Prabhu Deva New Movie: ಪ್ರಭು ದೇವ ಅವತಾರ ಪುರುಷ-ಬಘೀರಾ ಚಿತ್ರದಲ್ಲಿ ನಾನಾ ರೂಪ

ಬಘೀರಾ ಚಿತ್ರದಲ್ಲಿ ನಾನಾ ರೂಪ

ಬಘೀರಾ ಚಿತ್ರದಲ್ಲಿ ನಾನಾ ರೂಪ

ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿರಲಿಲ್ಲ. ಟ್ರೈಲರ್ ಕೊನೆಯಲ್ಲಿ ರಿಲೀಸ್ ಸೂನ್ ಅನ್ನುವ ಸಾಲು ಮಾತ್ರ ಇತ್ತು. ಹಾಗಾಗಿಯೇ ಈ ಚಿತ್ರ ಬೇಗ ಬರಬಹುದು ಅನ್ನುವ ನಂಬಿಕೆ ಕೂಡ ಇತ್ತು.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಇಂಡಿಯನ್ ಮೈಕಲ್ ಜಾಕ್ಸನ್ (Prabhu Deva New Movie) ಎಂದು ಕರೆಸಿಕೊಳ್ಳುವ ಕನ್ನಡದ ಪ್ರಭು ದೇವ ಕನ್ನಡ ಸಿನಿಮಾಗಳನ್ನ ಒಪ್ಪಿಕೊಳ್ತಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ಕರಟಕ ದಮನಕ ಚಿತ್ರದಲ್ಲಿ ಪ್ರಭು ದೇವ ಅಭಿನಯಿಸುತ್ತಿದ್ದಾರೆ. ಈಗಾಗಲೇ (Prabhu Deva New Film) ಶಿವಣ್ಣ ಮತ್ತು ಪ್ರಭು ದೇವ ಕಾಂಬಿನೇಷನ್​ ಶೂಟಿಂಗ್ ಕೂಡ ಆರಂಭಗೊಂಡಿದೆ. ಅದರ ಮಧ್ಯೆ ವೂಲ್ಫ್ (Wolf Movie) ಚಿತ್ರದ ಚಿತ್ರೀಕರಣವನ್ನ ಕೂಡ ಪ್ರಭು ದೇವ ಪೂರ್ಣಗೊಳಿಸಿದ್ದಾರೆ. ಆದರೆ ಪ್ರಭು ದೇವ (Prabhu Deva Movie) ಒಪ್ಪಿಕೊಂಡ ತಮಿಳಿನ ಬಘೀರಾ ಚಿತ್ರ ಏನ್ ಆಯಿತು? ಈ ಒಂದು ಪ್ರಶ್ನೆಗೆ ಸ್ವತಃ ಪ್ರಭು ದೇವ ಉತ್ತರ ಕೊಟ್ಟಿದ್ದಾರೆ. ಅದು ಪೋಸ್ಟರ್ ಒಂದರ ಮೂಲಕ ಅನ್ನೋದೇ ವಿಶೇಷ. ಅದರ ಸುತ್ತ ಇಲ್ಲೊಂದು ಸ್ಟೋರಿ ಇದೆ ಓದಿ.


ಪ್ರಭು ದೇವ ಡ್ಯಾನ್ಸ್​ಗೆ ಫಿದಾ ಆಗೋರು ಬೇಜಾನ್ ಜನ ಇದ್ದಾರೆ. ನೃತ್ಯಕ್ಕೆ ಭಾಷೆಯ ಗಡಿ ಇರೋದಿಲ್ಲ ಅಂತಾರೆ. ಅದು ಪ್ರಭು ದೇವ ವಿಚಾರದಲ್ಲೂ ನಿಜ ಆಗಿದೆ. ಅದಕ್ಕೇನೆ ಪ್ರಭು ದೇವ ಅವರನ್ನ ಇಂಡಿಯನ್ ಮೈಕಲ್ ಜಾಕ್ಸನ್ ಅಂತ ಕರೆಯುತ್ತಾರೆ.


Prabhu Deva acted Bagheera Movie Release Date Announced
ಪ್ರಭು ದೇವ ತಮಿಳು ಬಘೀರಾ ಯಾವಾಗ ರಿಲೀಸ್


ಪ್ರಭು ದೇವ ತಮಿಳು ಬಘೀರಾ ಯಾವಾಗ ರಿಲೀಸ್
ಪ್ರಭು ದೇವ ನೃತ್ಯ ನಿರ್ದೇಶನವಲ್ಲದೇ ಚಿತ್ರ ನಿರ್ದೇಶನದಲ್ಲೂ ಸೈ ಎನಿಸಿಕೊಡಿದ್ದಾರೆ. ಇದರ ಜೊತೆಗೆ ಬೇರೆಯವರ ನಿರ್ದೇಶನದಲ್ಲೂ ಪ್ರಭು ದೇವ ಅಭಿನಯಿಸಿದ್ದಾರೆ.




ಇದರ ಮಧ್ಯೆ ಕನ್ನಡದಲ್ಲಿ ಯೋಗರಾಜ್ ಭಟ್ ನಿರ್ದೇಶನದ ಕರಟಕ ದಮನಕ ಚಿತ್ರದಲ್ಲಿ ಶಿವರಾಜ್ ಕುಮಾರ್ ಜೊತೆಗೆ ಪ್ರಭು ದೇವ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ.


ಪ್ರಭು ದೇವ ಚಿತ್ರದಲ್ಲಿ ವೂಲ್ಫ್ ವಿಭಿನ್ನ ಸಿನಿಮಾ
ಪ್ರಭು ದೇವ ಸಿನಿಮಾ ಕರಿಯರ್​ನಲ್ಲಿ ವೂಲ್ಫ್ ಚಿತ್ರವೂ ವಿಶೇಷವಾಗಿ ಇದೆ. ಈ ಚಿತ್ರವನ್ನ ಕನ್ನಡದ ನಿರ್ಮಾಪಕ ಸಂದೇಶ್ ನಾಗರಾಜ್ ನಿರ್ಮಿಸಿದ್ದಾರೆ. ಬೆಂಗಳೂರು ಮೂಲದ ತಮಿಳು ನಿರ್ದೇಶಕ ವಿನೂ ವೆಂಕಟೇಶ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.


ಆದರೆ ಪ್ರಭು ದೇವ ಕಳೆದ ವರ್ಷ ಒಂದು ಚಿತ್ರ ಒಪ್ಪಿಕೊಂಡಿದ್ದರು. ಆ ಚಿತ್ರಕ್ಕೆ ಬಘೀರಾ ಅಂತಲೂ ಶೀರ್ಷಿಕೆ ಇಡಲಾಗಿತ್ತು. ಅಧಿಕ್ ರವಿಚಂದ್ರನ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭು ದೇವ ಹಲವಾರು ಅವತಾರ ಎತ್ತಿದ್ದಾರೆ.


ಬಘೀರಾ ಚಿತ್ರದಲ್ಲಿ ಪ್ರಭು ದೇವ ಚಿತ್ರ-ವಿಚಿತ್ರ ಪಾತ್ರದಲ್ಲಿ ನಟನೆ
ಹೌದು, ಬಘೀರಾ ಚಿತ್ರದಲ್ಲಿ ಪ್ರಭು ದೇವ ವಿಭಿನ್ನ ಗೆಟಪ್​​ಗಳಲ್ಲಿಯೇ ಕಾಣಿಸಿಕೊಂಡಿದ್ದಾರೆ. ಮಂಗಳ ಮುಖಿ ಗೆಟಪ್​ನ್ನ ಕೂಡ ಧರಿಸಿದ್ದಾರೆ. ಇದರ ಜೊತೆಗೆ ಸೈಕೋ ಪಾತ್ರದಲ್ಲೂ ನಟಿಸಿದ್ದಾರೆ.


ಕಳೆದ ವರ್ಷ ಈ ಚಿತ್ರದ ಒಂದು ಟ್ರೈಲರ್ ರಿಲೀಸ್ ಆಗಿದೆ. ಇದರಲ್ಲಿ ಪ್ರಭು ದೇವ ಎಲ್ಲ ರೂಪಗಳು ಅನಾವರಣಗೊಂಡಿವೆ. ಪ್ರಭು ದೇವ ಪ್ರತಿಭೆಯ ಎಲ್ಲ ರೂಪಗಳು ಇಲ್ಲಿ ವಿಶೇಷವಾಗಿಯೇ ಕಾಣಿಸಿಕೊಂಡಿವೆ.


ಕಳೆದ ವರ್ಷ ಬಘೀರಾ ಚಿತ್ರದ ಟ್ರೈಲರ್ ರಿಲೀಸ್
ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿರಲಿಲ್ಲ. ಟ್ರೈಲರ್ ಕೊನೆಯಲ್ಲಿ ರಿಲೀಸ್ ಸೂನ್ ಅನ್ನುವ ಸಾಲು ಮಾತ್ರ ಇತ್ತು. ಹಾಗಾಗಿಯೇ ಈ ಚಿತ್ರ ಬೇಗ ಬರಬಹುದು ಅನ್ನುವ ನಂಬಿಕೆ ಕೂಡ ಇತ್ತು.


ಇದರ ಮಧ್ಯೆ ಪ್ರಭು ದೇವ ಕನ್ನಡದ ಸಿನಿಮಾಗಳನ್ನು ಒಪ್ಪಿದ್ದರು. ಅವುಗಳಲ್ಲಿ ಒಂದು ಚಿತ್ರದ ಕೆಲಸ ಮುಗಿಸಿದ್ದಾರೆ. ಯೋಗರಾಜ್ ಭಟ್ ಅವರ ಚಿತ್ರದಲ್ಲಿ ಸದ್ಯ ಬ್ಯುಸಿ ಇದ್ದಾರೆ.


Prabhu Deva acted Bagheera Movie Release Date Announced
ಚಿತ್ರದಲ್ಲಿ ಪ್ರಭು ದೇವ ಚಿತ್ರ-ವಿಚಿತ್ರ ಪಾತ್ರದಲ್ಲಿ ನಟನೆ


ಪ್ರಭು ದೇವ ಅಭಿನಯದ ಬಘೀರಾ ರಿಲೀಸ್ ಡೇಟ್ ಅನೌನ್ಸ್
ಹೀಗಿರೋವಾಗಲೇ ಪ್ರಭು ದೇವ ಈಗ ತಮ್ಮ ಬಘೀರಾ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ. ಹೌದು, ಇದೇ ಮಾರ್ಚ್​-03 ರಂದು ಪ್ರಭು ದೇವ ಅಭಿನಯದ ಬಘೀರಾ ಚಿತ್ರದ ರಿಲೀಸ್ ಆಗುತ್ತಿದೆ.


ಇದನ್ನೂ ಓದಿ:  Martin Movie: 35 ಮಿಲಿಯನ್ ವೀಕ್ಷಣೆ ಕಂಡ ಮಾರ್ಟಿನ್ ಟೀಸರ್; ಇದ್ರಿಂದ ಬಂದ ಆದಾಯ ಗೋಶಾಲೆಗೆ ಎಂದ್ರು ನಿರ್ದೇಶಕ ಎ ಪಿ ಅರ್ಜುನ್


ಇನ್ನು ಚಿತ್ರದಲ್ಲಿ ಪ್ರಭು ದೇವಗೆ ಅಮೈರಾ ದಸ್ತೂರ್, ರಮ್ಯಾ ನಂಬಿಸನ್ ಜೋಡಿಯಾಗಿದ್ದಾರೆ. ಸಾಯಿ ಕುಮಾರ್, ನಾಸರ್ ಹೀಗೆ ಇನ್ನೂ ಅನೇಕ ಕಲಾವಿದರು ಚಿತ್ರದಲ್ಲಿ ಪ್ರಮುಖ ಪಾತ್ರವನ್ನ ನಿರ್ವಹಿಸಿದ್ದಾರೆ. ಇನ್ನುಳಿದಂತೆ ಬಘೀರಾ ಮೂಲಕ ಪ್ರಭು ದೇವ ಹೊಸ ಅಲೆ ಎಬ್ಬಿಸೋ ಹಾಗೆ ಕಾಣಿಸುತ್ತಿದೆ.

First published: