ಕಾಲಿವುಡ್ ನಟ ಹಾಗೂ ನಿರ್ದೇಶಕ ಪ್ರಭುದೇವ ಮತ್ತೊಮ್ಮೆ ತಮ್ಮ ವಿವಾಹದ ವಿಷಯದಿಂದಾಗಿ ಸುದ್ದಿಯಲ್ಲಿದ್ದಾರೆ. ಈ ಹಿಂದೆಯೂ ಸಹ ತಮ್ಮ ಪ್ರೀತಿ-ಪ್ರೇಮದ ಸಂಬಂಧಗಳಿಂದಾಗಿ ಚರ್ಚೆಯಲ್ಲಿದ್ದರು. ಈ ಹಿಂದೆ ನಯನತಾರಾ ಜೊತೆ ಮೂರು ವರ್ಷಗಳ ಕಾಲ ಪ್ರೀತಿ-ಪೇಮ ಅಂತ ಸುತ್ತಾಡಿದ್ದ ಪ್ರಭುದೇವ ಇನ್ನೇನು ಹಸೆಮಣೆ ಏರಬೇಕಿತ್ತು. ಆದರೆ ಈ ಜೋಡಿಯ ನಡುವೆ ಮನಸ್ತಾಪವಾಗಿ ಇವರ ಮದುವೆ ನಿಂತು ಹೋಯಿತು. ಅಲ್ಲದೆ ನಯನತಾರಾ ಜೊತೆ ಮದುವೆಯಾಗಬಾರದು ಎಂದು ಪ್ರಭುದೇವ ಅವರ ಮೊದಲ ಪತ್ನಿ ರಾಮಲತಾ ಸಹ ತಮ್ಮ ಮಕ್ಕಳೊಂದಿಗೆ ಬೀದಿಗಿಳಿದು ಪ್ರತಿಭಟನೆ ಮಾಡಿದ್ದರು. ನಂತರ ಪ್ರಭುದೇವ ಮೊದಲನೇ ಪತ್ನಿಗೆ ವಿಚ್ಛೇಧನ ನೀಡಿದ್ದರು. ಇದಾದ ನಂತರ ಪ್ರಭುದೇವ ಬಾಲಿವುಡ್ನಲ್ಲಿ ಸಿನಿಮಾ ನಿರ್ದೇಶನ ಮಾಡುವುದರಲ್ಲಿ ಬ್ಯುಸಿಯಾದರು. ಬಾಲಿವುಡ್ನಲ್ಲಿ ನಿರ್ದೇಶನದ ಜೊತೆಗೆ ಅಭಿನಯವನ್ನೂ ಮಾಡಲಾರಂಭಿಸಿದರು. ಇಂತಹ ನಟ ಈಗ ಮತ್ತೊಮ್ಮೆ ತಮ್ಮ ಎರಡನೇ ಮದುವೆಯ ವಿಷಯದಿಂದ ಮತ್ತೆ ಸುದ್ದಿಯಲ್ಲಿದ್ದಾರೆ.
ಹೌದು, ಪ್ರಭುದೇವ ಸದ್ಯದಲ್ಲೇ ಎರಡನೇ ಮದುವೆಯಾಗಲಿದ್ದಾರಂತೆ. ಬಹಳ ಸಮಯದಿಂದ ಈ ನಟ ಒಬ್ಬರನ್ನು ಡೇಟ್ ಮಾಡುತ್ತಿದ್ದು, ಅವರನ್ನೇ ಮದುವೆಯಾಗಲು ನಿರ್ಧರಿಸಿದ್ದಾರಂತೆ.
2011ರಲ್ಲಿ ಮೊದಲ ಪತ್ನಿಯಿಂದ ಅಧಿಕೃತವಾಗಿ ಬೇರೆಯಾದ ನಂತರ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಈ ನಡುವೆ ತಮ್ಮ ಸಂಬಂಧಿಕರ ಹುಡುಗಿ ಜೊತೆ ಡೇಟ್ ಮಾಡುತ್ತಿದ್ದಾರಂತೆ. ಅವರನ್ನೇ ಮದುವೆಯಾಗಲು ನಿರ್ಧರಿಸಿದ್ದಾರೆ ಎಂದು ಇಂಗ್ಲಿಷ್ ಪತ್ರಿಕೆಯೊಂದು ವರದಿ ಮಾಡಿದೆ. ಆದರೆ ಈ ಬಗ್ಗೆ ಪ್ರಭುದೇವ ಯಾವುದೇ ಅಧಿಕೃತ ಪ್ರಕಟಣೆ ಮಾಡಿಲ್ಲ.
View this post on Instagram
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ