• Home
  • »
  • News
  • »
  • entertainment
  • »
  • 'ಸಾಹೋ' ಮೇಕಿಂಗ್‍ಗೆ ಜೈ ಎಂದ ಹಾಲಿವುಡ್: ಸೂಪರ್​ ಸ್ಟಾರ್​ಗಳ ದಾಖಲೆಗಳು ಚಿಂದಿ !

'ಸಾಹೋ' ಮೇಕಿಂಗ್‍ಗೆ ಜೈ ಎಂದ ಹಾಲಿವುಡ್: ಸೂಪರ್​ ಸ್ಟಾರ್​ಗಳ ದಾಖಲೆಗಳು ಚಿಂದಿ !

'ಸಾಹೋ' ಸಿನಿಮಾದ ಹೊಸ ಪೋಸ್ಟರ್​

'ಸಾಹೋ' ಸಿನಿಮಾದ ಹೊಸ ಪೋಸ್ಟರ್​

ಸಾಹೋ ಸಾಹೋ ಸಾಹೋ... ಈಗ ಎಲ್ಲರ ಬಾಯಲ್ಲೂ 'ಸಾಹೋ'ನದ್ದೇ ಮಾತು. 'ಸಾಹೋ' ಟೀಸರ್ ನೋಡೋಕೆ ಕುತೂಹಲದ ತುತ್ತ ತುದಿಯಲ್ಲಿ ಕೂತಿದ್ದ ಸಿನಿಪ್ರೇಮಿಗಳಿಗೆ ಸಿಕ್ಕಿದ ದೃಶ್ಯಗುಚ್ಛ ಕಣ್ಣಿಗೆ ಹಬ್ಬದ ಜೊತೆ ರೋಮ ರೋಮಗಳಲ್ಲಿ ರೋಮಾಂಚನ ಮೂಡಿಸುತ್ತಿದೆ. ಒಮ್ಮೆ ನೋಡಿದ ಟೀಸರ್ ಮತ್ತೆ ಮತ್ತೆ ನೋಡುವಂತೆ ಥ್ರಿಲ್ ಕೊಡ್ತಿದೆ ಆ್ಯಕ್ಷನ್ ಥ್ರಿಲ್ಲರ್ 'ಸಾಹೋ'.

ಮುಂದೆ ಓದಿ ...
  • News18
  • Last Updated :
  • Share this:

'ಬಾಹುಬಲಿ' ವಿರಾಟ ರೂಪದ ನಂತರ 'ಸಾಹೋ' ಸಾಮ್ರಾಟನ ಮಿಂಚಿನ ಎಂಟ್ರಿಗೆ ಹಳೆಯ ದಾಖಲೆಗಳು ಪುಡಿ ಪುಡಿಯಾಗಿವೆ. ಗುಡುಗು-ಸಿಡಿಲಿನಂತೆ ಬಡಿದ ಆ್ಯಕ್ಷನ್ ಹವಾಗೆ ಹೊಸ ದಾಖಲೆ ಪುಟ ಸೇರೋಕೆ ತಯಾರಾಗಿದೆ. 'ಬಾಹುಬಲಿ' ಅವತಾರ ಪುರುಷನ ಸ್ಟೈಲಿಷ್ ಆ್ಯಕ್ಷನ್ ಅವತಾರಕ್ಕೆ ಹಾಲಿವುಡ್ ಕೂಡ ಬೆಚ್ಚಿ ಬಿದ್ದಿದೆ.

ಸಾಹೋ ಸಾಹೋ ಸಾಹೋ... ಈಗ ಎಲ್ಲರ ಬಾಯಲ್ಲೂ 'ಸಾಹೋ'ನದ್ದೇ ಮಾತು. 'ಸಾಹೋ' ಟೀಸರ್ ನೋಡೋಕೆ ಕುತೂಹಲದ ತುತ್ತ ತುದಿಯಲ್ಲಿ ಕೂತಿದ್ದ ಸಿನಿಪ್ರೇಮಿಗಳಿಗೆ ಸಿಕ್ಕಿದ ದೃಶ್ಯಗುಚ್ಛ ಕಣ್ಣಿಗೆ ಹಬ್ಬದ ಜೊತೆ ರೋಮ ರೋಮಗಳಲ್ಲಿ ರೋಮಾಂಚನ ಮೂಡಿಸುತ್ತಿದೆ. ಒಮ್ಮೆ ನೋಡಿದ ಟೀಸರ್ ಮತ್ತೆ ಮತ್ತೆ ನೋಡುವಂತೆ ಥ್ರಿಲ್ ಕೊಡ್ತಿದೆ ಆ್ಯಕ್ಷನ್ ಥ್ರಿಲ್ಲರ್ 'ಸಾಹೋ'.

prabhas Saaho
ಸಾಹೋ ಪೋಸ್ಟರ್​


ಇನ್ನು 'ಸಾಹೋ' ಬರುತ್ತೆ ಅಂದಾಗಲೇ ಯಾವ್ಯಾವ ದಾಖಲೆಗಳು ಚಿಂದಿಯಾಗಬಹುದು ಅನ್ನೋ ಲೆಕ್ಕಾಚಾರ ಶುರುವಾಗಿತ್ತು. ಅದೆಲ್ಲವೂ ಅಂದುಕೊಂಡಂತೆಯೇ ಆಗಿದೆ. ಸಾಹೋ ಟೀಸರ್ ಸರಿಯಾಗಿ ಬೆಳಗ್ಗೆ 11 ಗಂಟೆ 24 ನಿಮಿಷಕ್ಕೆ ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಆಗಿ 26 ನಿಮಿಷಕ್ಕೆ 1 ಲಕ್ಷ ಲೈಕ್ಸ್ ಪಡೆದುಕೊಂಡಿತ್ತು.

ಈ ಹಿಂದೆ ಪವನ್‍ಕಲ್ಯಾಣ್ ನಟಿಸಿದ್ದ `ಅಜ್ಞಾತವಾಸಿ', ಜ್ಯೂನಿಯರ್ ಎನ್​ಟಿಆರ್ ನಟಿಸಿದ್ದ `ಅರವಿಂದ ಸಮೇತ' ಚಿತ್ರಗಳು 1 ಲಕ್ಷ ಲೈಕ್ಸ್ ತೆಗೆದುಕೊಳ್ಳೋಕೆ 30 ನಿಮಿಷ ತೆಗೆದುಕೊಂಡಿದ್ವು. ಆದರೆ ಅಮರೇಂದ್ರ ಬಾಹುಬಲಿಯ ಅಬ್ಬರದ ಮುಂದೆ ಸೂಪರ್​ಗಳ ದಾಖಲೆಗಳು ಉಡೀಸ್ ಆಗಿವೆ. ಯಂಗ್ ರೆಬೆಲ್‍ಸ್ಟಾರ್ ಆ್ಯಕ್ಷನ್ ಪ್ಯಾಕ್ಡ್ 'ಸಾಹೋ' ಟೀಸರ್ ಒಂದು ದಿನದಲ್ಲಿ ಬರೋಬ್ಬರಿ 6 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.

ಪ್ರಭಾಸ್ ಬಾಹುಬಲಿ ಅವತಾರವನ್ನು ವಿಶ್ವದಾದ್ಯಂತ ಎಂಜಾಯ್ ಮಾಡಿ, ಥ್ರಿಲ್ಲಾಗಿದ್ದ ಅಭಿಮಾನಿಗಳು ಈಗ 'ಸಾಹೋ' ಅವತಾರಕ್ಕೂ ಫಿದಾ ಆಗಿದ್ದಾರೆ. ನಾಲ್ಕು ಭಾಷೆಗಳಲ್ಲಿ ರಿಲೀಸ್ ಆದ ಟೀಸರ್​ಗೆ ಸಿಕ್ಕಿರೋ ಪ್ರತಿಕ್ರಿಯೆ ಹಾಲಿವುಡ್ ಸಿನಿಮಾ ಮೇಕರ್​ಗಳು ಕೂಡ ಶಾಕ್ ಆಗಿರೋದ್ರಲ್ಲಿ ಅನುಮಾನವಿಲ್ಲ. ಆ ಮಟ್ಟಲ್ಲಿದೆ ಇದರ ಮೇಕಿಂಗ್. 'ಸಾಹೋ ' ನುಗ್ಗುತ್ತಿರುವ ರೀತಿಯನ್ನ ನೋಡಿ ಇದು ಇಂಡಿಯನ್ ಸಿನಿಮಾನಾ ಅಂತ ಅಚ್ಚರಿಯಿಂದ ನೋಡ್ತಿದ್ದಾರೆ ಹಾಲಿವುಡ್ ಮೇಕರ್ಸ್.

ಇದನ್ನೂ ಓದಿ: KGF Chapter 2: ಮೈಸೂರಿನಲ್ಲಿ ಆರಂಭವಾಗಿದೆ 'ಕೆ.ಜಿ.ಎಫ್- ಚಾಪ್ಟರ್ 2' ಶೂಟಿಂಗ್ : ಸೈನೈಡ್ ಗುಡ್ಡದಲ್ಲಿ ಮತ್ತೆ ತಲೆ ಎತ್ತಿವೆ ಬೃಹತ್ ಸೆಟ್​ಗಳು !

'ಸಾಹೋ'ನ ಟೀಸರ್ ಇಷ್ಟ ಆಗೋಕೆ ಕಾರಣ ಹಲವು. ಇದು ಔಟ್ ಅಂಡ್ ಔಟ್ ಪ್ರಭಾಸ್ ಸ್ಟೈಲ್‍ನ ಸಿನಿಮಾ. ಅದಕ್ಕಾಗಿಯೇ ಇದು ಆ್ಯಕ್ಷನ್ ಪ್ಯಾಕ್ಡ್ ಟೀಸರ್ ಆಗಿದ್ರೂ, ಇಲ್ಲೊಂದು ಇಂಡಿಯನ್ ಎಮೋಷನಲ್ ಟಚ್ ಇದೆ. ವೇಗ ಉದ್ವೇಗದ ಜೊತೆ ಭಾವೋದ್ವೇಗವೂ ಇದೆ. ಭಾವನೆಗಳ ಅರಮನೆಯ ಬಾಗಿಲು ಬಡಿಯೋ ಪ್ರಯತ್ನವನ್ನು ನಿರ್ದೇಶಕ ಸುಜಿತ್ ಮಾಡಿದ್ದಾರೆ.

ಯು. ವಿ ಕ್ರಿಯೇಷನ್ಸ್ ನಿರ್ಮಾಣದ ಟೀಸರ್ ತುಂಬಿ ತುಳುಕುತ್ತಿರೋದು ಆ್ಯಕ್ಷನ್ ದೃಶ್ಯಗಳಿಂದಲೇ. ಚಿತ್ರತಂಡ ರೊಮೇನಿಯಾದಲ್ಲಿ ಮತ್ತು ಅಬುದಾಬಿಯಲ್ಲಿ ಮುಖ್ಯ ಭಾಗಗಳನ್ನು ಚಿತ್ರೀಕರಿಸಿದೆ. 30 ದಿನಗಳು ಅಬುದಾಬಿಯಲ್ಲಿ ಆ್ಯಕ್ಷನ್ ದೃಶ್ಯಗಳನ್ನೇ ಶೂಟ್ ಮಾಡಿದೆ ಸುಜಿತ್ ಅಂಡ್ ಟೀಂ. 400 ವಿದೇಶಿ ಟೆಕ್ನೀಷಿಯನ್ಸ್ ಚಿತ್ರದ ಆ್ಯಕ್ಷನ್ ದೃಶ್ಯಗಳನ್ನು ಹಾಲಿವುಡ್ ಸಿನಿಮಾಗಳನ್ನೂ ಮೀರಿಸುವಂತೆ ಕಂಪೋಸ್ ಮಾಡಿದ್ದಾರೆ.

ಹಾಲಿವುಡ್‍ನ ಖ್ಯಾತ ಸ್ಟಂಟ್ ಡೈರೆಕ್ಟರ್ ಕೆನ್ನಿ ಬೇಟ್ಸ್ ಸಾಹಸ ನಿರ್ದೇಶಕರಾಗಿ ಮತ್ತೊಮ್ಮೆ ಮಿಂಚಿದ್ದಾರೆ. ಟ್ರಾನ್ಸ್‍ಫಾರ್ಮರ್ಸ್, ಅರ್ಮಗೆಡಾನ್ ಮಾತ್ರವಲ್ಲ ಭಾರತದ ರೋಬೋದಂತಹ ಬಿಗ್ ಬಜೆಟ್ ಸಿನಿಮಾಗಳಿಗೆ ಜಬರ್ದಸ್ತ್ ಫೈಟ್ಸ್ ಕೊಟ್ಟಿರೋ ಬೇಟ್ಸ್ ಮತ್ತೊಮ್ಮೆ 300 ಕೋಟಿ ಬಜೆಟ್‍ನ 'ಸಾಹೋ'ಗೆ ಮ್ಯಾಜಿಕಲ್ ಆ್ಯಕ್ಷನ್ ಕೊಟ್ಟಿದ್ದಾರೆ..

ಇನ್ನು ಪ್ರಭಾಸ್ ಅಭಿಮಾನಿಗಳಿಗಂತೂ 'ಸಾಹೋ' ಬರಗಾಲದಲ್ಲಿ ಬಿರಿಯಾನಿ ಸಿಕ್ಕಂತಾಗಿದೆ. 'ಬಾಹುಬಲಿ ದಿ ಕನ್ಕ್ಲೂಷನ್' ರಿಲೀಸ್ ಆಗಿ ಎರಡು ವರ್ಷಗಳೇ ಕಳೆದಿತ್ತು. ಆವತ್ತಿನಿಂದಲೇ ಯಂಗ್ ರೆಬೆಲ್‍ಸ್ಟಾರ್ ಹೊಸ ಲುಕ್‍ನಲ್ಲಿ ನೋಡೋಕೆ ಕಾತರರಾಗಿದ್ದ ಲಕ್ಷಾಂತರ ಅಭಿಮಾನಿಗಳಿಗೆ ಟೀಸರ್​ನ ಕೊನೆಯಲ್ಲಿ ಫುಲ್ ಟ್ರೀಟ್ ಸಿಕ್ಕಿದೆ. ಅಭಿಮಾನಿಗಳಿಗೆ ಖುಷಿ ಕೊಡೋ ಡೈಲಾಗ್ ಮೂಲಕ ಟೀಸರ್‍ನಲ್ಲಿ ಸ್ಪೆಷಲ್ ಟ್ರೀಟ್ ಕೊಟ್ಟಿದ್ದಾರೆ ಪ್ರಭಾಸ್.

ಸಾಹೋದಲ್ಲಿ ಸಿನಿಪ್ರಿಯರು ಸಂಭ್ರಮಿಸೋಕೆ ಇರೋ ಮತ್ತೊಂದು ಕಾರಣ ಅಂದ್ರೆ ಶ್ರದ್ಧಾ ಪ್ರಭಾಸ್‍ಗೆ ಕೊಟ್ಟಿರೋ ಸಖತ್ ಸಾಥ್. ಹಾಲಿವುಡ್ ಆ್ಯಕ್ಷನ್ ದೃಶ್ಯಗಳಲ್ಲಿ ಹೇಗೆ ಹೀರೋನಷ್ಟೇ ಹೀರೋಯಿನ್ ಕೂಡ 'ಫಾಸ್ಟ್ ಆ್ಯಂಡ್​ ಫ್ಯೂರಿಯಸ್' ಆಗಿ ಸ್ಟಂಟ್ ಮಾಡ್ತಾರೋ ಅಷ್ಟೇ ಪವರ್‍ಫುಲ್ ಆ್ಯಕ್ಷನ್‍ನಲ್ಲಿ ಶ್ರದ್ಧಾ, ಪ್ರಭಾಸ್ ಜೊತೆ ಮಿಂಚಿದ್ದಾರೆ.

ಪ್ರಭಾಸ್ ಹೊಸ ಸ್ಟೈಲಿಷ್ ಅವತಾರಕ್ಕೆ ಎಲ್ಲ ಕಡೆಯಿಂದಲೂ ಭರ್ಜರಿ ಶಹಬ್ಬಾಸ್ ಸಿಕ್ಕಿದೆ. ಪ್ರಭಾಸ್‍ರನ್ನು ನ್ಯಾಷನಲ್ ಸ್ಟಾರ್ ಮಾಡಿದ ಸ್ಟಾರ್ ನಿರ್ದೇಶಕ ರಾಜಮೌಳಿ, ಸಾಹೋ ಡಾರ್ಲಿಂಗ್ ಅಂದ್ರೆ ರಾಮ್‍ಗೋಪಾಲ್ ವರ್ಮಾ ಕೂಡ ಜೈ ಹೋ ಎಂದಿದ್ದಾರೆ. ವಿಶೇಷ ಅಂದ್ರೆ ಬಾಲಿವುಡ್ ಸ್ಟಾರ್​ಗಳೂ 'ಸಾಹೋ' ಟೀಸರ್ ನೋಡಿ ಅದ್ಭುತ ಅಂತ ಕೊಂಡಾಡಿದ್ದಾರೆ.


'ಸಾಹೋ' ಅಂದ್ರೆ ಶಹಬ್ಬಾಸ್... 'ಸಾಹೋ' ಅಂದ್ರೆ ಜೈ ಹೋ... 'ಸಾಹೋ' ಅಂದ್ರೆ ಗೆಲುವು.. . 'ಸಾಹೋ' ಅಂದ್ರೆ ಸಂಭ್ರಮ. ಈ ಎಲ್ಲವೂ ಪ್ರಭಾಸ್ ಸಿನಿಮಾಗೆ ಸಿಕ್ಕಿದೆ. ಬಾಹುಬಲಿ 2000 ಕೋಟಿ ಕಲೆಕ್ಷನ್ ಮಾಡಿತ್ತು. ಈಗ ಇದೇ ಆಗಸ್ಟ್ 15ಕ್ಕೆ ರಿಲೀಸ್ ಆಗಲಿರೋ ಈ ಸಿನಿಮಾ ಆ ದಾಖಲೆ ಮುರಿಯುತ್ತಾ ಅನ್ನೋ ಲೆಕ್ಕಾಚಾರ ಶುರುವಾಗಿದೆ.

 Photos: ಲವ್​ ಯೂ ಆಲಿಯಾ ಖ್ಯಾತಿಯ ನಟಿ ಭೂಮಿಕಾ ಮತ್ತೆ ನಾಯಕಿಯಾಗಿ ರಿಎಂಟ್ರಿ..!

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು