Radhe Shyam: ಕೃಷ್ಣ ಜನ್ಮಾಷ್ಟಮಿಯಂದು ಪ್ರಭಾಸ್ ಅಭಿನಯದ ರಾಧೆ ಶ್ಯಾಮ್​ ಚಿತ್ರತಂಡದ​ ಕಡೆಯಿಂದ ಸಿಕ್ತು ಭರ್ಜರಿ ಗಿಫ್ಟ್​

Prabhas-Pooja Hegde: ಈಗಾಗಲೇ ರಾಧೆ ಶ್ಯಾಮ್​ ಸಿನಿಮಾದ ಪೋಸ್ಟರ್​ಗಳು ಹಾಗೂ ವಿಡಿಯೋ ರಿಲೀಸ್ ಆಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಈ ಸಿನಿಮಾ ನೋಡಲು ಪ್ರಭಾಸ್​ ಅಭಿಮಾನಿಗಳು ಕಾತರರಾಗಿದ್ದಾರೆ. ಹೀಗಿರುವಾಗಲೇ ಕೃಷ್ಣ ಜನ್ಮಾಷ್ಟಮಿಯಂದು ರಾಧೆ ಶ್ಯಾಮ್​ ಚಿತ್ರತಂಡ ಈ ಉಡುಗೊರೆ ನೀಡಿದೆ.

ರಾಧೆ ಶ್ಯಾಮ್​ ಸಿನಿಮಾದ ಹೊಸ ಪೋಸ್ಟರ್​

ರಾಧೆ ಶ್ಯಾಮ್​ ಸಿನಿಮಾದ ಹೊಸ ಪೋಸ್ಟರ್​

  • Share this:
ಟಾಲಿವುಡ್​ ಡಾರ್ಲಿಂಗ್​ ಅಭಿಮಾನಿಗಳ ಪಾಲಿನ ಬಾಹುಬಲಿ ಪ್ರಭಾಸ್​  (Prabhas)ಕೈ ತುಂಬ ಸಿನಿಮಾಗಳಿವೆ. ಒಂದು ಕಡೆ ಹೊಂಬಾಳೆ ಫಿಲಂಸ್​ ನಿರ್ಮಾಣದ ಪ್ಯಾನ್​ ಇಂಡಿಯಾ ಸಿನಿಮಾ ಸಲಾರ್ (Salaar)​, ಮತ್ತೊಂದು ಕಡೆ ಓಂ ರಾವತ್​ ನಿರ್ದೇಶನದಲ್ಲಿ ಆದಿಪುರುಷ್​  (Adhipurush)ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇವುಗಳನ್ನು ಹೊರತುಪಡಿಸಿದರೆ ದೀಪಿಕಾ ಪಡುಕೋಣೆ  (Deepika Padukone) ಹಾಗೂ ಅಮಿತಾಭ್​  (Amithabh Bachchan)ಜತೆ ಮತ್ತೊಂದು ಪ್ಯಾನ್ ಚಿತ್ರ ಸೆಟ್ಟೇರಿದೆ. ಇಷ್ಟು ಬ್ಯುಸಿಯಾಗಿರು ಡಾರ್ಲಿಂಗ್​ ಪ್ರಭಾಸ್​ ಕೃಷ್ಣ ಜನ್ಮಾಷ್ಟಮಿಯಂದು ಅಭಿಮಾನಿಗಳಿಗೆ ಒಂದು ಗಿಫ್ಟ್​ ಕೊಟ್ಟಿದ್ದಾರೆ. ರಾಧಾ ಕೃಷ್ಣ ಕುಮಾರ್​ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ಸಿನಿಮಾ ರಾಧೆ ಶ್ಯಾಮ್ (Radhe Shyam) ​. ಈ ಸಿನಿಮಾದಲ್ಲಿ ಪ್ರಭಾಸ್ ಮತ್ತೆ ರೊಮ್ಯಾಂಟಿಕ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ರೊಮ್ಯಾಂಟಿಕ್ ಲವ್​ ಸ್ಟೋರಿ ಆಗಿದ್ದು, ಇದರಲ್ಲಿ ನಾಯಕಿಯಾಗಿ ಕರಾವಳಿ ಬೆಡಗಿ ಪೂಜಾ ಹೆಗ್ಡೆ (Pooja Hegde) ನಟಿಸಿದ್ದಾರೆ. 

ಕೊರೋನಾ ಲಾಕ್​ಡೌನ್​ ಆರಂಭವಾದಾಗಲೇ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಇಟಲಿಗೆ ಹೋಗಿ ಅಲ್ಲಿ ರಾಧೆ ಶ್ಯಾಮ್​ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಭಾರತದಲ್ಲಿ ಲಾಕ್​ಡೌನ್​ ಆಗುತ್ತಿದ್ದಂತೆಯೇ ದೇಶಕ್ಕೆ ಮರಳಿದ್ದರು. ಹೀಗೆ ಲಾಕ್​ಡೌನ್​ ಅನ್​ಲಾಕ್​ ಆದಾಗಲೆಲ್ಲ ಚಿತ್ರದ ಶೂಟಿಂಗ್ ಮಾಡಲಾಗುತ್ತಿತ್ತು.


View this post on Instagram


A post shared by Prabhas (@actorprabhas)


ಇನ್ನು, ಈಗಾಗಲೇ ಈ ಸಿನಿಮಾದ ಪೋಸ್ಟರ್​ಗಳು ಹಾಗೂ ವಿಡಿಯೋ ರಿಲೀಸ್ ಆಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಈ ಸಿನಿಮಾ ನೋಡಲು ಪ್ರಭಾಸ್​ ಅಭಿಮಾನಿಗಳು ಕಾತರರಾಗಿದ್ದಾರೆ. ಹೀಗಿರುವಾಗಲೇ ಕೃಷ್ಣ ಜನ್ಮಾಷ್ಟಮಿಯಂದು ರಾಧೆ ಶ್ಯಾಮ್​ ಚಿತ್ರತಂಡ ಈ ಉಡುಗೊರೆ ನೀಡಿದೆ.
View this post on Instagram


A post shared by Prabhas (@actorprabhas)


ರಾಧೆ ಶ್ಯಾಮ್​ ಸಿನಿಮಾದಲ್ಲಿ ಪ್ರಭಾಸ್ ವಿಕ್ರಮಾದಿತ್ಯ ಹಾಗೂ ಪೂಜಾ ಹೆಗ್ಡೆ ಪ್ರೇರಣಾ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಕೃಷ್ಣ ಜನ್ಮಾಷ್ಟಮಿಯಂದು ಈ ಸಿನಿಮಾದ ಹೊಸ ಪೋಸ್ಟರ್ ಹಂಚಿಕೊಂಡಿರುವ ಪ್ರಭಾಸ್​, ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. ಜತೆಗೆ ವಿಕ್ರಮಾದಿತ್ತ ಹಾಗೂ ಪ್ರೇರಣಾ ಪ್ರೀತಿಗೆ ಹೊಸ ಅರ್ಥ ನೀಡುವ ಬಗ್ಗೆ ತಿಳಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Drone Prathap: ಅಪೂರ್ವ ಸಂಗಮ: ತಮ್ಮ ಡ್ರೋನ್ ಪ್ರತಾಪನ ಭೇಟಿಯಾದ ಡ್ರೋನ್ ಪ್ರಥಮ್​..!

ಪ್ರಭಾಸ್​ ಅವರು ಸದ್ಯ ಆದಿಪುರುಷ್​ ಸಿನಿಮಾಗಾಗಿ ತಯಾರಿ ನಡೆಸುತ್ತಿದ್ದಾರೆ. ಅವರು ಹಾಡಿನ ಚಿತ್ರೀಕರಣ ಆರಂಭವಾಗುವ ಮೊದಲು ಕೃತಿ ಸನೋನ್​ ಜತೆ ಡ್ಯಾನ್ಸ್​ ಅಭ್ಯಾಸ ಮಾಡಲು ಇತ್ತೀಚೆಗೆ ಕಾಣಿಸಿಕೊಂಡಿದ್ದರು. ಈ ವೇಳೆ ಪಾಪರಾಜಿಗಳ ಕ್ಯಾಮೆರಾಗೆ ಸೆರೆ ಸಿಕ್ಕಿದ್ದರು. ಪ್ರಭಾಸ್​ ಅವರು ಆದಿಪುರುಷ್​ ಸಿನಿಮಾದಲ್ಲಿ ರಾಮನ ಪಾತ್ರಧಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ. ಪ್ರಭಾಸ್​ ಸದ್ಯ ಮೀಸೆ ಬಿಟ್ಟಿದ್ದು, ಕೊಂಚ ತೂಕ ಹೆಚ್ಚಿಸಿಕೊಂಡಿದ್ದಾರೆ. ಡ್ಯಾನ್ಸ್​ ಪ್ರಾಕ್ಟೀಸ್​ಗೆ ಬಂದಾಗ ಪ್ರಭಾಸ್​ ಅವರು ಮೇಕಪ್​ ಇಲ್ಲದೆ ಕಾಣಿಸಿಕೊಂಡಿದ್ದಾರೆ.

ಟ್ರೋಲ್​ ಆದ ಪ್ರಭಾಸ್​

ಪ್ರಭಾಸ್​ ಅವರು ಮೇಕಪ್ ಇಲ್ಲದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದನ್ನು ನೋಡಿದ ಟ್ರೋಲಿಗರು ಪ್ರಭಾಸ್​ ಅವರಿಗೆ ವಯಸ್ಸಾಯಿತು, ಅಂಕಲ್​, ವಡಾ ಪಾವ್​ ತರ ಇದ್ದಾರೆ ಎಂದೆಲ್ಲ ಕಮೆಂಟ್​ ಮಾಡುವ ಮೂಲಕ ಟ್ರೋಲ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: Janmashtami 2021: ಯಶೋಧೆಯಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ಖ್ಯಾತಿಯ ನಟಿ ಸಪ್ತಾ ಪಾವೂರು

ಒಂದು ಕಡೆ ಟ್ರೋಲಿಗರು ಹೀಗೆಲ್ಲ ಹಿಗ್ಗಾಮುಗ್ಗಾ ಟ್ರೋಲ್​ ಮಾಡುತ್ತಿದ್ದರೆ, ಅಭಿಮಾನಿಗಳು ಮಾತ್ರ ಪ್ರಭಾಸ್ ಪರ ನಿಂತಿದ್ದಾರೆ. ಈಗ ಟ್ರೋಲ್ ಮಾಡುವವರು ರಾಧೆ ಶ್ಯಾಮ್​ ರಿಲೀಸ್ ಆದ ನಂತರ ಬಾಯಿ ಮುಚ್ಚಿಕೊಳ್ಳುತ್ತಾರೆ ಎಂದೆಲ್ಲ ಹೇಳುವ ಮೂಲಕ ನೆಚ್ಚಿನ ನಟನ ಬೆಂಬಲಕ್ಕೆ ನಿಂತಿದ್ದಾರೆ.ದೀಪಿಕಾ ಪಡುಕೋಣೆ ಹಾಗೂ ಅಮಿತಾಭ್​ ಅವರ ಜೊತೆಗಿನ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಪ್ರಶಾಂತ್​ ನೀಲ್​ ನಿರ್ದೇಶನದಲ್ಲಿ ಹೊಂಬಾಳೆ ಫಿಲಂಸ್​ ನಿರ್ಮಿಸುತ್ತಿರುವ ಸಲಾರ್​ ಚಿತ್ರೀಕರಣ ಸಹ ನಡೆಯುತ್ತಿದೆ. ಈ ಸಿನಿಮಾದಲ್ಲಿ ಪ್ರಭಾಸ್​ಗೆ ನಾಯಕಿಯಾಗಿ ಶ್ರುತಿ ಹಾಸನ್​ ನಟಿಸಿದ್ದಾರೆ.
Published by:Anitha E
First published: