Prabhas: ಮತ್ತೆ ಒಂದಾಗ್ತಿದ್ದಾರೆ ಪ್ರಭಾಸ್​-ರಾಜಮೌಳಿ! ಮತ್ತೊಂದು ಇತಿಹಾಸ ಸೃಷ್ಟಿಸಲಿದ್ದಾರೆ `ಬಾಹುಬಲಿ’ ಜೋಡಿ

ಸಿನಿಮಾ ಮಾಂತ್ರಿಕ ಎಸ್​.ಎಸ್ ರಾಜಮೌಳಿ (S.S Rajamouli) ನಿದೇರ್ಶನದಲ್ಲಿ ಮೂಡಿಬಂದಿದ್ದ ಸಿನಿಮಾ ಇತಿಹಾಸ ಬರೆದಿತ್ತು. ‘ಬಾಹುಬಲಿ’ ಮುಂದೆ ದೊಡ್ಡ ದೊಡ್ಡ ಹಾಲಿವುಡ್​ (Hollywood) ಸಿನಿಮಾಗಳೇ ಮಂಡಿಯೂರಿ ಕೂತಿತ್ತು. ಅಷ್ಟರ ಮಟ್ಟಿಗೆ ಪ್ರಭಾಸ್​-ರಾಜಮೌಳಿ ಕಾಂಬಿನೇಷನ್ (Combination)​ ಕಮಾಲ್​ ಮಾಡಿತ್ತು.

ಪ್ರಭಾಸ್​, ರಾಜಮೌಳಿ

ಪ್ರಭಾಸ್​, ರಾಜಮೌಳಿ

  • Share this:
‘ಬಾಹುಬಲಿ’ (Baahubali) ಈ ಹೆಸರು ಕೇಳಿಸಿಕೊಂಡರೆ ರೋಮಾಂಚನವಾಗುತ್ತೆ. ಕಣ್ಣ ಮುಂದೆ 6 ಅಡಿ ಎತ್ತರದ ಅಜಾನುಬಾಹು ಪ್ರಭಾಸ್ (Prabhas)​ ಬರುತ್ತಾರೆ. ಹೇಗೆ ನಾವು ಹಳೇ ಕಾಲದ ರಾಜಕುಮಾರರನ್ನು ನೆನೆಸಿಕೊಂಡರೆ, ನಮ್ಮ ಕಣ್ಣು ಮುಂದೆ ಅಣ್ಣಾವ್ರೇ ಬರುತ್ತಾರೋ, ಹಾಗೇ ಬಾಹುಬಲಿ ಎಂದಾಕ್ಷಣ ಪ್ರಭಾಸ್ ನೆನಪಿಗೆ ಬರುತ್ತಾರೆ. ಇಡೀ ವಿಶ್ವ(World)ವೇ ದಕ್ಷಿಣ ಭಾರತದತ್ತ ತಿರುಗಿನೋಡುವಂತೆ ಮಾಡಿದ ಸಿನಿಮಾ ‘ಬಾಹುಬಲಿ’. ಸಿನಿಮಾ ಮಾಂತ್ರಿಕ ಎಸ್​.ಎಸ್ ರಾಜಮೌಳಿ (S.S Rajamouli) ನಿದೇರ್ಶನದಲ್ಲಿ ಮೂಡಿಬಂದಿದ್ದ ಸಿನಿಮಾ ಇತಿಹಾಸ ಬರೆದಿತ್ತು. ‘ಬಾಹುಬಲಿ’ ಮುಂದೆ ದೊಡ್ಡ ದೊಡ್ಡ ಹಾಲಿವುಡ್​ (Hollywood) ಸಿನಿಮಾಗಳೇ ಮಂಡಿಯೂರಿ ಕೂತಿತ್ತು. ಅಷ್ಟರ ಮಟ್ಟಿಗೆ ಪ್ರಭಾಸ್​-ರಾಜಮೌಳಿ ಕಾಂಬಿನೇಷನ್ (Combination)​ ಕಮಾಲ್​ ಮಾಡಿತ್ತು. ಇದಾದ ಬಳಿಕ ಬಾಹುಬಲಿ 2 ಕೂಡ ಸೂಪರ್​ ಡೂಪರ್ ಹಿಟ್​ ಆಯ್ತು.

ಮತ್ತೆ ಒಂದಾಗ್ತಿದ್ದಾರೆ ‘ಬಾಹುಬಲಿ’ ಜೋಡಿ!

ಇದಾದ ಬಳಿಕ ಮತ್ತೆ ಪ್ರಭಾಸ್​ ಹಾಗೂ ನಿರ್ದೇಶಕ ರಾಜಮೌಳಿ ಕಾಂಬಿನೇಷನ್​ನಲ್ಲಿ ಸಿನಿಮಾ ಬರುತ್ತಾ ಅಂತ ಅಭಿಮಾನಿಗಳು ಕಾದು ಕೂತಿದ್ದರು. ಇದೀಗ ಅದಕ್ಕೆಲ್ಲಾ ಉತ್ತರ ಸಿಕ್ಕಿದೆ. ಡಾರ್ಲಿಂಗ್​ ಪ್ರಭಾಸ್​ ಹಾಗೂ ರಾಜಮೌಳಿ ಮತ್ತೊಂದು ಸಿನಿಮಾ ಮಾಡಲಿದ್ದಾರೆ. ಪ್ರಭಾಸ್ ಸದ್ಯಕ್ಕೆ  ತಮ್ಮ ಹೊಸ ಸಿನಿಮಾ 'ರಾಧೆ-ಶ್ಯಾಮ್' ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಮಾರ್ಚ್ 11 ರಂದು ರಾಧೆ ಶ್ಯಾಮ್​ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ಪ್ರಭಾಸ್ ಪ್ರಸ್ತುತ ನಿರತರಾಗಿದ್ದಾರೆ.

ರಾಜಮೌಳಿ ಜೊತೆ ನಟಿಸೋಕೆ ಇಷ್ಟ ಎಂದ ಪ್ರಭಾಸ್​!

ರಾಧೆ-ಶ್ಯಾಮ್​ ಸಿನಿಮಾದ ಪ್ರಚಾರದ ವೇಳೆ ಪ್ರಭಾಸ್ ಅವರಿಗೆ ಪ್ರಶ್ನೆಯೊಂದನ್ನು ಕೇಳಲಾಯ್ತು. ನೀವು ಮತ್ತೆ ರಾಜಮೌಳಿ ಕಾಂಬಿನೇಷನ್​ ಒಂದಾಗುತ್ತಾ? ಮತ್ತೆ ಅವರ ಜೊತೆ ಯಾವಾಗ ಸಿನಿಮಾ ಮಾಡುತ್ತೀರಾ ಅಂತ ಪ್ರಭಾಸ್​​ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಪ್ರಭಾಸ್​ ನಾನು ರಾಜಮೌಳಿ ಅವರ ಜೊತೆ ಕೆಲಸ ಮಾಡಲು ಇಷ್ಟ ಪಡುತ್ತೇನೆ. ಶೀಘ್ರದಲ್ಲೇ ರಾಜಮೌಳಿ ಜೊತೆ ಕೆಲಸ ಮಾಡುತ್ತೇನೆ ಎಂದು ಪ್ರಭಾಸ್ ಹೇಳಿದ್ದಾರೆ. ಈ ವಿಷಯ ತಿಳಿದ ಪ್ರಭಾಸ್​ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ.

ಇದನ್ನೂ ಓದಿ: ಜನಾರ್ದನ ರೆಡ್ಡಿ ಮಗನ ಜಬರ್​ದಸ್ತ್​ ಎಂಟ್ರಿ.. ಫಸ್ಟ್​​ ಸಿನಿಮಾದಲ್ಲಿ ಫೇಮಸ್​ ನಟಿಮಣಿಯರ ಜೊತೆ ರೊಮ್ಯಾನ್ಸ್!

ಮಹೇಶ್​ ಬಾಬು ಜೊತೆಗೆ ಸಿನಿಮಾ ಮಾಡ್ತಿರೋ ರಾಜಮೌಳಿ!

ಹೌದು, ಮಹೇಶ್‌ ಬಾಬು ಜೊತೆಗಿನ ಸಿನಿಮಾ ಮುಗಿಸಿದ ಬಳಿಕ ರಾಜಮೌಳಿ, ಪ್ರಭಾಸ್‌ಗಾಗಿ ಹೊಸ ಸಿನಿಮಾ ನಿರ್ದೇಶನ ಮಾಡಲಿದ್ದಾರಂತೆ. ಈ ಬಗ್ಗೆ ಮಾತುಕತೆ ಈಗಾಗಲೇ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. rರಾಜಮೌಳಿ ಸಹ ಸಖತ್ ಬ್ಯುಸಿಯಾಗಿದ್ದಾರೆ. ಪ್ರಸ್ತುತ 'RRR' ಸಿನಿಮಾ ಬಿಡುಗಡೆಗೆ ತಯಾರಾಗಿರುವ ಅವರು ಇದರ ಬಳಿಕ ಮಹೇಶ್ ಬಾಬು ಅವರೊಟ್ಟಿಗೆ ಹೊಸ ಸಿನಿಮಾ ಮಾಡಲಿದ್ದಾರೆ. ಇದಾದ ಬಳಿಕ ಬಾಲಿವುಡ್​ನ ಬಜರಂಗಿ ಭಾಯ್​ಜಾನ್​ ಸಲ್ಮಾನ್ ಖಾನ್​ ಜೊತೆಗೆ ಸಿನಿಮಾ ಮಾಡಲಿದ್ದಾರೆ. ಇದಾದ ಬಳಿಕ ಮತ್ತೆ ಪ್ರಭಾಸ್​ ಜೊತೆ ಸಿನಿಮಾ ಮಾಡಲಿದ್ದಾರಂತೆ.

ಇದನ್ನೂ ಓದಿ: Pushpa ಖ್ಯಾತಿಯ ನಟಿಯನ್ನು ಆಂಟಿ ಎಂದ ನೆಟ್ಟಿಗ, ಹಾಟ್ ಫೋಟೊ ಮೂಲಕ ಅನಸೂಯ ಕೊಟ್ರು ಉತ್ತರ

ಪ್ರಭಾಸ್​ ಕೈಯಲ್ಲಿವೆ ಬಿಗ್​ ಬಜೆಟ್​ ಸಿನಿಮಾಗಳು!

ಪ್ರಭಾಸ್​ ಈಗ ಸಖತ್  ಬ್ಯುಸಿಯಾಗಿರುವ ನಟ. ಮಾರ್ಚ್ 11ಕ್ಕೆ ರಾಧೆ ಶ್ಯಾಮ್​ ರಿಲೀಸ್​ ಆಗುತ್ತಿದೆ. ಇನ್ನೂ ಕೆಜಿಎಫ್​ ನಿರ್ದೇಶನ ಪ್ರಶಾಂತ್​ ನೀಲ್​ ನಿರ್ದೇಶನದ ಸಲಾರ್​ ಸಿನಿಮಾದ ಶೂಟಿಂಗ್ ಇನ್ನೂ ಬಾಕಿ ಇದೆ. ಇದಾದ ಬಳಿಕ ಬಿಗ್ ಬಜೆಟ್​ ಸಿನಿಮಾ ‘ಆದಿಪುರುಷ್​’ ನಲ್ಲಿ ರಾಮನ ಅವತಾರವೆತ್ತಿದ್ದಾರೆ. ಅಷ್ಟೇ ಅಲ್ಲದೇ ಬಾಲಿವುಡ್​ ಬಿಗ್​ಬಿ ಅಮಿತಾಭ್​ ಬಚ್ಚನ್​ ಹಾಗೂ ದೀಪಿಕಾ ಪಡುಕೋಣೆ ಅವರೊಟ್ಟಿಗೆ ಪ್ರಾಜೆಕ್ಟ್​ ಕೆ ಸಿನಿಮಾದ  ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಇದೆಲ್ಲ ಆದ ಬಳಿಕವಷ್ಟೇ ರಾಜಮೌಳಿ ಅವರ ಮತ್ತೊಂದು ಸಿನಿಮಾ ಮಾಡಲಿದ್ದಾರೆ ಪ್ರಭಾಸ್​​.
Published by:Vasudeva M
First published: