Salaar: ಪ್ರಶಾಂತ್ ನೀಲ್​ಗೆ ಬೆದರಿಕೆ ಪತ್ರ! ಸೂಸೈಡ್ ಮಾಡಿಕೊಳ್ತೇನೆ ಎಂದಿದ್ಯಾಕೆ ಪ್ರಭಾಸ್​ ಫ್ಯಾನ್?​

ಕೆಜಿಎಫ್​ 2 ಸಿನಿಮಾದ ಬಳಿಕ  ಪ್ರಶಾಂತ್​ ನೀಲ್ ವಿಶ್ವವದಾದ್ಯಂತ ಫೇಮಸ್ ಆಗಿದ್ದಾರೆ. ಇವರ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾದು ಕುಳಿತಿದಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್​ ಈಗಾಗಲೇ ಪ್ರಭಾಸ್​ ಜೊತೆ ಸಲಾರ್​ ಸಿನಿಮಾ ಮಾಡುತ್ತಿದ್ದಾರೆ

ಪ್ರಶಾಂತ್​ ನೀಲ್, ಪ್ರಭಾಸ್​

ಪ್ರಶಾಂತ್​ ನೀಲ್, ಪ್ರಭಾಸ್​

  • Share this:
ಅಭಿಮಾನ ಇರಬೇಕು ಆದರೆ ಹುಚ್ಚಾಭಿಮಾನ ಇರಬಾರದು ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಕೆಲವರಿಗೆ ತಮ್ಮ ನೆಚ್ಚಿನ ನಟ (Favorite Hero) ನನ್ನು ಕಂಡರೆ ಎಲ್ಲಿಲ್ಲದ ಪ್ರೀತಿ, ಗೌರವ. ದೇವರಂತೆ ಅವರನ್ನು ಕಾಣುತ್ತಾರೆ. ಈ ಹಿಂದೆ ರಾಧೆ-ಶ್ಯಾಮ್’ (Radhe Shyam) ಸಿನಿಮಾದ ಬಗ್ಗೆ ಕೆಟ್ಟ ವಿಮರ್ಶೆಗಳು ಬಂದಿವೆಯೆಂದು, ಸಿನಿಮಾ ಚೆನ್ನಾಗಿಲ್ಲವೆಂದು ಚರ್ಚೆಯಾಗುತ್ತಿದೆ ಎಂದು ಬೇಸರಗೊಂಡ ಪ್ರಭಾಸ್​ (Prabhas) ಅಭಿಮಾನಿಯೊಬ್ಬ ಆತ್ಮಹತ್ಯೆ (Suicide) ಮಾಡಿಕೊಂಡಿದ್ದ.  ಆಂಧ್ರ ಪ್ರದೇಶದ ಕರ್ನೂಲಿನಲ್ಲಿ ರವಿ ತೇಜ ಎಂಬ ಪ್ರಭಾಸ್ ಅಭಿಮಾನಿಯೊಬ್ಬ, ‘ರಾಧೆ-ಶ್ಯಾಮ್’ ಸಿನಿಮಾ ಚೆನ್ನಾಗಿಲ್ಲವೆಂದು ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ರವಿ ತೇಜ ಈ ಸಿನಿಮಾ ಮೇಲೆ ಭಾರಿ ನೀರಿಕ್ಷೆಗಳನ್ನು ಇಟ್ಟಕೊಂಡಿದ್ದ. ಆದರೆ, ಸಿನಿಮಾದ ಮೇಲಿದ್ದ ತನ್ನ ನಿರೀಕ್ಷೆಗಳು ಹುಸಿಯಾದುವೆಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೀಗ ಮತ್ತೊಬ್ಬ ಪ್ರಭಾಸ್​ ಅಭಿಮಾನಿ ಇದೇ ರೀತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ್ದಾರೆ.

ಪ್ರಶಾಂತ್​ ನೀಲ್​ಗೆ ಆತ್ಮಹತ್ಯೆ ಬೆದರಿಕೆ ಪತ್ರ!

ಕೆಜಿಎಫ್​ 2 ಸಿನಿಮಾದ ಬಳಿಕ  ಪ್ರಶಾಂತ್​ ನೀಲ್ ವಿಶ್ವವದಾದ್ಯಂತ ಫೇಮಸ್ ಆಗಿದ್ದಾರೆ. ಇವರ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾದು ಕುಳಿತಿದಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್​ ಈಗಾಗಲೇ ಪ್ರಭಾಸ್​ ಜೊತೆ ಸಲಾರ್​ ಸಿನಿಮಾ ಮಾಡುತ್ತಿದ್ದಾರೆ. ಇನ್ನೂ ಶೂಟಿಂಗ್​ ಹಂತದಲ್ಲಿ ಸಿನಿಮಾ ಇದೆ. ಆದರೆ, ಇಲ್ಲೊಬ್ಬ ಪ್ರಭಾಸ್​ ಅಭಿಮಾನಿ ಸಲಾರ್​ ಶೂಟಿಂಗ್​ ಯಾವ ಹಂತದಲ್ಲಿದೆ? ಯಾವಾಗ ರಿಲೀಸ್​ ಮಾಡ್ತೀರಾ? ಅಪ್​ಡೇಟ್​ ಕೊಡಿ ಇಲ್ಲದಿದ್ದರೆ ನಾನು ಸಾಯುತ್ತೇನೆ ಎಂದು ಆತ್ಮಹತ್ಯೆ ಬೆದರಿಕೆ ಪತ್ರ ಬರೆದಿದ್ದಾನೆ.

ಕಳೆದ ವರ್ಷ ಬೆದರಿಕೆ ಹಾಕಿದ್ದ ಪ್ರಭಾಸ್​ ಫ್ಯಾನ್ಸ್​!

ಕಳೆದ ವರ್ಷ ಕೆಲವು ಪ್ರಭಾಸ್ ಅಭಿಮಾನಿಗಳು ಆತ್ಮಹತ್ಯೆ ಪತ್ರ ಬರೆದಿದ್ದರು. ‘ರಾಧೆ-ಶ್ಯಾಮ್’ ಸಿನಿಮಾದ ಅಪ್‌ಡೇಟ್ ಬಿಡುಗಡೆ ಮಾಡದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಸಿನಿಮಾದ ಟೀಸರ್ ಬಿಡುಗಡೆ ಮಾಡಿತ್ತು ಚಿತ್ರತಂಡ. ರಾಧೆ-ಶ್ಯಾಮ್​ ಬಿಡುಗಡೆಯಾದ ಬಳಿಕ ಚೆನ್ನಾಗಿಲ್ಲ ಎಂದು ಮನನೊಂದು ಪ್ರಭಾಸ್​ ಅಭಿಮನಿಯೊಬ್ಬ  ಸೂಸೈಡ್​ ಮಾಡಿಕೊಂಡಿದ್ದ.

ಇದನ್ನೂ ಓದಿ: ಖ್ಯಾತ ನಟ ಕಮಲ್ ಹಾಸನ್​ ವಿರುದ್ಧ ದೂರು ದಾಖಲು, ಅಂಥಾದ್ದೇನು ಮಾಡಿದ್ದಾರೆ ಅಂತ ನೀವೇ ನೋಡಿ

ಪ್ರಭಾಸ್​ರ ಅಪ್ಪಟ ಅಭಿಮಾನಿ ರವಿ ತೇಜ!

ಕರ್ನೂಲಿನ ತಿಲಕ್‌ ನಗರ ನಿವಾಸಿಯಾಗಿದ್ದ 24 ವರ್ಷ ವಯಸ್ಸಿನ ರವಿ ತೇಜ, ಪ್ರಭಾಸ್‌ರ ಅಪ್ಪಟ ಅಭಿಮಾನಿ. ‘ರಾಧೆ-ಶ್ಯಾಮ್ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ.  ಅವರ ಫ್ರೆಂಡ್ಸ್​ ಹಾಗೂ ಕೆಲ ಕುಟುಂಬಸ್ಥರು ಕೂಡ ಈ ಸಿನಿಮಾ ಚೆನ್ನಾಗಿಲ್ಲ ಎಂದು ಮಾತನಾಡಿದ್ದನ್ನು ಈತ ಕೇಳಿಸಿಕೊಂಡಿದ್ದಾನೆ. ಸಿನಿಮಾ ಚೆನ್ನಾಗಿಲ್ಲದೇ ಇರುವುದು ರವಿ ತೇಜ ಅನ್ನು ಖಿನ್ನತೆಗೆ ಗುರಿ ಮಾಡಿತ್ತು. ಹೀಗಾಗಿ ತನ್ನ ಮನೆಯಲ್ಲಿಯೇ ಆತ ಆತ್ಮಹತ್ಯೆಗೆ ಶರಣಾಗಿದ್ದ. ಮಗನನ್ನು ಕಳೆದುಕೊಂಡು ಕುಟುಂಬಸ್ಥರು ಕಣ್ಣೀರಿಟ್ಟಿದ್ದರು.

ಇದನ್ನೂ ಓದಿ: ಅಂದು ಬರಿಗಾಲಲ್ಲಿ ಬಂದಿದ್ದ ರಾಕಿಂಗ್ ಸ್ಟಾರ್ ಶೂ ಕಲೆಕ್ಷನ್ ನೋಡಿದ್ರೆ ವ್ಹಾವ್ ಎನ್ನದೇ ಇರೋದಿಲ್ಲ

ಸದ್ಯಕ್ಕಿಲ್ಲ ಯಶ್​ ಗಡ್ಡಕ್ಕೆ ಕತ್ತರಿ!

ಇದೀಗ ರಾಕಿ ಭಾಯ್​ ಅವರ ಮುಂದಿನ ಸಿನಿಮಾದ ಬಿಗ್​ ಅಪ್​ಡೇಟ್​ ಒಂದು ಸಿಕ್ಕಿದೆ. 'ಕೆಜಿಎಫ್ 2' ರಿಲೀಸ್ ಆಗಿ ತಿಂಗಳಾದರೂ ಯಶ್ ಗಡ್ಡಕ್ಕೆ ಮುಕ್ತಿ ಸಿಕ್ಕಿಲ್ಲ. ಇದಕ್ಕೆ ಕಾರಣ ಯಶ್ ಮುಂದಿನ ಸಿನಿಮಾ ಎನ್ನುವ ಸುದ್ದಿ ಹರಿದಾಡುತ್ತಿದೆ.ಯಶ್ ಈ ಗಡ್ಡದಾರಿ ಅವತಾರ ಅಭಿಮಾನಿಗಳಿಗೆ ಬಲು ಇಷ್ಟವಾಗಿದೆ. ಹಾಗಾಗಿ ಯಶ್ ಕೂಡ ಸಿನಿಮಾ ಬಿಟ್ಟು ಸಾರ್ವಜನಿಕವಾಗಿವೂ ಈ ಲುಕ್ ಮೇಂಟೇನ್ ಮಾಡುತ್ತಿದ್ದಾರೆ. ಕೆಜಿಎಫ್​ 2 ಸಿನಿಮಾ ರಿಲೀಸ್ ಆದರೂ ರಾಕಿ ಭಾಯ್​ ಗಡ್ಡ ಯಾಕೆ ತೆಗೆತಿಲ್ಲಾ ಅಂತ ಅಭಿಮಾನಿಗಳು ಕನ್ಫೂಸ್​ ಆಗಿದ್ದರು. ಇದಕ್ಕೆ ಉತ್ತರ ಸಿಕ್ಕಿದೆ.
Published by:Vasudeva M
First published: