ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ (Prabhas) ಮದುವೆ ವಿಚಾರ ಯಾವಾಗಲೂ ಸುದ್ದಿಯಲ್ಲಿರುತ್ತೆ. ನಟ ಪ್ರಭಾಸ್ ಮದುವೆ ಯಾವಾಗ. ಯಾರನ್ನಾದ್ರೂ ಲವ್ (Love) ಮಾಡ್ತಿದ್ದಾರಾ ಎಂಬ ಗುಮಾನಿಗಳು ಹರಿದಾಡ್ತಿವೆ. ಅಲ್ಲದೇ ಈ ಹಿಂದೆ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಜೊತೆ ಮದುವೆ ಆಗ್ತಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಆ ರೀತಿ ಇಲ್ಲ ಎಂಬ ಸ್ಪಷ್ಟನೆ ನೀಡಿದ್ದರು. ಈಗ ಪ್ರಭಾಸ್ ಹೆಸರು ಕೃತಿ ಸನೋನ್ (Kriti Sanon) ಜೊತೆ ಓಡಾಡ್ತಿದೆ. ಇಬ್ಬರು ಜೊತೆಗೆ ಡೇಟಿಂಗ್ (Dating) ಮಾಡ್ತಿದ್ದಾರೆ ಎಂದು ಹೇಳಲಾಗ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ವರುಣ್ ಧವನ್ (Varun Dhawan), ರಿಯಾಲಿಟಿ ಶೋ ಒಂದರಲ್ಲಿ ಸತ್ಯವೊಂದನ್ನು ಬಾಯ್ಬಿಟ್ಟಿದ್ದಾರೆ. ನನ್ನ ಹುಡುಗಿಯರ ಪಟ್ಟಿಯಲ್ಲಿ ಕೃತಿ ಸನೋನ್ ಹೆಸರನ್ನು ಕೈ ಬಿಟ್ಟಿದ್ದೇನೆ. ಕೃತಿ ಹೆಸರು ಬೇರೆಯವರ ಹೃದಯದಲ್ಲಿದೆ. ಅವರು ಈಗ ಮುಂಬೈನಲ್ಲಿ ಇಲ್ಲ. ಅವರು ದೀಪಿಕಾ ಪಡುಕೋಣೆ ಜೊತೆ ಶೂಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಪ್ರಭಾಸ್-ಕೃತಿ ಸನೋನ್ ಮಧ್ಯೆ ಪ್ರೀತಿ?
ನಟ ಪ್ರಭಾಸ್ ಅವರು ಕೃತಿ ಸನೋಲ್ ಜೊತೆ ಡೇಟಿಂಗ್ ಮಾಡ್ತಾ ಇದ್ದಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿದೆ. ಅಲ್ಲದೇ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರಾ ಎಂಬ ಅನುಮಾನಗಳು ಶುರುವಾಗಿವೆ. ಆದ್ರೆ ಅಭಿಮಾನಿಗಳು ಈ ಸುದ್ದಿ ನಿಜ ಆಗಲಿ, ಇಬ್ಬರು ಮದುವೆ ಆಗಲಿ ಎನ್ನುತ್ತಿದ್ದಾರೆ.
ರಿಯಾಲಿಟಿ ಶೋ ನಲ್ಲಿ ನಡೆದಿದ್ದೇನು?
ವರುಣ್ ಧವನ್ ಅವರು ಇತ್ತೀಚೆಗೆ ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸಿದ್ದರು. ಆ ಶೋನಲ್ಲಿ ಕೃತಿ ಸನೋನ್ ಸಹ ಇದ್ದರು. ಆಗ ಕರಣ್ ಜೋಹರ್ ಒಂದು ಪ್ರಶ್ನೆ ಕೇಳಿರುತ್ತಾರೆ. ಅದಕ್ಕೆ ಉತ್ತರಿಸುವಾಗ ವರುಣ್, ತಮ್ಮಗೆ ಇಷ್ಟವಾದ ನಾಯಕಿಯರ ಪಟ್ಟಿಯಲ್ಲಿ ಕೃತಿ ಸನೋಲ್ ಹೆಸರು ಕೈ ಬಿಟ್ಟಿದ್ದಾರೆ. ಯಾಕೆ ಎಂದು ಕರಣ್ ಕೇಳ್ತಾರೆ.
ಇದನ್ನೂ ಓದಿ: Bhagya Lakshmi: ಗೃಹಪ್ರವೇಶದ ಮನೆಯಲ್ಲಿ ಭಾಗ್ಯಲಕ್ಷ್ಮಿ ನಳಪಾಕ, ನೆತ್ತಿಗೇರಿದ ತಾಂಡವ್ ಕೋಪ!
ವರುಣ್ ಧವನ್ ಕೊಟ್ಟ ಉತ್ತರ ಏನು?
'ಈ ಪಟ್ಟಿಯಲ್ಲಿ ಕೃತಿ ಸನೋನ್ ಹೆಸರು ಇಲ್ಲ. ಯಾಕೆಂದರೆ ಅವರ ಹೆಸರು ಬೇರೆ ವ್ಯಕ್ತಿಯ ಹೃದಯದಲ್ಲಿದೆ. ಅವರು ಈಗ ಮುಂಬೈನಲ್ಲಿ ಇಲ್ಲ. ಈಗ ದೀಪಿಕಾ ಪಡುಕೋಣೆ ಜೊತೆ ಶೂಟಿಂಗ್ ಮಾಡುತ್ತಿದ್ದಾರೆ' ಎಂದು ವರುಣ್ ಧವನ್ ಹೇಳಿದ್ದಾರೆ.
Whaaaaaaattt 😯😁🥰💖...... Joo meyy soch raha hoo, voo aap log bii?!😌😹🤔🤔. #KritiSanon #Prabhas𓃵 !! #ProjectK 🪐 pic.twitter.com/F3s91EyFwe
— Jai Kiran💕Adipurush🏹 (@Kiran2Jai) November 27, 2022
ಪ್ರಾಜೆಕ್ಟ್ ಕೆ ಸಿನಿಮಾದ ಶೂಟಿಂಗ್
ನಟ ಪ್ರಭಾಸ್ ಮತ್ತು ದೀಪಿಕಾ ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಇದನ್ನೇ ವರುಣ್ ಧವನ್ ಹೇಳಿದ್ದಾರೆ. ಹಾಗಾದ್ರೆ ವರುಣ್ ಹೇಳಿದ್ದು, ಪ್ರಭಾಸ್-ಕೃತಿ ಸನೋಲ್ ಪ್ರೀತಿಯ ಬಗ್ಗೆ ಎಂಬ ಅನುಮಾನಗಳು ಹೆಚ್ಚಾಗಿವೆ.
ಆದಿಪುರುಷ್ ಸಿನಿಮಾದಿಂದ ಆತ್ಮೀಯತೆ
ಆದಿಪುರುಷ್ ಸಿನಿಮಾದಲ್ಲಿ ಪ್ರಭಾಸ್ ರಾಮನ ಪಾತ್ರ ಮಾಡುತ್ತಿದ್ದಾರೆ. ಸೀತೆಯ ಪಾತ್ರವನ್ನು ಕೃತಿ ಸನೋನ್ ಮಾಡುತ್ತಿದ್ದಾರೆ. ಇಬ್ಬರಿಗೂ ಶೂಟಿಂಗ್ ವೇಳೆ ಆತ್ಮೀಯತೆ ಬೆಳೆದಿದೆ ಎಂದು ಹೇಳಲಾಗ್ತಿದೆ. ಅಲ್ಲದೇ ಇಬ್ಬರು ಡೇಟಿಂಗ್ ಮಾಡ್ತಾ ಇದ್ದಾರೆ ಎಂಬ ವದಂತಿಗಳು ಹಬ್ಬಿವೆ. ಈ ಬಗ್ಗೆ ಅವರು ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ.
ಇದನ್ನೂ ಓದಿ: Kendasampige: ಸುಮನಾ ಮೇಲೆ ಒಡವೆ ಕದ್ದ ಆರೋಪ, ಮನೆ ಬಿಟ್ಟು ಕಳಿಸಲು ಸಾಧನಾ ಕುತಂತ್ರ!
ಸೆಲೆಬ್ರಿಟಿಗಳ ಡೇಟಿಂಗ್ ಕಾಮನ್ ಆಗಿ ಬಿಟ್ಟಿದೆ. ಈಗ ಯಾರು, ಯಾರ ಜೊತೆ ಡೇಟಿಂಗ್ ಮಾಡ್ತಾರೆ ಅನ್ನೋದೆ ಸುದ್ದಿ. ಡೇಟಿಂಗ್ ಮಾಡಿದವರೆಲ್ಲಾ ಮದುವೆ ಆಗ್ತಾರೆ, ಲವ್ ಮಾಡ್ತಾರೆ ಅಂತ ಅಲ್ಲ. ಆದ್ರೆ ಇಬ್ಬರ ಮಧ್ಯೆ ಏನೋ ಇದೆ ಎಂಬುದು ಮಾತ್ರ ಗೊತ್ತಾಗುತ್ತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ