ಪ್ರಭಾಸ್​ ಜೊತೆ ನಟಿಸೋಕೆ ದೀಪಿಕಾ ಪಡುಕೋಣೆಗೆ ಭಯವಂತೆ!

Tollywood: ನಟಿ ದೀಪಿಕಾ ಪಡುಕೋಣೆ ಅವರು "ನಾನು ನಿಜವಾಗಿಯೂ ತುಂಬಾನೇ ನರ್ವಸ್ ಆಗಿದ್ದೇನೆ. ನಾನು ಮೊದಲ ಬಾರಿಗೆ ನಟ ಪ್ರಭಾಸ್ ಮತ್ತು ನಾಗ್ ಅಶ್ವಿನ್ ಅವರೊಂದಿಗೆ ಕೆಲಸ ಮಾಡುತ್ತಿರುವುದು ಎಂದು ಹೇಳಿದ್ದಾರೆ.

ಪ್ರಭಾಸ್​, ದೀಪಿಕಾ

ಪ್ರಭಾಸ್​, ದೀಪಿಕಾ

  • Share this:
ಟಾಲಿವುಡ್ ನ (Tollywood) ಜನಪ್ರಿಯ ನಟ ಪ್ರಭಾಸ್ (Prabhas) ಮತ್ತು ಬಾಲಿವುಡ್ (Bollywood) ನ ಬೆಡಗಿ ದೀಪಿಕಾ ಪಡುಕೋಣೆ (Deepika padkone)ಇಬ್ಬರು ತಮ್ಮ ತಮ್ಮ ಭಾಷೆಯ ಚಿತ್ರೋದ್ಯಮದಲ್ಲಿ ತುಂಬಾನೇ ಹೆಸರು ಮಾಡಿರೋರು ಎಂದು ಹೇಳಬಹುದು. ಈ ಇಬ್ಬರು ನಟರು ಮೊದಲ ಬಾರಿಗೆ ಒಂದು ಸಿನೆಮಾದಲ್ಲಿ(Film) ಜೊತೆಯಾಗಿ ನಟಿಸಲಿದ್ದಾರೆ. ಅಭಿಮಾನಿಗಳಿಗೆ (Big fans)ಸಹಜವಾಗಿಯೇ ಪ್ರಭಾಸ್ ಮತ್ತು ದೀಪಿಕಾ ನಡುವಿನ ಆ ನಟನೆಯ ಕೆಮಿಸ್ಟ್ರಿಯನ್ನು ನೋಡಲು ಕುತೂಹಲ ಇದ್ದೇ ಇರುತ್ತದೆ.

'ಪ್ರಾಜೆಕ್ಟ್ ಕೆ' ಚಿತ್ರ
ಈ ಟಾಲಿವುಡ್ ನಟ ಮತ್ತು ಬಾಲಿವುಡ್ ನ ಬೆಡಗಿ ಮೊದಲ ಬಾರಿಗೆ ತೆರೆಯನ್ನು ಹಂಚಿಕೊಳ್ಳುತ್ತಿರುವ ಚಿತ್ರ ನಾಗ್ ಅಶ್ವಿನ್ ಅವರ 'ಪ್ರಾಜೆಕ್ಟ್ ಕೆ' ಎಂದು ಹೇಳಲಾಗುತ್ತಿದ್ದು, ಡಿಸೆಂಬರ್ 7 ರಂದು ಈಗಾಗಲೇ ಹೈದರಾಬಾದಿನಲ್ಲಿರುವ ಅನ್ನಪೂರ್ಣ ಸ್ಟುಡಿಯೋದಲ್ಲಿ ಚಿತ್ರದ ಚಿತ್ರೀಕರಣವು ಪುನರಾರಂಭವಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ದೀಪಿಕಾ ಪಡುಕೋಣೆಗೆ ಸೀರೆ, ಅರಿಶಿನ-ಕುಂಕುಮ ಕೊಟ್ಟು ಸೆಟ್​ಗೆ ವೆಲ್​ಕಮ್​: ಫೋಟೋಗಳು ವೈರಲ್​!

ಹೈದರಾಬಾದ್‌ ನಲ್ಲಿ ಚಿತ್ರೀಕರಣ
ಕೆಲವು ದಿನಗಳ ಹಿಂದೆ ದೀಪಿಕಾ ಪಡುಕೊಣೆ ಅವರು ಹೈದರಾಬಾದ್‌ಗೆ ಈ ಚಿತ್ರದ ಚಿತ್ರೀಕರಣಕ್ಕಾಗಿ ಬಂದಿಳಿದಾಗ ಈ ಚಿತ್ರವು ಎಲ್ಲರ ಗಮನವನ್ನು ಸೆಳೆಯಿತು ಎಂದು ಹೇಳಬಹುದು. ಈ ಚಿತ್ರವು ಚಿತ್ರೀಕರಣ, ಬಜೆಟ್ ಮತ್ತು ಚಿತ್ರದ ಕಥೆಯ ಹೀಗೆ ಎಲ್ಲಾ ವಿಷಯಗಳಿಂದ ಅಭಿಮಾನಿಗಳನ್ನು ರಂಜಿಸಲಿದೆ ಎಂದು ಮೂಲಗಳು ತಿಳಿಸಿವೆ.

ಸಿನಿಪ್ರಿಯರು ಕುತೂಹಲ
ದೀಪಿಕಾ ಮತ್ತು ಪ್ರಭಾಸ್ ಮೊದಲ ಬಾರಿಗೆ ಒಟ್ಟಿಗೆ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇವರಿಬ್ಬರ ನಡುವಿನ ಕೆಮಿಸ್ಟ್ರಿ ಹೇಗಿರಬಹುದು ಎಂದು ಸಿನಿಪ್ರಿಯರು ಕುತೂಹಲದಿಂದ ಕಾಯುತ್ತಿದ್ದರೆ, ಇತ್ತ ಪ್ರಭಾಸ್ ಮತ್ತು ದೊಡ್ಡ ಬಜೆಟ್ ಚಿತ್ರದೊಂದಿಗೆ ಕೆಲಸ ಮಾಡುವ ಬಗ್ಗೆ ನಟಿ ದೀಪಿಕಾ ಮೌನ ಮುರಿದು ಈ ಚಿತ್ರದ ಬಗ್ಗೆ ಮಾತಾಡಿದ್ದಾರೆ.

ನರ್ವಸ್ ಆಗಿದ್ದೇನೆ
ಇತ್ತೀಚೆಗೆ ನೀಡಿದ ಒಂದು ಸಂದರ್ಶನದಲ್ಲಿ ನಟಿ ದೀಪಿಕಾ ಪಡುಕೋಣೆ ಅವರು "ನಾನು ನಿಜವಾಗಿಯೂ ತುಂಬಾನೇ ನರ್ವಸ್ ಆಗಿದ್ದೇನೆ. ನಾನು ಮೊದಲ ಬಾರಿಗೆ ನಟ ಪ್ರಭಾಸ್ ಮತ್ತು ನಾಗ್ ಅಶ್ವಿನ್ ಅವರೊಂದಿಗೆ ಕೆಲಸ ಮಾಡುತ್ತಿರುವುದು. ಕ್ಯಾಮೆರಾ ಮುಂದೆ ಸ್ವಲ್ಪ ಸಮಯ ಕಳೆದ ನಂತರ ನನಗೆ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಬಹುದು, ಆದರೂ ಇದು ಹಿಂದಿ ಭಾಷೆಯ ಚಿತ್ರಗಳನ್ನು ಹೊರತುಪಡಿಸಿ ಮಾಡುತ್ತಿರುವ ಹೊಸ ಭಾಷೆಯ ಕೆಲಸವಾಗಿದೆ. ಈ ಚಿತ್ರವೂ ವಿಎಫ್ಎಕ್ಸ್ ಕೆಲಸವನ್ನು ಒಳಗೊಂಡಿದ್ದು, ಒಟ್ಟಿನಲ್ಲಿ ಇದು ಹೊಸ ಪ್ರಪಂಚದ ಸಿನೆಮಾ ಆಗಿರುವುದರಿಂದ ನಾನು ತುಂಬಾನೇ ಉತ್ಸುಕಳಾಗಿದ್ದೇನೆ" ಎಂದು ಹೇಳಿದರು.

450 ರಿಂದ 500 ಕೋಟಿ ರೂಪಾಯಿಯ ಬಜೆಟ್
ಈಗ ಪ್ರಸ್ತುತ ಈ ಚಿತ್ರದ ಚಿತ್ರೀಕರಣದ ವೇಳಾಪಟ್ಟಿಯು 7 ರಿಂದ 8 ದಿನಗಳನ್ನು ಒಳಗೊಂಡಿದ್ದು, ನಟ ಶಾರುಖ್ ಖಾನ್ ನಟಿಸಿರುವ ಪಠಾಣ್ ಚಿತ್ರದ ಚಿತ್ರೀಕರಣಕ್ಕಾಗಿ ದೀಪಿಕಾ ಮತ್ತೆ ಮುಂಬೈಗೆ ತೆರಳಲಿದ್ದಾರೆ. ಇದೇ ಕಾರಣಕ್ಕಾಗಿ ನಟಿಯು ಕಿರು ವೇಳಾಪಟ್ಟಿಯ ಚಿತ್ರೀಕರಣವನ್ನು ಹೊಂದಿರಲು ಕಾರಣ ಎಂದು ಹೇಳಲಾಗುತ್ತಿದೆ. ಪ್ರಾಜೆಕ್ಟ್ ಕೆ' ಚಿತ್ರದ ಬಗ್ಗೆ ಮಾತನಾಡುವಾಗ ಇವರು “ಈ ಚಿತ್ರವು ಅಂದಾಜು 450 ರಿಂದ 500 ಕೋಟಿ ರೂಪಾಯಿಯ ಬಜೆಟ್ ನಲ್ಲಿ ತಯಾರಿಸಲಾಗುತ್ತಿದೆ. ಸಿನೆಮಾದ ಕಥೆಯ ಅಗತ್ಯಕ್ಕೆ ಅನುಗುಣವಾಗಿ ಬಜೆಟ್ ಈಗ ಅಂದಾಜಿಸಿರುವ ಮೊತ್ತವನ್ನು ಮೀರಬಹುದು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಬ್ಬಬ್ಬಾ.. ಶ್ರೀ ರಾಮನ ಪಾತ್ರಕ್ಕೆ ಪ್ರಭಾಸ್​​ ಪಡೆದ ಸಂಭಾವನೆ ಕೇಳಿದ್ರೆ ತಲೆ ತಿರುಗೋದು ಪಕ್ಕಾ

ರಾಧೆ ಶ್ಯಾಮ್ ನಲ್ಲಿ ಪ್ರಭಾಸ್ ರೋಮ್ಯಾನ್ಸ್
ನಟ ಪ್ರಭಾಸ್ ತಮ್ಮ ಮುಂಬರುವ ಚಿತ್ರವಾದ ‘ರಾಧೆ ಶ್ಯಾಮ್’ ಗಾಗಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ ಎಂದು ಹೇಳಬಹುದು. ಈ ಚಿತ್ರದಲ್ಲಿ ಪ್ರಭಾಸ್ ಮೊದಲ ಬಾರಿಗೆ ನಟಿ ಪೂಜಾ ಹೆಗ್ಡೆ ಜೊತೆ ರೋಮ್ಯಾನ್ಸ್ ಮಾಡಲಿದ್ದಾರೆ. ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯಿಸುತ್ತಿರುವ 'ರಾಧೆ ಶ್ಯಾಮ್' ಪ್ರಸ್ತುತ ಭಾರತೀಯ ಸಿನೆಮಾದಲ್ಲಿ ಬಿಡುಗಡೆಗಾಗಿ ಕಾಯುತ್ತಿರುವ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ರಾಧೆ ಶ್ಯಾಮ್’ ಚಿತ್ರದ ಕಥೆಯು 1970 ರ ಯುರೋಪ್ ಹಿನ್ನೆಲೆಯನ್ನು ಒಳಗೊಂಡಿದೆ, ಆದರೆ ಅದರ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ ಎನ್ನಲಾಗಿದೆ.
Published by:vanithasanjevani vanithasanjevani
First published: