‘ಸಾಹೋ‘ ಫ್ಲಾಪ್​​ನಿಂದ ಸಾಲದ ಸುಳಿಯಲ್ಲಿ ಸಿಲುಕಿದ ಪ್ರಭಾಸ್​: ಎಷ್ಟು ಕೋಟಿ ನಷ್ಟ ಗೊತ್ತೇ?

ಬೆಟ್ಟದಷ್ಟು ನಿರೀಕ್ಷೆ ಹೊತ್ತು ಪ್ರಭಾಸ್​-ಶ್ರದ್ಧಾ ಕಪೂರ್​ ಅಭಿನಯದ ‘ಸಾಹೋ’ ಸಿನಿಮಾ ತೆರೆಗೆ ಬಂದಿತ್ತು. ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್​ ಆಗಿದ್ದ ಈ ಚಿತ್ರ ಹೊಸ ದಾಖಲೆ ಸೃಷ್ಟಿಸುತ್ತದೆ ಎನ್ನಲಾಗಿತ್ತು. 

news18
Updated:October 11, 2019, 9:15 PM IST
‘ಸಾಹೋ‘ ಫ್ಲಾಪ್​​ನಿಂದ ಸಾಲದ ಸುಳಿಯಲ್ಲಿ ಸಿಲುಕಿದ ಪ್ರಭಾಸ್​: ಎಷ್ಟು ಕೋಟಿ ನಷ್ಟ ಗೊತ್ತೇ?
ನಿರ್ದೇಶಕ ಸುಜಿತ್​ ಹಾಗೂ ಪ್ರಭಾಸ್​
  • News18
  • Last Updated: October 11, 2019, 9:15 PM IST
  • Share this:
ಹೈದರಾಬಾದ್​​(ಅ.11): ಮೇಕಿಂಗ್‌ ಮೂಲಕವೇ ಭಾರೀ ಸದ್ದು ಮಾಡಿದ್ದ ಸಾಹೋ ರಿಲೀಸ್ ಆಗಿ ನಿರೀಕ್ಷಿಸಿದಷ್ಟು ಹಿಟ್​​ ಆಗಲಿಲ್ಲ ಎಂಬುದು ಗೊತ್ತಿರುವ ಸಂಗತಿ. ಖ್ಯಾತ ಡೈರೆಕ್ಟರ್​​ ರಾಜಮೌಳಿ ನಿರ್ದೇಶನದ ಪ್ಯಾನ್​​ ಇಂಡಿಯಾ ಮೂವಿ ಬಾಹುಬಲಿ ಸಕ್ಸಸ್​ ಬಳಿಕ​ ನಟ ಪ್ರಭಾಸ್‌ ಸಾಹೋ ಸಿನಿಮಾದಲ್ಲಿ ನಟಿಸಿದ್ದರು. ಪ್ರಭಾಸ್​​ರಂತಹ ದೊಡ್ಡ ಸ್ಟಾರ್​​ ಹೀರೋ ಜೊತೆಗೆ ಸಿನಿಮಾ ಮಾಡಿದ್ದ ಯಂಗ್​​ ನಿರ್ದೇಶಕ ಸುಜೀತ್ ರೆಡ್ಡಿ​ ಪ್ರೇಕ್ಷಕರನ್ನು​ ರಂಜಿಸುವಲ್ಲಿ ಎಡವಿದ್ದರು. ಇದರ ಪರಿಣಾಮ ಸಾಹೋ ಫ್ಲಾಪ್ ಆಗಿದ್ದು, ಹಾಕಿದ ಬಂಡವಾಳವೂ ವಾಪಸ್ಸು ಬರಲಿಲ್ಲ.

ಸದ್ಯ​​ ಸಾಹೋ ಫ್ಲಾಪ್ ಆದ ಬೆನ್ನಲ್ಲೇ ಚಿತ್ರತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಈ ಸಿನಿಮಾ ಫ್ಲಾಪ್​​ನಿಂದಾಗಿ ನಟ ಪ್ರಭಾಸ್​​ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ. ಹೌದು, ಇದೇನಿದು ನಟ ಪ್ರಭಾಸ್​​​ ಸಾಲಕ್ಕೆ ಸಿಲುಕಿದ್ದಾರೆಯೇ ಎಂಬ ಪ್ರಶ್ನೆ ಹುಟ್ಟಬಹುದು. ನಿಮ್ಮ ಪ್ರಶ್ನೆ ಎಷ್ಟು ನಿಜವೂ ಅಷ್ಟೇ ಪ್ರಭಾಸ್​​ ಸಾಲಕ್ಕೆ ಸಿಲುಕಿದ್ಧಾರೆ ಎಂಬುದು ವಾಸ್ತವ.ಒಂದು ಭಾರೀ ಬಜೆಟ್​​ನ ಸಿನಿಮಾ ನಿರ್ಮಾಣಕ್ಕೆ ನಿರ್ಮಾಪಕರು ತಮ್ಮ ಸ್ವಂತ ದುಡ್ಡಲ್ಲದೇ ಬೇರೆ ಕಡೆಯಿಂದ ಸಾಲ ಮಾಡಿರುತ್ತಾರೆ. ಈಗ ಸಾಹೋ ಸಿನಿಮಾ ವಿಚಾರದಲ್ಲೂ ನಡೆದದ್ದು ಅದೇ. ಹೇಗಿದ್ದರೂ ಸಿನಿಮಾ ಹಿಟ್​​ ಆಗಲಿದೆ, ನಾನು ಹಾಕಿರುವ ದುಡ್ಡು ವಾಪಸ್ಸು ಬರಲಿದೆ ಎಂದು ಭಾವಿಸಿ ನಟ ಪ್ರಭಾಸ್​​ ಸಾಲ ಮಾಡಿದ್ರು. ಈ ಸಿನಿಮಾ ನಿರ್ಮಿಸಿದವರು ಬೇರೆ ಪ್ರಭಾಸ್​​​ ಆಪ್ತರು.ಒಂದೆಡೆ ಸಾಹೋ ರಿಲೀಸ್​​ ಆಗಿ 400 ಕೋಟಿ ರೂ. ಸಂಗ್ರಹಿಸಿದೆ ಎಂದು ಪ್ರಚಾರ ಮಾಡಲಾಗುತ್ತಿದೆಯಾದರೂ, ಮೂಲಗಳ ಪ್ರಕಾರ ಅಷ್ಟು ಹಣ ಬಂದಿಲ್ಲ ಎಂಬುದು ಅಸಲಿ ವಿಚಾರ. ಹಾಗೆಯೇ ಸಿನಿಮಾ ಫ್ರೀ ರಿಲೀಸ್​​​​ಗೆ ಮುನ್ನ ನಿರ್ಮಾಪಕರು ತೆಗೆದುಕೊಂಡ ಹಣವೂ ವಿತರಕರಿಗೆ ವಾಪಸ್ಸು ನೀಡಬೇಕಾದ ಪರಿಸ್ಥಿತಿ ಬಂದೊದಗಿದೆ. ವಿತರಕರಿಗೆ ಪ್ರಭಾಸ್​​​ ಹಣ ವಾಪಸ್ಸು ಮಾಡುವುದಾಗಿ ಅಭಯ ನೀಡಿದ್ದಾರೆ ಎಂಬುದು ಸದ್ಯದ ಸಂಗತಿ. ಈ ಚಿತ್ರದ ಲಾಸ್​ನಿಂದಾಗಿ ಕೆಲವೆಡೆ ಪ್ರಭಾಸ್​​ ಅಗ್ರೀಮೆಂಟ್​​ಗೆ ಸಹಿ ಮಾಡಿದ್ದಾರೆ ಎಂಬ ಸುದ್ದಿಯೂ ಹಬ್ಬಿದೆ. ಸುಮಾರು 50 ಕೋಟಿ ಹಣ ಪ್ರಭಾಸ್​​ ತಲೆಮೇಲೆ ಬಿದ್ದಿದೆ ಎಂದೇಳಲಾಗುತ್ತಿದೆ.

ಇದನ್ನೂ ಓದಿ: ಸಾಹೋ ರಿಲೀಸ್​ಗೆ ಭಾರತದಲ್ಲಿರಲ್ಲ ಪ್ರಭಾಸ್; ಕದ್ದುಮುಚ್ಚಿ ವಿದೇಶಕ್ಕೆ ಹೋಗುತ್ತಿರುವುದು ಯಾರ ಜೊತೆ?ಬೆಟ್ಟದಷ್ಟು ನಿರೀಕ್ಷೆ ಹೊತ್ತು ಪ್ರಭಾಸ್​-ಶ್ರದ್ಧಾ ಕಪೂರ್​ ಅಭಿನಯದ ‘ಸಾಹೋ’ ಸಿನಿಮಾ ತೆರೆಗೆ ಬಂದಿತ್ತು. ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್​ ಆಗಿದ್ದ ಈ ಚಿತ್ರ ಹೊಸ ದಾಖಲೆ ಸೃಷ್ಟಿಸುತ್ತದೆ ಎನ್ನಲಾಗಿತ್ತು.
-------------
First published:October 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading