Prabhas: ಪ್ರಭಾಸ್​ ಹುಟ್ಟುಹಬ್ಬಕ್ಕೆ ಫ್ಲೆಕ್ಸ್ ಕಟ್ಟಲು ಹೋದ ಅಭಿಮಾನಿಗಳಿಬ್ಬರ ಸಾವು

HBD Prabhas: ಪ್ರಭಾಸ್​ ಹುಟ್ಟುಹಬ್ಬದಂದು ಅವರ ಬ್ಯಾನರ್​ ಕಟ್ಟಲು ಹೋದ ಅಭಿಮಾನಿಗೆ ವಿದ್ಯುತ್ ತಂತಿ ತುಗಲಿ, ಆತ ಸ್ಥಳದಲ್ಲೇ ಮೃತಪಟ್ಟಿದ್ದಾರಂತೆ. ಇವರಿಗೆ ಫ್ಲೆಕ್ಸ್​ ಕಟ್ಟಲು ಸಹಾಯ ಮಾಡುತ್ತಿದ್ದ ನಾಲ್ಕು ಮಂದಿಯೂ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. 

ನಟ ಪ್ರಭಾಸ್​

ನಟ ಪ್ರಭಾಸ್​

  • Share this:
ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಜನ್ಮದಿನ ಆಚರಣೆ ನಿಮಿತ್ತ ಬ್ಯಾನರ್ ಕಟ್ಟಲು ಹೋಗಿದ್ದ ಮೂವರು ವಿದ್ಯುತ್ ತಂತಿ ಸ್ಪರ್ಶಗೊಂಡು ಮೃತಪಟ್ಟಿದ್ದರು. ಈ ಘಟನೆ ಮನಸ್ಸಿನಿಂದ ಮಾಸುವ ಮುನ್ನವೇ ಪ್ರಭಾಸ್​  ಅವರ ಇಬ್ಬರು ಅಭಿಮಾನಿಗಳು  ಸಾವನ್ನಪ್ಪಿದ್ದಾರೆ.  ನಡೆದ ಎಡರು ಪ್ರತ್ಯೇಕ ಘಟನೆಗಳಲ್ಲಿ ಅಭಿಮಾನಿಗಳು ಮೃತಪಟ್ಟಿದ್ದಾರೆ.  ಈ ಹಿಂದೆ, ಆಂಧ್ರ ಪ್ರದೇಶದ ಚಿತ್ತೂರ್ ಜಿಲ್ಲೆಯ ಶಾಂತಿಪುರಂನಲ್ಲಿ ಪವನ್ ಕಲ್ಯಾಣ್ ಜನ್ಮದಿನ ಆಚರಣೆಗೆಂದು ಅಭಿಮಾನಿಗಳು ಬ್ಯಾನರ್ ಹಾಕುವ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಬ್ಯಾನರ್​ಗೆ ವಿದ್ಯುತ್ ತಂತಿ ತುಗಲಿ,  ಸೋಮಶೇಖರ್, ರಾಜೇಂದ್ರ ಹಾಗೂ ಅರುಣಾಚಲಂ ಸ್ಥಳದಲ್ಲೇ ಮೃತಪಟ್ಟಿದ್ದರು. ಉಳಿದ ಮೂವರಿಗೆ ಗಾಯಗಳಾಗಿದ್ದವು. ಪವನ್ ಮುಂದಿನ ಚಿತ್ರ ವಕೀಲ್ ಸಾಬ್ ತಂಡ ಹಾಗೂ ಪವನ್ ಕಲ್ಯಾಣ್​ ಜನಶಕ್ತಿ ಪಕ್ಷ ಮೃತರ ಕುಟುಂಬಕ್ಕೆ ಒಟ್ಟು 4 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿತ್ತು. ಈ ಬಾರಿ ಕೊರೋನಾ ಭೀತಿಯಿಂದಾಗಿ ಜನ್ಮದಿನವನ್ನು ಆಚರಣೆ ಮಾಡಬೇಡಿ ಎಂದು ಪವನ್ ಕಲ್ಯಾಣ್ ಅಭಿಮಾನಿಗಳ ಬಳಿ ಕೋರಿದ್ದರು. ಆದರೂ, ಅಭಿಮಾನಿಗಳು ಸಂಭ್ರಮದಿಂದ ಜನ್ಮದಿನ ಆಚರಣೆ ಮಾಡುವುದರಲ್ಲಿ ತೊಡಗಿದ್ದರು. ಈ ವೇಳೆ ಈ ಅವಘಡ ಸಂಭವಿಸಿತ್ತು. ಇಂತಹದ್ದೇ ಘಟನೆ ಈಗ ಪ್ರಭಾಸ್​ ಹುಟ್ಟುಹಬ್ಬದ ಸಮಯದಲ್ಲೂ ಮರುಕಳಿಸಿದೆ. 

ಹೌದು, ಪ್ರಭಾಸ್​ ಹುಟ್ಟುಹಬ್ಬದಂದು ಅವರ ಬ್ಯಾನರ್​ ಕಟ್ಟಲು ಹೋದ ಅಭಿಮಾನಿಗೆ ವಿದ್ಯುತ್ ತಂತಿ ತುಗಲಿ, ಆತ ಸ್ಥಳದಲ್ಲೇ ಮೃತಪಟ್ಟಿದ್ದಾರಂತೆ. ಇವರಿಗೆ ಫ್ಲೆಕ್ಸ್​ ಕಟ್ಟಲು ಸಹಾಯ ಮಾಡುತ್ತಿದ್ದ ನಾಲ್ಕು ಮಂದಿಯೂ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

Hubli Boy Lost his Hands by Deadly Building after Touching High Tension Line
ಸಾಂದರ್ಭಿಕ ಚಿತ್ರ


ಪ್ರಕಾಶಂ ಜಿಲ್ಲೆಯ ಯದ್ದನಪೂಡಿಯ ಪೂನುರಿನಲ್ಲಿ ಘಟನೆ ನಡೆದಿದೆ. ಇದೇ ಗ್ರಾಮದವರಾದ ಪ್ರಭಾಸ್​ ಅಭಿಮಾನಿ ಸುಗುಣಾ ರಾವ್​ ಹಾಗೂ ಸ್ನೇಹಿತರು ಪ್ರಭಾಸ್​ ಹುಟ್ಟುಹಬ್ಬಕ್ಕೆಂದು ವಿಶೇಷವಾಗಿ ಸಿದ್ಧಪಡಿಸಿದ್ದ ಫ್ಲೆಕ್ಸ್​ ಕಟ್ಟಲು ನಿನ್ನೆ ತಯಾರಿ ನಡೆಸಿದ್ದರು. ಅದನ್ನು ಕಟ್ಟುವಾಗ ಸುಗುಣರಾವ್​ ಅವರಿಗೆ ವಿದ್ಯುತ್​ ತಂತಿ ತುಗಲಿ ಅಲ್ಲೇ ಮೃತಪಟ್ಟಿದ್ದಾರೆ. ಅವರಿಗೆ ಸಹಾಯ ಮಾಡುತ್ತಿದ್ದ ನಾಲ್ವರಿಗೆ ಗಂಭೀರವಾಗಿ ಗಾಯಗಳಾಗಿವೆಯಂತೆ.

Beats Of Radhe Shyam, Happy birthday Prabhas, 41st birthday of Prabhas, Prabhas Raju, Radhe Shyam, Bollywood, Tollywood, A R Rahman, Music director AR Rahman, Prabhas's 20th movie, Prabhas's movie Radhe shyam, Prabhas producer, ಪ್ರಭಾಸ್ ಸಿನಿಮಾಕ್ಕೆ ರೆಹಮಾನ್ ಸಂಗೀತ: ಭಾರಿ ಸಂಭಾವನೆ ಬೇಡಿಕೆ, Pooja Hegde, ಪೂಜಾ ಹೆಗ್ಡೆ, ಪ್ರಭಾಸ್​, ಎ ಆರ್ ರೆಹಮಾನ್​, Beats Of Radhe Shyam released on Prabhas birthday here is the special video
ರಾಧೆ ಶ್ಯಾಮ್​ ಸಿನಿಮಾದ ಹೊಸ ಪೋಸ್ಟರ್​


ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರಂತೆ. ಮೃತ ವ್ಯಕ್ತಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರಂತೆ. ಜೊತೆಗೆ ಗಾಯಗೊಂಡವರನ್ನು ಗುಂಟೂರಿನ ಆಸ್ಪತ್ರೆಗೆ ಸೇರಿಸಲಾಗಿದೆ.

ಇದನ್ನೂ ಓದಿ: Beats Of Radhe Shyam: ಪ್ರಭಾಸ್​ ಹುಟ್ಟುಹಬ್ಬಕ್ಕೆ ಭರ್ಜರಿ ಉಡುಗೊರೆ ಕೊಟ್ಟ ರಾಧೆ ಶ್ಯಾಮ್​ ಚಿತ್ರತಂಡ: ಇಲ್ಲಿದೆ ವಿಶೇಷ ವಿಡಿಯೋ..!

ಮತ್ತೊಂದು ಪ್ರಕರಣದಲ್ಲೂ ಸಹ ಪ್ರಭಾಸ್ ಅಭಿಮಾನಿಯೊಬ್ಬರು ಸಾವನ್ನಪ್ಪಿದ್ದಾರೆ. ಪಶ್ಚಿಮ ಗೋದಾವರಿ ಜಿಲ್ಲೆಯ ಎನ್​ಪುರಂನಲ್ಲೂ ಇಂತಹದ್ದೇ ಘಟನೆ ನಡೆದಿದೆ. ಅಲ್ಲೂ ಸಹ ನಾಲ್ಕು ಮಂದಿ ಯುವಕರು ಫ್ಲೆಕ್ಸ್​ ಕಟ್ಟಲು ಹೋಗಿ, ವಿದ್ಯುತ್ ತಂತಿ ತಗುಲಿ, ಗಂಡಿಕೋಟ ದುರ್ಗಾಪ್ರಸಾದ್​ ಎಂಬುವರು ಸಾವನ್ನಪ್ಪಿದ್ದಾರೆ.ಉಳಿದ ಮೂವರು ಅಭಿಮಾನಿಗಳನ್ನು ಹತ್ತಿರದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿದೆಯಂತೆ. ​
Published by:Anitha E
First published: