ಕೆಜಿಎಫ್ 2 (KGF 2).. ಸದ್ಯಕ್ಕೆ ಇಡೀ ವಿಶ್ವವೇ ಚರ್ಚೆ ಮಾಡುತ್ತಿರುವ ಸಿನಿಮಾ. ಪ್ರಶಾಂತ್ ನೀಲ್(Prashanth Neel) ನಿರ್ದೇಶನದ ಕೆಜಿಎಫ್ (KGF-1) ಭಾಗ 1 ಪ್ಯಾನ್ ಇಂಡಿಯಾ ಸಿನಿಮಾವಾಯಿತು. ಜೊತೆಗೆ ವಿಶ್ವವೇ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದ್ದರು. ರಾಕಿ ಭಾಯ್ ಯಶ್ (Yash) ಕೂಡ ಈ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್(Pan India Star) ಆಗಿದ್ದಾರೆ. ಸಿನಿಮಾ ರಂಗದಲ್ಲಿ ಬಾರಿ ಸದ್ದು ಮಾಡಿ ಇತಿಹಾಸ ಸೃಷ್ಟಿಸಿದ ಕೆಜಿಎಫ್ ಮುಂದುವರಿದ ಭಾಗವಾಗಿ ಕೆಜಿಎಫ್-2 (KGF -2) ಇನ್ನೇನು ಅಬ್ಬರಿಸಲು ಸಿದ್ಧವಾಗಿ ನಿಂತಿದೆ. ಈಗಾಗಲೇ ವಿದೇಶಗಳಲ್ಲಿ ಕೆಜಿಎಫ್ 2 ಟಿಕೆಟ್ ಸೋಲ್ಡ್(KGF 2 Ticket Sold) ಔಟ್ ಆಗಿದೆ. ಕೆಜಿಎಫ್ 2 ರಿಲೀಸ್ಗೆ ದಿನಗಣನೆ ಶುರುವಾಗಿದೆ. ಈ ಮಧ್ಯೆ ಚಿತ್ರತಂಡದಿಂದ ಬಿಗ್ ನ್ಯೂಸ್ ಸಿಕ್ಕಿದೆ. ಆದರೆ, ಇದು ಇನ್ನೂ ಕನ್ಫರ್ಮ್ ಆಗಿಲ್ಲ. ಆದರೆ,ಯಶ್(Yash) ಹಾಗೂ ಪ್ರಭಾಸ್(Prabhas) ಅಭಿಮಾನಿಗಳು ಈ ವಿಚಾರ ಕೇಳಿ ಫುಲ್ ಖುಷ್ ಆಗಿದ್ದಾರೆ.
ಕೆಜಿಎಫ್ 2 ಜೊತೆ ‘ಸಲಾರ್’ ಟೀಸರ್ ರಿಲೀಸ್!
ಹೌದು, ಇದು ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಭಾಸ್ ಅಭಿಮಾನಿಗಳು ಖುಷಿ ಪಡುವ ವಿಚಾರ. ಕೆಜಿಎಫ್ 2 ಸಿನಿಮಾದ ಜೊತೆ ಪ್ರಭಾಸ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾ ಟೀಸರ್ ದರ್ಶನವಾಗಲಿದೆ ಎಂದು ಹೇಳುತ್ತಿದ್ದಾರೆ. ಈ ಹಿಂದೆಯೂ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಕೊನೆ ಸಿನಿಮಾ ಜೇಮ್ಸ್ ಜೊತೆ ಶಿವರಾಜ್ಕುಮಾರ್ ಅಭಿನಯದ ‘ಬೈರಾಗಿ’ ಸಿನಿಮಾ ಟೀಸರ್ ರಿಲೀಸ್ ಆಗಿತ್ತು. ಇತ್ತೀಚೆಗೆ ಸಲಾರ್ ಸಿನಿಮಾದಿಂದ ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ಹೀಗಾಗಿ ಕೆಜಿಎಫ್ 2 ಸಿನಿಮಾದಲ್ಲಿ ಟೀಸರ್ ಬರುತ್ತೆ ಅಂತ ಹೇಳಲಾಗುತ್ತಿದೆ.
ಪ್ರಭಾಸ್ಗೆ ಹಿಟ್ ಕೊಡುತ್ತೆ ಸಲಾರ್ ಅಂತಿದ್ದಾರೆ ಫ್ಯಾನ್ಸ್!
ಸಲಾರ್ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿದೆ. ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದೆಲ್ಲದರ ನಡುವೆ ಬಾಹುಬಲಿ 2 ಬಳಿಕ ಪ್ರಭಾಸ್ ಹಿಟ್ ಕಂಡಿಲ್ಲ. ಸಾಹೋ ಹಾಗೂ ಇತ್ತೀಚೆಗೆ ರಿಲೀಸ್ ಆಗಿದ್ದ ರಾಧೆ-ಶ್ಯಾಮ್ ಸಿನಿಮಾ ಕೂಡ ನೆಲಕಚ್ಚಿತ್ತು. ಹೀಗಾಗಿ ಹಿಟ್ಗಾಗಿ ಕಾಯುತ್ತಿರುವ ಪ್ರಭಾಸ್ಗೆ ಸಲಾರ್ ಮತ್ತೆ ಹೆಸರು ತಂದುಕೊಡಲಿದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಮೈನ್ ಥಿಯೇಟರ್ಗಳಲ್ಲೇ ಕೆಜಿಎಫ್ 2 ಪರಭಾಷೆಯಲ್ಲಿ ರಿಲೀಸ್! ಯಾಕ್ ಬೇಕಿತ್ತು ಎಂದ ಫ್ಯಾನ್ಸ್
ಗಾಂಧಿನರಗರದ ಮೈನ್ ಚಿತ್ರಮಂದಿರದಲ್ಲೇ ಪರಭಾಷೆ ಸಿನಿಮಾ!
‘ಕೆಜಿಎಫ್ 2’ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಬೆಂಗಳೂರಿನಲ್ಲಿ ಕನ್ನಡ ಮಾತ್ರವೇ ಅಲ್ಲದೆ ತೆಲುಗು, ಹಿಂದಿ, ತಮಿಳು ಆವೃತ್ತಿಗಳನ್ನೂ ಬಿಡುಗಡೆ ಮಾಡಲು ಚಿತ್ರತಂಡ ರೆಡಿಯಾಗಿದೆ. ಗಾಂಧಿನಗರದ ಭೂಮಿಕನಲ್ಲಿ 'ಕೆಜಿಎಫ್ 2' ತೆಲುಗು ಆವೃತ್ತಿ ಬಿಡುಗಡೆ ಆಗಲಿದೆ. ಅದೇ ಅಭಿನಯದಲ್ಲಿ ಹಿಂದಿ ಆವೃತ್ತಿ ಬಿಡುಗಡೆ ಆಗಲಿದೆ. ಅನುಪಮ ಮತ್ತು ತ್ರಿವೇಣಿಯಲ್ಲಿ ಕನ್ನಡ ಭಾಷೆಯಲ್ಲಿಯೇ ಸಿನಿಮಾ ಬಿಡುಗಡೆ ಆಗಲಿದೆ. ಈ ವಿಚಾರ ಇದೀಗ ಕನ್ನಡಿಗರ ಕಣ್ಣು ಕೆಂಪಾಗಿಸಿದೆ.
ಇದನ್ನೂ ಓದಿ: ಕನ್ನಡ ಸಿನಿಮಾ ಕಥೆ ಕದ್ದು `ಬೀಸ್ಟ್’ ಅಂದ್ರಾ? ವಿಷ್ಣು ದಾದಾ ಪಾತ್ರವೇ ವಿಜಯ್ ಚಿತ್ರಕ್ಕೆ ಸ್ಫೂರ್ತಿ!
12 ಗಂಟೆಯಲ್ಲಿ 5000 ಸಾವಿರ ಟಿಕೆಟ್
ಹೌದು, ಕೆಜಿಎಫ್ ಸಿನಿಮಾ ಬಂದಮೇಲೆ ಹೊರ ದೇಶಗಳಲ್ಲೂ ಕನ್ನಡ ಸಿನಿಮಾಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚಿದೆ. ದಕ್ಷಿಣ ಭಾರತದ ಸಿನಿಮಾಗಳು ವಿದೇಶಗಳಲ್ಲಿ ಹೇಗೆ ದುಡ್ಡು ಮಾಡುತ್ತವೆ ಅನ್ನುವುದಕ್ಕೆ ಇತ್ತೀಚೆಗೆ ತೆರೆಕಂಡಿರುವ ‘ಆರ್ಆರ್ಆರ್’ ಸಿನಿಮಾಗಿಂತ ದೊಡ್ಡ ಉದಾಹರಣೆ ಬೇಕಿಲ್ಲ. ಇದೀಗ ನಮ್ಮ ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್ ಸರದಿ. ಕೆಜಿಎಫ್ 2 ನೋಡಲು ಇಡೀ ವಿಶ್ವದ ಜನರು ಕಾಯುತ್ತಿದ್ದಾರೆ. ಹೌದು, ಯುಕೆಯಲ್ಲಿ ಕೇವಲ 12 ಗಂಟೆಗಳಲ್ಲಿ 5000 ಸಾವಿರ ಟಿಕೆಟ್ ಸೋಲ್ಡ್ಔಟ್ ಆಗಿದೆ. ಇದನ್ನು ನೋಡಿದರೆ ತಿಳಿಯುತ್ತೆ ರಾಕಿಭಾಯ್ನ ಹವಾ ಎಷ್ಟಿದೆ ಅಂತ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ