'ಸಾಹೋ' ನಂತರ ಪ್ರಭಾಸ್ ಅಭಿನಯದ 'ಜಾನ್' ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣವೂ ಆರಂಬವಾಗಿದೆ. ಈ ಸಿನಿಮಾದಲ್ಲಿ ಪ್ರಭಾಸ್ಗೆ ಕರಾವಳಿ ಚೆಲುವೆ ಪೂಜಾ ಹೆಗ್ಡೆ ಜೋಡಿಯಾಗಿದ್ದಾರೆ.
'ಜಿಲ್' ಖ್ಯಾತಿಯ ರಾಧಾಕೃಷ್ಣ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಚಿತ್ರೀಕರಣ ಆರಂಭವಾದ ಬಗ್ಗೆ ಖುದ್ದು
ಪ್ರಭಾಸ್ ತಮ್ಮ ಇನ್ಸ್ಟಾಗ್ರಾಂ ಮೂಲಕ ಪ್ರಕಟಿಸಿದ್ದರು. ಅಲ್ಲದೆ ಚಿತ್ರೀಕರಣದ ಸೆಟ್ನಲ್ಲೇ ತೆಗೆಸಿಕೊಂಡಿರುವ ಒಂದು ಫೋಟೋವನ್ನು ಹಂಚಿಕೊಂಡಿದ್ದರು.
ಹೀಗಿರುವಾಗಲೇ 'ಜಾನ್' ಸಿನಿಮಾ ಕುರಿತಾದ ಸುದ್ದಿಯೊಂದು ಟಾಲಿವುಡ್ನಲ್ಲಿ ಹರಿದಾಡುತ್ತಿದೆ. ಅದು ಪ್ರಭಾಸ್ 'ಜಾನ್' ಚಿತ್ರತಂಡಕ್ಕೆ ವಾರ್ನ್ ಮಾಡಿದ್ದಾರಂತೆ. ಅದಕ್ಕೂ ಕಾರಣ ಇದೆ. ಸದ್ಯ ಈ ಸಿನಿಮಾದ ಚಿತ್ರೀಕರಣ ರಾಮೋಜಿ ಫಿಲ್ಮ್ಸಿಟಿಯಲ್ಲಿ ನಡೆಯುತ್ತಿದೆ.
ಇದನ್ನೂ ಓದಿ: Mahesh Babu: ಗಣರಾಜ್ಯೋತ್ಸವದಂದು ಸೈನಿಕರೊಂದಿಗೆ ಕಳೆದ ಕ್ಷಣಗಳನ್ನು ನೆನಪಿಸಿಕೊಂಡ ಮಹೇಶ್ ಬಾಬು..!
ಚಿತ್ರೀಕರಣದ ಸೆಟ್ನಿಂದ ಯಾವುದೇ ರೀತಿಯ ಫೋಟೋ ಅಥವಾ ವಿಡಿಯೋಗಳು ಲೀಕ್ ಆಗಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಚಿತ್ರೀಕರಣದ ಫೋಟೋಗಳಾಗಲಿ ಅಥವಾ ಸೆಟ್ನ ಫೋಟೋಗಳಾಗಲಿ ಯಾರೂ ಕ್ಲಿಕ್ಕಿಸಬಾರದು ಎಂದು ಕಟ್ಟುನಿಟ್ಟಾಗಿ ಹೇಳಿದ್ದಾರಂತೆ.
Shraddha Kapoor: ಮದುವೆ ಸುದ್ದಿ ಬಗ್ಗೆ ಸ್ಪಷ್ಟನೆ ಕೊಟ್ಟ ಶ್ರದ್ಧಾ ಕಪೂರ್..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ