HOME » NEWS » Entertainment » PRABHU DEVA IS MARRIED TO A MUMBAI BASED DOCTOR CONFIRMS HIS BROTHER HG

Prabhu Deva: ಚಿಕಿತ್ಸೆ ನೀಡಿದ ಮುಂಬೈ ಮೂಲದ ವೈದ್ಯೆಯನ್ನು ಮದುವೆಯಾದ ಪ್ರಭುದೇವ!

ಪ್ರಭುದೇವ-ಹಿಮಾನಿ ಅವರ ವಿವಾಹದ ಕುರಿತ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು.  ಆದರೀಗ ಪ್ರಭುದೇವ ಅವರ ಸಹೋದರ ರಾಜು ಸುಂದರಂ ಕಾರ್ಯಕ್ರಮವೊಂದರಲ್ಲಿ ಖಚಿತಪಡಿಸಿದ್ದಾರೆ.

news18-kannada
Updated:November 23, 2020, 5:22 PM IST
Prabhu Deva: ಚಿಕಿತ್ಸೆ ನೀಡಿದ ಮುಂಬೈ ಮೂಲದ ವೈದ್ಯೆಯನ್ನು ಮದುವೆಯಾದ ಪ್ರಭುದೇವ!
Prabhu Deva
  • Share this:
ಭಾರತದ ಮೈಕಲ್​​ ಜ್ಯಾಕ್ಸನ್​ ಎಂದೇ ಜನಪ್ರಿಯರಾಗಿರುವ ನಟ ಪ್ರಭುದೇವ ಮುಂಬೈ ಮೂಲದ ವೈದ್ಯೆ ಹಿಮಾನಿಯನ್ನು ವಿವಾಹವಾಗಿದ್ದಾರೆ. ಕಳೆದ ಮೇ ತಿಂಗಳಿನ ಲಾಕ್​ಡೌನ್​ ಅವಧಿಯಲ್ಲಿ ಕುಟುಂಬ ಸಮ್ಮುಖದಲ್ಲಿ ಪ್ರಭುದೇವ ಸರಳವಾಗಿ ಹಿಮಾನಿಯನ್ನು ವರಿಸಿದ್ದಾರೆ.

ಪ್ರಭುದೇವ-ಹಿಮಾನಿ ಅವರ ವಿವಾಹದ ಕುರಿತ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು.  ಆದರೀಗ ಪ್ರಭುದೇವ ಅವರ ಸಹೋದರ ರಾಜು ಸುಂದರಂ ಕಾರ್ಯಕ್ರಮವೊಂದರಲ್ಲಿ ಖಚಿತಪಡಿಸಿದ್ದಾರೆ.

ಸಂದರ್ಶನ ಕಾರ್ಯಕ್ರಮವೊಂದರಲ್ಲಿ ರಾಜು ಸುಂದರಂ ಅವರು ಪ್ರಭುದೇವ ಮತ್ತು ಹಿಮಾನಿ ವಿವಾಹವಾಗಿದ್ದಾರೆ. ನಮಗೆಲ್ಲರಿಗೂ ಈ ವಿಚಾರ ಸಂತಸ ತಂದುಕೊಟ್ಟಿದೆ ಎಂದಿದ್ದಾರೆ.

ಲಾಕ್​ಡೌನ್​ ಅವಧಿಯಲ್ಲಿ ಬೆನ್ನು ಮತ್ತು ಕಾಲಿಗೆ ಸಂಬಂಧಿಸಿದ ಚಿಕಿತ್ಸೆಗಾಗಿ ಪ್ರಭುದೇವ ಮುಂಬೈಗೆ ಹೋಗಿದ್ದರು. ವೈದ್ಯೆ ಹಿಮಾನಿ ಅವರಿಂದ ಚಿಕಿತ್ಸೆ ಪಡೆದಿದ್ದರು. ಈ ವೇಳೆ ಇಬ್ಬರಿಗೂ ಪ್ರೇಮಾಂಕುರವಾಗಿದೆ. ನಂತರ ಚೆನ್ನೈನಲ್ಲಿ ಇವರಿಬ್ಬರು 2 ತಿಂಗಳ ಕಾಲ ಜೊತೆಯಾಗಿ ಕಾಲ ಕಳೆದಿದ್ದು, ನಂತರ ಒಪ್ಪಿಕೊಂಡು ವಿವಾಹವಾಗಿದ್ದಾರೆ.

ಪ್ರಭುದೇವ ಈ ಮೊದಲು ಪತ್ನಿ ರಾಮಲತಾರನ್ನು ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ನಂತರ ರಾಮಲತಾರಿಗೆ ವಿಚ್ಛೇದನ ನೀಡಿದರು. ನಂತರ ನಟಿ ನಯನತಾರಾರೊಂದಿಗೆ ಇವರ ಹೆಸರು ಕೇಳಿಬಂದಿತ್ತು. ಇದೀಗ ಹಿಮಾನಿಯನ್ನು ವಿವಾಹವಾಗಿದ್ದಾರೆ ಪ್ರಭುದೇವ.
Published by: Harshith AS
First published: November 23, 2020, 5:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading