Prabhas: ಬಾಹುಬಲಿ ಪ್ರಭಾಸ್​ ಹೊಸ ಸಿನಿಮಾಗೆ ಕಿಕ್​ ಸ್ಟಾರ್ಟ್​: ಇಲ್ಲಿದೆ ಚಿತ್ರೀಕರಣದ ಸೆಟ್​ನ ಫೋಟೋ ..!

Prabhas New Movie: ನಟ ಪ್ರಭಾಸ್​ ಅಭಿನಯದ 'ಸಾಹೋ' ಬಾಕ್ಸಾಫಿಸ್​ನಲ್ಲಿ ಮುಗ್ಗರಿಸಿದ ನಂತರ ಡಾರ್ಲಿಂಗ್​ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಬೇಸರವಾಗಿತ್ತು. ಭಾರೀ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ ಈ ಮಟ್ಟಕ್ಕೆ ನೆಲ ಕಚ್ಚುತ್ತೆ ಎಂದು ಯಾರೂ ಊಹಿಸಿರಲಿಲ್ಲ. ಆದರೆಈ ಸೋಲಿನಿಂದ ಹೊರ ಬರಲು ಪ್ರಯತ್ನಿಸುತ್ತಿರುವ ಪ್ರಭಾಸ್​ಗೆ ಈಗ ಹೊಸದೊಂದು ಚಿತ್ರ ಸಿಕ್ಕಿದೆ. 

ಪ್ರಭಾಸ್

ಪ್ರಭಾಸ್

  • Share this:
ಸುಜಿತ್​ ನಿರ್ದೇಶನದ 'ಸಾಹೋ' ಸಿನಿಮಾದ ನಂತರ ಪ್ರಭಾಸ್​ ಒಂದು ಹಿಟ್​ ಸಿನಿಮಾಗಾಗಿ ಕಾಯುತ್ತಿದ್ದರು. ಅವರ ಕೈಯಲ್ಲಿ ಸದ್ಯಕ್ಕೆ ಎರಡು ಸಿನಿಮಾಗಳಿವೆ. ಇವುಗಳಲ್ಲಿ ಒಂದರ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ.

ಹೌದು, ನಟ ಪ್ರಭಾಸ್​ ಅಭಿನಯದ 'ಸಾಹೋ' ಬಾಕ್ಸಾಫಿಸ್​ನಲ್ಲಿ ಮುಗ್ಗರಿಸಿದ ನಂತರ ಡಾರ್ಲಿಂಗ್​ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಬೇಸರವಾಗಿತ್ತು. ಭಾರೀ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ ಈ ಮಟ್ಟಕ್ಕೆ ನೆಲ ಕಚ್ಚುತ್ತೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ಈ ಸೋಲಿನಿಂದ ಹೊರ ಬರಲು ಪ್ರಯತ್ನಿಸುತ್ತಿರುವ ಪ್ರಭಾಸ್​ಗೆ ಈಗ ಹೊಸದೊಂದು ಚಿತ್ರ ಸಿಕ್ಕಿದೆ.

Prabhas shared his new movie set photo in his Instagram
ನಟ ಪ್ರಭಾಸ್​


ನಟಿಸುತ್ತಿರುವ ಹೊಸ ಸಿನಿಮಾದ ಸೆಟ್​ನಿಂದ ಫೋಟೋ ಒಂದನ್ನು ಪ್ರಭಾಸ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ತನ್ನ ಹೊಸ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಅದರಲ್ಲಿ ಭಾಗಿಯಾಗುತ್ತಿರುವುದಾಗಿ ಬರೆದುಕೊಂಡಿದ್ದಾರೆ. 
View this post on Instagram
 

Elated to share that I’m resuming shooting for my upcoming film. Looking forward to a fun schedule.


A post shared by Prabhas (@actorprabhas) on


ಪ್ರಭಾಸ್​ ಹಂಚಿಕೊಂಡಿರುವ ಈ ಚಿತ್ರದಲ್ಲಿ ದೊಡ್ಡದಾದ ಹಾಲ್​ನಲ್ಲಿ ಪಿಯಾನೋ ಇದು ಅದರ ಮುಂದೆ ಪ್ರಭಾಸ್​ ನಿಂತಿದ್ದಾರೆ. ಇನ್ನು ಗೋಡೆಯ ಮೇಲೆ ಫೋಟೋ ಫ್ರೇಮ್​ಗಳ ಸಾಲುಗಳು... ಇದನ್ನೆಲ್ಲ ನೋಡಿದರೆ, ಇದು ಸಹ ಬಿಗ್​ ಬಜೆಟ್​ ಸಿನಿಮಾ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.

ಇದನ್ನೂ ಓದಿ: Suhana Khan: ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ ಶಾರುಖ್​ ಖಾನ್​ ಮಗಳ ಸೆಲ್ಫಿ..!

ಪ್ರಭಾಸ್​ ಅಭಿನಯಿಸುತ್ತಿರುವ ಈ ಸಿನಿಮಾಗೆ 'ಜಾನ್​' ಎಂದು ಶೀರ್ಷಿಕೆ ಫಿಕ್ಸ್​ ಮಾಡಲಾಗಿದೆಯಂತೆ. ರಾಧಾಕೃಷ್ಣ ನಿರ್ದೇಶನದ ಈ ಸಿನಿಮಾದ ಮುಹೂರ್ತ ಯುರೋಪ್​ನಲ್ಲಿ ನೆರವೇರಿತ್ತು. ಈ ಚಿತ್ರದಲ್ಲಿ ಪೂಜಾ ಹೆಗ್ಡೆ ಪ್ರಭಾಸ್​ಗೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

Rashmika Mandanna: ಐಟಿ ದಾಳಿ ನಂತರ ಸಾಮಾಜಿಕ ಜಾಲತಾಣದಲ್ಲಿ ಮತ್ತಷ್ಟು ಸಕ್ರಿಯರಾದ ರಶ್ಮಿಕಾ ಮಂದಣ್ಣ

First published: