Salaar: ಪ್ರಭಾಸ್ ಫ್ಯಾನ್ಸ್​ಗೆ ಗುಡ್ ನ್ಯೂಸ್; ‘ಸಲಾರ್‘ ಚಿತ್ರತಂಡದಿಂದ ಬಿಗ್ ಅನೌನ್ಸ್​ಮೆಂಟ್​

ಆಗಸ್ಟ್​ 15ರಂದು ಮಧ್ಯಾಹ್ನ 12.58ಕ್ಕೆ ದೊಡ್ಡ ಅನೌನ್ಸ್​ಮೆಂಟ್​ ಮಾಡುವುದಾಗಿ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆ ಘೋಷಿಸಿದೆ. ಚಿತ್ರದ ಅಪ್ಡೇಟ್ಸ್​ಗಾಗಿ ಕಾಯ್ತಿರೋ ಅಭಿಮಾನಿಗಳು ಖುಷ್​ ಆಗಿದ್ದಾರೆ. 

ಪ್ರಭಾಸ್​, ಪ್ರಶಾಂತ್ ನೀಲ್

ಪ್ರಭಾಸ್​, ಪ್ರಶಾಂತ್ ನೀಲ್

  • Share this:
ಪ್ರಭಾಸ್ (Prabhas)​ ಅಭಿಮಾನಿಗಳು ನೆಚ್ಚಿನ ನಟನ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್​ (Hombale Films) ಬ್ಯಾನರ್​ ನಲ್ಲಿ ಟಾಲಿವುಡ್​ ಸ್ಟಾರ್​ ನಟ ಪ್ರಭಾಸ್​ ಅಭಿನಯದ ಸಲಾರ್​ (Salaar  Movie) ಸಿನಿಮಾ ಸಿನಿಮಾ ರೆಡಿಯಾಗ್ತಿದೆ. ಚಿತ್ರ ನೋಡಲು ಅಭಿಮಾನಿಗಳು ಕಾದು ಕುಳಿತ್ತಿದ್ದಾರೆ. ಈ ಚಿತ್ರಕ್ಕೆ ಪ್ರಶಾಂತ್​ ನೀಲ್​ ನಿರ್ದೇಶನ (Director) ಮಾಡುತ್ತಿರುವುದರಿಂದ ನಿರೀಕ್ಷೆ ಡಬಲ್​ ಆಗಿದೆ. ಆಗಸ್ಟ್​ 15ರಂದು ಮಧ್ಯಾಹ್ನ 12.58ಕ್ಕೆ ದೊಡ್ಡ ಅನೌನ್ಸ್​ಮೆಂಟ್​ ಮಾಡುವುದಾಗಿ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆ ಘೋಷಿಸಿದೆ. 

ದೊಡ್ಡ ಅನೌನ್ಸ್​ಮೆಂಟ್​

ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರದ ಬಗ್ಗೆ ಹೆಚ್ಚಿನ ಅಪ್​ಡೇಟ್​ ತಿಳಿಯಬೇಕು ಅಭಿಮಾನಿಗಳು ಕಾದಿದ್ದಾರೆ. ಅದಕ್ಕಾಗಿ ಈಗ ದಿನಾಂಕ ಕೂಡ ನಿಗದಿ ಆಗಿದೆ. ಆಗಸ್ಟ್​ 15ರಂದು ಮಧ್ಯಾಹ್ನ 12.58ಕ್ಕೆ ದೊಡ್ಡ ಅನೌನ್ಸ್​ಮೆಂಟ್​ ಮಾಡುವುದಾಗಿ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆ ಘೋಷಿಸಿದೆ. ಚಿತ್ರದ ಅಪ್ಡೇಟ್ಸ್​ಗಾಗಿ ಕಾಯ್ತಿರೋ ಅಭಿಮಾನಿಗಳು ಖುಷ್​ ಆಗಿದ್ದಾರೆ.

ಪ್ರಶಾಂತ್​ ನೀಲ್ ಬಗ್ಗೆ ಅಭಿಮಾನಿಗಳಿಗೆ ಡಬಲ್​ ಭರವಸೆ

ಕೆಜಿಎಫ್: ಚಾಪ್ಟರ್​​ 2’ ಸಿನಿಮಾದ ಸಕ್ಸಸ್​ ಬಳಿಕ ಪ್ರಶಾಂತ್​ ನೀಲ್​ ಅವರು ಸಲಾರ್​ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರು ನಿರ್ದೇಶನ ಮಾಡುತ್ತಿರುವುದರಿಂದ ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಇದೆ. ಈಗಾಗಲೇ ಚಿತ್ರದ ಬಗ್ಗೆ ಅನೇಕ ಬಗೆಯ ಗುಸುಗುಸು ಹರಿದಾಡುತ್ತಿವೆ. ಚಿತ್ರತಂಡದ ಕಡೆಯಿಂದಲೇ ಆಗಸ್ಟ್​ 15ರಂದು ಹೊಸ ಮಾಹಿತಿ ಸಿಗಲಿದೆ. ಅದೇನು ಎಂಬುದನ್ನು ತಿಳಿಯಲು ಎಲ್ಲರೂ ಕಾಯುತ್ತಿದ್ದಾರೆ.

ಇದನ್ನೂ ಓದಿ: Salaar: ಶೀಘ್ರದಲ್ಲೇ ಅಭಿಮಾನಿಗಳಿಗೆ ಪ್ರಭಾಸ್ ಬಿಗ್​ ಟ್ರೀಟ್, ಸಲಾರ್‌ ಚಿತ್ರದಿಂದ ಹೊರಬಿತ್ತು ಬಿಗ್​ ಅಪ್‌ಡೇಟ್

ರಗಡ್​ ಗೆಟಪ್​ನಲ್ಲಿ ಪ್ರಭಾಸ್

ವಿಜಯ್​ ಕಿರಗಂದೂರು ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಪ್ರಭಾಸ್ ಅವರು ಸಂಪೂರ್ಣ ರಗಡ್​ ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಹೊರಬಂದಿರುವ ಪೋಸ್ಟರ್​ಗಳನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಈಗ ಹೊಸ ಅಪ್​ಡೇಟ್​ ತಿಳಿಯುವ ಸಮಯ ಹತ್ತಿರ ಆಗಿದೆ. ಈ ಚಿತ್ರದಲ್ಲಿ ಖ್ಯಾತ ನಟಿ ಶ್ರುತಿ ಹಾಸನ್​ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಬೃಹತ್​ ಸೆಟ್​ಗಳಲ್ಲಿ ಈ ಸಿನಿಮಾವನ್ನು ಚಿತ್ರೀಕರಿಸಲಾಗುತ್ತಿದೆ.





ಪ್ರಭಾಸ್​ ಅವರಿಗೆ ಇತ್ತೀಚಿನ ದಿನಗಳಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ‘ಬಾಹುಬಲಿ’ ಬಳಿಕ ಅವರ ನಟಿಸಿದ ‘ಸಾಹೋ’ ಮತ್ತು ‘ರಾಧೆ ಶ್ಯಾಮ್​’ ಚಿತ್ರಗಳು ಸೋಲು ಕಂಡಿದೆ. ಹಾಗಾಗಿ ಅವರು ‘ಸಲಾರ್​’ ಸಿನಿಮಾ ಮೂಲಕ 1 ಗೆಲುವು ಪಡೆಯಲೇ ಬೇಕು ಅನ್ನೋ ನಿರೀಕ್ಷೆಯಲ್ಲಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಬಹುತೇಕ ತಂತ್ರಜ್ಞರು ‘ಸಲಾರ್​’ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ರವಿ ಬಸ್ರೂರು ಸಂಗೀತ ನೀಡುತ್ತಿದ್ದು, ಭುವನ್​ ಗೌಡ ಛಾಯಾಗ್ರಹಣ ಮಾಡುತ್ತಿದ್ದಾರೆ. ಬಹುಕೋಟಿ ರೂಪಾಯಿ ಬಜೆಟ್​ನಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ.

ದನ್ನೂ ಓದಿ: Shiva Rajkumar: ಶಿವಣ್ಣ-ಗೀತಕ್ಕ ಲಗ್ನ ಪತ್ರಿಕೆಯಲ್ಲಿ ಏನಂತ ಹೆಸರು ಬರೆಸಿದ್ದರು ರಾಜಣ್ಣ? ವೈರಲ್ ಆಯ್ತು ದೊಡ್ಮನೆ ದೊಡ್ಮಗನ ಮದ್ವೆ ಇನ್ವಿಟೇಶನ್ 

ಬಿಡುಗಡೆಯಾಗುತ್ತಾ ಸಲಾರ್​ ಟೀಸರ್?








Published by:Pavana HS
First published: