Prabhas Marriage: ಪ್ರಭಾಸ್​ಗೆ ಕೊನೆಗೂ ಕೂಡಿಬಂದ ಕಂಕಣಬಲ: ಯಂಗ್​ ರೆಬೆಲ್​ ಸ್ಟಾರ್ ಕೈ ಹಿಡಿಯಲಿರುವ ಹುಡುಗಿ ಇವರೇ​..!

Prabhas: ವಯಸ್ಸು 40 ಆದರೂ ಪ್ರಭಾಸ್​ ಇನ್ನೂ ಮದುವೆ ಮಾತೇ ಎತ್ತುತ್ತಿಲ್ಲ. ಇದರಿಂದಾಗಿ ನಿಜಕ್ಕೂ ಅವರ ಅಭಿಮಾನಿಗಳಿಗೆ ಕೊಂಚ ಬೇಸರ ಮೂಡಿರೋದಂತೂ ಸತ್ಯ. ಬಾಹುಬಲಿ ಸಿನಿಮಾದ ನಂತರ ಡಾರ್ಲಿಂಗ್​ ಮದುವೆ ನಿರ್ಧಾರವಾಗಲಿದೆ ಎಂದು ಹೇಳಲಾಗುತ್ತಿತ್ತು. ಅದು ಸಾಹೋ ನಂತರವೂ ಆಗಲಿಲ್ಲ. ಆದರೆ ಈಗ ಆ ಸಿಹಿ ಸುದ್ದಿ ಕೇಳುವ ಭಾಗ್ಯ ಪ್ರಭಾಸ್​ ಅಭಿಮಾನಿಗಳದ್ದಾಗಲಿದೆಯಂತೆ.

Anitha E | news18-kannada
Updated:December 21, 2019, 10:36 AM IST
Prabhas Marriage: ಪ್ರಭಾಸ್​ಗೆ ಕೊನೆಗೂ ಕೂಡಿಬಂದ ಕಂಕಣಬಲ: ಯಂಗ್​ ರೆಬೆಲ್​ ಸ್ಟಾರ್ ಕೈ ಹಿಡಿಯಲಿರುವ ಹುಡುಗಿ ಇವರೇ​..!
ಪ್ರಭಾಸ್
  • Share this:
ಟಾಲಿವುಡ್​ ಯಂಗ್​ ರೆಬೆಲ್​ ಸ್ಟಾರ್​ ಪ್ರಭಾಸ್​ ರಾಜು ಅವರ ಮದುವೆ ವಿಷಯ ಯಾವ ಮೆಗಾ ಧಾರವಾಹಿಗೂ ಕಡಿಮೆ ಇಲ್ಲ. ಆದರೂ ಜನ ಸೀರಿಯಲ್​ ನೋಡುವಂತೆಯೇ ಪ್ರಭಾಸ್​ಅಭಿಮಾನಿಗಳು ಅವರ ವಿವಾಹದ ಸುದ್ದಿಗಾಗಿ ಕಾದು ಕುಳಿತಿದ್ದಾರೆ. 

ವಯಸ್ಸು 40 ಆದರೂ ಪ್ರಭಾಸ್​ ಇನ್ನೂ ಮದುವೆ ಮಾತೇ ಎತ್ತುತ್ತಿಲ್ಲ. ಇದರಿಂದಾಗಿ ನಿಜಕ್ಕೂ ಅವರ ಅಭಿಮಾನಿಗಳಿಗೆ ಕೊಂಚ ಬೇಸರ ಮೂಡಿರೋದಂತೂ ಸತ್ಯ. 'ಬಾಹುಬಲಿ' ಸಿನಿಮಾದ ನಂತರ ಡಾರ್ಲಿಂಗ್​ ಮದುವೆ ನಿರ್ಧಾರವಾಗಲಿದೆ ಎಂದು ಹೇಳಲಾಗುತ್ತಿತ್ತು. ಅದು 'ಸಾಹೋ' ನಂತರವೂ ಆಗಲಿಲ್ಲ. ಆದರೆ ಈಗ ಆ ಸಿಹಿ ಸುದ್ದಿ ಕೇಳುವ ಭಾಗ್ಯ ಪ್ರಭಾಸ್​ ಅಭಿಮಾನಿಗಳದ್ದಾಗಲಿದೆಯಂತೆ.

ಪ್ರಭಾಸ್​


ಹೌದು, ಪ್ರಭಾಸ್​ ಈ ಡಿಸೆಂಬರ್​ 31ಕ್ಕೆ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಲಿದ್ದಾರಂತೆ. ಅದೂ ಕೂಡ ಅವರ ವಿವಾಹದ ವಿಷಯವಾಗಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ.

ಇದನ್ನೂ ಓದಿ: ದರ್ಶನ್​ ಅಭಿನಯದ 'ರಾಬರ್ಟ್​' ಚಿತ್ರದ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ..!

ನಟ ಕೃಷ್ಣಂರಾಜು ಅವರ ಪತ್ನಿ ಈ ಹಿಂದೆ ಪ್ರಭಾಸ್​ ವಿವಾಹದ ಕುರಿತಾಗಿ ಹರಿದಾಡುವ ಸುದ್ದಿಗಳನ್ನು ಮನೆಯಲ್ಲಿ ತಮಾಷೆಯಾಗಿ ಎಂಜಾಯ್​ ಮಾಡುತ್ತೇವೆ ಎಂದಿದ್ದರು. ಅದರ ಜೊತೆಗೆ ಸದ್ಯ ಪ್ರಭಾಸ್​​ ಮಾಡುತ್ತಿರುವ ಸಿನಿಮಾಗಳು ಪೂರ್ತಿಯಾದ ನಂತರ ವಿವಾಹದ ಬಗ್ಗೆ ಯೋಚಿಸುವುದಾಗಿ ಹೇಳಿಕೊಂಡಿದ್ದರು.

ಆದರೆ ಸದ್ಯ ಪ್ರಭಾಸ್​ ನಿರ್ದೇಶಕ ರಾಧಾಕೃಷ್ಣ ಕುಮಾರ್​ ಅವರ ಹೊಸ ಸಿನಿಮಾದಲ್ಲಿ ಜನವರಿ 3ರಿಂದ ಬ್ಯುಸಿಯಾಗಲಿದ್ದಾರೆ. ಇದರಿಂದಾಗಿ ಅದಕ್ಕೂ ಮೊದಲೇ ಡಾರ್ಲಿಂಗ್​ ವಿವಾಹದ ಸುದ್ದಿ ಪ್ರಕಟವಾಗಲಿದೆ ಎಂಬ ಸುದ್ದಿ ಸದ್ಯ ಸದ್ದು ಮಾಡುತ್ತಿದೆ.ಇದನ್ನೂ ಓದಿ: DBoss Roberrt: ಡಿಬಾಸ್​ ಅಭಿಮಾನಿಗಳಿಗೆ ರಾಬರ್ಟ್​ ಚಿತ್ರತಂಡದಿಂದ ಮತ್ತೊಂದು ಸಿಹಿ ಸುದ್ದಿ..!

ಇನ್ನು ಈ ಹಿಂದೆ ನಟಿ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್​ ಅವರ ನಡುವೆ ಪ್ರೇಮಾಂಕುರವಾಗಿದ್ದು, ಅವರ ವಿವಾಹ ನಡೆಯಲಿದೆ ಅನ್ನೋ ಗಾಳಿ ಸುದ್ದಿ ಸಿಕ್ಕಾಪಟ್ಟೆ ಹರಿದಾಡುತ್ತಿತ್ತು. ಆದರೆ ಈಗ ಮತ್ತೊಂದು ಹೊಸ ಸುದ್ದಿ ಓಡಾಡುತ್ತಿದೆ. ಅದು ಪ್ರಭಾಸ್​ ಅಮೆರಿಕದ ಉದ್ಯಮಿಯೊಬ್ಬರ ಮಗಳನ್ನು ಪ್ರೀತಿಸುತ್ತಿದ್ದು, ಅವರೊಂದಿಗೆ ವಿವಾಹವಾಗಲಿದ್ದಾರಂತೆ.

Chandan Shetty - Niveditha Gowda Marriage: ಜೋರಾಗಿ ನಡೆದಿದೆ ಚಂದನ್​ ಶೆಟ್ಟಿ-ನಿವೇದಿತಾ ಗೌಡ ಮದುವೆ ತಯಾರಿ..!

Published by: Anitha E
First published: December 21, 2019, 10:36 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading