News18 India World Cup 2019

ಪ್ರಭಾಸ್​ ವಿವಾಹಕ್ಕೆ ಮುಹೂರ್ತ ಫಿಕ್ಸ್​: ಸದ್ಯದಲ್ಲೇ ಪ್ರೇಮ ವಿವಾಹವಾಗಲಿರುವ ರೆಬೆಲ್​ ಸ್ಟಾರ್​..!

news18
Updated:September 4, 2018, 5:18 PM IST
ಪ್ರಭಾಸ್​ ವಿವಾಹಕ್ಕೆ ಮುಹೂರ್ತ ಫಿಕ್ಸ್​: ಸದ್ಯದಲ್ಲೇ ಪ್ರೇಮ ವಿವಾಹವಾಗಲಿರುವ ರೆಬೆಲ್​ ಸ್ಟಾರ್​..!
news18
Updated: September 4, 2018, 5:18 PM IST
ನ್ಯೂಸ್​ 18 ಕನ್ನಡ 

ರೆಬೆಲ್​ ಸ್ಟಾರ್ ಪ್ರಭಾಸ್​ 'ಬಾಹುಬಲಿ' ಸಿನಿಮಾದ ನಂತರ ಅಭಿನಯಿಸುತ್ತಿರುವ ಭಾರೀ ಬಜೆಟ್​ನ ಸಿನಿಮಾ ಎಂದರೆ 'ಸಾಹೋ'. 'ಬಾಹುಬಲಿ'ಗಾಗಿ ತಮ್ಮ ಐದು ವರ್ಷಗಳನ್ನು ಮುಡುಪಾಗಿಟ್ಟಿದ್ದ ಪ್ರಭಾಸ್​, ಆಗ ಬೇರೆ ಯಾವ ಸಿನಿಮಾಗಳಿಗೂ ಸಹಿ ಹಾಕಿರಲಿಲ್ಲ.

ಆದರೆ ಈ ಮಧ್ಯೆ ಅವರ ವಿವಾಹದ ವಿಷಯ ಟಾಲಿವುಡ್​ನಲ್ಲಿ ಹರಿದಾಡುತ್ತಿದೆ. ಅದರಲ್ಲೂ ಅನುಷ್ಕಾ ಹಾಗೂ ಪ್ರಭಾಸ್​ ಅವರ ಪ್ರೀತಿಯ ವಿಷಯದಲ್ಲಂತೂ ಸಾಕಷ್ಟು ಗಾಳಿ ಸುದ್ದಿ ಹರಿದಾಡುತ್ತಿದೆ. ಆದರೆ ಈಗ ಪ್ರಭಾಸ್​ ಪ್ರೇಮ ವಿವಾಹವಾಗಲಿದ್ದಾರೆ ಅನ್ನೋ ಸುದ್ದಿ ಟಾಲಿವುಡ್​ ಅಂಗಳದಿಂದ ಕೇಳಿ ಬರುತ್ತಿದೆ.

ಹೌದು 'ಬಾಹುಬಲಿ' ನಂತರ 'ಸಾಹೋ' ಸಿನಿಮಾದಲ್ಲಿ ವ್ಯಸ್ತವಾಗಿರುವ ಪ್ರಭಾಸ್​ ಈಗ ಮತ್ತೊಂದು ರೊಮ್ಯಾಂಟಿಕ್​ ಸಿನಿಮಾಗೆ ಸಹಿ ಹಾಕಿದ್ದಾರೆ. 'ಜಿಲ್​' ಸಿನಿಮಾದ ನಿರ್ದೇಶಕ ರಾಧಾಕೃಷ್ಣ ಅವರ ಮುಂದಿನ ಪ್ರೇಮ ಕಥಾಹಂದರ ಹೊಂದಿರುವ ಸಿನಿಮಾದಲ್ಲಿ ಅಭಿನಯಿಸೋಕೆ ಸಜ್ಜಾಗಿದ್ದಾರೆ ಪ್ರಭಾಸ್​. ಈ ಸಿನಿಮಾದ ಮುಹೂರ್ತಕ್ಕೆ ಇದೇ ತಿಂಗಳ 6ಕ್ಕೆ ದಿನಾಂಕ ನಿಗದಿಯಾಗಿದೆ.

ಈ ಸಿನಿಮಾದಲ್ಲಿ ಪ್ರಭಾಸ್ ಜತೆ ಪೂಜಾ ಹೆಗ್ಡೆ ಅಭಿನಯಿಸುತ್ತಿದ್ದು, ಅದಕ್ಕಾಗಿ ಹೈದರಾಬಾದಿನಲ್ಲಿ ಪ್ರೊಡಕ್ಷನ್​ ವಿನ್ಯಾಸಕಾರ ಅರವಿಂದ್​ ಭಾರೀ ಬಜೆಟ್​ನಲ್ಲಿ ಸೆಟ್​ ನಿರ್ಮಿಸಲಾಗುತ್ತಿದೆ.

ದುಬಾರಿ ಬಜೆಟ್​ನಲ್ಲಿ ಮೂರು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ 'ಸಾಹೋ' ಸಿನಿಮಾವನ್ನು ದುಬೈ, ಇಟಲಿ ಸೇರಿದಂತೆ ಹಲವಾರು ಕಡೆಗಳಲ್ಲಿ ಚಿತ್ರೀಕರಿಸಲಾಗುತ್ತಿದೆ. ಈ ಸಿನಿಮಾದಲ್ಲಿ ಕೇವಲ ಒಂದು ಸಾಹಸ ದೃಶ್ಯಕ್ಕಾಗಿ ಕೋಟ್ಯಂತ ರೂಪಾಯಿ ವೆಚ್ಚಮಾಡಲಾಗಿದೆ. ಇಂತಹ ಸಿನಿಮಾ ಮೇಲೆ ಕೇವಲ ಟಾಲಿವುಡ್​ ಮಾತ್ರವಲ್ಲದೆ ಇಡೀ ಭಾರತೀಯ ಸಿನಿ ರಂಗದ ಕಣ್ಣಿದೆ.
Loading...

ಈ 'ಸಾಹೋ' ಸಿನಿಮಾ ಯಾವ ರೀತಿ ಮೂಡಿ ಬರಲಿದೆ, ಇದರಲ್ಲಿ ಪ್ರಭಾಸ್​ ಪ್ರದರ್ಶನ ಹೇಗಿರಲಿದೆ ಎಂದೆಲ್ಲ ನಿರೀಕ್ಷೆಗಳಿವೆ. ಕೇವಲ ಟಾಲಿವುಡ್​ಗೆ ಮಾತ್ರ ಪರಿಚಯವಿದ್ದ ಪ್ರಭಾಸ್ ಲೋಕಲ್​ನಿಂದ ಗ್ಲೋಬಲ್​ ಮಟ್ಟಕ್ಕೆ ಖ್ಯಾತಿ ಪಡೆದಿದ್ದಾರೆ.

ಸುಜಿತ್​ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾಗೆ ಸುಮಾರು 200 ಕೋಟಿ ಹಣ ಹೂಡಲಾಗಿದೆ. ದುಬೈನಲ್ಲಿ ಚಿತ್ರೀಕರಿಸಲಾಗಿರುವ ಭಾಗಕ್ಕೆ ಮಾತ್ರ 80 ಕೋಟಿ ವೆಚ್ಚ ಮಾಡಲಾಗಿದೆಯಂತೆ.

 #Prabhas 😍 Hottest Design #saaho 😎🖤💪


A post shared by Prabhas Raju Uppalapati (@prabhas_raju) on


ಬಾಲಿವುಡ್​ ಬೆಡಗಿ ಶ್ರದ್ಧಾ ಕಪೂರ್​ ಪ್ರಭಾಸ್​​ಗೆ ನಾಯಕಿಯಾಗಿ ಅಭಿನಯಿಸುತ್ತಿದ್ದು, ಈ ಸಿನಿಮಾ 2019ರ ಬೇಸಿಗೆ ರಜೆ ಸಮಯಕ್ಕೆ 'ಸಾಹೋ' ಹಾಗೂ ಹೊಸ ಸಿನಿಮಾ ಒಟ್ಟಿಗೆ ತೆರೆ ಕಾಣಲಿದೆಯಂತೆ. 'ಬಾಹುಬಲಿ' ನಂತರ ಪ್ರಭಾಸ್ ಅಭಿಮಾನಿಗಳಿಗೆ ಮುಂದಿನ ವರ್ಷಾಂತ್ಯಕ್ಕೆ ಎರಡೆರಡು ಸಿನಿಮಾಗಳ ಭರ್ಜರಿ ಭೋಜನ ಸಿಗಲಿದೆ.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...