ಇತ್ತೀಚೆಗೆ ಭಾರತದ ಅನೇಕ ಸಿನಿಮಾಗಳು ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದರಲ್ಲೂ ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದ ‘ಬಾಹುಬಲಿ‘ ಸಿನಿಮಾ ರಷ್ಯಾ ದೇಶದ ಚಾನೆಲ್ವೊಂದರಲ್ಲಿ ಪ್ರಸಾರವಾಗಿದೆ. ವಿಶೇಷವೆಂದರೆ ರಷ್ಯಾ ಭಾಷೆಯಲ್ಲಿ ಈ ಸಿನಿಮಾ ಪ್ರಸಾರವಾಗಿದೆ.
ಪ್ರಭಾಸ್ ನಟನೆಯ ‘ಬಾಹುಬಲಿ‘ ಸಿನಿಮಾ ಭಾರತೀಯ ಚಿತ್ರರಂಗವನ್ನು ಉನ್ನತ ಸ್ಥಾನಕ್ಕೆ ಏರಿಸುವಂತೆ ಮಾಡಿತ್ತು. ಮಾತ್ರವಲ್ಲದೆ ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದಂತಹ ಈ ಸಿನಿಮಾ ವಿದೇಶದಲ್ಲೂ ಸೌಂಡ್ ಮಾಡಿತ್ತು. ವಿಶ್ವ ಮಟ್ಟದಲ್ಲಿ ಭಾರತೀಯ ಸಿನಿಮಾರಂಗವನ್ನು ಗುರುತಿಸುವ ಮಟ್ಟಿಗೆ ಯಶಸ್ವಿ ಕಂಡಿತ್ತು. ಸಾಕಷ್ಟು ಪ್ರಶಂಸೆಗಳು ಬಂದವು. ಇದೀಗ ರಷ್ಯಾನ್ನರು ‘ಬಾಹುಬಲಿ‘ ಸಿನಿಮಾವನ್ನು ನೋಡಿ ಫಿದಾ ಆಗಿದ್ದಾರೆ.
🎬 Indian cinema gains popularity in Russia. Look what Russian TV is broadcasting right now: the Baahubali with Russian voiceover! pic.twitter.com/VrIgwVIl3b
— Russia in India (@RusEmbIndia) May 28, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ