ಬಾಹುಬಲಿ (Baahubali) ನಟ ಪ್ರಭಾಸ್ (Prabhas) ಅವರು ಪ್ಯಾನ್ ಇಂಡಿಯಾ ಸ್ಟಾರ್. ಬಾಹುಬಲಿ ಸಿನಿಮಾ ಹಿಟ್ ಆಗಿದ್ದೇ ತಟ ಪ್ರಭಾಸ್ ರೇಂಜ್ ಬದಲಾಯಿತು. ತೆಲುಗಿನಲ್ಲಿ (Telugu) ಮಾತ್ರ ಸಿನಿಮಾ (C)ಮಾಡುತ್ತಿದ್ದ ನಟನ ಡೇಟ್ಸ್ಗಾಗಿ ಬಾಲಿವುಡ್ (Bollywood) ಮಂದಿ ಮುಗಿಬಿದ್ದರು. ಈಗ ನಟ ಪ್ರಶಾಂತ್ ನೀಲ್ (Prashant Neel) ನಿರ್ದೇಶನದಲ್ಲಿ ಸಲಾರ್ ಸಿನಿಮಾ ಮಾಡುತ್ತಿದ್ದಾರೆ. ಆದಿಪುರಷ್ ಸಿನಿಮಾದಲ್ಲಿ ಕೃತಿ ಸನೋನ್ (Kriti Sanon) ಜೊತೆಯೂ ಕಾಣಿಸಿಕೊಳ್ಳಲಿದ್ದಾರೆ. ಪ್ರಭಾಸ್ (Prabhas) ಬಾಹುಬಲಿ ಸಿನಿಮಾದ ನಂತರ ಮಾಡಿದ ಯಾವ ಸಿನಿಮಾ ಕೂಡಾ ಹಿಟ್ ಆಗಲಿಲ್ಲ. ಅವರ ಅಭಿನಯದ ಸಾಹೋ ಹಾಗೂ ರಾಧೇಶ್ಯಾಮ್ ಸಿನಿಮಾ ಕೂಡಾ ಫ್ಲಾಪ್ ಆಯಿತು.
ಆಗಾಗ ವೈರಲ್ ಆಗುತ್ತೆ ಪ್ರಭಾಸ್ ಫೋಟೋ
ಶೂಟಿಂಗ್ ಸೆಟ್ನಿಂದಲೂ ಅಥವಾ ಇನ್ಯಾವುದೋ ಇವೆಂಟ್ನಿಂದ ಪ್ರಭಾಸ್ ಲುಕ್ ಆಗಾಗ ವೈರಲ್ ಆಗುತ್ತಲೇ ಇರುತ್ತದೆ. ಈ ಫೋಟೋಗಳಲ್ಲಿ ಪ್ರಭಾಸ್ ಅವರನ್ನು ಕಂಡಾಗ ಅಯ್ಯೋ ಬಾಹುಬಲಿ ನಟನಿಗೆ ಇಷ್ಟು ಏಜ್ ಆಯ್ತಾ ಎನಿಸುವಂತಿರುತ್ತದೆ. ಈಗ ನಟನ ಇನ್ನೊಂದು ಫೋಟೋ ವೈರಲ್ ಆಗಿದೆ.
ಶಿವಣ್ಣ-ರಜನಿ ಜೊತೆ ಪ್ರಭಾಸ್
ವೈರಲ್ ಆಗಿರುವ ಫೋಟೋದಲ್ಲಿ ಶಿವರಾಜ್ಕುಮಾರ್ ಹಾಗೂ ರಜನೀಕಾಂತ್ ಅವರೂ ಕೂಡಾ ಇದ್ದಾರೆ. ಮಧ್ಯದಲ್ಲಿ ಪ್ರಭಾಸ್ ನಿಂತಿರುವುದನ್ನು ಕಾಣಬಹುದು. ಇವರೇನು ಜೊತೆಯಾಗಿ ಸಿನಿಮಾ ಮಾಡುತ್ತಾರಾ ಎಂದು ಸಂದೇಹ ಪಟ್ಟಿದ್ದಾರೆ ನೆಟ್ಟಿಗರು.
What happened to #Prabhas𓃵 ? He's looking horrible here 😰 pic.twitter.com/nnJYqDN3Jo
— Cinema Diary (@Cine__Diary) March 15, 2023
ಪ್ರಭಾಸ್ ಅವರ ವೈರಲ್ ಫೋಟೋ ನೋಡಿದ ನೆಟ್ಟಿಗರು ಅಯ್ಯೋ ಪ್ರಭಾಸ್ಗೆ ಏನಾಯ್ತು? ನೋಡೋಕಾಗ್ತಿಲ್ಲ? ಅವರು ಆರೋಗ್ಯ ಚೆನ್ನಾಗಿದೆಯಾ? ಹೇಗಿದ್ದಾರೆ? ಎಂದು ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: Naatu Naatu: ಹಾಲಿವುಡ್ ಡ್ಯಾನ್ಸ್ನಿಂದ ಕಾಪಿ ಮಾಡಿದ್ರಾ ನಾಟು ನಾಟು ಸ್ಟೆಪ್ಸ್? ವಿಡಿಯೋ ವೈರಲ್
ಕಾಲಿವುಡ್ ಸೂಪರ್ಸ್ಟಾರ್ ರಜನೀಕಾಂತ್, ಪ್ರಭಾಸ್ ಮತ್ತು ಶಿವರಾಜ್ಕುಮಾರ್ ಅವರು ಒಟ್ಟಿಗೆ ಭೇಟಿ ಮಾಡಿದ್ದು ಯಾವಾಗ ಎನ್ನುವುದು ಫ್ಯಾನ್ಸ್ ಡೌಟ್. ಇದು ಜೈಲರ್ ಸಿನಿಮಾ ಚಿತ್ರೀಕರಣದ ವೇಳೆ ಕ್ಲಿಕ್ ಮಾಡಲಾದ ಫೋಟೋ. ಆದರೆ ಅದರಲ್ಲಿ ಇದ್ದದ್ದು ಪ್ರಭಾಸ್ ಅಲ್ಲ.
ರಜನಿಕಾಂತ್ ಮತ್ತು ಶಿವಣ್ಣ ಜೈಲರ್ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ನೆಲ್ಸನ್ ನಿರ್ದೇಶನ ಮಾಡುತ್ತಿರುವ ಚಿತ್ರ ಇದಾಗಿದ್ದು ಚಿತ್ರೀಕರಣದ ವೇಳೆ ಸೆಟ್‌ಗೆ ಆಗಮಿಸಿದ ಅತಿಥಿಗಳನ್ನು ಭೇಟಿ ಮಾಡಿ ಅವರೊಟ್ಟಿಗೆ ಕ್ಲಿಕ್ ಮಾಡಿರುವ ಫೋಟೋ ಇದು. ಇಲ್ಲಿ ಪ್ರಭಾಸ್ ಬಂದಿಲ್ಲ. ನೆಟ್ಟಿಗರು ಇದನ್ನು ಎಡಿಟ್ ಮಾಡಿ ವೈರಲ್ ಮಾಡಿದ್ದಾರೆ.
ಟಾಲಿವುಡ್ ರೆಬೆಲ್ ಸ್ಟಾರ್ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಪ್ರಭಾಸ್ ಅನಾರೋಗ್ಯದ ಸುದ್ದಿ ಕೇಳಿ ಅಭಿಮಾನಿಗಳು ಕೂಡ ಶಾಕ್ ಆಗಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಕೇಳಿ ಬಂದಿತ್ತು. ಸಾಲು ಸಾಲು ಸಿನಿಮಾಗಳು ನಟ ಪ್ರಭಾಸ್ ಕೈ ಸೇರಿದೆ. ಬ್ಯುಸಿ ಶೂಟಿಂಗ್ ಶೆಡ್ಯೂಲ್ ನಡುವೆ ಮತ್ತಷ್ಟು ನಿರ್ಮಾಪಕರು ಪ್ರಭಾಸ್ ಡೇಟ್ಸ್ಗಾಗಿ ಕಾಯ್ತಿದ್ದಾರೆ. ಆದ್ರೆ ಕೆಲ ದಿನಗಳಿಂದ ಪ್ರಭಾಸ್ ಅನಾರೋಗ್ಯಕ್ಕೆ ತುತ್ತಾಗಿದ್ದರು. ಬಳಿಕ ಚೇತರಿಸಿಕೊಂಡಿದ್ರು. ಇದೀಗ ಮತ್ತೆ ಅನಾರೋಗ್ಯದಿಂದ ಬಳಲುತ್ತಿದ್ದಾರಂತೆ ಎನ್ನಲಾಗಿತ್ತು.
ಅನೇಕ ಸಿನಿಮಾಗಳು ಪ್ರಭಾಸ್ ಕೈಯಲ್ಲಿದೆ. ಪ್ಯಾನ್ ಇಂಡಿಯಾ ಚಿತ್ರ ರಾಜಾ ಡಿಲಕ್ಸ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಾರುತಿ ನಿರ್ದೇಶನ ಮಾಡ್ತಿದ್ದು. ಹಾರರ್ ಕಾಮಿಡಿ ಸಿನಿಮಾ ಇದಾಗಿದೆಯಂತೆ. ಈಗಾಗಲೇ ಈ ಚಿತ್ರದ ಶೇಕಡಾ 20ರಷ್ಟು ಚಿತ್ರೀಕರಣ ಮುಗಿದಿದೆ. ಈ ಸಿನಿಮಾದ ಬಹುಪಾಲು ಶೂಟಿಂಗ್ ಒಂದೇ ಮನೆಯಲ್ಲಿ ನಡೆಯುತ್ತದಂತೆ. ಆ ಮನೆಯ ಸೆಟ್ಗಾಗಿ ಸುಮಾರು 6 ಕೋಟಿ ಖರ್ಚು ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ