ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ ಬಹು ನಿರೀಕ್ಷಿತ ಸಿನಿಮಾ ರಾಧೆ ಶ್ಯಾಮ್. ಸಾಹೋ ನಂತರ ಪ್ರಭಾಸ್ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ರಾಧೆ ಶ್ಯಾಮ್. ಈ ಚಿತ್ರದ ಬಗ್ಗೆ ತೆಲುಗು ಸಿನಿ ಪ್ರೇಕ್ಷಕರು ಹಾಗೂ ಪ್ರಭಾಸ್ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆಇದೆ. ರಾಧೆ ಶ್ಯಾಮ್ ಸಿನಿಮಾ ಕನ್ನಡ ಸೇರಿದಂತೆ 6 ಭಾಷೆಗಳಲ್ಲಿ ತೆರೆ ಕಾಣಲಿದ್ದು, ಎಲ್ಲ ಭಾಷೆಗಳಲ್ಲೂ ಪೋಸ್ಟರ್ ರಿಲೀಸ್ ಮಾಡಿದೆ ಚಿತ್ರತಂಡ. ರಾಧಾ ಕೃಷ್ಣ ಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ಪ್ರಭಾಸ್ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಅಭಿನಯಿಸುತ್ತಿದ್ದಾರೆ. ಈಗಾಗಲೇ ಸಿನಿಮಾದ ಮೋಷನ್ ಪೋಸ್ಟರ್ ಹಾಗೂ ಇತರೆ ಪೋಸ್ಟರ್ಗಳು ರಿಲೀಸ್ ಆಗಿದ್ದು, ಅಭಿಮಾನಿಗಳಿಗೆ ಸಿನಿಮಾ ಬಗ್ಗೆ ಇರುವ ನಿರೀಕ್ಷೆಯನ್ನು ಹೆಚ್ಚು ಮಾಡಿವೆ. ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ಪ್ರೇರಣಾ ಪಾತ್ರದಲ್ಲಿ ನಟಿಸಿದರೆ, ಪ್ರಭಾಸ್ ಪ್ರಭಾಸ್ ಜತೆ ನಟಿಸಲಿದ್ದಾರೆ. ಇದು ಪ್ರಭಾಸ್ ನಟನೆಯ 20ನೇ ಸಿನಿಮಾ ಆಗಿದೆ.
ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಿದ್ದ ಪ್ರಭಾಸ್ ಈಗ ಪ್ರೇಮಿಗಳ ದಿನಕ್ಕೆ ಮತ್ತೊಂದು ಸರ್ಪ್ರೈಸ್ ಪ್ಲಾನ್ ಮಾಡಿದ್ದಾರೆ. ಈಗಷ್ಟೆ ಚಿತ್ರತಂಡ ರಾಧೆ ಶ್ಯಾಮ್ ಸಿನಿಮಾ ಕುರಿತಾದ ಹೊಸ ಅಪ್ಡೇಟ್ ಒಂದನ್ನು ನೀಡಿದೆ.
View this post on Instagram
ಇದೊಂದು ಪಕ್ಕಾ ಲವ್ ಸ್ಟೋರಿಯಾಗಿದ್ದು, ಇದರಲ್ಲಿ ಪ್ರಭಾಸ್ ಲವರ್ ಬಾಯ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಪ್ರೀ ಟೀಸರ್ ವಿಡಿಯೋ ನೋಡಿದರೆ ಅದು ಖಚಿತವಾಗುತ್ತದೆ. ಪ್ರಭಾಸ್ ಅವರ ಪ್ರೀತಿ ತುಂಬಿದ ಹೃದಯ ಹಾಗೂ ಲವ್ ಸ್ಟೋರಿಯ ಕೆಲವು ತುಣುಕುಗಳು ಪ್ರೇಮಿಗಳ ದಿನದಂದು ರಿವೀಲ್ ಆಗಲಿವೆ.
View this post on Instagram
View this post on Instagram
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ