Saaho: ನಟ ಪ್ರಭಾಸ್​ ಭೇಟಿಗಾಗಿ ಮೊಬೈಲ್​ ಟವರ್​ ಏರಿ ಕುಳಿತ ಅಭಿಮಾನಿ

ಪ್ರಭಾಸ್​ ನನ್ನು ಭೇಟಿ ಮಾಡಲೇಬೇಕೆಂಬ ಹಠಕ್ಕೆ ಬಿದ್ದ ತೆಲಂಗಾಣದ ಯುವಕನೊಬ್ಬ ಮೊಬೈಲ್​ ಟವರ್​ ಏರಿ ಕುಳಿತಿದ್ದು, ದೊಡ್ಡ ರಾದ್ಧಾಂತ ಸೃಷ್ಠಿಸಿದ ಘಟನೆ ನಡೆದಿದೆ.

Seema.R | news18-kannada
Updated:September 11, 2019, 6:07 PM IST
Saaho: ನಟ ಪ್ರಭಾಸ್​ ಭೇಟಿಗಾಗಿ ಮೊಬೈಲ್​ ಟವರ್​ ಏರಿ ಕುಳಿತ ಅಭಿಮಾನಿ
ನಟ ಪ್ರಭಾಸ್​ ಅಭಿಮಾನಿ
Seema.R | news18-kannada
Updated: September 11, 2019, 6:07 PM IST
ನಟ ಪ್ರಭಾಸ್​ ನಟನೆಯ ಸಾಹೋ ಚಿತ್ರಕ್ಕೆ ಸಿನಿ ಪ್ರಿಯರಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಬಾಹುಬಲಿ ಮೂಲಕ ದೇಶದಲ್ಲಿ ಹವಾ ಸೃಷ್ಠಿಸಿದ್ದ ಪ್ರಭಾಸ್​ರ ಸಾಹೋದಲ್ಲಿನ ಆಕ್ಷನ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ದೇಶದೆಲ್ಲೆಡೆ ಪ್ರಭಾಸ್​ ಅಭಿಮಾನಿ ಬಳಿಕ ಚಿತ್ರ ಬಿಡುಗಡೆ ಬಳಿಕ ದುಪ್ಪಟ್ಟುಗೊಂಡಿದೆ. ಇಲ್ಲೊಬ್ಬ ಹುಚ್ಚು ಅಭಿಮಾನಿ ಪ್ರಭಾಸ್​ಗೆ ಖುದ್ದು ಸಾಹೋ ಹೇಳಬೇಕೇಂದು ಹಪಹಪಿಸಿದ್ದು, ಆತನನ್ನು ನೋಡಲು ಹೊಸ ಸಾಹಸವನ್ನೇ ಮಾಡಿದ್ದಾರೆ.

ಪ್ರಭಾಸ್​ ನನ್ನು ಭೇಟಿ ಮಾಡಲೇಬೇಕೆಂಬ ಹಠಕ್ಕೆ ಬಿದ್ದ ತೆಲಂಗಾಣದ ಯುವಕನೊಬ್ಬ ಮೊಬೈಲ್​ ಟವರ್​ ಏರಿ ಕುಳಿತಿದ್ದು, ದೊಡ್ಡ ರಾದ್ಧಾಂತ ಸೃಷ್ಠಿಸಿದ ಘಟನೆ ನಡೆದಿದೆ.

ಜಗಂ ಎಂಬ ಅಭಿಮಾನಿ ಈ ರೀತಿ ಅವಾಂತರ ಸೃಷ್ಟಿಸಿದಾತ. ಇಂದು ಮುಂಜಾನೆ ಮೊಬೈಲ್​ ಟವರ್​ ಏರಿ ಕುಳಿತ ಈತ ನಟ ಪ್ರಭಾಸ್​ ಬಂದು ಭೇಟಿಯಾಗುವವರೆಗೂ ಇಲ್ಲಿಂದ ಕೆಳಗಿಳಿಯುವುದಿಲ್ಲ ಎಂದು ಹಠ ಮಾಡಿದ್ದಾನೆ.

ಇದನ್ನು ಓದಿ: Pailwaan: ಸಲ್ಮಾನ್​​ಗಾಗಿ ಮುಂಬೈನಲ್ಲಿ ನಡೆಯಲಿದೆ ಪೈಲ್ವಾನ್​ ಸಿನಿಮಾದ ವಿಶೇಷ ಪ್ರದರ್ಶನ

ಈತನನ್ನು ಕೆಳಗಿಳಿಸಲು ಪೊಲೀಸ್​, ಅಗ್ನಿಶಾಮಕದಳ ಹಾಗೂ ಸ್ಥಳೀಯರು ಎಷ್ಟೇ ಪ್ರಯತ್ನಿಸಿದರೂ ಜಗ್ಗಿಲ್ಲ. ಕಡೆಗೂ ಇನ್ನಿಲ್ಲದ ಸಾಹಸ ಮಾಡಿ ಆತನನ್ನು ಕೆಳಗಿಳಿಸಲಾಗಿದೆ.

ಈ ಹುಚ್ಚು ಅಭಿಮಾನಿಯ ಅತಿರೇಕದ ವರ್ತನೆಯಿಂದಾಗಿ ಜನರಂತೂ ಹೈರಾಣಗಿದ್ದು ಸುಳ್ಳಲ್ಲ.
Loading...

First published:September 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...