಿ ಬರೀ ಒಳ್ಳೆ ಕೆಲಸ ಅಲ್ಲ, ತುಂಬಾ ಒಳ್ಳೆ ಕೆಲಸ ಮಾಡಿದ್ದಾರೆ‌" ಎಂಬುದು ಪ್ರಜ್ವಲ್ ದೇವರಾಜ್ ಅವರ ಅಭಿಪ್ರಾಯ ತಿಳಿಸಿದ್ದಾರೆ.

ಸಿನಿಮಾ ನೋಡಿದ ನಿರಂಜನ್ ದೇಶಪಾಂಡೆ ಅವರು "ಕೆಲವು ಸಿನಿಮಾಗಳನ್ನು ನೋಡಿದರೆ ಸಿನಿಮಾದಲ್ಲೇನಿದೆ ಅಂತ ಮಾತಾನಾಡಬಹುದು, ಕೆಲವು ಸಿನಿಮಾಗಳನ್ನು ನೋಡಿ ಆಚೆ ಬಂದ್ರೆ ಏನು ಮಾತಾಡಬೇಕು ಎಂಬುದು ಗೊತ್ತಾಗಲ್ಲ. ದಿಗ್ಭ್ರಮೆ ಆಗುತ್ತದೆ.‌ ಇದು ಎರಡನೇ ಕ್ಯಾಟಗರಿ ಸಿನಿಮಾ. ಯಾಕಂದ್ರೆ ಸಿನಿಮಾ ನೋಡಿ ಆಚೆ ಬಂದವರೆಲ್ಲಾ ಸ್ವಲ್ಪ ಹೊತ್ತು ಮೂಕವಿಸ್ಮಿತರಾಗಿರುತ್ತಾರೆ. ಕೆಲವು ಸಿನಿಮಾಗಳು ಸಿನಿಮಾವಾಗಿ ಅಷ್ಟೇ ಸೀಮಿತವಾಗಿರುತ್ತವೆ. ಇನ್ನು ಕೆಲವು ಸಿನಿಮಾಗಳು ರೆವಲೂಷನ್ ಕ್ರಿಯೇಟ್ ಮಾಡುತ್ತವೆ.‌ ನನಗನ್ನಿಸುತ್ತೆ ಈ ಒಂದು ಆಕ್ಟ್-1978 ಸಿನಿಮಾ ಎಲ್ಲೋ ಒಂದು ಕಡೆ ರೆವಲೂಶನ್ ಕ್ರಿಯೇಟ್ ಮಾಡುವ ಸಾಧ್ಯತೆಗಳಿವೆ.

ಸಿನಿಮಾದಲ್ಲಿ ಏನಿದೆ ಏನಿಲ್ಲ ಎಂದು ಹೇಳಿದರೆ ಅದರ ತಿರುಳು ಹೊರಟುಹೋಗುತ್ತದೆ. ಈ ಸಿನಿಮಾನ ಜನರೇ ನೋಡಬೇಕು. ಒಂದಂತೂ ಹೇಳಬಲ್ಲೆ, ಅದ್ಭುತವಾದ ನಿರ್ದೇಶನ. ಎಲ್ಲದಕ್ಕಿಂತ ಹೆಚ್ಚಾಗಿ ಅದ್ಭುತವಾದ ನಟನೆ. ಇಡೀ ಕಥೆ ಪಾತ್ರಗಳನ್ನು ಆ ರೀತಿ ತೆಗೆದುಕೊಂಡು ಹೋಗಿದೆ.‌ ಅವು ಪಾತ್ರಗಳು, ನಾವು ಸಿನಿಮಾ ನೋಡುತ್ತಿದ್ದೇವೆ ಅಂತ ಅನ್ಸೋದೇ ಇಲ್ಲ. ನಾವು ಸರ್ಕಾರಿ ಕಛೇರಿಗಳಿಗೆ ಹೋದಾಗೆಲ್ಲಾ ಎಷ್ಟೆಷ್ಟೆಲ್ಲಾ ಕಷ್ಟಗಳನ್ನು ಅನುಭವಿಸಿದ್ದೇವೆ, ಒಂದು ಸಣ್ಣ ಸಹಿಗೋಸ್ಕರ ಎಷ್ಟೆಲ್ಲಾ ನೋವು ಅನುಭವಿಸುತ್ತೇವೆ. ನಮಗಾಗಿದ್ದ ಅನುಭವವೇ ಸಿನಿಮಾ ಆಗಿದೆ. ನಮ್ಮ ಕೈನಲ್ಲೂ ಒಂದು ಅಸ್ತ್ರ ಇರಬೇಕು ಅಂತನ್ನಿಸುತ್ತದೆ, ಕೋಪ ಬರುತ್ತದೆ, ಕ್ಲೈಮ್ಯಾಕ್ಸಿನಲ್ಲಿ ಕಣ್ಣೀರು ಬರುತ್ತದೆ, ಹಾಸ್ಯವಿದೆ, ಎಲ್ಲ ರೀತಿಯ ಭಾವನೆಗಳಿವೆ" ಎಂದು ನಿರಂಜನ್ ದೇಶಪಾಂಡೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೊದಲನೆ ವಾರ ಕಳೆದು ಎರಡನೇ ವಾರಕ್ಕೆ ಕಾಲಿಟ್ಟಿರುವ ಆಕ್ಟ್-1978 ಚಿತ್ರಕ್ಕೆ ಹೆಚ್ಚೆಚ್ಚು ಪ್ರೇಕ್ಷಕರು ಬರುತ್ತಿದ್ದು, ಎರಡನೇ ವಾರದಲ್ಲಿ ಹೆಚ್ಚೆಚ್ಚು ಪ್ರದರ್ಶನಗಳು ಹೌಸ್ ಫುಲ್ ಆಗುತ್ತಿದೆ. ಒಟಿಟಿ ಫ್ಲಾಟ್​ಫಾರ್ಮ್​ಗಳಲ್ಲಿ ಸಿನಿಮಾ ನೋಡುತ್ತಿದ್ದ ಪ್ರೇಕ್ಷಕರನ್ನು ಮರಳಿ ಚಿತ್ರಮಂದಿರಗಳಿಗೆ ಕರೆತರುವ ಉದ್ದೇಶದಿಂದ "ಬನ್ನಿ ಮತ್ತೆ ಸಿನಿಮಾ ಸಂಭ್ರಮಿಸೋಣ, ಮನೆಯಿಂದ ತುಂಬಿದ ಚಿತ್ರಮಂದಿರಗಳಿಗೆ" ಎಂಬ ಟ್ಯಾಗ್ ಲೈನ್​ಗಳೊಂದಿಗೆ ಪ್ರಚಾರ ಆರಂಭಿಸಿದ ಆಕ್ಟ್-1978 ಚಿತ್ರತಂಡ ನಿರೀಕ್ಷೆಗೂ ಮೀರಿದ ಜನಬೆಂಬಲ ಪಡೆದುಕೊಂಡಿದೆ.
Published by: Harshith AS
First published: November 29, 2020, 5:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading