Salaar: ಸಲಾರ್ ಚಿತ್ರಕ್ಕೆ ಪ್ರಭಾಸ್ ಆಯ್ಕೆ- ಕನ್ನಡ ಸಿನಿಪ್ರಿಯರ ಕೆಂಗಣ್ಣು; ಕೆಜೆಎಫ್-2ಗೆ ಬೀಳಲಿದೆಯಾ ಹೊಡೆತ?

KGF Chapter 2: ಬೆಳೆಯಲು ಸ್ಯಾಂಡಲ್​ವುಡ್​, ಕನ್ನಡ ಜನ ಬೇಕು. ನಂತರ ಬೇಡ ಎನ್ನುತ್ತಿರುವ ಸಿನಿ ಪ್ರಿಯರು, ಈ ಸಲಾರ್ ಸಿನಿಮಾವನ್ನೇ ನಾವೇ ಫ್ಲಾಪ್​ ಮಾಡಿಸುತ್ತೇವೆ ಎಂದು ಟ್ವೀಟ್​ ಮಾಡುತ್ತಿದ್ದಾರೆ. ಇದನ್ನೆಲ್ಲ ನೋಡುತ್ತಿದ್ದರೆ, ಪ್ರಶಾಂತ್​ ನೀಲ್​ ಅವರ ಮೇಲೆಇರುವ ಸಿಟ್ಟು, ಕೆಜಿಎಫ್​ ಚಾಪ್ಟರ್​ 2 ಚಿತ್ರದ ಮೇಲೂ ಪರಿಣಾಮ ಬೀರಲಿದೆಯಾ ಅನ್ನೋ ಸಂಶಯ ಈಗ ಮೂಡುತ್ತಿದೆ.

ಪ್ರಶಾಂತ್​ ನೀಲ್​ ನಿರ್ದೇಶನದ ಸಲಾರ್ ಚಿತ್ರದಲ್ಲಿ ಪ್ರಭಾಸ್​

ಪ್ರಶಾಂತ್​ ನೀಲ್​ ನಿರ್ದೇಶನದ ಸಲಾರ್ ಚಿತ್ರದಲ್ಲಿ ಪ್ರಭಾಸ್​

  • Share this:
ಇತ್ತೀಚೆಗಷ್ಟೆ ಪ್ಯಾನ್​ ಇಂಡಿಯಾ ಸಿನಿಮಾಗಳ ಬಗ್ಗೆ ಜಗ್ಗೇಶ್​ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಟೀಕೆಗೊಳಗಾಗಿದ್ದರು. ಪ್ಯಾನ್​ ಇಂಡಿಯಾ ಸಿನಿಮಾಗಳಿಂದ ನಮ್ಮವರಿಗೆ ಅವಕಾಶ ತಪ್ಪುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು ನವರಸ ನಾಯಕ. ಇದಕ್ಕೆ ತಕ್ಕಂತೆ ನಿನ್ನೆಯಷ್ಟೆ ಕೆಜಿಎಫ್​ ಸಿನಿಮಾ ನಿರ್ಮಿಸುತ್ತಿರುವ ಹೊಂಬಾಳೆ ಫಿಲಂಸ್​ ಪ್ರಭಾಸ್​ ಅವರನ್ನು ತಮ್ಮ ಮುಂದಿನ ಚಿತ್ರ ಸಲಾರ್​ಗೆ ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದೆ. ನಿನ್ನೆಯಷ್ಟೆ ಈ ಚಿತ್ರದ ಪೋಸ್ಟರ್​ ರಿಲೀಸ್​ ಮಾಡಿದೆ. ಪ್ರಭಾಸ್​ ಅವರ ಸಲಾರ್​ ಪೋಸ್ಟರ್​ ರಿಲೀಸ್​ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಹೊಂಬಾಳೆ ಫಿಲಂಸ್​ ಹಾಗೂ ಪ್ರಶಾಂತ್​ ನೀಲ್​ ಅವರ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ಕನ್ನಡದಲ್ಲಿ ನಿಮಗೆ ಒಳ್ಳೆಯ ನಟರು ಸಿಗಲಿಲ್ಲವೆ. ನೀವೂ ಹೀಗೆ ಬೇರೆ ಭಾಷೆಯ ನಾಯಕ ನಟರಿಗೆ ಅವಕಾಶ ನೀಡಲು ಆರಂಭಿಸಿದ್ದೀರಿ. ಇದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಶಾಂತ್​ ಹಾಗೂ ಹೊಂಬಾಳೆ ಫಿಲಂಸ್​ ಮಾಡಿರುವ ಪೋಸ್ಟ್​ಗೆ ಖಾರವಾಗಿ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ. 

ಪ್ರಭಾಸ್​ ಸಿನಿಮಾವನ್ನು ಕನ್ನಡದಲ್ಲಿ ಹಿಟ್​ ಮಾಡಿಸಿ ನೋಡೋಣ, ಕೆಜಿಎಫ್​ ಸಿನಿಮಾದಲ್ಲಿ ಮಾಡಿದ ಹಣವನ್ನು ಸಲಾರ್​ನಲ್ಲಿ ಕಳೆದುಕೊಳ್ಳುವಿರಿ ಎಂದು ವ್ಯಂಗ್ಯ ಮಾಡುತ್ತಿದ್ದಾರೆ.










ಇನ್ನು ಈ ಸಿನಿಮಾದ ಪೋಸ್ಟರ್​ ಹಂಚಿಕೊಂಡಿರುವ ಶ್ರೀಮುರಳಿ ಅವರಿಗೂ ನೆಟ್ಟಿಗರು ಖಾರವಾಗಿ ಕಮೆಂಟ್​ ಮಾಡುತ್ತಿದ್ದಾರೆ. ಇನ್ನು ಶ್ರೀಮುರಳಿ ಪ್ರಶಾಂತ್​ ನೀಲ್​ ಹಾಗೂ ಹೊಂಬಾಳೆ ಫಿಲಂಸ್​ ಅನ್ನು ಟ್ಯಾಗ್​ ಮಾಡಿದ್ದ ಟ್ವೀಟ್​ ಡಿಲೀಟ್​ ಮಾಡಿದ್ದು, ಅದಕ್ಕೂ ನೆಟ್ಟಿಗರು ಈಗ ಟ್ರೋಲ್​ ಮಾಡುತ್ತಿದ್ದಾರೆ.





ಇನ್ನು, ಬೆಳೆಯಲು ಸ್ಯಾಂಡಲ್​ವುಡ್​, ಕನ್ನಡ ಜನ ಬೇಕು. ನಂತರ ಬೇಡ ಎನ್ನುತ್ತಿರುವ ಸಿನಿ ಪ್ರಿಯರು, ಈ ಸಲಾರ್ ಸಿನಿಮಾವನ್ನೇ ಫ್ಲಾಪ್​ ಮಾಡಿಸುತ್ತೇವೆ ಎಂದು ಟ್ವೀಟ್​ ಮಾಡುತ್ತಿದ್ದಾರೆ. ಇದನ್ನೆಲ್ಲ ನೋಡುತ್ತಿದ್ದರೆ, ಪ್ರಶಾಂತ್​ ನೀಲ್​ ಅವರ ಮೇಲೆ ಇರುವ ಸಿಟ್ಟು, ಕೆಜಿಎಫ್​ ಚಾಪ್ಟರ್​ 2 ಚಿತ್ರದ ಮೇಲೂ ಪರಿಣಾಮ ಬೀರಲಿದೆಯಾ ಅನ್ನೋ ಸಂಶಯ ಈಗ ಮೂಡುತ್ತಿದೆ.

ಅಯ್ಯೋ ತುಕಾಲಿನನ್ನ ಮಕ್ಕಳ ಬೆಳೆಯೋತನಕ ಕನ್ನಡದ ಹೀರೋಗಳು ಬೇಕು ಬೆಳೆದಮೇಲೆ ಬೇಕಾಗಿಲ್ಲ ಅಲ್ವಾ ಯಾಕೆ ಕನ್ನಡದಲ್ಲಿ ಹೀರೋಗಳಿಗೆ ಬರ ಬಂದಿದೆಯಾ ತು ನಿಮ್ಮ ಜನ್ಮಕ್ಕೆ ಕಚಡಗಳ ಬನ್ನಿ ಈ ಫಿಲ್ಮ್ ನ ನಾವೇ ಹೊಗೆ ಹಾಕುಸ್ತೀವಿ.ನಾನು ನಿಮ್ಮ ಸಿನಿಮಾವನ್ನ ತಮಿಳ್ ರಾಕರ್ಸ್ನಲ್ಲೇ ನೋಡ್ತೀನಿ ಹಾಗೆ ನನ್ನ ಸ್ನೇಹಿತರಿಗೂ ಹೇಳ್ತೀನಿ...





ಸಿನಿ ರಂಗದಲ್ಲಿ ತಮ್ಮ ಬೆಳವಣಿಗೆಗಾಗಿ ಕನ್ನಡಿಗರನ್ನು ಬಳಸಿಕೊಂಡು ಈಗ ಮೋಸ ಮಾಡಿದ್ದೀರಿ. ಇನ್ನು ನಿಮ್ಮ ಕೆಜಿಎಫ್​ 2 ಸಿನಿಮಾವನ್ನು ರಾಜ್ಯದಿಂದ ಓಡಿಸುವ ಕಾಲ ಬಂದಿದೆ ಎಂದು ನೆಟ್ಟಿಗರೊಬ್ಬರು ಟ್ವೀಟ್​ ಮಾಡಿದ್ದಾರೆ.

Prabhas, Salaar, Homabale Filme, Prashanth Neel, KGF Chapter 2, Hombale Films, Saif Ali Khan, Radha Krishna Kumar, Prashanth Neel, Prashanth Neel Next Movie, Kriti Sanon, Jr NTR, amitabh bachchan, Adipurush, KGF, Hombale films released the pan India movie title poster starrer Prabhas and directed by Prashanth Neel 
ನೆಟ್ಟಿಗರೊಬ್ಬರು ಮಾಡಿರುವ ಟ್ವೀಟ್​


ಈ ಹಿಂದೆ ಕೆಜಿಎಫ್​ ಚಾಪ್ಟರ್ 2 ಚಿತ್ರಕ್ಕೆ ಸಂಜಯ್ ದತ್​ ಹಾಗೂ ಪ್ರಕಾಶ್​ ರೈ ಎಂಟ್ರಿ ಕೊಟ್ಟಾಗಲೂ ನೆಟ್ಟಿಗರು ವಿರೋಧಿಸಿದ್ದರು. ಆಗಲೂ ಕೆಜಿಎಫ್​ ಚಾಪ್ಟರ್ 2 ಚಿತ್ರವನ್ನು ಬಹಿಷ್ಕರಿಸಿ ಎಂದೆಲ್ಲ ಟ್ರೆಂಡ್​ ಮಾಡಿದ್ದರು. ಈಗ ಪ್ರಭಾಸ್​ ಆಯ್ಕೆಯಿಂದ ನೆಟ್ಟಿಗರು ಪ್ರಶಾಂತ್​ ನೀಲ್​ ಹಾಗೂ ಹೊಂಬಾಳೆ ಫಿಲಂಸ್​ ವಿರುದ್ಧ ತಿರುಗಿ ಬಿದ್ದಿದ್ದಾರೆ.
Published by:Anitha E
First published: