ಬಾಲಿವುಡ್‌ನ ಆದಿಪುರುಷ್ (Adipurush)ಚಿತ್ರವನ್ನು ಫಿಲ್ಮ್ ಮೇಕರ್ಸ್ ಘೋಷಣೆ ಮಾಡಿದಾಗಿನಿಂದ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರನ್ನು ಒಟ್ಟಿಗೆ ತೆರೆಯ ಮೇಲೆ ನೋಡಲು ಕಾತರರಾಗಿದ್ದಾರೆ. ಓಂ ರಾವತ್ (Om Raut) ನಿರ್ದೇಶನದ ಆದಿಪುರುಷ್ ಚಿತ್ರದಲ್ಲಿ ಪ್ರಭಾಸ್ (Prabhas), ಸೈಫ್ ಅಲಿ ಖಾನ್ (Saif Ali Khan), ಕೃತಿ ಸನೋನ್ (Kriti Sanon), ಮತ್ತು ಸನ್ನಿ ಸಿಂಗ್ (Sunny Singh)ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಚಿತ್ರದ ಚಿತ್ರೀಕರಣ ಫೆಬ್ರವರಿಯಲ್ಲಿ ಮುಂಬೈನಲ್ಲಿ ಪ್ರಾರಂಭವಾಯಿತು. ಆದರೆ, ಚಿತ್ರೀಕರಣದ ಮೊದಲ ದಿನವೇ ಚಿತ್ರದ ಸೆಟ್‌ಗಳಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯನ್ನು ನಿಯಂತ್ರಣಕ್ಕೆ ತಂದರೂ, ನಿರ್ಮಿಸಲಾಗಿದ್ದ ಚಿತ್ರದ ಅದ್ದೂರಿ ಸೆಟ್ ಮತ್ತು ರಂಗಪರಿಕರಗಳಿಗೆ ಸಾಕಷ್ಟು ಹಾನಿಯಾಗಿತ್ತು. ನಂತರ ಕೊರೋನಾ ಎರಡನೇ ಅಲೆಯಿಂದಾಗಿ ಚಿತ್ರದ ಶೂಟಿಂಗ್ ಮಾಡುವ ಯೋಜನೆ ಮತ್ತಷ್ಟು ವಿಳಂಬವಾಯಿತು. ಈಗ ಕೋವಿಡ್ -19 ಪ್ರಕರಣಗಳು ಕಡಿಮೆಯಾಗಿದ್ದು, ಈ ಹಿನ್ನೆಲೆ ಓಂ ರಾವತ್ ಈ ತಿಂಗಳ ಆರಂಭದಿಂದಲೇ ಚಿತ್ರದ ಚಿತ್ರೀಕರಣ ಪ್ರಾರಂಭಿಸಿದ್ದಾರೆ.
ಮೂಲವೊಂದರ ಪ್ರಕಾರ, ತಯಾರಕರು ಮುಂಬೈನ ಮೆಹಬೂಬ್ ಸ್ಟುಡಿಯೋದಲ್ಲಿ ಸಂಪೂರ್ಣ ಸೆಟ್ ಅನ್ನು ಪುನಃ ನಿರ್ಮಿಸಿದ್ದು, ಅಲ್ಲಿ ಸೈಫ್ ಮತ್ತು ಕೃತಿ ಸನೋನ್ ಶೂಟಿಂಗ್ ಪ್ರಾರಂಭಿಸಿದ್ದಾರೆ. ಹೊಸ ವೇಳಾಪಟ್ಟಿಯನ್ನು ಪ್ರಾರಂಭಿಸುವ ಮೊದಲು ತಂಡವು ಶೇಕಡ 30ರಷ್ಟು ಚಿತ್ರೀಕರಣ ಮುಗಿಸಿತ್ತು. ಬೆಂಕಿಯಿಂದ ಅಪಾರ ನಷ್ಟ ಸಂಭವಿಸಿದೆ. ಇದು ಪೀರಿಯಾಡಿಕ್ ಡ್ರಾಮಾ ಆದ್ದರಿಂದ, ಬಹಳಷ್ಟು ವೇಷಭೂಷಣಗಳು ನಾಶವಾದವು. ಆದರೂ, ವೇಷಭೂಷಣ ವಿನ್ಯಾಸ ತಂಡವು ವೇಷಭೂಷಣಗಳನ್ನು ಮತ್ತೆ ಸಿದ್ಧಪಡಿಸಲು ಮತ್ತು ವೇಳಾಪಟ್ಟಿಯನ್ನು ಹೊಂದಿಸಲು ಶ್ರಮಿಸುತ್ತಿದೆ.
ಮೆಹಬೂಬ್ ಸ್ಟುಡಿಯೋದಲ್ಲಿ ಬೃಹತ್ ಕ್ರೋಮಾ ಸೆಟ್ ನಿರ್ಮಿಸಲಾಗಿದೆ. ಸೈಫ್ ಮತ್ತು ಕೃತಿ ತಮ್ಮ ಹೊಸ ಡೇಟ್ಸ್ ನೀಡಿದ್ದು, ಈ ತಿಂಗಳ ಆರಂಭದಿಂದಲೂ ಅವರು ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಮತ್ತೊಂದೆಡೆ ಪ್ರಭಾಸ್ ಇನ್ನೂ ಚಿತ್ರ ತಂಡವನ್ನು ಸೇರಿಲ್ಲ. ಆದರೆ, ಆಗಸ್ಟ್ ಮೊದಲ ವಾರದಲ್ಲಿ ಪ್ರಭಾಸ್ ಚಿತ್ರತಂಡ ಸೇರಿಕೊಳ್ಳರಿದ್ದಾರಂತೆ ಎಂದು ತಿಳಿದು ಬಂದಿದೆ.
ಅಲ್ಲದೆ, ಪ್ರಭಾಸ್ ಇತ್ತೀಚೆಗೆ ತಮ್ಮ ಮುಂಬರುವ ಚಿತ್ರಕ್ಕೆ ಕ್ಲ್ಯಾಪ್ ಮಾಡಿದ್ದು, ತಾತ್ಕಾಲಿಕವಾಗಿ ಅದಕ್ಕೆ ಪ್ರಾಜೆಕ್ಟ್ ಕೆ ಎಂದು ಹೆಸರಿಸಲಾಗಿದೆ, ಇದರಲ್ಲಿ ಅಮಿತಾಭ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ಕೂಡ ಇದ್ದಾರೆ. ಇನ್ನೊಂದೆಡೆ, ಮುಂದಿನ ತಿಂಗಳು ಆದಿಪುರುಷ್ ಪಾತ್ರವರ್ಗಕ್ಕೆ ಸೇರುವ ಮೊದಲು ನಟ ಪ್ರಭಾಸ್, ಹೈದರಾಬಾದ್‌ನಲ್ಲಿ ತಮ್ಮ ಇತರ ಮತ್ತೊಂದು ಸಿನಿಮಾ ಆಗಿರುವ ರಾಧೆ ಶ್ಯಾಮ್ ಅನ್ನು ಮುಗಿಸುತ್ತಿದ್ದಾರೆ. ಮತ್ತೊಂದೆಡೆ, ವಿಕ್ರಮ್ ವೇದ ಚಿತ್ರದ ರೀಮೇಕ್‌ಗಾಗಿ ಸೈಫ್ ಯುರೋಪಿಗೆ ಹೋಗುವ ಮೊದಲು ತನ್ನ ಭಾಗದ ಬಹುಪಾಲು ಶೂಟಿಂಗ್ ಅನ್ನು ಮುಗಿಸಲು ಪ್ಲ್ಯಾನ್ ಮಾಡುತ್ತಿದ್ದಾರೆ ಎಂದೂ ಮೂಲವೊಂದರಿಂದ ತಿಳಿದು ಬಂದಿದೆ.
ಇದನ್ನೂ ಓದಿ: Anidrita-Diganth: ದಿಗಂತ್ ಜೊತೆಗಿನ ಕ್ಯೂಟ್ ಫೋಟೋ ಶೇರ್ ಮಾಡಿದ ಐಂದ್ರಿತಾ ರೇ..!
ಈ ಶೆಡ್ಯೂಲ್‌ನಲ್ಲಿ ಕೆಲವು ಹೈ ಆಕ್ಟೇನ್ ಆ್ಯಕ್ಷನ್ ಸನ್ನಿವೇಶಗಳನ್ನು ಚಿತ್ರೀಕರಿಸಲು ಹೊರಟಿದ್ದರಿಂದ ಸೈಫ್ ಮತ್ತು ಪ್ರಭಾಸ್ ಇಬ್ಬರೂ ಸಾಕಷ್ಟು ದೈಹಿಕ ರೂಪಾಂತರಕ್ಕೆ ಒಳಗಾಗಿದ್ದಾರೆ. ಇಬ್ಬರು ನಟರಿಗೂ ಬಾಡಿ ಬಿಲ್ಡ್ ಮಾಡಲು ಹೇಳಲಾಗಿತ್ತು ಮತ್ತು ಸ್ನಾಯುವಿನ ನೋಟವನ್ನು ಹೊಂದಿರ ಬೇಕು ಎಂದು ಸೂಚನೆ ನೀಡಲಾಗಿದೆಯಂತೆ. ಇದಕ್ಕಾಗಿ ಅವರು ಇದೀಗ ತಯಾರಿ ನಡೆಸುತ್ತಿದ್ದಾರೆ. ಕೆಲವು ಅಂತಾರಾಷ್ಟ್ರೀಯ ಕ್ರಿಯಾ ನಿರ್ದೇಶಕರು ಈ ಯೋಜನೆಗಾಗಿ ತೊಡಗಿಸಿಕೊಂಡಿದ್ದಾರೆ ಎಂದೂ ಆದಿಪುರುಷ್ ಚಿತ್ರದ ಬಗ್ಗೆ ಮೂಲಗಳು ಮಾಹಿತಿ ನೀಡಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ