Saif Ali Khan ಮನೆಗೆ ಬಿರಿಯಾನಿ ಕಳುಹಿಸಿದ Prabhasನ ಹಾಡಿ ಹೊಗಳಿದ ಕರೀನಾ ಕಪೂರ್..

Prabhas Sends Biriyani To saif Ali Khan : ಆದಿಪುರುಷ ಚಿತ್ರದಲ್ಲಿ ಸೈಫ್ ಮೊದಲ ಬಾರಿಗೆ ಪ್ರಭಾಸ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವು ರಾಮಾಯಣದ ರೂಪಾಂತರವಾಗಿದೆ ಎಂದು ಹೇಳಲಾಗಿದೆ. ಕಥಾವಸ್ತುವು ಕೆಟ್ಟದ್ದರ ವಿರುದ್ಧ ಒಳ್ಳೆಯದರ ವಿಜಯದ ಸುತ್ತ ಸುತ್ತುತ್ತದೆ ಎಂದು ಮೂಲಗಳು ತಿಳಿಸಿವೆ.

ಕರೀನಾ ಕಪೂರ್ ಪೋಸ್ಟ್​

ಕರೀನಾ ಕಪೂರ್ ಪೋಸ್ಟ್​

  • Share this:
ಪ್ರಭಾಸ್(Prabhas) ಶೀಘ್ರದಲ್ಲೇ ಸೈಫ್ ಅಲಿ ಖಾನ್(Saif Ali Khan) ಅವರ  ಬಹು ನಿರೀಕ್ಷೆ ಚಿತ್ರ ಆದಿಪುರುಷ್​ನಲ್ಲಿ(Adi Purush)  ದೊಡ್ಡ ಪರದೆಯ ಮೇಲೆ  ಟಕ್ಕರ್​ ಕೊಡಲಿದ್ದಾರೆ. ಆದರೆ ತೆರೆಯ ಹೊರಗೆ ಇಬ್ಬರ ನಡುವೆ  ಉತ್ತಮ ಬಾಂಧವ್ಯದ ಹೊರತಾಗಿ ಹೊರತಾಗಿ ಬೇರೇನೂ ಇಲ್ಲ. ಬಾಹುಬಲಿ ಖ್ಯಾತಿಯ ನಟನಿಗೆ ವಿವಿಧ ಬಗೆಯ ಆಹಾರಗಳನ್ನು ಸೇವನೆ ಮಾಡುವುದು ಎಂದರೆ ಬಹಳಷ್ಟು ಇಷ್ಟ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ.  ಅವರನ್ನು ಆಹಾರಪ್ರಿಯರೆಂದು ಹೇಳುತ್ತಾರೆ.  ಇತ್ತೀಚೆಗೆ ಪ್ರಭಾಸ್ ಬಾಲಿವುಡ್  ಸೈಫ್‌ಗೆ ಭರ್ಜರಿ ಬಿರಿಯಾನಿ ಭೋಜನವನ್ನು ಮಾಡಿ ಕಳುಹಿಸಿರುವುದು ಬಹಳ ಸುದ್ದಿಯಲ್ಲಿದೆ.  

ಪ್ರಭಾಸ್ ಸಹನಟ ಮತ್ತು ಅವರ ನಟಿ ಪತ್ನಿ ಕರೀನಾ ಕಪೂರ್ ಖಾನ್ ಗಾಗಿ ಬಿರಿಯಾನಿ ತುಂಬಿದ ಪಾತ್ರೆಗಳನ್ನು ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.  ಪ್ರಭಾಸ ಕಳುಹಿಸಿರುವ ಈ  ಪ್ರೀತಿಯ ಉಡುಗೊರೆಯಿಂದ ಸಂತೋಷಗೊಂಡ ಬೇಬೋ ಕರೀನಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಪ್ರಭಾಸ್ ಬಗ್ಗೆ ಹಾಡಿ ಹೊಗಳಿದ್ದಾರೆ.  ಬಾಹುಬಲಿ ನಿಮಗೆ ಬಿರಿಯಾನಿ ಕಳುಹಿಸಿದಾಗ, ಅದು ಅತ್ಯುತ್ತಮವಾಗಿರಬೇಕು. ಈ  ಪ್ರೀತಿಯ ಊಟಕ್ಕೆ @actorprabhas ಧನ್ಯವಾದಗಳು ಎಂದು ಬರೆದಿಕೊಂಡಿರುವ ಅವರು, ಅದಕ್ಕೆ  ಕೆಂಪು ಹೃದಯದ ಎಮೋಜಿಯನ್ನು ಹಾಕಿದ್ದಾರೆ. ಜೊತೆಗೆ ಆ ಪೋಸ್ಟ್​ಗೆ  #ಆದಿಪುರುಷ ಎಂದು ಸಹ ಟ್ಯಾಗ್ ಮಾಡಿದ್ದಾರ.

ಪ್ರಭಾಸ್ ಬಿರಿಯಾನಿ ಜೊತೆಗೆ ರೈತ, ಸಲಾಡ್ ಮತ್ತು ಇತರ ಕೆಲವು ಆಹಾರ ಪದಾರ್ಥಗಳನ್ನು ಕಳುಹಿದ್ದರು.

ಇದನ್ನೂ ಓದಿ: ಲವ್​ ಸ್ಟೋರಿ ಚಿತ್ರಕ್ಕೆ ಪೈರಸಿ ಕಾಟ- ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾದ ಚಿತ್ರತಂಡ..

ಆದಿಪುರುಷ ಚಿತ್ರದಲ್ಲಿ ಸೈಫ್ ಮೊದಲ ಬಾರಿಗೆ ಪ್ರಭಾಸ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವು ರಾಮಾಯಣದ ರೂಪಾಂತರವಾಗಿದೆ ಎಂದು ಹೇಳಲಾಗಿದೆ. ಕಥಾವಸ್ತುವು ಕೆಟ್ಟದ್ದರ ವಿರುದ್ಧ ಒಳ್ಳೆಯದರ ವಿಜಯದ ಸುತ್ತ ಸುತ್ತುತ್ತದೆ ಎಂದು ಮೂಲಗಳು ತಿಳಿಸಿವೆ. ಹಾಗೂ  ಖಳನಾಯಕನ ಹಿಂದಿನ ಕಥೆಯನ್ನು ನಮಗೆ ನೀಡುತ್ತದೆ ಎಂದು ವದಂತಿಗಳಿವೆ.

ಓಂ ರೌತ್ ನಿರ್ದೇಶನದ ಈ ಚಿತ್ರವು  2022 ರ ಬಿಡುಗಡೆ ಆಗಬೇಕಿರುವ ಪ್ಯಾನ್-ಇಂಡಿಯಾ ಚಿತ್ರವಾಗಿದ್ದು, ಹಿಂದಿ, ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಇತರ ವಿದೇಶಿ ಭಾಷೆಗಳಲ್ಲಿ ಸಹ ಬಿಡುಗಡೆಯಾಗುತ್ತಿದೆ.  '

ಆದಿಪುರುಷ' ಹೊರತಾಗಿ, ಪ್ರಭಾಸ್ ತನ್ನ  ಪ್ರೇಮ ಕಥೆಯಾಧಾರಿತ 'ರಾಧೆ ಶ್ಯಾಮ್' ಬಿಡುಗಡೆಗೆ ಕಾಯುತ್ತಿದ್ದಾರೆ, ಅದರಲ್ಲಿ ಪೂಜಾ ಹೆಗ್ಡೆ ಕೂಡ ನಟಿಸುತ್ತಿದ್ದಾರೆ.  ಅಲ್ಲದೇ ಪೂಜಾ ಹೆಗ್ಡೆ ಸರಿಯಾದ ಸಮಯಕ್ಕೆ ಶೂಟಿಂಗ್ ಬರುತ್ತಿರಲಿಲ್ಲ, ವೃತ್ತಿಪರತೆ ಇರಲಿಲ್ಲ ಎಂಬ ವದಂತಿಗಳು ಕೇಳಿ ಬಂದಿದ್ದವು. ಆದರೆ ಚಿತ್ರತಂಡ ಅವೆಲ್ಲ ಸುಳ್ಳು ಎಂದು ವದಂತಿಗಳನ್ನು ತಳ್ಳಿ ಹಾಕಿದೆ.

ಇದನ್ನೂ ಓದಿ: ಕ್ರೀಡಾ ಕ್ಷೇತ್ರದಲ್ಲಿ Gender Test - Rashmi Rocket ಚಿತ್ರದ ಟ್ರೈಲರ್​ಗೆ ಉತ್ತಮ ಪ್ರತಿಕ್ರಿಯೆ..

ಮತ್ತೊಂದೆಡೆ, ಸೈಫ್ ಬೇಬೊ  ಮಕ್ಕಳಾದ ತೈಮೂರ್ ಮತ್ತು ಜೆಹ್ ಜೊತೆ ಪ್ರವಾಸಗಳನ್ನು ಮಾಡುವ ಮೂಲಕ ಉತ್ತಮವಾದ ಸಮಯವನ್ನು ಕಳೆಯುತ್ತಿದ್ದಾರೆ.  ಕಳೆದ ವಾರದ ಅಂತ್ಯದಲ್ಲಿ ಪಟೌಡಿ ಕುಟುಂಬವು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿತು, ಮಾಲ್ಡೀವ್ಸ್‌ನಿಂದ ಮರಳಿ ಬಂದಿದ್ದಾರೆ.
Published by:Sandhya M
First published: