ಪ್ರಭಾಸ್(Prabhas) ‘ಬಾಹುಬಲಿ’(Baahubali) ಸಿನಿಮಾದಿಂದ ನ್ಯಾಷನ್ಲ್, ಇಂಟರ್ನ್ಯಾಷ್ನಲ್ ಸ್ಟಾರ್ ಆದವರು. ಬಾಹುಬಲಿ ಸಿನಿಮಾ ಆದಮೇಲೆ ಅವರ ಸಂಭಾವನೆ ಕೂಡ ಹೆಚ್ಚಾಗಿತ್ತು. ಇದಾದ ಬಳಿಕ ಪ್ರಭಾಸ್ ಸಾಹೋ(Sahoo) ಸಿನಿಮಾ ಬಿಡುಗಡೆಯಾಗಿತ್ತು. ಆದರೆ ಈ ಸಿನಿಮಾ ಹೇಳಿಕೊಳ್ಳುವ ಯಶಸ್ಸು ತಂದುಕೊಡಲಿಲ್ಲ. ಆದರೆ ಈ ಸಿನಿಮಾಗೆ ದುಬಾರಿ ಸಂಭಾವನೆ(Remuneration) ಪಡೆದಿದ್ದರು ನಟ ಪ್ರಭಾಸ್. ಇನ್ನೂ ಕೆಜಿಎಫ್(KGF) ನಿರ್ದೇಶಕ ಪ್ರಶಾಂತ್ ನೀಲ್(Prashanth Neel) ಸಿನಿಮಾಗೆ ಪ್ರಭಾಸ್ ಸಹಿ ಹಾಕಿದ್ದರು. ಈ ಚಿತ್ರಕ್ಕೂ ದುಬಾರಿ ಸಂಭಾವನೆ ಪಡೆದಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಸದ್ಯ ಪ್ರಭಾಸ್ ರಾಧೆ-ಶ್ಯಾಮ್ ಚಿತ್ರ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ವಿಷಯ ಏನಪ್ಪ ಅಂದರೆ , ಪ್ರಭಾಸ್ ಅವರ ಮುಂದಿನ ಚಿತ್ರ ‘ಆದಿಪುರುಷ್’(Adipurush) ಸಿನಿಮಾಗೆ ಪ್ರಭಾಸ್ ಪಡೆದ ಸಂಭಾವನೆ ಕಂಡು ದೊಡ್ಡ ದೊಡ್ಡ ನಿರ್ಮಾಪಕರೇ ಸುಸ್ತಾಗಿ ಹೋಗಿದ್ದಾರಂತೆ. ಇದುವರೆಗೂ ಯಾರು ಪಡೆಯದ ಸಂಭಾವನೆ ಪಡೆದಿದ್ದಾರ. ಈ ವಿಚಾರ ಇದೀಗ ಚಿತ್ರರಂಗದಲ್ಲಿ ಸಖತ್ ಸುದ್ದಿ ಮಾಡುತ್ತಿದ್ದಾರೆ. ಪ್ರಭಾಸ್ ಅವರ ಸಂಭಾವನೆ ಹಣದಲ್ಲಿ 2 ಬಿಗ್ ಬಜೆಟ್ ಸಿನಿಮಾ ಮಾಡಬಹುದು ಅನ್ನುವ ಮಾತುಗಳು ಕೇಳಿಬಂದಿದೆ. ಹಾಗಿದ್ರೆ ಪ್ರಭಾಸ್ ಪಡೆದ ಸಂಭಾವನೆ ಎಷ್ಟು ಅಂತ ಮುಂದೆ ಇದೆ ನೋಡಿ..
150 ಕೋಟಿ ಸಂಭಾವನೆ ಪಡೆದ ಪ್ರಭಾಸ್!
ಪ್ರಭಾಸ್ ನಟಿಸುತ್ತಿರುವ ‘ಆದಿಪುರುಷ್’ ಚಿತ್ರ ಸಖತ್ ನಿರೀಕ್ಷೆ ಮೂಡಿಸಿದೆ. ಅಚ್ಚರಿ ಎಂದರೆ ಈ ಸಿನಿಮಾದಲ್ಲಿ ನಟಿಸಲು ಪ್ರಭಾಸ್ ಪಡೆದಿದ್ದಾರೆ ಎನ್ನಲಾದ ಸಂಭಾವನೆ ಮೊತ್ತದ ಬಗ್ಗೆ ಒಂದು ಸುದ್ದಿ ಹರಡಿದೆ. ಈ ಚಿತ್ರಕ್ಕಾಗಿ ಅವರು ಬರೋಬ್ಬರಿ 150 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಚಿತ್ರತಂಡದವರಾಗಲೀ, ಪಭಾಸ್ ಆಗಲಿ ಎಲ್ಲಿಯೂ ಬಾಯಿ ಬಿಟ್ಟಿಲ್ಲ. ‘ಆದಿಪುರುಷ್’ ಚಿತ್ರಕ್ಕೆ ಓಂ ರಾವುತ್ ನಿರ್ದೇಶನ ಮಾಡುತ್ತಿದ್ದಾರೆ. ರಾಮನ ಪಾತ್ರದಲ್ಲಿ ಪ್ರಭಾಸ್ ನಟಿಸುತ್ತಿದ್ದು, ರಾವಣನಾಗಿ ಸೈಫ್ ಅಲಿ ಖಾನ್ ಅಭಿನಯಿಸುತ್ತಿದ್ದಾರೆ. ಈಗಾಗಲೇ ರಾವಣ ಪಾತ್ರದ ಕೆಲ ಸೀನ್ಗಳನ್ನು ಶೂಟ್ ಮಾಡಲಾಗಿದೆ.
ಇದನ್ನು ಓದಿ : ಪ್ರೇಮಿಗಳ ತಲೆಕೆಡಿಸಿದ ಪ್ರಭಾಸ್-ಪೂಜಾ ಹೆಗ್ಡೆ ರೊಮ್ಯಾಂಟಿಕ್ ಸಾಂಗ್!
60 ದಿನ ಕಾಲ್ ಶೀಟ್ ಕೊಟ್ಟ ಪ್ರಭಾಸ್!
ಇಷ್ಟು ದೊಡ್ಡ ಸಂಭಾವನೆ ಪಡೆದಿರುವ ಪ್ರಭಾಸ್ ಅವರು ಈ ಚಿತ್ರಕ್ಕೆ 60 ದಿನಗಳ ಕಾಲ್ಶೀಟ್ ನೀಡಿದ್ದಾರೆ ಎನ್ನಲಾಗಿದೆ. ಈ ಸಮಯದೊಳಗೆ ಚಿತ್ರತಂಡದವರು ಶೂಟಿಂಗ್ ಮತ್ತು ಡಬ್ಬಿಂಗ್ ಕೆಲಸಗಳನ್ನು ಮುಗಿಸಬೇಕು. ‘ಬಾಹುಬಲಿ’ ಯಶಸ್ಸಿನ ನಂತರ ಪ್ರಭಾಸ್ ನಟಿಸಿದ ‘ಸಾಹೋ’ ಚಿತ್ರ ನಿರೀಕ್ಷಿಸಿದಷ್ಟು ಕಲೆಕ್ಷನ್ ಮಾಡಲಿಲ್ಲ. ಹಾಗಂತ ಪ್ರಭಾಸ್ ಅವರಿಗೆ ಇದ್ದ ಬೇಡಿಕೆ ಕಮ್ಮಿ ಆಗಿಲ್ಲ. ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ‘ಸಲಾರ್’ ಸಿನಿಮಾದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಪೂಜಾ ಹೆಗ್ಡೆ ಜೊತೆ ಅವರು ಅಭಿನಯಿಸಿರುವ ‘ರಾಧೆ ಶ್ಯಾಮ್’ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, 2022ರ ಜ.14ರಂದು ವಿಶ್ವಾದ್ಯಂತ ತೆರೆಕಾಣಲಿದೆ.
ಇದನ್ನು ಓದಿ : ಅಪ್ಪು ಹುಟ್ಟುಹಬ್ಬಕ್ಕೆ 100 ದಿನ ಬಾಕಿ: ಮುಂಬೈನಲ್ಲಿರುವ ಅಭಿಮಾನಿಗಳಿಂದ ಅಭಿಯಾನ ಶುರು!
ಪ್ರೇಮಿಗಳ ತಲೆಕಡಿಸಿದ ರಾಧೆ-ಶ್ಯಾಮ್ ಸಾಂಗ್!
ಬಹುನಿರೀಕ್ಷಿತ ಸಿನಿಮಾ ರಾಧೆ ಶ್ಯಾಮ್(Radhe Shyam) ರೊಮ್ಯಾಂಟಿಕ್ ಸಾಂಗ್ ಬಿಡುಗಡೆಯಾಗಿದೆ. ಪೂಜಾ ಹಾಗೂ ಪ್ರಭಾಸ್ ಜೋಡಿ ಪರ್ಫೆಕ್ಟ್ ಕಪಲ್ ಆಗಿ ಕಾಣಿಸಿಕೊಂಡಿದ್ದು, ಸಖತ್ ಕಿಕ್ ಕೊಡುತ್ತಿದೆ. ಅದರಲ್ಲೂ ಪ್ರೇಮಿಗಳಿಗೆ ಹೇಳಿ ಮಾಡಿಸಿದ ಹಾಗಿದೆ. ಸಿನಿಪ್ರಿಯರು ಕೂಡ ಈ ಹಾಡನ್ನು ರಿಪೀಟ್ ಮೋಡ್ನಲ್ಲಿ ಕೇಳುತ್ತಿದ್ದಾರೆ. 'ಆಶಿಕಿ ಆ ಗಯಿ'(Ashiqui aa gayi) ಎಂಬ ಹಾಡಿನ ಮ್ಯೂಸಿಕಲ್ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ