ನಟ ಪ್ರಭಾಸ್ ಅಭಿನಯದ ಆದಿಪುರುಶ್ ಚಿತ್ರದ ಬಜೆಟ್ ಎಷ್ಟು ಗೊತ್ತಾ?; ಮತ್ತೊಂದು ದಾಖಲೆ ಸಜ್ಜಾದ ಬಾಹುಬಲಿ
ಈ ಚಿತ್ರದಲ್ಲಿ ವಿಎಫ್ಎಕ್ಸ್ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಕೆ ಮಾಡಿಕೊಳ್ಳಲು ಚಿತ್ರತಂಡ ನಿರ್ಧರಿಸಿದೆ. ಭಾರತೀಯ ಚಲನಚಿತ್ರಗಳಲ್ಲಿ ಹಿಂದೆಂದೂ ನೋಡಿರದ ತಂತ್ರಜ್ಞಾನವನ್ನು ಈ ಚಿತ್ರ ಒಳಗೊಂಡಿರಲಿದೆ ಎಂಬ ಮಾಹಿತಿಯೂ ಇದೀಗ ಲಭ್ಯವಾಗುತ್ತಿದೆ.
ಚಲನಚಿತ್ರ ನಿರ್ಮಾಪಕ ಓಂ ರೌತ್ ತಮ್ಮ ಮುಂದಿನ ಚಲನಚಿತ್ರವನ್ನು ಘೋಷಿಸಿದ್ದು ಈ ಚಿತ್ರಕ್ಕೆ ಈಗಾಗಲೇ ಆದಿಪುರುಶ್ ಎಂದು ಹೆಸರಿಡಲಾಗಿದೆ. ಅಲ್ಲದೆ, ಈ ಚಿತ್ರದಲ್ಲಿ ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಷ್ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ವಿಚಾರವು ಬಹಿರಂಗವಾಗಿದೆ. 400 ಕೋಟಿ ಬಜೆಟ್ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹಾಗೂ ವಿಎಫ್ಎಕ್ಸ್ ವಿನ್ಯಾಸವೂ ಈಗಾಗಲೇ ಬಿಡುಗಡೆಯಾಗಿದೆ. ಅಲ್ಲದೆ, ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ಈ ಚಿತ್ರದಲ್ಲಿ ಖಳ ನಾಯಕನ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಉಲ್ಲೇಖಾರ್ಹ.
ಇತ್ತೀಚಿನ ವರದಿಯ ಪ್ರಕಾರ, ಈ ಚಿತ್ರ ಪೌರಾಣಿಕ ಕಥೆಯನ್ನು ಆಧರಿಸಿದ್ದು, 400 ಕೋಟಿ ರೂ.ಗಳ ಬೃಹತ್ ಬಜೆಟ್ನಲ್ಲಿ ಚಿತ್ರ ನಿರ್ಮಾಣಕ್ಕೆ ನಿರ್ದೇಶಕ ಓಂ ರೌತ್ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ದೇಶದಲ್ಲಿ ಎಲ್ಲಾ ಚಿತ್ರಮಂದಿರಗಳೂ ತೆರೆದ ನಂತರ ಈ ಚಿತ್ರ ಬಿಡುಗಡೆಯಾಗಲಿದ್ದು, ಈ ಚಿತ್ರದ ಬಿಡುಗಡೆ ಅತಿದೊಡ್ಡ ಮಟ್ಟದಲ್ಲಿ ಇರಲಿದೆ. ಕೋವಿಡ್ -19 ರ ನಂತರದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಅತಿದೊಡ್ಡ ಭಾರತೀಯ ಚಿತ್ರ ಇದಾಗಿದೆ ”ಎಂದು ಮೂಲವೊಂದು ಪಿಂಕ್ ವಿಲ್ಲಾಗೆ ತಿಳಿಸಿದೆ.
ಈ ಚಿತ್ರದಲ್ಲಿ ವಿಎಫ್ಎಕ್ಸ್ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಕೆ ಮಾಡಿಕೊಳ್ಳಲು ಚಿತ್ರತಂಡ ನಿರ್ಧರಿಸಿದೆ. ಭಾರತೀಯ ಚಲನಚಿತ್ರಗಳಲ್ಲಿ ಹಿಂದೆಂದೂ ನೋಡಿರದ ತಂತ್ರಜ್ಞಾನವನ್ನು ಈ ಚಿತ್ರ ಒಳಗೊಂಡಿರಲಿದೆ ಎಂಬ ಮಾಹಿತಿಯೂ ಇದೀಗ ಲಭ್ಯವಾಗುತ್ತಿದೆ.
ಟಿ-ಸೀರೀಸ್ ಚಿತ್ರದ ಹಕ್ಕುಗಳ ಬಗ್ಗೆ ಇನ್ನೂ ಪ್ರತಿಕ್ರಿಯಿಸದಿದ್ದರೂ, ನಿರ್ದೇಶಕ ಓಂ ರೌತ್ ಅವರು ಮುಂಬರುವ ಬಿಗ್ ಬಜೆಟ್ ಚಿತ್ರದ ಬಗ್ಗೆ ಪದೇ ಪದೇ ಮಾತನಾಡುತ್ತಾ ಉತ್ಸುಕರಾಗಿದ್ದಾರೆ. ಪಿಂಕ್ವಿಲ್ಲಾ ಅವರೊಂದಿಗೆ ಮಾತನಾಡಿದ ಅವರು, "ಲಾಕ್ಡೌನ್ ಸಮಯವನ್ನು ಬಳಸಿಕೊಂಡು ಚಿತ್ರದ ಸ್ಕ್ರಿಪ್ಟ್ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಲಾಗಿದೆ. ಈ ಚಿತ್ರದಲ್ಲಿ ನವೀನ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಅದ್ಭುತ ದೃಶ್ಯ ಕಾವ್ಯವನ್ನು ನಾವು ಸೃಷ್ಟಿಸಿ ನೋಡುಗರನ್ನು ಬೆರಗುಗೊಳಿಸಲಿದ್ದೇವೆ.
ನಟ ಪ್ರಭಾಸ್ ಇಡೀ ಭಾರತದಲ್ಲಿ ನಾವು ಹೊಂದಿರುವ ಅತಿದೊಡ್ಡ ಸೂಪರ್ ಸ್ಟಾರ್. ಆದ್ದರಿಂದ ನಾವು ಅವರಿಗೆ ಚಿತ್ರದ ಬಗ್ಗೆ ಹೇಳಿದಾಗ, ಅವರು ತುಂಬಾ ಸಂತೋಷ ಮತ್ತು ಆಸಕ್ತಿಯಿಂದ ಒಪ್ಪಿಕೊಂಡರು” ಎಂದು ತಿಳಿಸಿದ್ದಾರೆ.
ಈ ಚಿತ್ರದಲ್ಲಿ ಪ್ರಭಾಸ್ ರಾಮ್ ಪಾತ್ರವನ್ನು ನಿರ್ವಹಿಸಲಿದ್ದು, ಸೈಫ್ ಅಲಿ ಖಾನ್ ಮಾಸ್ಟರ್ ಮೈಂಡ್ ವಿಲನ್ ಆಗಿ ಪಾತ್ರ ನಿರ್ವಹಿಸಲಿದ್ದಾರೆ. ಈ ಹಿಂದೆ ಅನುಷ್ಕಾ ಶರ್ಮಾ ಈ ಚಿತ್ರದಲ್ಲಿ ನಾಯಕಿಯಾಗುವ ಕುರಿತು ಚರ್ಚೆಆಗಿತ್ತು. ಆದರೆ, ಇನ್ನೂ ಖಚಿತವಾಗಿಲ್ಲ ಎಂದು ತಿಳಿಸಿದ್ದಾರೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ