ಕನ್ನಡ ಕಿರುತೆರೆಯ ವೀಕೆಂಡ್ ವಿತ್ ರಮೇಶ್ (Prabhu Deva in Weekend with Ramesh) ಸೀಸನ್-5 ರ ಎರಡನೇ ಅತಿಥಿಯ (Weekend with Ramesh Promo Release) ಪ್ರೋಮೋ ಹೊರ ಬಿದ್ದಿದೆ. ಇಂಡಿಯನ್ ಮೈಕಲ್ ಜಾಕ್ಸನ್ ಎಂದೇ ಕರೆಸಿಕೊಳ್ಳುವ ನಟ, ನೃತ್ಯ ನಿರ್ದೇಶಕ, ನಿರ್ಮಾಪಕ ಪ್ರಭು ದೇವ ಈ ವಾರ ಸಾಧಕರ ಸೀಟ್ (Prabhu Deva Promo Release) ಮೇಲೆ ಕುಳಿತು ತಮ್ಮ ಇಡೀ ಜೀವನವನ್ನ ಒಮ್ಮೆ ರಿಕಾಲ್ ಮಾಡುತ್ತಿದ್ದಾರೆ. ಎರಡು ದಿನ ಪ್ರಸಾರ ಆಗೋ ಈ ಶೋದ 30 ಸೆಕೆಂಡ್‌ನ ಒಂದು ಪ್ರೋಮೋ ಅಧಿಕೃತವಾಗಿಯೇ ಈಗ ಹೊರ ಬಂದಿದೆ. ಈ ಪ್ರೋಮೋದಲ್ಲಿ ಏನಿದೆ? ಯಾವ ವಿಷಯಗಳ (Prabhu Deva Life Journey) ಝಲಕ್ ಇದೆ. ಇವೆಲ್ಲ ಈ ಒಂದು ಸ್ಟೋರಿಯಲ್ಲಿ ಇದೆ ಓದಿ.
ಇಂಡಿಯನ್ ಮೈಕಲ್ ಚಾಕ್ಸನ್ ಪ್ರಭು ದೇವ ಜೀವನ ಪಯಣ
ವೀಕೆಂಡ್ ವಿಥ್ ರಮೇಶ್ ಶೋದ ಮತ್ತೊಬ್ಬ ಗೆಸ್ಟ್ ಪ್ರಭು ದೇವ ಅವರ ಸ್ಪೆಷಲ್ ಪ್ರೋಮೋ ರಿಲೀಸ್ ಆಗಿದೆ. ಎರಡು ದಿನ ಪ್ರಸಾರ ಆಗೋ ಇಡೀ ಶೋದ ಒಂದು ಸಣ್ಣ ಝಲಕ್ ಈ ಒಂದು ಪ್ರೋಮೋದಲ್ಲಿದೆ. ಸಾಮಾನ್ಯವಾಗಿ ಒಂದು ಶೋಗೆ ಬೇರೆ ಬೇರೆ ರೀತಿಯ ಕಂಟೆಂಟ್‌ನ ಸಣ್ಣ ಸಣ್ಣ ಫ್ರೋಮೋಗಳು ಹೊರ ಬರುತ್ತವೆ.
ಅದೇ ರೀತಿನೇ ಪ್ರಭು ದೇವ ಅವರ ಈ ಸಂಚಿಕೆಯ ಒಂದು ಪ್ರೋಮೋ ಸದ್ಯಕ್ಕೆ ಹೊರ ಬಂದಿದೆ. ಇದರಲ್ಲಿ ಏನಿದೆ ಅನ್ನೊದು ಅಷ್ಟೇ ಕೂಹಲಕಾರಿಯಾಗಿಯೇ ಇದೆ. ಅಂದಹಾಗೆ ಪ್ರೋಮೋದಲ್ಲಿ ಪ್ರಭು ದೇವ ಅವರ ತಂದೆ ಮೂಗುರು ಸುಂದರಂ ಮತ್ತು ತಾಯಿ ಲಕ್ಷ್ಮೀ ಸುಂದರಂ ಅವರು ಬಂದಿರೋ ಝಲಕ್ ಇದೆ.
ಅಪ್ಪಟ ಕನ್ನಡದ ಕೂಸು ಎಂದು ಬಣ್ಣಿಸಿದ ಯೋಗರಾಜ್ ಭಟ್
ಕನ್ನಡ ಚಿತ್ರರಂಗದ ಯೋಗರಾಜ್ ಭಟ್ ಅವರೂ ಈ ಶೋದಲ್ಲಿ ಬಂದಿದ್ದಾರೆ. ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭು ದೇವ ಅವರ ಕುರಿತು ಮಾತನಾಡಿದ್ದಾರೆ. ಮೂಗೂರಿನ ಅಪ್ಪಟ ಕನ್ನಡದ ಕೂಸು ಪ್ರಭು ದೇವ ಅನ್ನೋದನ್ನ ಕೂಡ ಹೇಳಿಕೊಂಡಿದ್ದಾರೆ.
View this post on Instagram
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ಪ್ರಭು ದೇವ ಡ್ಯಾನ್ಸ್
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟುಬೇಕು ಅನ್ನುವ ಅಣ್ಣಾವ್ರ ಹಾಡಿಗೆ ಪ್ರಭು ದೇವ, ಮೂಗೂರು ಸುಂದರಂ, ರಮೇಶ್ ಅರವಿಂದ್ ಅವರು ಡ್ಯಾನ್ಸ್ ಮಾಡಿದ್ದಾರೆ. ತುಂಬಾ ವಿಶೇಷವಾಗಿ ಇಲ್ಲಿ ಇನ್ನೂ ಒಂದು ಘಟನೆಯ ಝಲಕ್ ಕೂಡ ಸಿಗುತ್ತದೆ.
ಪ್ರಭು ದೇವ ಮತ್ತು ರಮೇಶ್ ಅರವಿಂದ್ ಅವರು ಒಟ್ಟಿಗೆ ಮೈಕಲ್ ಜಾಕ್ಸನ್ ಅವರ ಮೂನ್ ವಾಕ್ ರೀತಿಯ ಡ್ಯಾನ್ಸ್ ಕೂಡ ಮಾಡಿರೋದು ಕಂಡು ಬರುತ್ತದೆ. ನೃತ್ಯದಲ್ಲಿಯ ಭಾರೀ ಸಾಧನೆ ಮಾಡಿದ ನಟ-ನಿರ್ದೇಶಕ ಪ್ರಭು ದೇವ ಒಂದು ಮಾತು ಹೇಳುತ್ತಾರೆ. ಅದು ನಿಜಕ್ಕೂ ತುಂಬಾ ವಿಶೇಷ ಅನಿಸುತ್ತದೆ. ಅದು ಇಂತಿದೆ ಓದಿ.
ನಾನು ಡ್ಯಾನ್ಸ್ ಮಾಡೋದೇ ಇಲ್ಲ. ನನ್ನ ದೇಹವೇ ಡ್ಯಾನ್ಸ್ ಮಾಡುತ್ತದೆ. ಹೀಗೆ ಹೇಳಿ ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದಾರೆ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭು ದೇವ.
ಇಂಡಿಯನ್ ಮೈಕಲ್ ಜಾಕ್ಸನ್ ಜೊತೆಗೆ ತ್ಯಾಗರಾಜ್ ಡ್ಯಾನ್ಸ್!
ಅಂದಹಾಗೆ ರಮೇಶ್ ಅರವಿಂದ್ ಅವರು ಈ ಶೋದಲ್ಲಿ ಪ್ರಭು ದೇವ ಅವರಿಗೆ ಸಾಕಷ್ಟು ಪ್ರಶ್ನೆಗಳನ್ನ ಕೇಳಿದ್ದಾರೆ. ಅದಕ್ಕೆ ಸೂಕ್ತ ಉತ್ತರವನ್ನ ಕೂಡ ಪಡೆದಿದ್ದಾರೆ. ಪ್ರಭು ದೇವ ಅವರ ಜೊತೆಗೆ ನೃತ್ಯ ಮಾಡಿ ಖುಷಿನೂ ಪಟ್ಟಿದ್ದಾರೆ.
ಇದನ್ನೂ ಓದಿ: Jaggesh New Movie: ನವರಸ ನಾಯಕ ಜಗ್ಗೇಶ್ ರಂಗನಾಯಕ ಫಸ್ಟ್ ಲುಕ್ ರಿಲೀಸ್, ಹೇಗೆ ಕಾಣ್ತಿದ್ದಾರೆ ಜಗ್ಗಣ್ಣ?
ವೀಕೆಂಡ್ ವಿತ್ ರಮೇಶ್ ಸೀಸನ್-೫ ಶೋ ಎಂದಿನಂತೆ ಶನಿವಾರ ಮತ್ತು ಭಾನುವಾರ ೯ ಗಂಟೆಗೆ ಪ್ರಸಾರ ಆಗುತ್ತಿದೆ. ಎರಡು ದಿನವೂ ಪ್ರಭು ದೇವ ಅವರ ಕುರಿತೇ ಶೋ ಇರುತ್ತದೆ. ಇದೀಗ ಪ್ರೋಮೋ ಹೊರ ಬಂದು ಮತ್ತಷ್ಟು ಇನ್ನಷ್ಟು ಅನ್ನೋ ಹಾಗೆ ಕ್ಯೂರಿಯೋಸಿಟಿ ಕ್ರಿಯೇಟ್ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ