Prabhas: ಪ್ರಭಾಸ್​ ಅಭಿಮಾನಿಗಳಿಗೆ ಸಿಹಿಸುದ್ದಿ: ಹೊಸ ಸಿನಿಮಾದ ಫಸ್ಟ್​ಲುಕ್​ ಬಗ್ಗೆ ಪ್ರಕಟಿಸಿದ ಚಿತ್ರತಂಡ..!

Prabhas New Movie Update: ರಾಧಾಕೃಷ್ಣ ನಿರ್ದೇಶನ ಮಾಡುತ್ತಿರುವ ಇನ್ನೂ ಹೆಸರಿಡ ಈ ಹೊಸ ಸಿನಿಮಾದಲ್ಲಿ ಪ್ರಭಾಸ್​ಗೆ ಜೋಡಿಯಾಗಿ ಪೂಜಾ ಹೆಗ್ಡೆ ಜೊತೆಯಾಗಿದ್ದಾರೆ. ಇನ್ನು ಬಾಲಿವುಡ್ ನಟಿ ಭಾಗ್ಯಶ್ರೀ ಸಹ ನಟಿಸುತ್ತಿದ್ದಾರೆ. ಈ ಸಿನಿಮಾದ ಫಸ್ಟ್​ ಲುಕ್​ ಸದ್ಯದಲ್ಲೇ ರಿವೀಲ್​ ಮಾಡುವುದಾಗಿ ಚಿತ್ರತಂಡ ಅಧಿಕೃತವಾಗಿ ಟ್ವೀಟ್​ ಮಾಡಿದೆ.

ಪ್ರಭಾಸ್​

ಪ್ರಭಾಸ್​

  • Share this:
ನಟ ಪ್ರಭಾಸ್​ ತಮ್ಮ ಹೊಸ ಸಿನಿಮಾಗಾಗಿ ಯುರೋಪಿನಲ್ಲಿ ಬೀಡು ಬಿಟ್ಟಿರುವ ವಿಷಯ ಗೊತ್ತೇ ಇದೆ. ಎಲ್ಲೆಡೆ ಕೊರೋನಾ ಭೀತಿ ಇದ್ದರೂ, ಇದರ ನಡುವೆ ಡಾರ್ಲಿಂಗ್​ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿದ್ದಾರೆ.

ರಾಧಾಕೃಷ್ಣ ನಿರ್ದೇಶನ ಮಾಡುತ್ತಿರುವ ಇನ್ನೂ ಹೆಸರಿಡ ಈ ಹೊಸ ಸಿನಿಮಾದಲ್ಲಿ ಪ್ರಭಾಸ್​ಗೆ ಜೋಡಿಯಾಗಿ ಪೂಜಾ ಹೆಗ್ಡೆ ಜೊತೆಯಾಗಿದ್ದಾರೆ. ಇನ್ನು ಬಾಲಿವುಡ್ ನಟಿ ಭಾಗ್ಯಶ್ರೀ ಸಹ ನಟಿಸುತ್ತಿದ್ದಾರೆ. ಈ ಸಿನಿಮಾದ ಫಸ್ಟ್​ ಲುಕ್​ ಸದ್ಯದಲ್ಲೇ ರಿವೀಲ್​ ಮಾಡುವುದಾಗಿ ಚಿತ್ರತಂಡ ಅಧಿಕೃತವಾಗಿ ಟ್ವೀಟ್​ ಮಾಡಿದೆ.

Another schedule in Georgia wrapped up. A big thanks to the team in Georgia for all the support and help in finishing the schedule without any hassles. Importantly, FIRST LOOK OUT SOON! #Prabhas20ಇದು ಪ್ರಭಾಸ್​ ನಟನೆಯ 20ನೇ ಸಿನಿಮಾ ಆಗಿದ್ದು, ಇದರ ಚಿತ್ರೀಕರಣ ಜಾರ್ಜಿಯಾದಲ್ಲಿ ನಡೆಯುತ್ತಿತ್ತು. ಈಗ ಈ ಶೆಡ್ಯೂಲ್​ಗೆ ತೆರೆ ಎಳೆಯಲಾಗಿದೆ. ಚಿತ್ರೀರಕಣದ ಶೆಡ್ಯೂಲ್​ ಪೂರ್ಣಗೊಳಿಸಿರುವ ಚಿತ್ರತಂಡ ಫಸ್ಟ್​ ಲುಕ್​ ಅನ್ನು ಸದ್ಯದಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿದೆ.

ಇದನ್ನೂ ಓದಿ: ರಿಯಾಲಿಟಿ ಶೋನಿಂದಾಗಿ ಟ್ರೋಲ್​ ಆದ ನಟಿ: ಹೆಂಡತಿ ನೇಹಾ ಬೆಂಬಲಕ್ಕೆ ನಿಂತ ಅಂಗದ್​ ಬೇಡಿ..! 
View this post on Instagram
 

Elated to share that I’m resuming shooting for my upcoming film. Looking forward to a fun schedule.


A post shared by Prabhas (@actorprabhas) on


ಸದ್ಯದಲ್ಲೇ ಅಂದರೆ ಯುಗಾದಿ ಹಬ್ಬ ಇನ್ನೇನು ಹತ್ತಿರದಲ್ಲೇ ಇದ್ದು, ಹಬ್ಬದಂದು ಪ್ರಭಾಸ್ ಅವರ ಫಸ್ಟ್​ ಲುಕ್​ ಬಿಡುಗಡೆಯಾಗಬಹುದು ಎನ್ನುತ್ತಿದ್ದಾರೆ ಅಭಿಮಾನಿಗಳು. ಈ ಸಿನಿಮಾದ ಚಿತ್ರೀಕರಣ ಯುರೋಪ್​ನಲ್ಲಿ ಆರಂಭವಾದಾಗ ಪ್ರಭಾಸ್​ ಸೆಟ್​ನಲ್ಲಿ ತೆಗೆದ ಒಂದು ಚಿತ್ರವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

 

Meghana Raj: ಮತ್ತೆ ಮದುಮಗಳಾದ ಮೇಘನಾರಾಜ್​: ವೈರಲ್​ ಆಯ್ತು ಫೋಟೋಗಳು..!
First published: