Prabhas: ಆದಿಪುರುಷ ಸಿನಿಮಾಕ್ಕೆ ಸೌತ್ ಸೂಪರ್ ಸ್ಟಾರ್ ಪ್ರಭಾಸ್ ಎಷ್ಟು ಸಂಭಾವನೆ ಕೇಳಿದ್ದಾರೆ ಗೊತ್ತಾ?

ಬಾಹುಬಲಿ ನಂತರ ಸಾಹೋ, ರಾಧೆ-ಶ್ಯಾಮ್ ಎರಡೂ ಸಿನಿಮಾಗಳು ಸೂಪರ್ ಸ್ಟಾರ್ಗೆ ದೊಡ್ಡ ಹಿಟ್ ನೀಡದಿದ್ದರೂ, ಮಾರುಕಟ್ಟೆಯಲ್ಲಿ ಇವರ ವರ್ಚಸ್ಸು ಕುಗ್ಗಿಲ್ಲ ಎಂಬುವುದಕ್ಕೆ ಇವರ ಪಡೆದುಕೊಳ್ಳುತ್ತಿರುವ ಸಂಭಾವನೆಯೇ ಸಾಕ್ಷಿ ಎನ್ನಬಹುದು.

ಸೌತ್ ಸೂಪರ್ ಸ್ಟಾರ್ ಪ್ರಭಾಸ್

ಸೌತ್ ಸೂಪರ್ ಸ್ಟಾರ್ ಪ್ರಭಾಸ್

  • Share this:
ಸೌತ್ ಸೂಪರ್ ಸ್ಟಾರ್ ಪ್ರಭಾಸ್ (South Super Star Prabhas) ಸದ್ಯಕ್ಕೆ ಬಹುಬೇಡಿಕೆಯ ಸ್ಟಾರ್ ನಟರಲ್ಲಿ ಒಬ್ಬರು. ಬಾಹುಬಲಿ: ದಿ ಬಿಗಿನಿಂಗ್ ಮತ್ತು ಬಾಹುಬಲಿ: ದಿ ಕನ್‌ಕ್ಲೂಷನ್‌ನ ಯಶಸ್ಸಿನ ನಂತರ ಚಿತ್ರರಂಗದಲ್ಲಿ ತೂಕ ಹೆಚ್ಚಿಸಿಕೊಂಡ ಪ್ರಭಾಸ್ ವೃತ್ತಿ ಜೀವನದಲ್ಲಿ ಈ ಎರಡು ಸಿನಿಮಾಗಳು  ಗೇಮ್ ಚೇಂಜರ್ ಎಂದೇ ಹೇಳಬಹುದು. ಸಂದರ್ಶನವೊಂದರಲ್ಲಿ ಪ್ರಭಾಸ್ ಕೂಡ ಇದೇ ಮಾತನ್ನು ಒಮ್ಮೆ ಹೇಳಿದ್ದರು. ಬಾಹುಬಲಿ ನಂತರ ಸಾಹೋ, ರಾಧೆ-ಶ್ಯಾಮ್ ಎರಡೂ ಸಿನಿಮಾಗಳು ಸೂಪರ್ ಸ್ಟಾರ್ಗೆ ದೊಡ್ಡ ಹಿಟ್ ನೀಡದಿದ್ದರೂ, ಮಾರಕಟ್ಟೆಯಲ್ಲಿ (Market) ಇವರ ವರ್ಚಸ್ಸು ಕುಗ್ಗಿಲ್ಲ ಎಂಬುವುದಕ್ಕೆ ಇವರ ಪಡೆದುಕೊಳ್ಳುತ್ತಿರುವ ಸಂಭಾವನೆಯೇ ಸಾಕ್ಷಿ ಎನ್ನಬಹುದು.

ಬಹುಕೋಟಿ ಸಂಭಾವನೆ ಪಡೆಯುವ ಪ್ರಭಾಸ್
ಟಾಲಿವುಡ್ ನಟರಲ್ಲಿ ಬಹುಕೋಟಿ ಸಂಭಾವನೆ ಪಡೆಯುವವರಲ್ಲಿ ಪ್ರಭಾಸ್ ಕೂಡ ಒಬ್ಬರು. ಮುಂಬರುವ ಚಿತ್ರ ಆದಿಪುರುಷಕ್ಕಾಗಿ ಪ್ರಭಾಸ್ 100 ಕೋಟಿಗಿಂತ ಹೆಚ್ಚಿನ ಸಂಭಾವನೆಯನ್ನು ಪಡೆಯಲ್ಲಿದ್ದಾರೆ ಎಂಬ ವಂದಂತಿಗಳು ಕೇಳಿಬರುತ್ತಿವೆ. ಪ್ರಭಾಸ್ ಆದಿಪುರುಷಕ್ಕಾಗಿ ತೆಗೆದುಕೊಂಡ ಸಂಭಾವನೆ ಟಾಪ್ ಬಾಲಿವುಡ್ ನಟರ ಸಂಭಾವನೆಯನ್ನು ಸಹ ಮೀರಿಸಿದೆಯಂತೆ.

ಆದಿಪುರುಷ ಸಿನೆಮಾದ ಸಂಭಾವನೆ
ಮೊದಲಿಗೆ 90 ರಿಂದ 100 ಕೋಟಿ ಎಂದು ಸಂಭಾವನೆ ಫಿಕ್ಸ್ ಆಗಿತ್ತು, ಆದರೆ ಪ್ರಭಾಸ್ ಮತ್ತೆ ಆದಿಪುರುಷ ಚಿತ್ರದ ನಿರ್ಮಾಪಕರ ಬಳಿ ತಮ್ಮ ಶುಲ್ಕವನ್ನು ಹೆಚ್ಚಿಸುವಂತೆ ಕೇಳಿಕೊಂಡಿದ್ದಾರಂತೆ. ಮೂಲಗಳ ಪ್ರಕಾರ 120 ಕೋಟಿ ಹಣವನ್ನು ಆದಿಪುರುಷ ಸಿನಿಮಾಕ್ಕಾಗಿ ಸದ್ಯ ಪ್ರಭಾಸ್ ಬೇಡಿಕೆ ಇಟ್ಟಿದ್ದು, ಇದರಿಂದಾಗಿ ಸಿನಿಮಾದ ಒಟ್ಟಾರೆ ಬಜೆಟ್ ಶೇ.25ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: Bollywood Celebs: ಸ್ವಂತ ಆ್ಯಪ್ ಹೊಂದಿರುವ ಬಾಲಿವುಡ್ ಸೆಲೆಬ್ರಿಟಿಗಳಿವರು! ಇದ್ರಲ್ಲಿ ಏನೆಲ್ಲಾ ವೀಕ್ಷಿಸಬಹುದು ಗೊತ್ತಾ?

ಬಾಹುಬಲಿ ನಂತರ ಹಿಟ್ ಸಿನಿಮಾ ನೀಡಲು ವಿಫಲವಾಗಿದ್ದರೂ, ನಿರ್ದೇಶಕರು ಇವರ ಮೇಲೆ ನಂಬಿಕೆ ಮಾತ್ರ ಕಳೆದುಕೊಂಡಿಲ್ಲ. ಬಾಹುಬಲಿ ನಂತರ ಪ್ರಭಾಸ್ ಸಿನಿಮಾಗಳ ಮೇಲಿನ ನೀರಿಕ್ಷೆ ಬೆಟ್ಟದಷ್ಟಿತ್ತು. ಆದರೆ ಎರಡೂ ಚಿತ್ರಗಳೂ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಲೇ ಇಲ್ಲ. ಪ್ರಸ್ತುತ ಪೌರಾಣಿಕ ಕಥೆಯೊಂದಿಗಿನ, ಹೈಬಜೆಟ್ ಸಿನಿಮಾದ ಮೂಲಕ ಅದೃಷ್ಟ ಪರೀಕ್ಷೆಗಿಳಿದಿರುವ ಪ್ರಭಾಸ್ ಹಿಟ್ ನೀಡಲು ಎದುರು ನೋಡುತ್ತಿದ್ದಾರೆ.

ಆದಿಪುರುಷ ಸಿನೆಮಾದ ಬಗ್ಗೆ ಪ್ರಭಾಸ್ ಹೇಳಿದ್ದೇನು
ಆದಿಪುರುಷ ಸಿನಿಮಾದ ಕುರಿತು ಮಾತನಾಡಿದ ಯಂಗ್ ರೆಬೆಲ್ ಸ್ಟಾರ್ “ಆದಿಪುರುಷ ಅತ್ಯಂತ ಭಯಾನಕ ಅನುಭವ ನೀಡಿದೆ. ಇದು ಕೇವಲ ಚಿತ್ರವಲ್ಲ. ಇದು ನನ್ನ ಪಾತ್ರದ ಬಗ್ಗೆಯೂ ಅಲ್ಲ. ಇದು ಒಟ್ಟಾರೆಯಾಗಿ ಕಲ್ಪನೆಯಾಗಿದೆ. ಈ ಚಿತ್ರಕ್ಕಾಗಿ ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ. ನೀವು ಅದನ್ನು ಚಲನಚಿತ್ರ ಎಂದು ಕರೆಯಲು ಸಾಧ್ಯವಿಲ್ಲ. ಆದಿಪುರುಷ ಸಿನಿಮಾ ಅದನ್ನು ಮೀರಿದೆ” ಎಂದಿದ್ದಾರೆ.

ಇದನ್ನೂ ಓದಿ: Movie Reviews: ಕಮಾಲ್​ ಮಾಡಿದ್ನಾ ತ್ರಿವಿಕ್ರಮ? ಹರಿ ಕಥೆ ಗಿರಿ ಕಥೆ ನೋಡಿ ಏನಂದ್ರು ಪ್ರೇಕ್ಷಕರು?

ಆದಿಪುರುಷ ರಾಮಾಯಣ ಮಹಾಕಾವ್ಯವನ್ನು ಆಧರಿಸಿದ ಮುಂಬರುವ ಭಾರತೀಯ ಹಿಂದೂ ಪೌರಾಣಿಕ ಚಲನಚಿತ್ರವಾಗಿದೆ. ಚಿತ್ರವನ್ನು ಓಂ ರಾವುತ್ ನಿರ್ದೇಶಿಸಿದ್ದಾರೆ ಮತ್ತು ಟಿ-ಸೀರೀಸ್ ಫಿಲ್ಮ್ಸ್ ಮತ್ತು ರೆಟ್ರೋಫಿಲ್ಸ್ ನಿರ್ಮಿಸಿದ್ದಾರೆ. ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾದ ಈ ಚಿತ್ರದಲ್ಲಿ ಪ್ರಭಾಸ್ ರಾಘವ ಪಾತ್ರದಲ್ಲಿ ಕಾಣಿಸಿಕೊಂಡರೆ, ಕೃತಿ ಸೇನನ್ ಜಾನಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಜಾನಕಿ ಪಾತ್ರಕ್ಕೆ ಅನುಷ್ಕಾ ಶೆಟ್ಟಿ, ಅನುಷ್ಕಾ ಶರ್ಮಾ, ಕೀರ್ತಿ ಸುರೇಶ್ ಮತ್ತು ಕಿಯಾರಾ ಅಡ್ವಾಣಿ ಹೆಸರು ಕೇಳಿ ಬಂದಿತ್ತಾದರೂ ಕೊನೆಗೆ ಕೃತಿ ಸೇನನ್ ಹೆಸರು ಫೈನಲ್ ಆಯಿತು. ಮತ್ತು ಬಾಲಿವುಡ್ ನಟ ಸೈಫ್ ಅಲಿ ಖಾನ್ ಲಂಕೇಶ್ ಆಗಿ ನಟಿಸಿದ್ದಾರೆ.

ಭಾರತೀಯ ಸಿನಿಮಾಗಳಲ್ಲಿ ಒಂದಾದ ಆದಿಪುರುಷ ಸಿನೆಮಾ
₹500 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿರುವ ಈ ಆದಿಪುರುಷ ಚಿತ್ರವು ಇದುವರೆಗೂ ತಯಾರಾದ ದುಬಾರಿ ಭಾರತೀಯ ಸಿನಿಮಾಗಳಲ್ಲಿ ಒಂದಾಗಿದೆ. ಆದಿಪುರುಷ ಸಿನಿಮಾವು 15 ಭಾಷೆಗಳಲ್ಲಿ ಬರಲಿದೆ. ಸಿನಿಮಾದ ಒಂದು ಕಾಡಿನ ದೃಶ್ಯಕ್ಕಾಗಿ 60 ಕೋಟಿ ರೂಪಾಯಿ ವೆಚ್ಚ ಮಾಡಿದ್ದಾರೆ ಎನ್ನಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಚಿತ್ರವನ್ನು ಆಗಸ್ಟ್ 11, 2022ರಂದು ಎಲ್ಲಾ ಭಾರತೀಯ ಚಿತ್ರಮಂದಿರಗಳಲ್ಲಿ ಮತ್ತು ಪ್ರಪಂಚದಾದ್ಯಂತ ಬಿಡುಗಡೆ ಮಾಡಲು ಯೊಜಿಸಲಾಗಿದೆ. ಜೊತೆಗೆ ಒಟಿಟಿ ವೇದಿಕೆಗಳಿಗೂ ಸಿನಿಮಾದ ಹಕ್ಕು ವಿತರಣೆಯನ್ನು ಮಾಡಲಾಗಿದೆ.

ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅವರನ್ನು ಪೌರಾಣಿಕ ಪಾತ್ರದಲ್ಲಿ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದು, ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ.
Published by:Ashwini Prabhu
First published: