ಸಾಮಾನ್ಯವಾಗಿ ಈ ಚಿತ್ರ ರಂಗದಲ್ಲಿ (Film industry) ಜನಪ್ರಿಯ ನಟ ಅಥವಾ ಜನಪ್ರಿಯ ನಟಿಯು ಒಮ್ಮೆ ಯಾರ ಜೊತೆಯಾದ್ರೂ ಚಿತ್ರದಲ್ಲಿ ನಟಿಸಿ ಅವರೊಂದಿಗೆ ಸ್ವಲ್ಪ ಸುತ್ತಾಡಿದ್ರೆ ಸಾಕು, ಅಭಿಮಾನಿಗಳು (Fans) ‘ಏನೋ ನಡೀತಾ ಇದೆ ಇವರಿಬ್ಬರ ಮಧ್ಯೆ’ ಅಂತ ಗುಸುಗುಸು ಮಾತುಗಳು ಶುರುವಾಗುತ್ತವೆ. ಹೀಗೆ ಚಿತ್ರರಂಗದಲ್ಲಿ ಯಾರ ಬಗ್ಗೆ ಗಾಸಿಪ್ (Gossips) ಮಾಡುವುದಿಲ್ಲ ಹೇಳಿ? ಬಹುತೇಕವಾಗಿ ಎಲ್ಲಾ ನಟ ಮತ್ತು ನಟಿಯರ ಸುತ್ತಲೂ ಏನಾದರೊಂದು ವದಂತಿಗಳು ಹರಿದಾಡುತ್ತಲೇ ಇರುತ್ತವೆ ಅಂತ ಹೇಳಬಹುದು. ಎಷ್ಟೋ ಬಾರಿ ನಟ-ನಟಿಯರ ಹೆಸರಿನ ಜೊತೆಯಲ್ಲಿ ಮತ್ತೊಬ್ಬ ಸ್ಟಾರ್ ನಟ (Star Hero) ಅಥವಾ ನಟಿಯ (Heroine) ಹೆಸರು ಕೇಳಿ ಬಂದರೂ ಸಹ ವದಂತಿಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳುವುದಿಲ್ಲ ಈ ಸಿನಿಮಾ (Film) ಮಂದಿ ಅಂತ ಹೇಳಬಹುದು. ಈಗಲೂ ಸಹ ಅಂತಹದೇ ಒಂದು ಸುದ್ದಿ ತುಂಬಾನೇ ಬಲವಾಗಿ ಸಿನಿಮಾ ರಂಗದಲ್ಲಿ ಹರಿದಾಡುತ್ತಿದೆ. ಆದರೆ ಅದು ಎಷ್ಟರ ಮಟ್ಟಿಗೆ ನಿಜ ಅಥವಾ ಬರೀ ಒಂದು ವದಂತಿ ಅಂತ ಇನ್ನೂ ತನಕ ಅಭಿಮಾನಿಗಳಿಗೆ ಅರ್ಥವಾಗಿಲ್ಲ.
ಪ್ರಭಾಸ್ ಮತ್ತು ಕೃತಿ ಡೇಟಿಂಗ್ ಮಾಡ್ತೀರೋ ಸುದ್ದಿ ಎಷ್ಟು ಸತ್ಯ?
ಹೌದು.. ನಾವು ಇಲ್ಲಿ ಮಾತನಾಡುತ್ತಿರುವುದು ಬಾಹುಬಲಿ ಚಿತ್ರದ ನಟ ಪ್ರಭಾಸ್ ಬಗ್ಗೆ. ಕೆಲ ದಿನಗಳಿಂದ ನಟ ಪ್ರಭಾಸ್ ಅವರು ನಟಿ ಕೃತಿ ಸನೋನ್ ಅವರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಅಂತ ವದಂತಿಗಳು ಹರಿದಾಡುತ್ತಿವೆ. ಆದರೆ ಇದರ ಬಗ್ಗೆ ಕೇಳಿದ್ದಕ್ಕೆ ನಟ ಈ ಎಲ್ಲಾ ಡೇಟಿಂಗ್ ವದಂತಿಗಳನ್ನು ನಿರಾಕರಿಸಿದ್ದಾರೆ. ಇಷ್ಟೇ ಏಕೆ? ನಟಿ ಕೃತಿ ಕೂಡ ಈ ವಿಚಾರವನ್ನು ನಿರಾಕರಿಸಿದ್ದಾರೆ ಅಂತ ಹೇಳಲಾಗುತ್ತಿದೆ.
ಆದರೆ ಅಭಿಮಾನಿಗಳು ಮಾತ್ರ ಪ್ರಭಾಸ್ ಮತ್ತು ಕೃತಿ ಸನೋನ್ ಅವರ ಈ ಡೇಟಿಂಗ್ ವದಂತಿಯನ್ನು ಬಿಡುತ್ತಲೇ ಇಲ್ಲ. ಓಂ ರೌತ್ ಅವರ 'ಆದಿಪುರುಷ್’ ಚಿತ್ರಕ್ಕಾಗಿ ಇವರಿಬ್ಬರು ನಟರು ಒಟ್ಟಿಗೆ ಚಿತ್ರೀಕರಣವನ್ನು ಪ್ರಾರಂಭಿಸಿದ ನಂತರ ಈ ಸುದ್ದಿ ಹರಡಲು ಶುರುವಾಯಿತು.
ಡೇಟಿಂಗ್ ವದಂತಿ ಬಗ್ಗೆ ಏನ್ ಹೇಳಿದ್ರು ನೋಡಿ ಪ್ರಭಾಸ್..
ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಕೃತಿ ಸನೋನ್ ಅವರೊಂದಿಗಿನ ಸಂಬಂಧದ ಬಗ್ಗೆ ಪ್ರಭಾಸ್ ಅವರನ್ನು ಕೇಳಲಾಯಿತು. ಈ ಪ್ರಶ್ನೆಗೆ ನಟ ಪ್ರಭಾಸ್ ಅವರು “ಇದು ಹಳೆಯ ಸುದ್ದಿ” ಎಂದು ಹೇಳುವ ಮೂಲಕ ಅದನ್ನು ನಿರಾಕರಿಸಿದ್ದರು. ತಮ್ಮ ಪ್ರಣಯದ ಬಗ್ಗೆ ಕೃತಿ ಅವರ ಸ್ಪಷ್ಟೀಕರಣವನ್ನು ಉಲ್ಲೇಖಿಸಿ 'ಬಾಹುಬಲಿ' ತಾರೆ "ಇದು ಹಳೆಯ ಸುದ್ದಿ ಸರ್. ಅಂತಹ ಯಾವುದೇ ವಿಷಯವಿಲ್ಲ ಎಂದು 'ಮೇಡಂ' ಅವರು ಸ್ಪಷ್ಟೀಕರಣ ಈಗಾಗಲೇ ಕೊಟ್ಟಾಗಿದೆ" ಎಂದು ಹೇಳಿದರು.
ಈ ಹಿಂದೆ, ವರುಣ್ ಧವನ್ ಅವರು ಪ್ರಭಾಸ್ ಮತ್ತು ಕೃತಿಯನ್ನು ತಮಾಷೆಯಾಗಿ ಲಿಂಕ್ ಮಾಡಿದ್ದರು, ಅವರ ಪೋಸ್ಟ್ ನಲ್ಲಿ ನಟಿ ಸಾಮಾಜಿಕ ಮಾಧ್ಯಮದಲ್ಲಿ ಸ್ಪಷ್ಟೀಕರಣವನ್ನು ಸಹ ನೀಡಿದ್ದರು. "ಕೆಲವು ಸುದ್ದಿ ಪೋರ್ಟಲ್ ನನ್ನ ಮದುವೆಯ ದಿನಾಂಕವನ್ನು ಘೋಷಿಸುವ ಮೊದಲು ನಾನು ನಿಮ್ಮ ವದಂತಿಗೆ ಬ್ರೇಕ್ ಹಾಕುತ್ತೇನೆ. ಈ ವದಂತಿಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ" ಎಂದು ಹೇಳಿದ್ದರು.
ಜೂನ್ 16, 2023 ರಂದು ಬಿಡುಗಡೆ ಆಗುತ್ತಂತೆ ‘ಆದಿಪುರುಷ್’ ಚಿತ್ರ
ಪ್ರಭಾಸ್ ಮತ್ತು ಕೃತಿ ಸನೋನ್ 'ಆದಿಪುರುಷ್' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ಇನ್ನೊಬ್ಬ ಬಾಲಿವುಡ್ ನಟ ಸೈಫ್ ಅಲಿ ಖಾನ್ ಸಹ ಅಭಿನಯಿಸಿದ್ದು, ನೆಗೆಟಿವ್ ಲೀಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಪೌರಾಣಿಕ ನಾಟಕವು ರಾಮಾಯಣವನ್ನು ಆಧರಿಸಿದೆ ಎಂದು ಹೇಳಲಾಗುತ್ತಿದೆ. ಮೊದಲು ಈ ಚಿತ್ರವು ಜನವರಿಯಲ್ಲಿ ತೆರೆಗೆ ಬರಲು ನಿರ್ಧರಿಸಲಾಗಿತ್ತು. ಆದಾಗ್ಯೂ, ಚಿತ್ರದ ಟೀಸರ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಪ್ರತಿಕ್ರಿಯೆಯನ್ನು ಎದುರಿಸಿದ ನಂತರ, ಈಗ ಚಿತ್ರವನ್ನು ಜೂನ್ 2023 ಕ್ಕೆ ಮುಂದೂಡಲಾಗಿದೆ.
ಇದನ್ನೂ ಓದಿ: Prabhas: 2023ರಲ್ಲಿ ಪ್ರಭಾಸ್ಗೆ ಕಾದಿದೆ ಗಂಡಾಂತರ! ಶಾಕಿಂಗ್ ಭವಿಷ್ಯ ನುಡಿದ ಜ್ಯೋತಿಷಿ ವೇಣುಸ್ವಾಮಿ
"ಆದಿಪುರುಷ್ ಬರೀ ಒಂದು ಸಿನೆಮಾವಲ್ಲ, ಪ್ರಭು ಶ್ರೀ ರಾಮನ ಮೇಲಿನ ನಮ್ಮ ಭಕ್ತಿ ಮತ್ತು ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಬಗೆಗಿನ ಬದ್ಧತೆಯನ್ನು ಪ್ರತಿನಿಧಿಸುತ್ತದೆ" ಎಂದು ನಿರ್ಮಾಪಕರು ಹೇಳಿಕೆಯಲ್ಲಿ ತಿಳಿಸಿದ್ದರು. ವೀಕ್ಷಕರಿಗೆ ಸಂಪೂರ್ಣ ದೃಶ್ಯ ಅನುಭವವನ್ನು ನೀಡಲು, ನಾವು ಚಿತ್ರದಲ್ಲಿ ಕೆಲಸ ಮಾಡುವ ತಂಡಗಳಿಗೆ ಹೆಚ್ಚಿನ ಸಮಯವನ್ನು ನೀಡಬೇಕಾಗಿದೆ. ಹೀಗಾಗಿ ಈ ಚಿತ್ರ ಜೂನ್ 16, 2023 ರಂದು ಬಿಡುಗಡೆಯಾಗಲಿದೆ” ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ