Prabhas: ಫಿಕ್ಸ್​ ಆಯ್ತು ಪ್ರಭಾಸ್​ ಅಭಿನಯದ ಆದಿಪುರುಷ್​ ಸಿನಿಮಾದ ರಿಲೀಸ್​ ದಿನಾಂಕ..!

Adipurush Release Date: ಇತ್ತೀಚೆಗಷ್ಟೆ ಆದಿಪುರುಷ್​ ಚಿತ್ರದ ಟೈಟಲ್​ ಪೋಸ್ಟರ್ ಹಾಗೂ ಮೋಷನ್​ ಪೋಸ್ಟರ್ ರಿಲೀಸ್​ ಆಗಿದ್ದು, ಪ್ರಭಾಸ್ ಅಭಿಮಾನಿಗಳು ಅದನ್ನು ಟ್ವಿಟರ್​ನಲ್ಲಿ ಟ್ರೆಂಡ್​ ಮಾಡಿದ್ದರು. ಈಗ ಈ ಸಿನಿಮಾದ ರಿಲೀಸ್​ ದಿನಾಂಕವನ್ನು ಪ್ರಕಟಿಸಿದೆ ಚಿತ್ರತಂಡ. 

ಪ್ರಭಾಸ್

ಪ್ರಭಾಸ್

  • Share this:
ಬಾಲಿವುಡ್​ನ ಖ್ಯಾತ ನಿರ್ದೇಶಕ ಓಂ ರಾವತ್​ ಹಾಗೂ ಬಾಹುಬಲಿ ಪ್ರಭಾಸ್​ ಅವರ ಕಾಂಬಿನೇಷನ್​ನಲ್ಲಿ ಬರುತ್ತಿರುವ ಬಹುನಿರೀಕ್ಷಿತ ಸಿನಿಮಾ ಆದಿಪುರುಷ್​. 'ಸಾಹೋ' ಸಿನಿಮಾದ ನಂತರ ಪ್ರಭಾಸ್ ನಟಿಸುತ್ತಿರುವ ಸಿನಿಮಾ ಇದಾಗಿದೆ. ಸದ್ಯ ಪ್ರಭಾಸ್​​ ಕೈತುಂಬ ಸಿನಿಮಾಗಳಿವೆ. 'ಸಾಹೋ' ಟಾಲಿವುಡ್​ನಲ್ಲಿ ನೆಲಕಚ್ಚಿದರೂ, ಹಿಂದಿ ಬಾಕ್ಸಾಫಿಸ್​ನಲ್ಲಿ ಹಿಟ್ ಎಂದು ಹೇಳುವಷ್ಟು ಕಲೆಕ್ಷನ್​ ಮಾಡಿತ್ತು. ಸದ್ಯ ಟಾಲಿವುಡ್​ ಡಾರ್ಲಿಂಗ್ ಕೈಯಲ್ಲಿ ಮೂರು ಪ್ಯಾನ್​ ಇಂಡಿಯಾ ಸಿನಿಮಾಗಳಿವೆ. ಅವುಗಳಲ್ಲಿ ಪ್ರಮುಖವಾದದ್ದು, ತಾನಾಜಿ ಖ್ಯಾತಿಯ ನಿರ್ದೇಶಕ ಓಂ ರಾವರ್​ ಅವರ 'ಆದಿಪುರುಷ್'​. ಈ ಚಿತ್ರದಲ್ಲಿ ಪ್ರಭಾಸ್​ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲಾಕ್​ಡೌನ್​ ಸಡಿಲಗೊಳ್ಳತ್ತಿದ್ದಂತೆಯೇ ನಿರ್ದೇಶಕ ಓಂ ರಾವತ್​ ಸಿನಿಮಾದ ಟೈಟಲ್​ ಪೋಸ್ಟರ್​ ಅನ್ನು ರಿಲೀಸ್​ ಮಾಡಿದ್ದಾರೆ. ಇದರಲ್ಲಿ ಪ್ರಭಾಸ್​ ಬಿಲ್ಲು ಬಾಣ ಹಿಡದು ನಿಂತಿದ್ದಾರೆ. ಇದರಿಂದಲೇ ತಿಳಿಯುತ್ತದೆ ಡಾರ್ಲಿಂಗ್​ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಂದು. ಇನ್ನು ಈ ಚಿತ್ರದ ಕುರಿತಾಗಿ ಕೆಲವೇ ನಿಮಿಷಗಳ ಹಿಂದೆಯಷ್ಟೆ ಚಿತ್ರತಂಡ ಮತ್ತೊಂದು ಪ್ರಕಟಣೆ ಮಾಡಿದೆ. 

ಇತ್ತೀಚೆಗಷ್ಟೆ ಆದಿಪುರುಷ್​ ಚಿತ್ರದ ಟೈಟಲ್​ ಪೋಸ್ಟರ್ ಹಾಗೂ ಮೋಷನ್​ ಪೋಸ್ಟರ್ ರಿಲೀಸ್​ ಆಗಿದ್ದು, ಪ್ರಭಾಸ್ ಅಭಿಮಾನಿಗಳು ಅದನ್ನು ಟ್ವಿಟರ್​ನಲ್ಲಿ ಟ್ರೆಂಡ್​ ಮಾಡಿದ್ದರು. ಈಗ ಈ ಸಿನಿಮಾದ ರಿಲೀಸ್​ ದಿನಾಂಕವನ್ನು ಪ್ರಕಟಿಸಿದೆ ಚಿತ್ರತಂಡ.ಇನ್ನೂ ಸಿನಿಮಾ ಚಿತ್ರೀಕರಣವೇ ಆರಂಭವಾಗಿಲ್ಲ. ಅದಾಗಲೇ ನಿರ್ದೇಶಕ ಓಂ ರಾವತ್​ ತಮ್ಮ ಚಿತ್ರದ ರಿಲೀಸ್​ ದಿನಾಂಕ ಪ್ರಕಟಿಸಿದ್ದಾರೆ. 2022 ಆಗಸ್ಟ್​ 11ಕ್ಕೆ ಆದಿಪುರುಷ್​ ಆಗಿ ತೆರೆ ಮೇಲೆ ಮಿಂಚಲಿದ್ದಾರೆ ಪ್ರಭಾಸ್​. ಅಲ್ಲದೆ ಈ ಸಿನಿಮಾದಲ್ಲಿ ಪ್ರಭಾಸ್​ಗೆ ನಾಯಕಿಯಾಗಿ ಯಾರು ನಟಿಸಲಿದ್ದಾರೆ ಅನ್ನೋದು ಇನ್ನೂ ನಿರ್ಧಾರವಾಗಿಲ್ಲ.

ಓಂ ರಾವತ್​ ನಿರ್ದೇಶನದಲ್ಲಿ ಪ್ರಭಾಸ್​ ನಟಿಸುತ್ತಿರುವ ಮೊದಲ ಚಿತ್ರ ಇದಾಗಿದ್ದು, ಇದರಲ್ಲಿ ವಿಲನ್​ ಪಾತ್ರದಲ್ಲಿ ಸೈಫ್​ ಅಲಿ ಖಾನ್​ ಕಾಣಿಸಿಕೊಳ್ಳಲಿದ್ದಾರೆ. ಆದಿಪುರುಷ್​ ಸಿನಿಮಾದಲ್ಲಿ ಪ್ರಭಾಸ್​ ರಾಮನಾದರೆ, ಸೈಫ್​ ಅಲಿ ಖಾನ್​ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ. 'ತಾನಾಜಿ' ಸಿನಿಮಾದಲ್ಲಿ ಉದಯ್​ಬಾನ್ ಸಿಂಗ್​ ರಾಥೋಡ್​ ಪಾತ್ರದಲ್ಲಿ ನಟಿಸಿದ್ದ ಸೈಫ್​ ಅಲಿ ಖಾನ್​, 'ಆದಿಪುರುಷ್'​ ಸಿನಿಮಾದಲ್ಲಿ ಲಂಕೇಶನಾಗಲಿದ್ದಾರಂತೆ. ಈ ಕುರಿತಾಗಿ ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ.

7 ಸಾವಿರ ವರ್ಷಗಳ ಹಿಂದೆ ಇದ್ದ ಬುದ್ಧಿವಂತ ರಾಕ್ಷಸ ರಾವಣನ ಪಾತ್ರದಲ್ಲಿ ಸೈಫ್​ ಅಲಿ ಖಾನ್​ ಕಾಣಿಸಿಕೊಳ್ಳಲಿದ್ದಾರೆ. ಪ್ರಭಾಸ್​ ಅಭಿನಯಿಸುತ್ತಿರುವ 22ನೇ ಸಿನಿಮಾ ಇದಾಗಿದ್ದು, ಇದನ್ನು ಟಿ-ಸಿರೀಸ್​ನ ಭೂಷನ್​ ಕುಮಾರ್​, ಕ್ರಿಷನ್​ ಕುಮಾರ್​, ಓಂ ರಾವತ್​, ಪ್ರಸಾದ್ ಸುತಾರ್​ ಹಾಗೂ ರಾಜೇಶ್ ನಾಯರ್​ ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ:Netrikann Teaser: ಸಿನಿಮಾ ಬಗೆಗಿನ ಕುತೂಲಹ ಹೆಚ್ಚಿಸುತ್ತೆ ನಯನತಾರಾ ಅಭಿನಯದ ನೆಟ್ರಿಕನ್​ ಟೀಸರ್​..!

ಪ್ರಭಾಸ್​ ರಾಮನ ಪಾತ್ರಕ್ಕಾಗಿ ಸಾಕಷ್ಟು ವರ್ಕೌಟ್ ಮಾಡುತ್ತಿದ್ದಾರಂತೆ. ಜೊತೆ ಬಿಲ್ಲು ವಿದ್ಯೆ ಸಹ ಕಲಿಯುತ್ತಿದ್ದಾರಂತೆ. ಸೀತೆಯಾಗಿ ಈ ಸಿನಿಮಾದಲ್ಲಿ ಕಿಯಾರಾ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 2021ರಲ್ಲಿ ಚಿತ್ರ ಸೆಟ್ಟೇರಲಿದೆ ಎನ್ನಲಾಗುತ್ತಿದೆ.ಇನ್ನು ಇದನ್ನು ಹೊರತುಪಡಿಸಿ, ರಾಧಾಕೃಷ್ಣ ನಿರ್ದೇಶನದ 'ರಾಧೆ ಶ್ಯಾಮ್'​ ಸಿನಿಮಾದಲ್ಲಿ ಪ್ರಭಾಸ್​ ಜೊತೆ ಪೂಜೆ ಹೆಗ್ಡೆ ನಟಿಸಿದ್ದು, ಇದರ ಚಿತ್ರೀಕರಣ ಇಟಲಿಯಲ್ಲಿ ನಡೆಯುತ್ತಿದೆ. 'ರಾಧೆ ಶ್ಯಾಮ್'​ ನಂತರ ಪ್ರಭಾಸ್ ಹಾಗೂ ದೀಪಿಕಾ ಪಡುಕೋಣೆ ಅಭಿನಯಿಸಲಿರುವ ತ್ರಿಭಾಷೀಯ ಚಿತ್ರ ಸೆಟ್ಟೇರಲಿದ್ದು, ಇದನ್ನು ನಾಗ್​ ಅಶ್ವಿನ್​ ನಿರ್ದೇಶನ ಮಾಡಲಿದ್ದಾರೆ.
Published by:Anitha E
First published: