News18 India World Cup 2019

Virat Kohli: ವಿರಾಟ್​ ಕೊಹ್ಲಿ ಪಡೆಯನ್ನು ಹಿಂದಿಕ್ಕಿದ ನಟ ಪ್ರಭಾಸ್​; ಹೇಗೆ ಗೊತ್ತಾ?

Actor Prabhas: ಆರಂಭದಲ್ಲಿ #INDvNZ ಹ್ಯಾಶ್​ಟ್ಯಾಗ್​ ಭಾರತೀಯ ಟ್ರೆಂಡಿಂಗ್​ನಲ್ಲಿ ಮೊದಲ ಸ್ಥಾನಕಾಯ್ದುಕೊಂಡಿತ್ತು. ಆದರೆ, ಸಾಹೋ ಟೀಸರ್ ರಿಲೀಸ್​ ಆದ ಕೆಲವೇ ಗಂಟೆಗಳಲ್ಲಿ ಬರೋಬ್ಬರಿ ಲಕ್ಷಕ್ಕೂ ಹೆಚ್ಚು ಟ್ವೀಟ್​ ಆಗಿದೆ.

Rajesh Duggumane | news18
Updated:June 14, 2019, 1:02 PM IST
Virat Kohli: ವಿರಾಟ್​ ಕೊಹ್ಲಿ ಪಡೆಯನ್ನು ಹಿಂದಿಕ್ಕಿದ ನಟ ಪ್ರಭಾಸ್​; ಹೇಗೆ ಗೊತ್ತಾ?
ವಿರಾಟ್​-ಪ್ರಭಾಸ್​
Rajesh Duggumane | news18
Updated: June 14, 2019, 1:02 PM IST
ತೆಲುಗು ಸೇರಿ ನಾಲ್ಕು ಭಾಷೆಗಳಲ್ಲಿ ತೆರೆಕಂಡಿರುವ ಸಾಹೋ ಟೀಸರ್​ ಟ್ರೆಂಡಿಂಗ್​ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಬಿಡುಗಡೆ ಆದ ಒಂದೇ ದಿನದಲ್ಲಿ ಸುಮಾರು ಒಂದುವರೆ ಕೋಟಿ ಜನರು ಈ ಟೀಸರ್​ ವೀಕ್ಷಣೆ ಮಾಡಿದ್ದಾರೆ. ಅಚ್ಚರಿ ಎಂದರೆ ನಿನ್ನೆ ವಿಶ್ವಕಪ್​ನಲ್ಲಿ ನಡೆಯಬೇಕಿದ್ದ ಭಾರತ-ನ್ಯೂಜಿಲೆಂಡ್ ಪಂದ್ಯದ ಖ್ಯಾತಿಯನ್ನು ಈ ಚಿತ್ರದ ಟೀಸರ್​ ಹಿಂದಿಕ್ಕಿದೆ.

ನಿನ್ನೆ ಬೆಳಗ್ಗೆ 11.15ರ ಸಮಾರಿಗೆ ‘ಸಾಹೋ’ ಟೀಸರ್​ ರಿಲೀಸ್​ ಆಗಿತ್ತು. ಟೀಸರ್​ ನೋಡಿದ ಸಾಕಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಸಾಕಷ್ಟು ಟ್ವೀಟ್​ ಕೂಡ ಮಾಡಿದ್ದರು. ಇನ್ನು ಮಧ್ಯಾಹ್ನ 3 ಗಂಟೆಗೆ ಭಾರತ-ನ್ಯೂಜಿಲೆಂಡ್​ ಪಂದ್ಯ ಆರಂಭಗೊಳ್ಳಬೇಕಿತ್ತು. ಆದರೆ ಮಳೆಯ ಕಾರಣ ಮ್ಯಾಚ್​ ವಿಳಂಬವಾಯಿತು. ಕೊನೆಗೆ ಮಳೆ ನಿಲ್ಲದ ಕಾರಣ ಪಂದ್ಯವನ್ನೇ ರದ್ದು ಮಾಡಲಾಯಿತು. ಈ ಬಗ್ಗೆಯೂ ಟ್ವಿಟ್ಟರ್​ನಲ್ಲಿ ಟ್ರೆಂಡ್​ ಆರಂಭಗೊಂಡಿತ್ತು.

ವಿಶೇಷ ಎಂದರೆ, ಆರಂಭದಲ್ಲಿ #INDvNZ ಹ್ಯಾಶ್​ಟ್ಯಾಗ್​ ಭಾರತೀಯ ಟ್ರೆಂಡಿಂಗ್​ನಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿತ್ತು. ಆದರೆ, ಸಾಹೋ ಟೀಸರ್ ರಿಲೀಸ್​ ಆದ ಕೆಲವೇ ಗಂಟೆಗಳಲ್ಲಿ ಬರೋಬ್ಬರಿ ಲಕ್ಷಕ್ಕೂ ಹೆಚ್ಚು ಟ್ವೀಟ್​ ಆಗಿದೆ. #SaahoTeaser ಹ್ಯಾಶ್​ಟ್ಯಾಗ್​ನಲ್ಲಿ ನಿನ್ನೆ ಅತಿ ಹೆಚ್ಚು ಟ್ವೀಟ್​ ಮಾಡಲಾಗಿದೆ. ಹಾಗಾಗಿ ಟ್ವಿಟ್ಟರ್​ನಲ್ಲಿ ಸಾಹೋ ಭಾರತ-ನ್ಯೂಜಿಲೆಂಡ್​  ಪಂದ್ಯವನ್ನು ಹಿಂದಿಕ್ಕಿದೆ.

ಇದನ್ನೂ ಓದಿ: ವೈಲೆಂಟ್​ ಆಗಿದ್ದಾರೆ ಪ್ರಭಾಸ್​ ಫ್ಯಾನ್ಸ್!​; 'ಸಾಹೋ' ಟೀಸರ್​ನಲ್ಲಿ ಆ್ಯಕ್ಷನ್​ಗಳದ್ದೇ ಕಾರುಬಾರು

‘ಸಾಹೋ’ ಚಿತ್ರದಲ್ಲಿ ಅದ್ಭುತ್​ ಆ್ಯಕ್ಷನ್​ ದೃಶ್ಯಗಳು, ಉತ್ತಮ ಛಾಯಾಗ್ರಹಣ, ಹಿನ್ನೆಲೆ ಸಂಗೀತ ಇರಲಿದೆ ಎಂದು ಅಭಿಮಾನಿಗಳು ಊಹಿಸಿದ್ದರು. ಟೀಸರ್​ ನೋಡಿದ ನಂತರದಲ್ಲಿ ಈ ಊಹೆ ನಿಜವಾಗಿದೆ. 'ಸಾಹೋ' ಟೀಸರ್​ನಲ್ಲಿ ಸಖತ್​ ಆ್ಯಕ್ಷನ್​ ದೃಶ್ಯಗಳಿದ್ದು, ಪ್ರಭಾಸ್​-ಶ್ರದ್ಧಾ ಕಪೂರ್​ ಕಾಂಬಿನೇಷನ್​ಅನ್ನು ಜನರು ಮೆಚ್ಚಿಕೊಂಡಿದ್ದಾರೆ. ಪ್ರಭಾಸ್​ ಬೇರೆ ಬೇರೆ ಲುಕ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಟೀಸರ್​ನಲ್ಲಿ ಹೆಚ್ಚು ಮಾತಿಲ್ಲ. ಹಾಗಾಗಿ ಆ್ಯಕ್ಷನ್​ ಹಾಗೂ ಹಿನ್ನೆಲೆ ಸಂಗೀತ ಹೆಚ್ಚು ಗಮನ ಸೆಳೆಯುತ್ತದೆ. 'ಏನು ನಿಮ್ಮ ಫ್ಯಾನ್ಸ್​ ಇಷ್ಟು ವೈಲೆಂಟ್​ ಆಗಿದ್ದಾರಲ್ಲ,' ಎನ್ನುವ ಪ್ರಶ್ನೆಗೆ ಪ್ರಭಾಸ್​ ನೀಡುವ ಉತ್ತರ ಅಭಿಮಾನಿಗಳ ಗಮನ ಸೆಳೆಯುತ್ತದೆ.
Loading...

ಇದನ್ನೂ ಓದಿ: ವಿಶ್ವಕಪ್​ನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಡೆಯಲ್ವಂತೆ!; ಇಲ್ಲಿದೆ ಕಾರಣ

First published:June 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...